Get Updates
Get notified of breaking news, exclusive insights, and must-see stories!

ಚಿಕ್ಕಣ್ಣ ಉಪಾಧ್ಯಕ್ಷ ಸಿನಿಮಾ ಹೀರೋಯಿನ್‌ಗೆ ಹೊಡೆಯಲು ಹೋದ್ರಾ?

ಚಿಕ್ಕ ಚಿಕ್ಕ ಪಾತ್ರಗಳಲ್ಲಿ ನಟಿಸುತ್ತ ಹಾಸ್ಯಕಲಾವಿದನಾಗಿ ಸ್ಯಾಂಡಲ್‌ವುಡ್‌ನಲ್ಲಿ ಎಲ್ಲರ ಮನೆ ಮಾತಾಗಿದ್ದ ಚಿಕ್ಕಣ್ಣ, ಸದ್ಯ ನಾಯಕ ನಟನಾಗಿ ಉಪಾಧ್ಯಕ್ಷ ಸಿನಿಮಾದಲ್ಲಿ ಕನ್ನಡ ಅಭಿಮಾನಿಗಳ ಮನ ಗೆದ್ದಿದ್ದಾರೆ. ಮೊದಲ ಶೋನಲ್ಲಿ ಜನಪ್ರಿಯತೆ ಪಡೆದ ಉಪಾಧ್ಯಕ್ಷ ಚಿಕ್ಕಣ್ಣ ಹೊಟ್ಟೆ ಹುಣ್ಣಾಗಿಸುವಷ್ಟು ಜನರನ್ನು ನಗಿಸಿದ್ದಾರೆ. ಈ ಸಿನಿಮಾದಲ್ಲಿ ನಾಯಕ ನಟನಾಗಿ ಅದ್ಭುತವಾಗಿ ನಟಿಸುವ ಮೂಲಕ ಜನ ಮೆಚ್ಚುಗೆಯನ್ನ ಚಿಕ್ಕಣ್ಣ ಪಡೆದಿದ್ದಾರೆ.

ಹೀಗೆ ಸೂಪರ್ ಹಿಟ್ ಆದ ಸಿನಿಮಾದ ಬಗ್ಗೆ ಸಾಕಷ್ಟು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಹಲವಾರು ಕಾಮಿಡಿ ಪ್ರಶ್ನೆಗಳನ್ನು ಸಿನಿಮಾ ನಟ ಚಿಕ್ಕಣ್ಣ ಹಾಗೂ ಸಿನಿಮಾ ನಟಿ ಮಲೈಕಾ ಅವರಿಗೆ ಕೇಳಿದ್ದಾರೆ. ಈ ನಡುವೆ ಮೆಟ್ರೋಸಾಗ ಅವರು ನೀಡಿದ ಕಾಮಿಡಿ ಪ್ರಶ್ನೆಗಳಿಗೆ ಉತ್ತರಿಸುವಾಗ ಸಿನಿಮಾ ಹೀರೋಯಿನ್‌ಗೆ ಚಿಕ್ಕಣ್ಣ ಹೊಡೆಯಲು ಮುಂದಾದ್ರು. ಅಷ್ಟಕ್ಕೂ ಚಿಕ್ಕಣ್ಣ ಯಾಕೆ ಉಪಾಧ್ಯಕ್ಷ ಸಿನಿಮಾ ನಟಿಗೆ ಹೊಡೆಯಲು ಮುಂದಾದ್ರು ಮತ್ತು ಯಾಕೆ ಅನ್ನೋದು ಸಖತ್ ಇಸ್ಟ್ರಿಂಗ್ ವಿಚಾರ.

Did Chikkanna Attempt to Slap Upadyaksha Movie Heroine Malaika Vasupal? Know What Happened?

ಅಂದಹಾಗೆ ಮೆಟ್ರೋಸಾಗ ಅವರು ಚೀಟಿಯಲ್ಲಿ ಕೇಳಿದ ಪ್ರಶ್ನೆಗಳನ್ನು ಮಲೈಕಾ ಅವರು ಓದುತ್ತಾ ಚಿಕ್ಕಣ್ಣ ಅವರಿಗೆ ಕೇಳುತ್ತಾರೆ. ಅದಾಗಲೇ ಚಿಕ್ಕಣ್ಣ ಅವರ ಚಿಕ್ಕ ಚಿಕ್ಕ ಕಾಮಿಡಿ ಶುರುವಾಗಿತ್ತು. ಮೊದಲನೇ ಪ್ರಶ್ನೆ ಹೀಗಿತ್ತು.. ಇದನ್ನು ಮಲೈಕಾ ಅವರು ಚಿಕ್ಕಣ್ಣ ಅವರಿಗೆ ಓದಿ ಕೇಳುತ್ತಾರೆ.

1. ಒಂದು ಹುಡುಗ ಒಂದು ಹುಡುಗಿಗೆ ಇಂಪ್ರೆಸ್ ಮಾಡಬೇಕಾದರೆ ಚಿ... ತು... ಸಂಘದ ಉಪಾಧ್ಯಕ್ಷರಾಗಿ ಐದು ಟಿಪ್ಸ್‌ ಕೊಡಿ ಹುಡುಗರಿಗೆ..

* ಚಿಕ್ಕಣ್ಣ ಉತ್ತರ: ಅಯ್ಯಯ್ಯೋ... ಚಿ... ತು... ಸಂಘದಲ್ಲಿ ಇರೋರೆಲ್ಲಾ ವೇಸ್ಟ್‌ ನನ್ ಮಕ್ಲೆ.. ಇನ್ನೂ ಹುಡುಗೀರ್ನ್ ಎಲ್ಲಿ ಇಂಪ್ರೆಸ್ ಮಾಡ್ತಾರೆ. ನಾನೂ ಕೂಡ ವೇಸ್ಟ್ ನನ್ನೋಗಿ ಇದನ್ನ ಕೇಳ್ತಿದಿರಾ. ಅದರೂ ಹೇಳ್ತೀನಿ. 1.ನಾನು ನಿನ್ನ ದಿನಾಲು ಕೆರೆ ಹತ್ರ ಕರೆದುಕೊಂಡು ಹೋಗಿ ಸುತ್ತಾಡಸ್ತೀನಿ. 2.ಸಾಮಾನ್ಯವಾಗಿ ನಮ್ ಹಳ್ಳಿ ಗಣ್ಮಕ್ಳು ಹೇಳೋದೇನು ಅಂದರೆ ರಕ್ತದಲ್ಲಿ ಪತ್ರ ಬರೆದು ಕೊಡ್ತೀವಿ ಅಂತ. ಆದರೆ ಅದು ಯಾವ ರಕ್ತ ಅಂತ ಕೇಳೋ ಹಾಗೆ ಇಲ್ಲ. ಯಾಕೆಂದರೆ ನಾವಂತೂ ಕೈ ಕುಯಿದು ಪತ್ರ ಬರೆದು ಕೊಡಲ್ಲ. ಸ್ಪೆಷಲಿ ಚಿ... ತು... ಸಂಘದವರು... ಎನ್ನುತ್ತಾರೆ. ಇನ್ನೂ ಮೂರನೇ ಟಿಪ್ಸ್‌ ಅಂತೂ ಚಿಕ್ಕಣ್ಣ ಕಾಮಿಡಿಯಾಗಿ ಹೇಳ್ತಾ ನಗಿಸ್ತಾರೆ. 3. ನಿನಗೆ ವಾರಕ್ಕೆ ಮೂರು ಬಾರಿ ನಾನ್‌ವೆಜ್ ಕೊಡಸ್ತೀನಿ. 4. ಶುಕ್ರವಾರ ಶುಕ್ರವಾರ ಸಿನಿಮಾ ತೋರಿಸ್ತೀನಿ. ಹಾಗೆ ಮೈಸೂರು ಚಾಮುಂಡಿಬೆಟ್ಟಕ್ಕೆ ಕರೆದುಕೊಂಡು ಹೋಗ್ತೀನಿ. ಹಾಗೇ ಕುಕ್ಕರಳ್ಳಿ ಕೆರೆಗೆ ಕರೆದುಕೊಂಡು ಹೋಗಿ ಈಜು ಹೊಡೆಸ್ತೀನಿ. 5. ಕಬ್ಬಿನ ಗದ್ದೆಲಿ ಕರೆದುಕೊಂಡು ಹೋಗಿ ಕಬ್ಬ ಕೀಳಿಸ್ತೀನಿ. ಚಿ... ತು... ಸಂಘದವರು ನಾವು ಇದೇ ಹೇಳೋದು ಅಂತ ನಗಾಡಿಸುತ್ತಾರೆ. ಹಾಗಾದರೆ ಉಪಾಧ್ಯಕ್ಷ ಸಿನಿಮಾ ನಟಿ ಮಲೈಕಾಗೆ ಚಿಕ್ಕಣ್ಣ ಹೊಡೆಯಲು ಮುಂದಾಗಿದ್ದು ಯಾಕೆ ಮುಂದೆ ನೋಡೋಣ.

Did Chikkanna Attempt to Slap Upadyaksha Movie Heroine Malaika Vasupal? Know What Happened?

2. ಬಾಲಣ್ಣ ನರಸಿಂಹರಾಜು ಅವರು ನಿಮ್ಮ ಇನ್ಸ್‌ಪ್ರೇಷನ್ ಅಂತ ಹೇಳಿದ್ರಿ ಒಬ್ಬ ನಟನಾಗಿ ಅವರಿಂದ ಏನ್ ಕಲಿತುಕೊಂಡ್ರಿ?

*ಚಿಕ್ಕಣ್ಣ ಉತ್ತರ: ಬಾಲಣ್ಣ ನರಸಿಂಹರಾಜು ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವರು ಅಲ್ಲ ನಾವು. ನರಸಿಂಹ ರಾಜು ಅವರು ಕೆಲವೊಂದಿಷ್ಟು ನಟರಾಗಿ ಸಿನಿಮಾಗಳನ್ನು ಮಾಡಿದರು. ಅದರಿಂದ ಅವರು ಹಾಸ್ಯಚಕ್ರವರ್ತಿ ಅಂತ ಬಿರುದು ತೆಗೆದುಕೊಂಡರು. ಇನ್ನೂ ಬಾಲಣ್ಣ ಅವರು ಮಾಡದೇ ಇರೋ ಕ್ಯಾರೆಕ್ಟರ್‌ಗಳೇ ಇಲ್ಲ. ಇವರೆಲ್ಲಾ ಬೇಸ್‌ಮೆಂಟ್ ಹಾಕಿಕೊಟ್ಟಿರುವುದರಿಂದ ಇವತ್ತು ನಾವು ಕಾಮಿಡಿ ಆಕ್ಟರ್‌ ಅಂತ ಚಿತ್ರರಂಗದಲ್ಲಿ ಉಳಿದುಕೊಳ್ಳೋಕೆ ಸಹಾಯ ಆಯ್ತು. ಕನ್ನಡ ಚಿತ್ರರಂಗ ಗಟ್ಟಿಯಾಗೋಕೆ ಅವರದ್ದು ದೊಡ್ಡ ಪಾಲಿದೆ ಅಂದರು.

ಬಾಲಣ್ಣ ಮಿಮಿಕ್ರಿ ಟ್ರೈ ಮಾಡ್ತೀನಿ. ಸಂಪತ್ತಿಗೆ ಸವಾಲ್‌ ಸಿನಿಮಾದ ಬಾಲಣ್ಣ ಮಿಮಿಕ್ರಿ ಇದು- ಅದರಲ್ಲಿ ವಜ್ರಮುನಿ ಬಾಲಣ್ಣ ನಡೆದುಕೊಂಡು ಹೋಗ್ತಾಯಿರ್ತಾರೆ. ಅಲ್ಲಿ ಒಂದು ಹುಡುಗಿ ದೂರದಲ್ಲಿ ನಡೆದುಕೊಂಡು ಬರ್ತಾಯಿರ್ತಾರೆ. ಇದರಲ್ಲಿ ವಜ್ರಮುನಿ ಕ್ಯಾರೆಕ್ಟರ್ ಹೆಂಗಸರಿಗೆ ಕಣ್ಣಾಕೋದು. ದೂರದಲ್ಲಿ ನೋಡಿಬಿಟ್ಟು ರಾಯೋ ಅವಳು ಜಿಂಕೆ ಥರ ಓಡಿ ಬರ್ತಾಳಲ್ಲಾ... ಅಂತ ಹಾಗೆ ಸ್ವಲ್ಪ ಹತ್ತಿರದಲ್ಲಿ ಹೋಗಿ ನೋಡ್ತಾರೆ... ಸ್ವಲ್ಪ ಹತ್ತಿರಕ್ಕೆ ಹೋಗಿ ನೋಡುತ್ತಿದ್ದಂತೆ ಅದು ಮಂಜುಳ ಅಂತ ಗೊತ್ತಾಗುತ್ತದೆ. ಅಯ್ಯಯ್ಯೋ ಅದು ನನ್ನ ಮಗಳೇ ಕಣ್ಣೋ ಅಂತಾರೆ ವಜ್ರಮುನಿ. ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿ ವಜ್ರಮುನಿ ಮಗಳು ಮಂಜುಳು ಆಗಿರ್ತಾರೆ. ಬಾಲಣ್ಣ ಅವರು ತಕ್ಷಣ ಅಯ್ಯಯ್ಯಪ್ಪಾ ಸದ್ಯ ಅವಳು ನನ್ನ ಮಗಳು ಅಲ್ವಲ್ಲಾ ಅಂತಾರೆ.. ಅಂತ ಚಿಕ್ಕಣ್ಣ ಮಿಮಿಕ್ರಿ ಮಾಡ್ತಾ ಕಾಮಿಡಿ ಮಾಡಿ ನಗಾಡುತ್ತಾರೆ. ಇದೇ ವೇಳೆ ಮಲೈಕಾ ಅವರು ಚಿಕ್ಕಣ್ಣ ಅವರಿಗೆ ಮತ್ತೊಂದು ಪ್ರಶ್ನೆ ಕೇಳ್ತಾರೆ. ಆಗ ಚಿಕ್ಕಣ್ಣ ಉಪಾಧ್ಯಕ್ಷ ನಟಿ ಮಲೈಕಾ ಅವರಿಗೆ ಹೊಡೆಯಲು ಮುಂದಾಯ್ತಾರೆ..

3. ಉಪಾಧ್ಯಕ್ಷ ಸೆಟ್ ನಲ್ಲಿ ರವಿಶಂಕರ್ ಮಿಮಿಕ್ರಿ ಮಾಡಬೇಕು

* ಚಿಕ್ಕಣ್ಣ ರವಿಶಂಕರ್ ಮಿಮಿಕ್ರಿ ಮಾಡ್ತಾರೆ: ನೀನು ತುಂಬಾ ಚೆನ್ನಾಗಿ ಮಾಡ್ತೀಯಾಮ್ಮ ಮಲೈಕಾ. ಅದೆಲ್ಲಾ ನೀನು ಸಖತ್ತಾಗಿ ಮಾಡ್ತೀಯಾ. 'ಕೈ ಎತ್ತಿ ತಟ್ಟಿದಾ ಅಂದರೆ...' ಅದು ಎಕ್ಸ್‌ಪ್ರೆಷನ್ ಸಖತ್ತಾಗಿ ಮಾಡ್ತೀಯಾಮ್ಮ ಅಂತ ರವಿಶಂಕರ್ ಮಿಮಿಕ್ರಿ ಮಾಡುವಾಗ ಚಿಕ್ಕಣ್ಣ ಮಲೈಕಾ ಅವರಿಗೆ ಹೊಡೆಯಲು ಮುಂದಾಗ್ತಾರೆ. ತಕ್ಷಣ ಮಲೈಕಾ ನನಗೆ ಹೊಡೆಯಲು ಬಂದ್ರು ಅನ್ನೋಥರ ಫೇಸ್ ಡಲ್ ಮಾಡಿಕೊಳ್ತಾರೆ. ಆದರೆ ಇದು ರವಿಶಂಕರ್ ಮಲೈಕಾ ಬಗ್ಗೆ ಹೇಳುವಾಗ ಹೇಗೆ ಹೇಳ್ತಾರೆ ಅನ್ನೋದನ್ನು ಚಿಕ್ಕಣ್ಣ ಮಿಮಿಕ್ರಿ ಮಾಡುವ ಮೂಲಕ ತೋರಿಸುವಾಗ ನಡೆಯುತ್ತದೆ. ಕೊನೆಗೆ ಡಬ್ಬಾ ಥರ ಮಾಡ್ತೀನಿ ನಾನು ಮಿಮಿಕ್ರಿ ಅಂತ ಚಿಕ್ಕಣ್ಣ ನಗಿಸ್ತಾ ಹೇಳ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+