ಬಳ್ಳಾರಿ ಜೈಲಿನಿಂದ ಶೀಘ್ರದಲ್ಲೇ ದರ್ಶನ್ ಬಿಡುಗಡೆ!
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಗೆ ಯಾವಾಗ ಜಾಮೀನು ಸಿಗುತ್ತದೋ ಎಂದು ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಾಯುತ್ತಿದ್ದಾರೆ. ಅಕ್ಟೋಬರ್ 28ರಂದು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಬೆನ್ನು ನೋವು ಹೆಚ್ಚಿರುವ ಕಾರಣ ಅವರಿಗೆ ಚಿಕಿತ್ಸೆ ಅಗತ್ಯವಿದ್ದು ಜಾಮೀನು ನೀಡಬೇಕು ಎಂದು ದರ್ಶನ್ ಪರ ಹಿರಿಯ ವಕೀಲ ನಾಗೇಶ್ ಮನವಿ ಮಾಡಿದ್ದಾರೆ. ದರ್ಶನ್ ಅವರಿಗೆ ಇದೀಗ ಒಳ್ಳೆ ಸಮಯ ಶುರುವಾಗಿದೆ ಎಂದು ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದಿದ್ದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.
ದರ್ಶನ್ ಅವರಿಗೆ ಇದೀಗ ಒಳ್ಳೆ ಸಮಯ ಆರಂಭವಾಗಿದೆ. ಅವರು ಶೀಘ್ರದಲ್ಲೇ ಜೈಲಿನಿಂದ ಹೊರಬರಲಿದ್ದಾರೆ ಎಂದು ಜ್ಯೋತಿಷಿ ಡಾ. ಲಕ್ಷ್ಮಿಕಾಂತ ಆಚಾರ್ಯ ಹೇಳಿದ್ದಾರೆ. ಕಳೆದ ತಿಂಗಳು ಅವರು ಹೇಳಿದ್ದ ಭವಿಷ್ಯ ನಿಜವಾಗುವ ಅನುಮಾನ ಶುರುವಾಗಿದೆ. ಸದ್ಯ ಅವರ ಸಮಯ ಸರಿಯಿಲ್ಲ ಕಾರ್ತಿಕ ಮಾಸದಲ್ಲೇ ಅವರಿಗೆ ಒಳ್ಳೆ ಸಮಯ ಬರಲಿದೆ, ಆ ಬಳಿಕ ಅವರಿಗೆ ಜಾಮೀನು ಸಿಗಲಿದೆ ಎಂದು ಹೇಳಿದ್ದರು.

ತುಮಕೂರು ತಾಲೂಕಿನ ಚಿನಗ ಗ್ರಾಮದ ಮೂಕಾಂಬಿಕಾ ದೇವಸ್ಥಾನದ ಅರ್ಚಕರಾಗಿರುವ ಡಾ. ಲಕ್ಷ್ಮೀಕಾಂತ ಆಚಾರ್ಯ, ದರ್ಶನ್ ಜಾತಕದ ಬಗ್ಗೆ ಮಾತನಾಡಿದ್ದರು. ಕಾರ್ತಿಕ ಮಾಸದಲ್ಲಿ ದರ್ಶನ್ ಬಿಡುಗಡೆ ಆಗುತ್ತಾರೆ ಎಂದಿದ್ದರು. 2027ರಿಂದ ಅವರ ಜಾತಕದಲ್ಲಿ ಶನಿ ದಶಾಬುಕ್ತಿ ಶುರುವಾಗಲಿದ್ದು, ದರ್ಶನ್ ರಾಜಕೀಯಕ್ಕೆ ಬರುವ ಸಾಧ್ಯತೆ ಇದ್ದು, ಅಲ್ಲಿ ಕೂಡ ಯಶಸ್ಸು ಸಿಗುತ್ತದೆ ಎಂದು ಹೇಳಿದ್ದಾರೆ.
ದೇವಿಯ ಆಶೀರ್ವಾದ ಇದೆ
ದರ್ಶನ್ ಬಗ್ಗೆ ಭವಿಷ್ಯ ಹೇಳುವಾಗಲೇ ಮೂಕಾಂಬಿಕಾ ದೇವಿ ಬಲಗಡೆ ಹೂ ಪ್ರಸಾದ ಕೊಟ್ಟಿದ್ದು, ಶುಭಸೂಚನೆ ಎಂದಿದ್ದಾರೆ. ಕಾರ್ತಿಕ ಮಾಸದ ಅಂತ್ಯದ ವೇಳೆಗೆ ದರ್ಶನ್ ಬಿಡುಗಡೆ ಆಗುತ್ತಾರೆ ಎಂದು ಹೇಳಿದ್ದಾರೆ. ದರ್ಶನ್ ದೇವಿಯನ್ನು ಹೆಚ್ಚಾಗಿ ನಂಬುತ್ತಾರೆ. ಅವರು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿಕೊಂಡು ಬಂದಿರುವ ಕಾರಣ, ಅವರಿಗೆ ದೇವರ ಆಶೀರ್ವಾದವಿದ್ದು ದರ್ಶನ್ ಬಿಡುಗಡೆ ಆಗ್ತಾರೆ. ಇದರಲ್ಲಿ ಯಾರೂ ಕೂಡ ಅನುಮಾನ ಪಡುವುದು ಬೇಡ ಎಂದಿದ್ದಾರೆ.
ದರ್ಶನ್‌ಗೆ ಬೆನ್ನು ನೋವು ಹೆಚ್ಚಳ
ನಟ ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವು ಹೆಚ್ಚಾಗಿದೆ. ನಡೆಯಲು ಕೂಡ ಅವರು ಕಷ್ಟಪಡುತ್ತಿದ್ದು ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಹೇಳಿದ್ದಾರೆ. ಕೋರ್ಟ್ ಕೂಡ ದರ್ಶನ್‌ರ ಆರೋಗ್ಯದ ಬಗ್ಗೆ ವೈದ್ಯಕೀಯ ವರದಿ ನೀಡುವಂತೆ ಕೋರ್ಟ್ ಜೈಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದು, ವಿಮ್ಸ್ ಆಸ್ಪತ್ರೆಯಲ್ಲಿ ದರ್ಶನ್‌ರಿಗೆ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಲಾಗಿದೆ. ವೈದ್ಯರು ಜೈಲು ಅಧಿಕಾರಿಗಳಿಗೆ ವರದಿ ಕೊಡಲಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಅದನ್ನು ಪರಿಶೀಲನೆ ಮಾಡಿದ ಬಳಿಕ ಕೋರ್ಟ್ ಜಾಮೀನು ಕೊಡುವ ಬಗ್ಗೆ ನಿರ್ಧಾರ ಮಾಡಲಿದೆ.












Click it and Unblock the Notifications