Darshan: ಡಿ ಬಾಸ್ ಬಗ್ಗೆ ವಿಜಯಲಕ್ಷ್ಮೀ ಪೋಸ್ಟ್‌ ; ‘ಶಕುನಿ’ಗಳ ಬಗ್ಗೆ ನಟ ಧನ್ವೀರ್ ಗೌಡ ಮಾರ್ಮಿಕ ಮಾತು!, ವೈರಲ್ ಪೋಸ್ಟ್‌

ನಟ, ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಅವರು ಜೈಲಿನಲ್ಲಿದ್ದಾರೆ. ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಹಾಗೂ ದರ್ಶನ್ ಅವರ ಸಂಕಷ್ಟದ ಸಮಯದಲ್ಲಿ ಜೊತೆಗೆ ನಿಂತಿದ್ದ ನಟ ಧನ್ವೀರ್ ಗೌಡ ಹಾಗೂ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಸೋಷಿಯಲ್ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿರುವ ಪೋಸ್ಟ್‌ ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತ್ಯೇಕವಾಗಿ ಮಾಡಿರುವ ಪೋಸ್ಟ್‌ ಇದೀಗ ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ. ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮೀ ದರ್ಶನ್ ಅವರು ಮಾರ್ಮಿಕವಾಗಿ ಪೋಸ್ಟ್‌ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಧ್ವನೀರ್‌ ಗೌಡ ಹಾಗೂ ದರ್ಶನ್ ಅವರ ಸಂಬಂಧ ಉತ್ತಮವಾಗಿಲ್ಲ ಅಥವಾ ಇಬ್ಬರ ಸಂಬಂಧದ ನಡುವೆ ಬಿರುಕು ಮೂಡಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿತ್ತು. ಕೆಲವು ತಿಂಗಳುಗಳ ಮುಂಚೆಯೂ ಇಬ್ಬರ ನಡುವೆ ವೈಮನಸ್ಸು ಮೂಡಿದೆ ಎನ್ನುವ ವಿಚಾರವು ಚರ್ಚೆಗೆ ಕಾರಣವಾಗಿತ್ತು.

Darshan Vijayalakshmi Post on D-Boss Dhanveer Gowda s Cryptic Shakuni Remark Goes Viral

ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮೀ ದರ್ಶನ್ ಅವರು ಹಾಕಿಕೊಂಡಿರುವ ಸ್ಟೇಟಸ್ ಭಾರೀ ಚರ್ಚೆಗೆ ಕಾರಣವಾಗಿದೆ. ಇಬ್ಬರೂ ಸಹ ದಸರಾ ಶುಭಾಶಯಗಳು ಕೋರುವ ಭಾಗವಾಗಿ ಟಾಂಗ್ ಕೊಡುವಂತೆ ಮಾರ್ಮಿಕವಾಗಿ ಪೋಸ್ಟ್‌ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಧನ್ವೀರ್ ಗೌಡ ಪೋಸ್ಟ್‌ನಲ್ಲಿ ಏನಿದೆ ?

ನಟ ಧನ್ವೀರ್ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನ ಸ್ಟೇಟಸ್‌ನಲ್ಲಿ "ಕೆಲವರಿರುತ್ತಾರೆ ಶಕುನಿ ಅಂತವರು ಕೊನೆವರೆಗೂ ಆಟವಾಡಿ ತಾವೇ ಸಂತ್ರಸ್ತರಂತೆ ನಟಿಸುತ್ತಾರೆ. ಸತ್ಯಕ್ಕೆ ಯಾವೊತ್ತೂ ಸಾಕ್ಷಿ ಬೇಕಾಗಿಲ್ಲ, ಕಾಲವೇ ಉತ್ತರ ಕೊಡುತ್ತದೆ' ನಾಡಿನ ಸಮಸ್ತ ಜನತೆಗೆ ದಸರಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅಂತ ಇನ್‌ಸ್ಟಾಗ್ರಾಮ್‌ನಲ್ಲಿ ನಟ ಧನ್ವೀರ್ ಅವರು ಪೋಸ್ಟ್‌ ಮಾಡಿದ್ದಾರೆ.

ವಿಜಯ ಲಕ್ಷ್ಮೀ ದರ್ಶನ್ ಪೋಸ್ಟ್‌ನಲ್ಲಿ ಏನಿದೆ ?

ಇನ್ನು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು, "ನಿಮ್ಮ ಡಿ - ಬಾಸ್ ಹೆಸರು ಮೆಚ್ಚುಗೆಗಿರಲಿ, ಟೀಕೆಗಿರಲಿ, ಸ್ವಹಿತ ಸಾಧನೆಯ ಸಾಶನವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅಭಿಪ್ರಾಯದಲ್ಲಿ ಪ್ರಾಮಾಣಿಕತೆ ಇರಲಿ, ಮಾತಿನಲ್ಲಿ ಗೌರವಿರಲಿ.' ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು ಅಂತ ಶುಭಕೋರಿದ್ದಾರೆ.

ಯಾವ ನಾಯಿ ನರಿಗಳು ಕುತಂತ್ರ ಮಾಡಿದ್ರೂ ಏನು ಮಾಡಲಿಕ್ಕೆ ಆಗಲ್ಲ: ಧನ್ವೀರ್ ಗೌಡ

ಇನ್ನು ಯಾವ ನಾಯಿ ನರಿಗಳು ಏನೇ ಕುತಂತ್ರ ಮಾಡಿದ್ರೂ ದರ್ಶನ್ ಅವರನ್ನು ಯಾರೂ ಸಹ ಏನು ಮಾಡಲಿಕ್ಕೆ ಆಗಲ್ಲ ಅಂತ ನಟ ಧನ್ವೀರ್ ಗೌಡ ಅವರು ಹೇಳಿದ್ದಾರೆ. ಚಾಮರಾಜನಗರದ ದಸರಾ ಸಂಭ್ರಮದಲ್ಲಿದ್ದ ಧನ್ವೀರ್ ಗೌಡ ಅವರು ಮಾತನಾದಿದ್ದಾರೆ. ಈ ಸಮಾರಂಭದಲ್ಲಿ ನಟ ದರ್ಶನ್ ಅವರ ಬಗ್ಗೆ ಘೋಷಣೆ ಕೇಳಿ ಬಂತು. ದರ್ಶನ್ ಅವರ ಅಭಿಮಾನಿಗಳ ಘೋಷಣೆ ಮುಗಿದ ಮೇಲೆ ಮಾತನಾಡಿದ ನಟ ಧನ್ವೀರ್ ಗೌಡ ಅವರು ಅಭಿಮಾನಿಗಳ ಪ್ರೀತಿ ಮತ್ತು ಪ್ರೋತ್ಸಾಹವನ್ನು ಸ್ಮರಿಸಿದ್ದಾರೆ.

ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಎಲ್ಲರ ಮೇಲೆಯೂ ಇರಲಿ. ಚಾಮರಾಜನಗರ ಪ್ರದೇಶದಲ್ಲಿ ನಂಗೆ ಮಾದಪ್ಪನ ಬೆಟ್ಟ ಅಂದ್ರೆ ತುಂಬಾ ಇಷ್ಟ ಅಂತ ಹೇಳಿದ್ದಾರೆ. ಮುಂದುವರಿದು ಎಷ್ಟೇ ಕೂಗ್ರಿ, ಏನೇ ಮಾಡ್ರಿ. ಯಾವ ನಾಯಿ ನರಿಗಳು ಏನೇ ಕುತಂತ್ರ ಮಾಡಿದ್ರೂ ದರ್ಶನ್ ಅವರನ್ನು ಏನು ಮಾಡೋಕೆ ಆಗಲ್ಲ ಅಂತ ಧನ್ವೀರ್ ಗೌಡ ಅವರು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+