Darshan Thoogudeepa: ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ದಿಢೀರ್ ಬಳ್ಳಾರಿ ಜೈಲಿಗೆ ಶಿಫ್ಟ್...

ಬಳ್ಳಾರಿ ಜೈಲಿನಿಂದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರಿಲೀಸ್ ಆದ ನಂತರ ಇಡೀ ಅಭಿಮಾನಿ ಬಳಗ ಕುಣಿದು ಕುಪ್ಪಳಿಸುತ್ತಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಈಗ ಹೊರಗೆ ಬಂದಿದ್ದಾರೆ, ಮತ್ತೆ ಸಿನಿಮಾಗಳನ್ನ ಮಾಡ್ತಾರೆ ಅನ್ನೋ ಆಸೆ ಇಟ್ಟುಕೊಂಡಿದ್ದಾರೆ. ಅದ್ರಲ್ಲೂ 131 ದಿನಗಳ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸೆಂಟ್ರಲ್ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬಂದಿದ್ದಾರೆ. ಇಂತಹ ಸಮಯದಲ್ಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ದಿಢೀರ್ ಬಳ್ಳಾರಿ ಜೈಲಿಗೆ ಶಿಫ್ಟ್...

ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಅಂತಾ ಎಲ್ಲೇ ಹೋದರೂ ಅಭಿಮಾನಿಗಳು ಇದೀಗ ಜೈಕಾರ ಹಾಕುತ್ತಾರೆ. ಬಳ್ಳಾರಿ ಜೈಲಿನಲ್ಲಿ ಇದ್ದಾಗ ದರ್ಶನ್ ತೂಗುದೀಪ್ ಅವರು, ಸಾಕಷ್ಟು ನೋವು ಅನುಭವಿಸಿದ್ದರು. ದರ್ಶನ್ ತೂಗುದೀಪ್ ಅವರ ಆರೋಗ್ಯ ಕೂಡ ಕೈಕೊಟ್ಟ ಕಾರಣ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಹೀಗೆ ದರ್ಶನ್ ತೂಗುದೀಪ್ ಅವರು ಸಾಕಷ್ಟು ಆರೋಗ್ಯದ ಸಮಸ್ಯೆ ಎದುರಿಸುವಾಗ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಅಲ್ಲದೆ ದರ್ಶನ್ ತೂಗುದೀಪ್ ಅವರು ಆದಷ್ಟು ಬೇಗ ರಿಲೀಸ್ ಆಗಿ ಹೊರಗೆ ಬರಲಿ ಎಂದು ಬೇಡುತ್ತಿದ್ದರು. ಹೀಗಿದ್ದಾಗ, ದೀಪಾಳಿ ಹಬ್ಬಕ್ಕೆ ಮೊದಲು ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿದ್ದರೂ, ದಿಢೀರ್ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್...

Darshan Thoogudeepa Will Face More Heat After This Thing Is Happened

ದಿಢೀರ್ ಬಳ್ಳಾರಿ ಜೈಲಿಗೆ ಶಿಫ್ಟ್...

ದರ್ಶನ್ ತೂಗುದೀಪ್ ಅವರ ಆರೋಗ್ಯ ಪರಿಸ್ಥಿತಿ ಹಿನ್ನೆಲೆ ಇದೀಗ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಈ ಜಾಮೀನು ಅವಕಾಶದಿಂದ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಹೀಗಿದ್ದಾಗಲೇ ಪೊಲೀಸರು ದಿಢೀರ್ ದರ್ಶನ್ ತೂಗುದೀಪ್ ಅವರಿಗೆ ಮತ್ತೊಮ್ಮೆ ಆಘಾತ ನೀಡಲು...

ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆರೋಗ್ಯ ಪರಿಸ್ಥಿತಿ ಹಿನ್ನೆಲೆ ಈಗ ಹೈಕೋರ್ಟ್ ಮಧ್ಯಂತರ ಜಾಮೀನು ಪ್ರಶ್ನೆ ಮಾಡಿ, ಬೆಂಗಳೂರು ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲು ಏರಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಹೀಗಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮತ್ತೊಮ್ಮೆ ಬಳ್ಳಾರಿ ಜೈಲು ಸೇರುವ ಭಯ ಆವರಿಸಿದೆ. ಅದ್ರಲ್ಲೂ ಈ ಸುದ್ದಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ನಿದ್ದೆಗೆಡಿಸಿದೆ.

ದರ್ಶನ್ ತೂಗುದೀಪ್ ಅವರು ಮತ್ತೆ ಬಳ್ಳಾರಿಗೆ?

ಬೆಂಗಳೂರು ಪೊಲೀಸರು ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿ ಪ್ರಶ್ನೆ ಮಾಡುತ್ತ ಸುಪ್ರೀಂಕೋರ್ಟ್ ಮೆಟ್ಟಿಲು ಏರಲು ನಿರ್ಧರಿಸಿದ್ದು, ಇದಕ್ಕೆ ಒಂದಷ್ಟು ಸಮಯ ಹಿಡಿಯುತ್ತೆ ಎನ್ನಲಾಗಿದೆ. ಹೀಗಾಗಿ ಅಷ್ಟರಲ್ಲಿ ದೀಪಾವಳಿ ಹಬ್ಬ ಕೂಡ ಮುಕ್ತಾಯ ಆಗಲಿದೆ. ಹೀಗಾಗಿ ದರ್ಶನ್ ತೂಗುದೀಪ್ ಅವರ ಪರವಾಗಿ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಕೂಡ ಕಾನೂನು ಹೋರಾಟ ನಡೆಸಲು ಸಿದ್ಧತೆ ಸಾಗಿದೆ.

ಮಂಡ್ಯ ಟು ಇಂಡಿಯಾ ಫುಲ್ ಹವಾ

ಡಿ-ಬಾಸ್ ದರ್ಶನ್ ತೂಗುದೀಪ್ ಅಂದ್ರೆ ಮಂಡ್ಯ ಟು ಇಂಡಿಯಾ ಫುಲ್ ಹವಾ ಸೃಷ್ಟಿ ಆಗುತ್ತೆ. ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ 100ಕ್ಕೂ ಹೆಚ್ಚು ದಿನ ಕಳೆದ ನಂತರ, ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದಾರೆ. ಇದು ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಗೆ ತುಂಬ ನೋವು ಕೂಡ ನೀಡಿದೆ. ನಮ್ಮ ಡಿ-ಬಾಸ್ ಆರೋಗ್ಯ ಹೇಗಿದೆ? ಯಾವಾಗ ಅವರು ಮತ್ತೆ ಮೊದಲಿನಂತೆ ಸಿನಿಮಾ ಮಾಡುವುದು? ಎಂಬ ಚರ್ಚೆಗಳು ಇದೀಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಇಂತಹ ಸಮಯದಲ್ಲೇ ಬಳ್ಳಾರಿ ಜೈಲಿಗೆ ಮತ್ತೆ ಹೋಗುವ ಭಯ ಕೂಡ ಕಾಡುತ್ತಿದೆ, ಆದರೆ ಪೊಲೀಸರು ಈ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಅಂತಾ ಕಾದು ನೋಡಬೇಕಿದೆ.

ಡಿ-ಬಾಸ್ ಬೇಗ ಗುಣಮುಖರಾಗಲಿ...

ಒಟ್ನಲ್ಲಿ ನಟ ದರ್ಶನ್ ತೂಗುದೀಪ್ ಅವರು ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿ ನರಳುವ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಆದಷ್ಟು ಬೇಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಬರಲಿ ಎಂಬುದೇ ಎಲ್ಲರ ಆಶಯ. ಜೀವನದಲ್ಲಿ ಸಾಕಷ್ಟು ಕಷ್ಟ & ಸಮಸ್ಯೆ ಎದುರಿಸಿ ಗೆದ್ದು ಬೀಗಿರುವ ನಟನ ಈಗಿನ ಪರಿಸ್ಥಿತಿ ನೋಡಲು ಅಭಿಮಾನಿಗಳಿಗೂ ಸಾಕಷ್ಟು ನೋವು ನೀಡುತ್ತಿದೆ. ಇದೀಗ ವೈದ್ಯರು ಕೂಡ ವಿಶೇಷ ಚಿಕಿತ್ಸೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+