Darshan Thoogudeepa: ದರ್ಶನ್ ತೂಗುದೀಪ್ ಜೈಲಿನ ಬ್ಯಾನರ್ ಹರಿದು ಹಾಕಿದ ಪೊಲೀಸರು?

ದರ್ಶನ್ ತೂಗುದೀಪ್ ಅಭಿನಯದ 'ಕರಿಯ' ಸಿನಿಮಾ ಇಂದು ಅದ್ಧೂರಿಯಾಗಿ ರೀ ರಿಲೀಸ್ ಆಗಿದ್ದು, ಕರ್ನಾಟಕದ ಹತ್ತಾರು ಥಿಯೇಟರ್ ಸ್ಕ್ರೀನ್ ಮೇಲೆ ಅಬ್ಬರಿಸುತ್ತಿದೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರ ಕೆಲವು ಕಿರಿಕ್ ಫ್ಯಾನ್ಸ್ ನೆಮ್ಮದಿ ಹಾಳು ಮಾಡುತ್ತಾರೆ ಅಂತಾ ಪೊಲೀಸರು ಆರೋಪ ಮಾಡಿದ್ದು, ಥಿಯೇಟರ್ ಎದುರಲ್ಲೇ ವಾರ್ನಿಂಗ್ ಕೊಟ್ಟಿದ್ದಾರೆ. ಈ ಸಮಯದಲ್ಲಿ ಥಿಯೇಟರ್ ಎದುರಿಗೆ ಹಾಕಿದ್ದ ವಿವಾದ ಎಬ್ಬಿಸುವ ದರ್ಶನ್ ಅವರ ಬ್ಯಾನರ್ ಹರಿದು ಬಿಸಾಡಿದ್ದಾರೆ ಎಂಬ ಆರೋಪವನ್ನ, ದರ್ಶನ್ ತೂಗುದೀಪ್ ಅಭಿಮಾನಿಗಳು ಇದೀಗ ಮಾಡ್ತಿದ್ದಾರೆ.

ದರ್ಶನ್ ವೈಯಕ್ತಿಕ ಬದುಕಿನಲ್ಲಿ ಮಾತ್ರವಲ್ಲ, ಮಾಧ್ಯಮಗಳ ಜೊತೆಗೂ ಕಿರಿಕ್ ಮಾಡಿದ್ರು. 'ಏನ್ರೀ ಮೀಡಿಯಾ.. ಏನ್ರೀ ಮೀಡಿಯಾ..' ಅಂತಾ ಮಾಧ್ಯಮಗಳ ವಿರುದ್ಧ ನಟ ದರ್ಶನ್ ತೂಗುದೀಪ್ ಅವರು ಕೆಲವು ವರ್ಷಗಳ ಹಿಂದೆ ಕೆಟ್ಟ ಕೆಟ್ಟ ಪದ ಬಳಕೆ ಮಾಡಿ ಬೈದಿದ್ದರೆಂಬ ಗಂಭೀರ ಆರೋಪ ಕೇಳಿಬಂದಿತ್ತು. ಹೀಗೆ ದರ್ಶನ್ ತೂಗುದೀಪ್ ಅವರ ಆಡಿಯೋ ವೈರಲ್ ಆದ ನಂತರ ಮಾಧ್ಯಮಗಳು ದರ್ಶನ್ ಅವರ ಕಾರ್ಯಕ್ರಮಗಳಿಗೆ ಹೋಗುತ್ತಿರಲಿಲ್ಲ. ಹಾಗೇ ದರ್ಶನ್ ಅವರ ಸುದ್ದಿಗಳನ್ನ ಪ್ರಕಟ ಮಾಡುತ್ತಿರಲಿಲ್ಲ. ಹೀಗಿದ್ದಾಗ 'ಕಾಟೇರ' ಸಿನಿಮಾದ ಬಿಡುಗಡೆಗೆ ಮೊದಲು ಸ್ವತಃ ದರ್ಶನ್ ತೂಗುದೀಪ್ ಅವರೇ ಬಂದು ರಾಜಿ & ಪಂಚಾಯಿತಿ ಮಾಡಿದ್ದರು. ಅಲ್ಲದೆ ಮಾಧ್ಯಮಗಳ ವಿರುದ್ಧದ ತಮ್ಮ ಹೇಳಿಕೆಗೆ ಕ್ಷಮೆ ಕೂಡ ಕೇಳಿದ್ದರು.

Darshan Thoogudeepa Starrer Kariya Movie Banner Is Getting Viral

ಕೊಲೆ ಕೇಸ್‌ನಲ್ಲಿ ಡಿ-ಬಾಸ್ ಅರೆಸ್ಟ್

ಹೀಗೆ ದರ್ಶನ್ ಅವರು ಬಂದು ಮೀಡಿಯಾಗಳ ಜೊತೆಗೆ ಮತ್ತೆ ಕೈಜೋಡಿಸಿದ್ದರೂ, ಅವರ ಅಭಿಮಾನಿಗಳು ಮಾತ್ರ ಮೀಡಿಯಾಗಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಶೈಲಿ ಸರಿಯಾಗಲೇ ಇಲ್ಲ. ದರ್ಶನ್ ಅವರ ಕೆಲವು ಅಭಿಮಾನಿಗಳಿಂದ ಇಂತಹ ಪರಿಸ್ಥಿತಿ ಬಂತು ಎಂಬ ಗಂಭೀರ ಆರೋಪ ಕೂಡ ಕೇಳಿಬಂತು. ಪರಿಸ್ಥಿತಿ ಹೀಗಿದ್ದಾಗ ನಟ ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಮಾಡಿದೆ ಎಂದು ಪೊಲೀಸ್ ಪಡೆ ಅರೆಸ್ಟ್ ಮಾಡಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ?

ದರ್ಶನ್ ತೂಗುದೀಪ್ ಅವರ ಕೆಲ ಅಭಿಮಾನಿಗಳು ಮಾತ್ರ ನಟ ದರ್ಶನ್ ಅರೆಸ್ಟ್ ಆಗೋಕೆ ಮಾಧ್ಯಮಗಳೇ ಕಾರಣ ಎಂಬ ತಲೆ & ಬುಡ ಇಲ್ಲದ ಆರೋಪ ಮಾಡಿದ್ದರು. ಈಗ ನೋಡಿದರೆ ಮಾಧ್ಯಮಗಳ ಬಗ್ಗೆ ಮತ್ತೆ ಕೆಟ್ಟದಾಗಿ ಮಾತನಾಡ್ತಿದ್ದಾರೆ. ಅದೇ ರೀತಿ ಹಾಕಲಾಗಿದ್ದ ಬ್ಯಾನರ್ ಅನ್ನ ಇದೀಗ ಪೊಲೀಸರು ದೊಡ್ಡ ವಿವಾದ ಭುಗಿಲೇಳುವ ಮೊದಲೇ ಈಗ ಬಿಚ್ಚಿಸಿದ್ದಾರೆ.

ಬೆಂಗಳೂರಿನ ಪ್ರಮುಖ ಥಿಯೇಟರ್ ಎದುರು ಈ ರೀತಿಯಾಗಿ ಬ್ಯಾನರ್ ಹಾಕಿದ್ದರು. ಆದ್ರೆ ತಕ್ಷಣ ಎಚ್ಚೆತ್ತು, ಪೊಲೀಸರು ಆ ಬ್ಯಾನರ್ ಬಿಚ್ಚಿಸಿದ್ದಾರೆ. ಹೀಗಿದ್ದಾಗ ದರ್ಶನ್ ಅವರ ಕೆಲವು ಫ್ಯಾನ್ಸ್ ಪೊಲೀಸರು ಬ್ಯಾನರ್ ಹರಿದಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ. ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳ ಮೂಲಕ ಸಂಚಲನ ಸೃಷ್ಟಿಸುವ ಕೆಲಸ ಮಾಡ್ತಿದ್ದಾರೆ ಎಂಬ ಆರೋಪವು ಕೇಳಿಬಂದಿದೆ. ಈ ಕುರಿತು ಸೋಷಿಯಲ್ ಮೀಡಿಯಾ ಪರಿಶೀಲನೆ ಮಾಡಬೇಕು ಎಂಬ ಆಗ್ರಹವನ್ನು ಈಗ ಕನ್ನಡಿಗರು ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+