Darshan Thoogudeepa: ತಪ್ಪಾಯ್ತು ಕ್ಷಮಿಸಿ ಸಾರ್.. ಬಳ್ಳಾರಿ ಜೈಲಿಂದ ರಿಲೀಸ್ ಆಗುತ್ತಿದ್ದಂತೆ ದರ್ಶನ್ ತೂಗುದೀಪ್...

ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಹೀಗೆ ದರ್ಶನ್ ತೂಗುದೀಪ್ ಅಭಿಮಾನಿಗಳು ಈಗ ಎಲ್ಲೆಲ್ಲೂ ಜಯಘೋಷ ಮೊಳಗಿಸಿದ್ದು, ಅತ್ಯಂತ ಖುಷಿಯಲ್ಲಿ ಕುಣಿದಾಡುತ್ತಿದ್ದಾರೆ ಫ್ಯಾನ್ಸ್. ಬಳ್ಳಾರಿ ಜೈಲಿಂದ 'ಡಿ-ಬಾಸ್' ದರ್ಶನ್ ತೂಗುದೀಪ್ ಅವ್ರು ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಬೆಂಗಳೂರಿಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ದರ್ಶನ್ ತೂಗುದೀಪ್ ಅವರು ಹೊರಗೆ ಬರುತ್ತಿದ್ದಂತೆ, 'ಡಿ-ಬಾಸ್' ಅಭಿಮಾನಿಗಳು ಭರ್ಜರಿಯಾಗಿ ಸಂಭ್ರಮಾಚರಣೆ ನಡೆಸಿದ್ದಾರೆ.

ನಿನ್ನೆ ರಾತ್ರಿ ಪೂರ್ತಿ 'ಡಿ-ಬಾಸ್' ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮ ಹಂಚಿಕೊಂಡಿದ್ದಾರೆ. ನಮ್ಮ ಬಾಸ್ ಹೊರಗೆ ಬಂದ್ರು ಮಚ್ಚಿ, ನಮ್ಮ ಬಾಸ್ ಹೊರಗೆ ಬಂದೇ ಬಿಟ್ರು ಮಚ್ಚಾ... ಅಂತ ಸಿಕ್ಕಾಪಟ್ಟೆ ಸಂಭ್ರಮಿಸಿ ರಾತ್ರಿಪೂರ್ತಿ ನಿದ್ದೆ ಕೂಡ ಮಾಡಿಲ್ಲ. ಆದರೆ ಇಂತಹ ಸಮಯದಲ್ಲೇ, ತಪ್ಪಾಯ್ತು ಕ್ಷಮಿಸಿ ಸಾರ್.. ಬಳ್ಳಾರಿ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆ ದರ್ಶನ್ ತೂಗುದೀಪ್...

Darshan Thoogudeepa Said Sorry To Ballari Staff

'ತಪ್ಪಾಯ್ತು ಕ್ಷಮಿಸಿ ಸಾರ್...'

'ಡಿ-ಬಾಸ್' ದರ್ಶನ್ ತೂಗುದೀಪ್ ಅವರ ಬಾಳಲ್ಲಿ ಹೊಸ ತಂಗಾಳಿ ಇದೀಗ ಶುರುವಾಗಿದೆ. 131 ದಿನಗಳ ನಂತರ ಇದೀಗ ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಘೋಷಣೆ ಜೋರಾಗಿದೆ. ಯಾಕಂದ್ರೆ ಜೈಲು ಸೇರಿದ 131 ದಿನಗಳ ನಂತರ ಇದೀಗ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿಂದ ರಿಲೀಸ್ ಆಗಿ ಹೊರಗೆ ಬಂದಿದ್ದಾರೆ. ಇದೇ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟ್ಯಂತರ ಅಭಿಮಾನಿಗಳು ಸಂಭ್ರಮಾಚರಣೆ ಶುರು ಮಾಡಿದ್ದಾರೆ. ಆದರೆ ಹೀಗೆ, 'ಡಿ-ಬಾಸ್' ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ಹೊರಗೆ ಬಂದ ತಕ್ಷಣವೇ ತಪ್ಪಾಯ್ತು ಕ್ಷಮಿಸಿ ಸಾರ್...

ಹೌದು, 'ಡಿ-ಬಾಸ್' ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ಹೊರಗಡೆ ಬಂದ ತಕ್ಷಣವೇ ಬಳ್ಳಾರಿ ಜೈಲಿನ ಅಧಿಕಾರಿಗಳಿಗೆ 'ತಪ್ಪಾಯ್ತು ಕ್ಷಮಿಸಿ ಸಾರ್...' ಅಂತಾ ಕೇಳಿದ್ದಾರೆ. ಯಾಕಂದ್ರೆ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಲ್ಲಿ ಇದ್ದಾಗ ಸಾಕಷ್ಟು ಡಿಮ್ಯಾಂಡ್ ಇಟ್ಟಿದ್ದರು. ನನಗೆ ಅದು ಬೇಕು, ನನಗೆ ಇದು ಬೇಕು ಅಂತಾ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನ ಅಧಿಕಾರಿಗಳ ಎದುರು ಡಿಮ್ಯಾಂಡ್ ಇಟ್ಟಿದ್ದರು. ಆದರೆ ಈಗ ಜೈಲಿನಿಂದಲೇ ರಿಲೀಸ್ ಆಗಿ ಹೊರಗೆ ಬಂದಿದ್ದಾರೆ ದರ್ಶನ್ ತೂಗುದೀಪ್ ಅವರು. ಹೀಗೆ ಹೊರ ಬಂದಾಗ ಬಳ್ಳಾರಿ ಜೈಲಿನ ಅಧಿಕಾರಿಗಳಿಗೆ 'ತಪ್ಪಾಯ್ತು ಕ್ಷಮಿಸಿ ಸಾರ್...' ಅಂತಾ ಕ್ಷಮೆ ಕೇಳಿದ್ದಾರೆ.

ದರ್ಶನ್ ತೂಗುದೀಪ್ ಅವರ ಆರೋಗ್ಯ...

ಬಳ್ಳಾರಿ ಜೈಲಿನ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಇದ್ದಾಗ ದರ್ಶನ್ ತೂಗುದೀಪ್ ಅವರು ಸಾಕಷ್ಟು ನೋವು ಅನುಭವಿಸಿದ್ದರು. ದರ್ಶನ್ ತೂಗುದೀಪ್ ಅವರ ಆರೋಗ್ಯ ಕೂಡ ಕೈಕೊಟ್ಟ ಕಾರಣ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಹೀಗೆ ದರ್ಶನ್ ತೂಗುದೀಪ್ ಅವರು ಸಾಕಷ್ಟು ಆರೋಗ್ಯದ ಸಮಸ್ಯೆ ಎದುರಿಸುವಾಗ, ಕೆಲವು ಬೇಡಿಕೆಯನ್ನ ಬಳ್ಳಾರಿ ಜೈಲಿನ ಅಧಿಕಾರಿಗಳ ಎದುರು ಇಟ್ಟು ಮನವಿ ಮಾಡಿದ್ದರು.

ಆದರೆ ಇದಕ್ಕೆ ಬಳ್ಳಾರಿ ಜೈಲಿನ ಅಧಿಕಾರಿಗಳು ಒಪ್ಪಿಗೆ ನೀಡದೆ, ನಾವು ಕೋರ್ಟ್ ನಿಯಮದ ಪ್ರಕಾರ ಮಾತ್ರ ನಡೆದುಕೊಳ್ಳಲು ಸಾಧ್ಯ ಎಂದಿದ್ದರು. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ಹೊರಗೆ ಬಂದ ತಕ್ಷಣ ಜೈಲಿನ ಅಧಿಕಾರಿ ಮತ್ತು ಸಿಬ್ಬಂದಿ ಬಳಿ ಕ್ಷಮೆ ಕೇಳಿದ್ದಾರೆ. ಅಲ್ಲದೆ ನನಗೆ ಸಮಸ್ಯೆ ಇದ್ದ ಕಾರಣ ನಾನು ಆ ರೀತಿ ನಡೆದುಕೊಂಡೆ ಸಾರಿ ಎಂದಿದ್ದಾರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಈ ಒಳ್ಳೆಯ ಗುಣಕ್ಕೆ ಈಗ ಅಭಿಮಾನಿಗಳು ತಲೆ ಬಾಗಿದ್ದಾರೆ.

ಡಿ-ಬಾಸ್ ಬೇಗ ಗುಣಮುಖರಾಗಲಿ...

ಒಟ್ನಲ್ಲಿ ನಟ ದರ್ಶನ್ ತೂಗುದೀಪ್ ಅವರು ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿ ನರಳುವ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಆದಷ್ಟು ಬೇಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಬರಲಿ ಎಂಬುದೇ ಎಲ್ಲರ ಆಶಯ. ಜೀವನದಲ್ಲಿ ಸಾಕಷ್ಟು ಕಷ್ಟ & ಸಮಸ್ಯೆ ಎದುರಿಸಿ ಗೆದ್ದು ಬೀಗಿರುವ ನಟನ ಈಗಿನ ಪರಿಸ್ಥಿತಿ ನೋಡಲು ಅಭಿಮಾನಿಗಳಿಗೂ ಸಾಕಷ್ಟು ನೋವು ನೀಡುತ್ತಿದೆ. ಇದೀಗ ವೈದ್ಯರು ಕೂಡ ವಿಶೇಷ ಚಿಕಿತ್ಸೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+