Darshan Thoogudeepa: ದರ್ಶನ್ ಫಾರಂ ಹೌಸ್‌ಗೆ ಟಾರ್ಪಲ್- ಖಾಕಿ ಐಡಿಯಾ ಕಾಪಿ ಮಾಡಿದ ದಾಸ
ನಟ ದರ್ಶನ್ ತೂಗುದೀಪ ಸದ್ಯ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಮೈಸೂರಿಗೆ ತೆರಳಿರುವ ದಚ್ಚು ತಾಯಿಯೊಂದಿಗೆ ಹಾಗೂ ತಾವು ಸಾಕಿದ ಪಕ್ಷಿಗಳೊಂದಿಗೆ ಸಮಯ ಕಳೆಯುತ್ತಾ ಕಹಿ ಘಟನೆಗಳನ್ನು ಮರೆಯುತ್ತಿದ್ದಾರೆ. ಈ ನಡುವೆ ದರ್ಶನ್ ಖಾಕಿ ಐಡಿಯಾವನ್ನು ಕಾಪಿ ಮಾಡಿದ್ದು ಕಂಡು ಬಂದಿದೆ. ತಮ್ಮ ಫಾರಂ ಹೌಸ್‌ಗೆ ದಚ್ಚು ಟಾರ್ಪಲ್ ಹಾಕಿಸಿದ್ದಾರೆ.
ಹೌದು... ಈ ಹಿಂದೆ ಅನ್ನಪೂರ್ಣೇಶ್ವರಿ ಠಾಣೆಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿಗಳನ್ನು ಇರಿಸಿದಂತಹ ಸಂದರ್ಭದಲ್ಲಿ ಠಾಣೆಗೆ ಟಾರ್ಪಲ್ ಅನ್ನು ಪೊಲೀಸರು ಹಾಕಿಸಿದ್ದರು. ಅದೇ ರೀತಿ ಈಗ ದರ್ಶನ್ ಕೂಡ ತಮ್ಮ ಫಾರಂ ಹೌಸ್‌ಗೆ ಟಾರ್ಪಲ್ ಹಾಕಿಸಿದ್ದಾರೆ. ಫಾರಂ ಹೌಸ್‌ನ ಗೇಟ್‌ಗೆ ಬೀಗ ಹಾಕಿ ಟಾರ್ಪಲ್ ಹೊದಿಸಿದ್ದಾರೆ ಸಿಬ್ಬಂದಿ. ಜೊತೆಗೆ ಗೇಟ್‌ನಿಂದ ಏನೂ ಕೂಡ ಕಾಣದಂತೆ ಟಾರ್ಪಲ್‌ನಿಂದ ಮುಂಚಲಾಗಿದೆ.

ದರ್ಶನ್ ಜನವರಿ 5ರವರೆಗೆ ಮೈಸೂರಿನಲ್ಲೇ ಉಳಿಯಲಿದ್ದಾರೆ. ಮೈಸೂರಿನಲ್ಲಿ ಚಿಕಿತ್ಸೆ ಪಡೆಯುವ ಬಗ್ಗೆ ಇನ್ನೂ ಕೂಡ ನಿರ್ಧಾರ ಮಾಡಿಲ್ಲ. ಹೀಗಾಗಿ ದರ್ಶನ್ ಅವರನ್ನು ಭೇಟಿ ಮಾಡಲು ಫಾರಂ ಹೌಸ್‌ಗೆ ಹಲವಾರು ಜನ ಆಗಮಿಸುತ್ತಿದ್ದಾರೆ. ಇದ್ಯಾವುದು ಕೂಡ ಕಾಣಿಸಬಾರದು ಎಂದು ಮೈಸೂರಿನ ಟಿ ನರಸೀಪುರ ತಾಲೂಕಿನಲ್ಲಿರುವ ದರ್ಶನ್ ಅವರ 'ವಿನೀಶ್ ದರ್ಶನ್ ಕಾಟೇವಾರಿ ಸ್ಟಡ್ ಫಾರಂ' ಹೌಸ್ ಗೇಟ್ ಅನ್ನು ಟಾರ್ಪಲ್‌ನಿಂದ ಮುಚ್ಚಲಾಗಿದೆ. ತೋಟದ ಒಳಗೆ ಏನಿದೆ ಎಂದು ಕಾಣಿಸದಂತೆ, ಯಾರಿದ್ದಾರೆ ಎನ್ನುವುದು ತಿಳಿಯದಂತೆ ಗೇಟ್ ಗ್ಯಾಪ್‌ಗಳನ್ನು ಸಂಪೂರ್ಣವಾಗಿ ಟಾರ್ಪಲ್ ನಿಂದ ಮುಚ್ಚಲಾಗಿದೆ.
ಮೈಸೂರಿನ ಫಾರಂ ಹೌಸ್‌ನಲ್ಲಿ ಸ್ನೇಹಿತರ ಜೊತೆಗೆ ದರ್ಶನ್ ಕಾಲ ಕಳೆಯುತ್ತಿದ್ದಾರೆ. ಇವತ್ತು ದರ್ಶನ್ ಅವರ ತಾಯಿ ಮೀನಾ ಫಾರಂ ಹೌಸ್‌ಗೆ ತೆರಳಿದರು. ಆದರೆ ಯಾರು ಬರುತ್ತಾರೆ ಹೋಗುತ್ತಾರೆ ಅನ್ನೋದನ್ನು ಗೊತ್ತಾಗದಂತೆ ಗೇಟ್‌ಗೆ ಟಾರ್ಪಲ್ ಹಾಕಲಾಗಿದೆ.
ದರ್ಶನ್‌ಗೆ 'ಸುಪ್ರೀಂ' ಶಾಕ್?
ಇತ್ತ ದರ್ಶನ್ ಬೇಲ್ ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮುಂದಿನ ವಾರ ಸುಪ್ರೀಂ ಕೋರ್ಟ್‌ಗೆ ಪೊಲೀಸರಿಂದ ಅರ್ಜಿ ಸಲ್ಲಿಕೆಯಾಗಲಿದೆ ಎನ್ನಲಾಗುತ್ತಿದೆ. ತನಿಖಾಧಿಕಾರಿಗಳು ದರ್ಶನ್ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ. ದರ್ಶನ್ ಅವರು ಪ್ರಭಾವಿಗಳನ್ನು ಭೇಟಿ ಮಾಡುತ್ತಾರಾ ಅನ್ನೋದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಮೈಸೂರಿಗೆ ತೆರಳಲು ಕೋರ್ಟ್ ಅನುಮತಿ ಪಡೆದ ದರ್ಶನ್ ಅವರಿಗೆ ಬೇರೆ ಎಲ್ಲೂ ಕೂಡ ಹೋಗಲು ಅವಕಾಶ ಇಲ್ಲ. ಮೈಸೂರಿನಲ್ಲೂ ಅವರಿಗೆ ಹೆಚ್ಚು ದಿನ ಕಳೆಯಲು ಅವಕಾಶ ನೀಡಲಾಗಿಲ್ಲ. ಜನವರಿ 5ರವರೆಗೆ ಮಾತ್ರ ಕೋರ್ಟ್ ಅವರಿಗೆ ಮೈಸೂರಿನಲ್ಲಿ ಇರಲು ಅನುಮತಿ ನೀಡಿದೆ.
ಇತ್ತ ಪೊಲೀಸರು ದರ್ಶನ್ ಅವರಿಗೆ ಸಿಕ್ಕ ಬೇಲ್ ರದ್ದಿಗೆ ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದಾರೆ. ಸುಪ್ರೀಂ ಕೋರ್ಟ್ ದರ್ಶನ್ ಜಾಮೀನು ರದ್ದು ಮಾಡಿದರೆ ದರ್ಶನ್ ಅವರು ಮತ್ತೆ ಜೈಲಿಗೆ ಹೋಗುವುದು ಖಚಿತ ಎನ್ನಲಾಗುತ್ತಿದೆ. ಹೀಗಾಗಿ ದರ್ಶನ್ ಎಲ್ಲೇ ಇದ್ರೂ ಕೂಡ ನೆಮ್ಮದಿ ಇಲ್ಲ ಎಂಬಂತಾಗಿದೆ. ಜಾಮೀನು ಖುಷಿಯಲ್ಲಿರುವ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್ ಕೊಡಲಿದಿಯಾ ಎನ್ನುವ ಆತಂಕ ಅವರ ಅಭಿಮಾನಿಗಳಲ್ಲಿ ಕಾಡತೊಡಗಿದೆ.
ಒಂದು ವೇಳೆ ದರ್ಶನ್ ಪ್ರಭಾವಿಗಳನ್ನು ಭೇಟಿ ಮಾಡಿದರೆ ಅಥವಾ ಅವರ ಮನೆಗೆ ಯಾರನ್ನಾದರೂ ಕಳುಹಿಸಿ ಪ್ರಕರಣ ಮುಚ್ಚಿ ಹಾಕುವಂತಹ ಕೆಲಸ ಮಾಡಿದರೆ ಅಥವಾ ಸಾಕ್ಷಿಗಳ ಮೇಲೆ ಒತ್ತಡ ಹಾಕಿರುವ ಸುಳಿವು ಸಿಕ್ಕರೆ ಪೊಲೀಸರು ಇದನ್ನೂ ಕೂಡ ಉಲ್ಲೇಖಿಸಿ ದರ್ಶನ್ ವಿರುದ್ಧ ಸುಪ್ರೀಂಗೆ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
Photo courtesy:Filmibeat kannada












Click it and Unblock the Notifications