Darshan Thoogudeepa: ಮುಗಿದು ಹೋಯ್ತಾ ದರ್ಶನ್ ತೂಗುದೀಪ್ ಅಬ್ಬರ? ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೋಡಲು ಬರ್ತಿಲ್ಲವಂತೆ ಜನ...
ಕರ್ನಾಟಕದಾದ್ಯಂತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರದ್ದೇ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಜೈಲಿನಲ್ಲಿ ಇರುವಾಗಲೂ ದಾಸನದ್ದೇ ಮಾತು, ಜೈಲಿನಿಂದ ಹೊರ ಬಂದ ಮೇಲೂ ಐರಾವತನದ್ದೇ ಹವಾ. ಜಗ್ಗುದಾದಾ ಕುಂತ್ರು ಚಂದನೇ ನಿಂತ್ರು ಅಂದಾನೆ. ಆದರೆ ಪೋರ್ಕಿ ಮೇಲಿನ ಆರೋಪ ಮಾತ್ರ ನಿಜವೋ ಸುಳ್ಳೋ ಎನ್ನುವುದು ಅಭಿಮಾನಿಗಳ ತಾಳಕ್ಕೆ ಸಿಗುತ್ತಿಲ್ಲ. ಅವರ ಮೇಲಿನ ಆರೋಪ ಏನೇ ಇರಲಿ ನಮ್ಮಣ್ಣ ಡಿ-ಬಾಸ್ ಅಂತ ಫ್ಯಾನ್ಸ್ ದರ್ಶನ್ ಅವರನ್ನು ಎದೆಗಪ್ಪಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಅವರ ಸಿನಿಮಾಗಳನ್ನು ಬ್ಯಾಕ್ ಟು ಬ್ಯಾಕ್ ರೀರಿಲೀಸ್ ಮಾಡಲಾಗುತ್ತಿದೆ.
ಹೌದು.. ದರ್ಶನ್ ತೂಗುದೀಪ ಇಲ್ಲಿಯವರೆಗೆ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಕನ್ನಡದ ಸಿನಿಮಾಗಳಲ್ಲಿ ಇವರ ಪಾತ್ರಕ್ಕೆ ಲಕ್ಷಾಂತರ ಜನ ಅಭಿಮಾನಿಗಳ ಬಳಗವಿದೆ. ದರ್ಶನ್ ಅಭಿನಯದ ಹಾಡುಗಳು, ಸಿನಿಮಾಗಳನ್ನು ಜನ ಈಗಲೂ ನೆನಪಿಸಿಕೊಳ್ತಾರೆ. ಹೀಗಾಗಿ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ ಅಂದರೆ ಅವರ ಫ್ಯಾನ್ಸ್‌ಗೆ ಅರಗಿಸಿಕೊಳ್ಳಲಾಗಿಲ್ಲ. ನಮ್ಮಣ್ಣ ಡಿ-ಬಾಸ್ ಯಾವುದೇ ತಪ್ಪು ಮಾಡಿಲ್ಲ ಅಂತ ಫ್ಯಾನ್ಸ್ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ದರ್ಶನ್ ಸಿನಿಮಾಗಳಿಂದ ಮಾತ್ರವಲ್ಲದೆ ಕೆಲ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ಕೈಲಾದಷ್ಟು ಜನರಿಗೆ ಸಹಾಯ ಕೂಡ ಮಾಡುತ್ತಿದ್ದರು. ಇದರಿಂದಾಗ್ಯೂ ದರ್ಶನ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು.

ಈ ಒಂದು ಕಾರಣದಿಂದಲೂ ಕೂಡ ದರ್ಶನ್ ಜೈಲಿಗೆ ಹೋದರೂ ಅವರ ಅಭಿಮಾನಿಗಳು ಮಾತ್ರ ಅವರ ಬೆನ್ನು ಬಿಡುತ್ತಿಲ್ಲ. ಅವರ ಮೇಲಿನ ಅತಿಯಾದ ನಂಬಿಕೆ ಅಭಿಮಾನಿಗಳ ಹೃದಯದಲ್ಲಿ ಆಳವಾಗಿ ಬೇರೂರಿ ಬಿಟ್ಟಿದೆ. ಹೀಗಾಗಿ ಅವರು ಜೈಲಿಗೆ ಹೋದಾಗ ಅವರ ಖೈದಿ ನಂಬರ್, ಅವರ ಚಿತ್ರವನ್ನು ಕೆಲ ಅಭಿಮಾನಿಗಳು ಅಚ್ಚೆ ಹಾಕಿಸಿಕೊಂಡಿದ್ದರು. ಅಲ್ಲದೆ ವಾಹನಗಳಿಗೂ ಕೈದಿ ನಂಬರ್ ಪ್ಲೇಟ್ ಅನ್ನು ಬದಲಾಯಿಸಿಕೊಂಡಿದ್ದರು. ಅವರ ಮೇಲೆ ಯಾವುದೇ ಆರೋಪವಿದ್ದರೂ ನಾವು ಮಾತ್ರ ಅವರನ್ನು ಬಿಟ್ಟು ಕೊಡುವುದಿಲ್ಲ ಅಂತ ಫ್ಯಾನ್ಸ್ ಪಟ್ಟು ಹಿಡಿದಿದ್ದರು.
ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ ಅಂದರೆ ಕೆಲವರಿಗೆ ಈಗಲೂ ನಂಬಲು ಆಗುತ್ತಿಲ್ಲ. ಕೇವಲ ಪರದೆ ಮೇಲೆ ನೋಡಿದ ಜನರಂತೂ ದರ್ಶನ್ ನಿಜ ಜೀವನದಲ್ಲಿ ಹೀಗೆಲ್ಲಾ ಇದಿಯಾ ಅಂತ ಧಂಗಾಗಿದ್ದಾರೆ. ದರ್ಶನ್ ಅವರ ವೈಯಕ್ತಿಕ ಜೀವನ ಜೈಲಿಗೆ ಹೋಗುವವರೆಗೂ ಯಾರಿಗೂ ಕೂಡ ಗೊತ್ತಿರಲಿಲ್ಲ. ಅವರು ಜೈಲಿಗೆ ಹೋದ ಬಳಿಕವಂತೂ ಅವರ ಸಂಸಾರಿಕ ಜೀವನದ ಹಲವಾರು ರಹಸ್ಯಗಳು ಬಗೆದಷ್ಟು ಹೊರ ಬರುತ್ತಲೇ ಇವೆ. ಪರದೆ ಮೇಲೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದ ದಚ್ಚು ನಿಜ ಜೀವನದಲ್ಲಿ ಹೀಗೆಲ್ಲಾ ಇದ್ದಾರಾ ಅಂತ ಜನರಲ್ಲಿ ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಹೀಗಾಗಿ ದರ್ಶನ್ ಏನೇ ಮಾಡಿದರೂ ಕೂಡ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಕನ್ನಡದ ಖ್ಯಾತ ನಟನ ವೈವಾಹಿಕ ಜೀವನ ಹೀಗೆಲ್ಲಾ ಇದಿಯಾ ಅಂತ ಜನ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಜನರ ಈ ಆಸಕ್ತಿಯನ್ನು ಕಂಡ ಸಿನಿಮಾ ನಿರೂಪಕರು ಅವರ ಸಿನಿಮಾವನ್ನು ರೀರಿಲೀಸ್ ಮಾಡಲು ಮುಂದಾಗಿದ್ದಾರೆ. ಹೀಗಾಗಿ ದರ್ಶನ್ ಸಿನಿಮಾಗಳು ಬ್ಯಾಕ್ ಟೂ ಬ್ಯಾಕ್ ರೀರಿಲೀಸ್ ಆಗುತ್ತಲೇ ಇವೆ.

ದರ್ಶನ್ ಅಭಿನಯದ ಶಾಸ್ತ್ರಿ, ಕರಿಯಾ, ನವಗ್ರಹ ಹಾಗೂ ಸಂಗೊಳ್ಳಿ ರಾಯಣ್ಣ ಸಿನಿಮಾಗಳು ರೀರಿಲೀಸ್ ಆಗಿವೆ. ಸಿನಿಮಾಗಳನ್ನಿ ಅಭಿಮಾನಿಗಳೇ ಪ್ರಮೋಷನ್ ಮಾಡುವ ಮೂಲಕ ಬೆಂಬಲ ನೀಡುತ್ತಿದ್ದಾರೆ. ಅವರ ಕಟೌಟ್ ಹಾಕಿ, ಸಿನಿಮಾ ಮಂದಿರಗಳನ್ನು ಸಿಂಗರಿಸಿ ಇತರ ಅಭಿಮಾನಿಗಳನ್ನು ಸೆಳೆಯುವ ಪ್ರಯತ್ನ ಮಾಡಿದರೂ ಕೂಡ ಸಿನಿಮಾ ಓಡಿಲ್ಲ. ದರ್ಶನ್ ಸಿನಿಮಾಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ದರ್ಶನ್ ಅಭಿನಯದ ಸಿನಿಮಾಗಳು ರೀರಿಲೀಸ್ ಆದ ಚಿತ್ರಮಂದಿರಗಳಲ್ಲಿ ಜನರೇ ಇಲ್ಲದಿರುವುದು ಕಂಡು ಬಂದಿದೆ. ಬಹುತೇಕ ಥಿಯೇಟರ್‌ಗಳು ಖಾಲಿಯಾಗಿರುವುದು ಕಂಡು ಬಂದಿದೆ. ಇದು ದರ್ಶನ್ ಕರಿಯರ್‌ಗೆ ದೊಡ್ಡ ಹೊಡೆತ ಉಂಟು ಮಾಡುವ ಲಕ್ಷಣವಾಗಿದ್ದು ಮುಂದಿನ ದರ್ಶನ್ ಸಿನಿ ಜರ್ನಿ ಹೇಗಿರಲಿದೆ ಎನ್ನುವ ಕೌತುಕ ಮೂಡಿಸಿದೆ. ಒಟ್ಟಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದರ್ಶನ್ ಸಿನಿ ಜರ್ನಿಗೆ ಭಾರೀ ದೊಡ್ಡ ಹೊಡೆತವನ್ನು ನೀಡಿದೆ.
ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟ ದರ್ಶನ್ ಅನಾರೋಗ್ಯದ ಕಾರಣದಿಂದ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಒಳಗಾಗಬೇಕು ಎನ್ನುವ ಕಾರಣಕ್ಕೆ ದರ್ಶನ್ ಅವರಿಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ ದರ್ಶನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೈಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು (ನವೆಂಬರ್ 26) ನಡೆಯಲಿದ್ದು ಈ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.
ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಹೈಕೋರ್ಟ್ ಪೀಠದಲ್ಲಿ ದರ್ಶನ್, ಅನುಕುಮಾರ್, ಲಕ್ಷ್ಮಣ್ ಎಂ. ಪವಿತ್ರಾ ಗೌಡ, ನಾಗರಾಜು ಆರ್ ಹಾಗೂ ಜಗದೀಶ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ವೇಳೆ ಯಾವ ರೀತಿಯ ವಾದ ವಿವಾದಗಳು ನಡೆಯುತ್ತವೆ ಎನ್ನುವ ಕುತೂಹಲ ಉಂಟಾಗಿದೆ.












Click it and Unblock the Notifications