Darshan Thoogudeepa: ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ್ ವಿರುದ್ಧ ಮತ್ತೊಂದು ಗಂಭೀರ ಕೇಸ್...

ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ಹೊರಗಡೆ ಇದ್ದಾಗ ಬಿಂದಾಸ್ ಜೀವನ ನಡೆಸಿ, ಎಲ್ಲರ ಕಣ್ಣು ಕುಕ್ಕುವಂತೆ ಬದುಕುತ್ತಿದ್ದರು. ದರ್ಶನ್ ತೂಗುದೀಪ್ ಅವರ ಹಿಂದೆ ಹತ್ತಾರು ಕಾರುಗಳು, ಕೋಟಿ ಕೋಟಿ ಅಭಿಮಾನಿಗಳು ಸದಾ ಬೆಂಬಲ ನೀಡುತ್ತಿದ್ದರು. ಅದರಲ್ಲೂ ಈ ನಟ ಒಂದು ಹೊತ್ತಿನ ಊಟಕ್ಕೂ ಲಕ್ಷ ಲಕ್ಷ ಖರ್ಚು ಮಾಡುತ್ತಿದ್ದರು. ಹೀಗೆ ಬಿಂದಾಸ್ ಜೀವನ ನಡೆಸುತ್ತಿದ್ದ ದಾಸ ದರ್ಶನ್ ತೂಗುದೀಪ್ ಅವರಿಗೆ, ರೇಣುಕಾಸ್ವಾಮಿ ಕೊಲೆ ಕೇಸ್ ಭೀಕರ ಆಘಾತ ನೀಡಿದೆ. ಮತ್ತೊಂದು ಕಡೆ, ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ್ ವಿರುದ್ಧ ಮತ್ತೊಂದು ಗಂಭೀರ ಕೇಸ್...

ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಹೀಗೆ ದರ್ಶನ್ ಅವರಿಗೆ ಫ್ಯಾನ್ಸ್ ಜೈಕಾರ ಹಾಕುತ್ತಿದ್ರು. ಕನ್ನಡ ಸಿನಿಮಾ ರಂಗದಲ್ಲಿ 'ಡಿ-ಬಾಸ್' ಎಂಬ ಬಿರುದು ಪಡೆದು ಅಕ್ಷರಶಃ ಸುಲ್ತಾನ್ ರೀತಿ ಮೆರೆಯುತ್ತಿದ್ದ ದರ್ಶನ್ ತೂಗುದೀಪ್ ಇದೀಗ ಖೈದಿ. ಬಳ್ಳಾರಿ ಜೈಲಿನಲ್ಲಿ ಅವರು ಸಾಕಷ್ಟು ನೋವು ಎದುರಿಸುವ ಪರಿಸ್ಥಿತಿ ಬಂದಿದೆ. ಹೀಗಿದ್ದಾಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಈ ನಟನಿಗೆ ಇನ್ನೇನು ಜಾಮೀನು ಸಿಗಲಿದೆ, ಈ ಮೂಲಕ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗುವ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ. ಪರಿಸ್ಥಿತಿ ಹೀಗಿದ್ದಾಗಲೇ ಮತ್ತೊಂದು ಆಘಾತ ಇದೀಗ ಎದುರಾಗಿದ್ದು, ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ್ ವಿರುದ್ಧ ಮತ್ತೊಂದು ಗಂಭೀರ ಕೇಸ್...

Darshan Thoogudeepa May Face This With Income Tax Officers

ದರ್ಶನ್ ತೂಗುದೀಪ್ ಮತ್ತೆ ಅರೆಸ್ಟ್?

ರೇಣುಕಾಸ್ವಾಮಿ ಕೊಲೆಯ ಕೇಸ್‌ನಲ್ಲಿ, ದರ್ಶನ್ ತೂಗುದೀಪ್ ಎ-2 ಅಂದ್ರೆ 2ನೇ ಆರೋಪಿ ಆಗಿದ್ದಾರೆ. ಹೀಗಿದ್ದಾಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸುಮಾರು 85 ಲಕ್ಷ ರೂಪಾಯಿ ಹಣ ಕೂಡ ಸಿಕ್ಕಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಆರೋಪ ಇದೀಗ ನಟ ದರ್ಶನ್ ತೂಗುದೀಪ್ ಅವರಿಗೆ ಉರುಳಾಗುತ್ತಿದೆ. ಯಾಕಂದ್ರೆ 85 ಲಕ್ಷ ರೂಪಾಯಿ ಹಣದ ಮೂಲದ ಬೆನ್ನುಹತ್ತಿರುವ ಐಟಿ ಅಧಿಕಾರಿಗಳು ಅಂದ್ರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದೀಗ ಆಘಾತ ನೀಡಿದ್ದಾರೆ. ಅಲ್ಲದೆ ಬಳ್ಳಾರಿ ಜೈಲಿನಿಂದ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್‌ಗೆ ಜಾಮೀನು ಸಿಕ್ಕು ರಿಲೀಸ್ ಆದರೂ ಮತ್ತೊಮ್ಮೆ ಬಂಧನವಾಗುವ ಭಯದಲ್ಲಿದ್ದಾರೆ!

85 ಲಕ್ಷ ರೂಪಾಯಿ ಕ್ಯಾಶ್ ಬೆನ್ನುಹತ್ತಿ...

ದರ್ಶನ್ ತೂಗುದೀಪ್‌ಗೆ ಈಗಾಗಲೇ 85 ಲಕ್ಷ ರೂಪಾಯಿ ಕ್ಯಾಶ್ ಸಿಕ್ಕಿರುವ ಬಗ್ಗೆ ಐಟಿ ಇಲಾಖೆ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ. ಈ ಕ್ಯಾಶ್‌ ಬಂದಿದ್ದು ಎಲ್ಲಿಂದ? ಎಂಬ ಬಗ್ಗೆ ಮಾಹಿತಿ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ. ಈ ನಡುವೆ ರೇಣುಕಾಸ್ವಾಮಿಯ ಕೊಲೆ ಕೇಸ್ ಮುಚ್ಚಿ ಹಾಕಲು ಇಷ್ಟೊಂದು ಭಾರಿ ಪ್ರಮಾಣದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ಹೀಗಿದ್ದಾಗ 85 ಲಕ್ಷ ರೂಪಾಯಿಗೂ ಹೆಚ್ಚು ಹಣ ಜಪ್ತಿ ಮಾಡಿದ್ದರು ಪೊಲೀಸರು. 24ನೇ ACMM ಕೋರ್ಟ್‌ ಹಣದ ಮೂಲದ ಕುರಿತು ತನಿಖೆ ಮಾಡಲು & ದರ್ಶನ್‌ ಅವರ ಮನೆಯ ಮೇಲೆ ದಾಳಿ ನಡೆಸಲು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಅನುಮತಿ ನೀಡಿದೆ. ಈ ಬೆನ್ನಲ್ಲೇ ಐಟಿ ಅಧಿಕಾರಿಗಳು ಬಳ್ಳಾರಿ ಜೈಲಿನ ಇಲ್ಲಿರುವ ನಟ ದರ್ಶನ್‌ ತೂಗುದೀಪ್ ಅವರಿಗೆ ನೋಟಿಸ್‌ ಜಾರಿ ಮಾಡಿದ್ದು, ಹೊಸ ಕಂಟಕಕ್ಕೆ ಸಿಲುಕಿದ್ದಾರಾ ಡಿ-ಬಾಸ್ ದರ್ಶನ್‌ ತೂಗುದೀಪ್? ಎಂಬ ಪ್ರಶ್ನೆ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+