Darshan Thoogudeepa: ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಆಪರೇಷನ್ ಫಿಕ್ಸ್...
ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಹೀಗೆ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದ ಸಮಯದಲ್ಲಿ ಅಭಿಮಾನಿಗಳು ಫುಲ್ ಸಂಭ್ರಮ ಪಟ್ಟಿದ್ದರು. ಅಲ್ಲದೆ ತಮ್ಮ ಆರಾಧ್ಯ ದೈವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮತ್ತೆ ಸಿನಿಮಾ ಮಾಡಲಿದ್ದಾರೆ, ಈ ಮೂಲಕ ಬೇರೆ ಬೇರೆ ಹೀರೋಗಳು & ಕನ್ನಡದ ಬೇರೆ ಬೇರೆ ಹೀರೋಗಳ ಅಭಿಮಾನಿಗಳಿಗೆ ಉರಿಸಬಹುದು ಅನ್ನೋ ಪ್ಲಾನ್ ಕೂಡ ಮಾಡಿಕೊಂಡಿದ್ದರು.
ಆದರೆ ಈಗ ನೋಡಿದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕಾಲುಗಳಲ್ಲಿ ಭಾರಿ ಊತ ಕಂಡು ಬರ್ತಿದೆ ಎಂಬ ಸುದ್ದಿ ಸಂಚಲನಕ್ಕೆ ಕಾರಣವಾಗಿದ್ದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಈ ಸುದ್ದಿ ಕೇಳಿ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅಲ್ಲದೆ ಮತ್ತೊಂದು ಕಡೆ ಹಬ್ಬಿರುವ ಸುದ್ದಿ ಪ್ರಕಾರ, 'ಡಿ-ಬಾಸ್' ದರ್ಶನ್ ತೂಗುದೀಪ್ ಅವರಿಗೆ ಆಪರೇಷನ್ ಫಿಕ್ಸ್, ಸಾವು & ಬದುಕಿನ ಹೋರಾ...

ಡಿ-ಬಾಸ್ ಬೆನ್ನಿಗೆ ಆಪರೇಷನ್ ಫಿಕ್ಸ್?
ದರ್ಶನ್ ತೂಗುದೀಪ್ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿಲ್ಲ ಎಂಬ ಸುದ್ದಿ ಈಗ ಭಾರಿ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದು, ಅಭಿಮಾನಿಗಳಲ್ಲಿ ಕೂಡ ಭಯ ಮೂಡುವಂತೆ ಈಗ ಮಾಡಿದೆ. 11 ವರ್ಷದ ಹಿಂದೆ ಬಿದ್ದು ನೋವು ಮಾಡಿಕೊಂಡಿದ್ದರಂತೆ ದರ್ಶನ್ ತೂಗುದೀಪ್ ಅವರು, ಹೀಗಾಗಿ ಅವರಿಗೆ ಇದೀಗ ಬೆನ್ನು ನೋವು ಜೋರಾಗಿದೆ.
ಈ ಮಧ್ಯೆ ಬಳ್ಳಾರಿ ಜೈಲಲ್ಲಿ ಇದ್ದಾಗ ದರ್ಶನ್ ತೂಗುದೀಪ್ ಅವರಿಗೆ ಬೆನ್ನಲ್ಲಿ ವಿಪರೀತ ನೋವು ಕಾಣಿಸಿಕೊಂಡು ತುಂಬಾನೇ ನರಳುತ್ತಿದ್ದಾರೆ ಎನ್ನಲಾಗಿದೆ. ಇಂತಹ ಸಮಯದಲ್ಲೇ, ದರ್ಶನ್ ತೂಗುದೀಪ್ ಅವರ ಬೆನ್ನಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಲು ಸಿದ್ಧತೆ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಶಸ್ತ್ರ ಚಿಕಿತ್ಸೆ ಮಾಡಿದರೆ ತುಂಬಾನೇ ಸಮಸ್ಯೆ ಗ್ಯಾರಂಟಿ....
ಅಧಿಕೃತ ಮಾಹಿತಿ ನೀಡ್ತಾರಾ ವೈದ್ಯರು?
ದರ್ಶನ್ ತೂಗುದೀಪ್ ಅವರ ಬೆನ್ನಿಗೆ ಶಸ್ತ್ರ ಚಿಕಿತ್ಸೆ ಅಥವಾ ಸರ್ಜರಿ ಮಾಡುವ ಬಗ್ಗೆ ಇನ್ನು ಕೂಡ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ದರ್ಶನ್ ಅವರ ಕುಟುಂಬದವರು ಅಥವಾ ವೈದ್ಯರು ತಿಳಿಸಿಲ್ಲ ಹೀಗಿದ್ದರೂ ಈ ಸುದ್ದಿಯು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದೆ. ಮತ್ತೊಂದು ಕಡೆ ಬೆನ್ನು ನೋವಿನ ಪರಿಣಾಮ ನರದಲ್ಲಿ ಸಮಸ್ಯೆ ಕಾಣಿಸಿಕೊಂಡ ಆರೋಪ ಕೂಡ ಕೇಳಿ ಬಂದಿದ್ದು, ಕಾಲು ಕೂಡ ಊತ ಬಂದಿದೆ ಎನ್ನಲಾಗಿದೆ.
ಡಿ-ಬಾಸ್ ಬೇಗ ಗುಣಮುಖರಾಗಲಿ...
ಒಟ್ನಲ್ಲಿ ನಟ ದರ್ಶನ್ ತೂಗುದೀಪ್ ಅವರು ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿ ನರಳುವ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಆದಷ್ಟು ಬೇಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಬರಲಿ ಎಂಬುದೇ ಎಲ್ಲರ ಆಶಯ. ಜೀವನದಲ್ಲಿ ಸಾಕಷ್ಟು ಕಷ್ಟ & ಸಮಸ್ಯೆ ಎದುರಿಸಿ ಗೆದ್ದು ಬೀಗಿರುವ ನಟನ ಈಗಿನ ಪರಿಸ್ಥಿತಿ ನೋಡಲು ಅಭಿಮಾನಿಗಳಿಗೂ ಸಾಕಷ್ಟು ನೋವು ನೀಡುತ್ತಿದೆ. ಇದೀಗ ವೈದ್ಯರು ಕೂಡ ವಿಶೇಷ ಚಿಕಿತ್ಸೆ ನೀಡುತ್ತಿದ್ದು, ಈ ಹಿನ್ನೆಲೆ ಆದಷ್ಟು ಬೇಗ ದರ್ಶನ್ ತೂಗುದೀಪ್ ಅವರು ಗುಣಮುಖರಾಗುವ ಆಶಯ ಇದೆ.












Click it and Unblock the Notifications