Darshan Thoogudeepa: ಬಳ್ಳಾರಿ ಜೈಲಿಗೆ ದರ್ಶನ್ ತೂಗುದೀಪ್ ಮತ್ತೆ ಹೋದರೆ, ಇನ್ನು ಯಾವತ್ತೂ ಹೊರಗೆ...

ಡಿ-ಬಾಸ್ ದರ್ಶನ್ ತೂಗುದೀಪ್ ಬಾಳಲ್ಲಿ ಬೆಂಕಿ ಬಿದ್ದಿದೆ, ಯಾಕಂದ್ರೆ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಒದ್ದು, ಎತ್ತಿ ಎತ್ತಿ ಬಿಸಾಡಿ, ತಲೆಗೆ ತೂತು ಮಾಡಿ, ಭೀಕರ ಹಲ್ಲೆ ಮಾಡಿ ಸಾಯಿಸಿದ ಆರೋಪ ಡಿ-ಬಾಸ್ ದರ್ಶನ್ ತೂಗುದೀಪ್ & ಅವರ ಗ್ಯಾಂಗ್ ವಿರುದ್ಧವೂ ಕೇಳಿ ಬಂದಿದೆ. ಇದೇ ಕಾರಣಕ್ಕಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲು ಸೇರಿ ಹೊರಗೆ ಬಂದಿದ್ದಾರೆ. ಆದರೆ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ತಾವೇ ಮಾಡಿಕೊಂಡ ಎಡವಟ್ಟಿನ ಪರಿಣಾಮ ಮತ್ತೆ ಬಳ್ಳಾರಿ ಜೈಲಿಗೆ ಹೋಗುತ್ತಾರಾ....

ದರ್ಶನ್ ತೂಗುದೀಪ್ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ, ಆ ಕಡೆ ಪ್ರಪಾತ & ಈ ಕಡೆ ಬಿದ್ದರೆ ಮುಳ್ಳು ಎನ್ನುವಂತೆ ಆಗಿದೆ. ಅದರಲ್ಲೂ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಬಂದು ಈಗ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ ತೂಗುದೀಪ್ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಅವರು ಮತ್ತೆ ಬಳ್ಳಾರಿ ಜೈಲಿಗೆ....

Darshan Thoogudeepa May Be Face A Very Big Problem If Supreme Court Takes This Decision

ಡಿ-ಬಾಸ್ ಮತ್ತೆ ಬಳ್ಳಾರಿ ಜೈಲಿಗೆ....

ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಕ್ಕಿರುವುದು ಅನಾರೋಗ್ಯದ ಕಾರಣಕ್ಕೆ. ಹೀಗಾಗಿ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ದರ್ಶನ್ ತೂಗುದೀಪ್ ಅವರಿಗೆ ಕಠಿಣ ರೂಲ್ಸ್‌ನ ಹಾಕಲಾಗಿದೆ. ಈ ನಿಯಮ ಮೀರಬಾರದು ಅಂತಾ ಎಚ್ಚರಿಕೆ ಕೂಡ ನೀಡಲಾಗಿದೆ. ಇದು ಮಾತ್ರವಲ್ಲದೆ ದರ್ಶನ್ ತೂಗುದೀಪ್ ಬೇಗ ಚಿಕಿತ್ಸೆ ಪಡೆದು ಮತ್ತೆ ಜೈಲಿಗೆ ಹೋಗಲು ಖಡಕ್ ಸೂಚನೆ ನೀಡಲಾಗಿತ್ತು. ಆದರೆ ಇದೇ ವಿಚಾರದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಈಗ ಎಡವಟ್ಟು ಮಾಡಿಕೊಂಡ್ರಾ?

ಸರ್ಜರಿ ಮಾಡಿಸದೆ ತಪ್ಪು ಮಾಡಿದ್ರಾ?

ಅಂದಹಾಗೆ ಮಾನ್ಯ ಕರ್ನಾಟಕ ಹೈಕೋರ್ಟ್ ಎದುರು ತಮ್ಮ ಅನಾರೋಗ್ಯ ಪರಿಸ್ಥಿತಿ ಬಗ್ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅಂಗಲಾಚಿ ಬೇಡಿಕೊಂಡು, ತಮ್ಮ ವಕೀಲರ ಮೂಲಕವೇ ಮನವಿ ಮಾಡಿ ಬೇಲ್ ಅಂದ್ರೆ ಜಾಮೀನು ಪಡೆದುಕೊಂಡಿದ್ದಾರೆ. ಹೀಗಿದ್ದಾಗ ಬಳ್ಳಾರಿ ಜೈಲು ಬಿಟ್ಟು ಹೊರಗಡೆ ಬಂದ ನಂತರ ನೇರವಾಗಿ ದರ್ಶನ್ ತೂಗುದೀಪ್ ತಮ್ಮ ಬೆನ್ನು ನೋವಿಗೆ ಸರ್ಜರಿ ಅಂದ್ರೆ ಆಪರೇಷನ್ ಮಾಡಿಸಬೇಕಿತ್ತು, ಎಂಬ ಮಾತು ಕಾನೂನು ತಜ್ಞರಿಂದ ಕೇಳಿ ಬಂದಿದೆ. ಸ್ಥಿತಿ ಹೀಗಿದ್ದರೂ ಬೆನ್ನಿಗೆ ಸರ್ಜರಿ ಮಾಡಿಸದೆ ಕೇವಲ ಕಾಲ ಹರಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಕಸ್ಮಾತ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರುದ್ಧ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಬಂದು, ಜಾಮೀನು ರದ್ದು ಮಾಡಿದರೆ ಮುಂದೆ ಜಾಮೀನು ಸಿಗುವುದು ಕಷ್ಟ ಕಷ್ಟ ಎಂಬ ಮಾತು ಕೇಳಿ ಬಂದಿದೆ. ಯಾಕಂದ್ರೆ ಕೋರ್ಟ್ ಎದುರು ಹೇಳಿರುವ ಮಾತು ಪಾಲನೆ ಮಾಡದೇ ಇದ್ದರೆ ಮುಂದೆ ದರ್ಶನ್ ತೂಗುದೀಪ್ ಅವರಿಗೆ ಬೇಲ್ ಸಿಗಲ್ಲ ಅನ್ನೋ ಮಾತು ಹೇಳಿದ್ದಾರೆ ಕಾನೂನು ತಜ್ಞರು. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+