Darshan Thoogudeepa: ಬಳ್ಳಾರಿ ಜೈಲಿಂದ ರಿಲೀಸ್ ಆಗಿ ದರ್ಶನ್ ತೂಗುದೀಪ್ ನೇರವಾಗಿ ಮೈಸೂರು ದಸರಾ...

ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಂಭ್ರಮದಿಂದ ಕಾಯುತ್ತಿದ್ದಾರೆ, ತಮ್ಮ ನೆಚ್ಚಿನ ಡಿ-ಬಾಸ್ ದರ್ಶನ್ ತೂಗುದೀಪ್ ಇನ್ನೇನು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಬರಲಿದ್ದಾರೆ. ಈ ಮೂಲಕ ಮತ್ತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅಭಿಮಾನಿಗಳ ಪಾಲಿನ 'ಡಿ-ಬಾಸ್' ದರ್ಶನ್ ತೂಗುದೀಪ್ ಅವರು ಅಬ್ಬರಿಸಲಿದ್ದಾರೆ ಅಂತಾ ಕಾಯುತ್ತಿದ್ದರು. ಆದರೆ ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಗುವುದು ತಡವಾಗಿತ್ತು ಇದೀಗ ಜಾಮೀನು ಪಡೆದು ನಟ ದರ್ಶನ್ ತೂಗುದೀಪ್ ಅವರು, ಬಳ್ಳಾರಿ ಜೈಲಿಂದ ರಿಲೀಸ್ ಆಗಿ ದರ್ಶನ್ ತೂಗುದೀಪ್ ನೇರ ಮೈಸೂರು ದಸರಾ...

ಬಳ್ಳಾರಿ ಜೈಲಲ್ಲಿ ದರ್ಶನ್ ತೂಗುದೀಪ್ ಅವರು ಪರದಾಡುತ್ತಿದ್ದಾರೆ. ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಕೇಸ್‌ನಲ್ಲಿ, ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸೇರಿದಂತೆ ಹಲವರು ಜೈಲು ಸೇರುವಂತೆ ಆಗಿತ್ತು. ಅದರಲ್ಲೂ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಅವರು ಆರಾಮವಾಗಿ ಇದ್ದರು. ಸಿಗರೇಟ್, ಎಣ್ಣೆ ಮತ್ತು ಬಿರಿಯಾನಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರಾಮವಾಗಿ ಸಿಗುತ್ತಿತ್ತು, ಆದ್ರೆ ದರ್ಶನ್ ತೂಗುದೀಪ್ ಅವ್ರನ್ನ ಬಳ್ಳಾರಿ ಜೈಲಿಗೆ ಹಾಕಿದ ನಂತರ ಇದೆಲ್ಲಾ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗೆ ಇದ್ದಾಗಲೇ ಬಳ್ಳಾರಿ ಜೈಲಿಂದ ರಿಲೀಸ್ ಆಗಿ ದರ್ಶನ್ ತೂಗುದೀಪ್ ನೇರ ಮೈಸೂರು ದಸರಾ...

Darshan Thoogudeepa May Attend Dasara Program After Coming From The Ballari

ದರ್ಶನ್ ತೂಗುದೀಪ್ ಮೈಸೂರು ದಸರಾ...

ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ತೂಗುದೀಪ್ ಅವರಿಗೆ ಅಕ್ಟೋಬರ್ 8 ಅತಿ ಮುಖ್ಯವಾದ ದಿನವಾಗಿದೆ. ಯಾಕಂದ್ರೆ ನಟ ದರ್ಶನ್ ತೂಗುದೀಪ್ ಅವರಿಗೆ ಈ ದಿನವೇ ಜಾಮೀನು ಸಿಕ್ಕು ಬಳ್ಳಾರಿ ಜೈಲಿನಿಂದ ಹೊರಗೆ ಬರುವ ನಿರೀಕ್ಷೆಯಲ್ಲಿ ಇದ್ದಾರೆ. ಅದರಲ್ಲೂ ಅಭಿಮಾನಿಗಳು ಈ ಸಮಯದಲ್ಲೇ ಒಂದು ಮಾತನ್ನು ಹೇಳುತ್ತಿದ್ದು, ಬಳ್ಳಾರಿ ಜೈಲಿಂದ ರಿಲೀಸ್ ಆಗಿ ದರ್ಶನ್ ತೂಗುದೀಪ್ ನೇರ ಮೈಸೂರು ದಸರಾ ಕಾರ್ಯಕ್ರಮಕ್ಕೆ ಬರಲಿದ್ದಾರೆ ಅಂತಾ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.

ಅಕ್ಟೋಬರ್ 8 ಬಳ್ಳಾರಿ ಜೈಲಿಂದ...

ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ನೇರ ಮೈಸೂರು ದಸರಾ ಕಾರ್ಯಕ್ರಮಕ್ಕೆ ಹೋಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇದು ಎಲ್ಲವನ್ನು ಮೀರಿ ದರ್ಶನ್ ತೂಗುದೀಪ್ ಅವರಿಗೆ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇನ್ನೂ ಬೇಲ್ ಅಂದ್ರೆ ಜಾಮೀನು ಕೂಡ ಸಿಕ್ಕಿಲ್ಲ. ಹೀಗಾಗಿ ಕುತೂಹಲ ಕೂಡ ಕೆರಳಿದ್ದು, ಅಕ್ಟೋಬರ್ 8 ಅಂದ್ರೆ ಮಂಗಳವಾರ ದರ್ಶನ್ ತೂಗುದೀಪ್ ಅವರ ಜಾಮೀನು ಭವಿಷ್ಯ ನಿರ್ಧಾರ ಆಗಲಿದೆ. ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಕ್ಕರೆ ಸುಲಭವಾಗಿ ಬಳ್ಳಾರಿ ಜೈಲಿಂದ ಹೊರಗೆ ಬಂದು, ಮೈಸೂರಿಗೆ ಗ್ರ್ಯಾಂಡ್ ಎಂಟ್ರಿ ಕೊಡುವ ನಿರೀಕ್ಷೆ ಇದೆ.

ದರ್ಶನ್ ತೂಗುದೀಪ್ ದೂರ.. ದೂರ..?

ಪವಿತ್ರಾ ಗೌಡ ಮತ್ತು ದರ್ಶನ್ ತೂಗುದೀಪ್ ನಡುವೆ 10 ವರ್ಷಗಳ ಸುದೀರ್ಘ ಸಂಬಂಧವಿದೆ. ದರ್ಶನ್ ತೂಗುದೀಪ್‌ಗೂ ಮೊದಲು ಪವಿತ್ರಾ ಗೌಡ ಒಂದು ಮದುವೆ ಕೂಡ ಆಗಿದ್ದರಂತೆ. ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಸಂಬಂಧ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ನಟ ದರ್ಶನ್ ತೂಗುದೀಪ್ ವಿರುದ್ಧವೇ ಪವಿತ್ರಾ ಗೌಡ ಆರೋಪ ಮಾಡಿದ್ರು ಎಂಬ ಆರೋಪವು ಕೇಳಿಬಂತು. ಪೊಲೀಸರ ಎದುರು ದರ್ಶನ್ ತೂಗುದೀಪ್ ವಿರುದ್ಧ ಪವಿತ್ರಾ ಗೌಡ ಆರೋಪ ಮಾಡಿದ್ದರಂತೆ. ಹೀಗಾಗಿ ಇಬ್ಬರೂ ಈಗ ದೂರವಾಗಲು ಇಚ್ಛಿಸಿದ್ದಾರೆ ಎನ್ನಲಾಗಿದೆ.

ಸಮಸ್ಯೆ ಸುಳಿಯಲ್ಲಿ ದರ್ಶನ್ ತೂಗುದೀಪ್?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ, ದರ್ಶನ್ ತೂಗುದೀಪ್ ಅವರ ವಿರುದ್ಧ ಗಂಭೀರ ಆರೋಪ ಒಂದು ಕೇಳಿಬಂದಿತ್ತು. ದರ್ಶನ್ ತೂಗುದೀಪ್ ಮತ್ತು ರೌಡಿಶೀಟರ್ ನಾಗ ಸೇರಿ, ಮತ್ತಿಬ್ಬರು ಪಾತಕಿಗಳು ಒಟ್ಟಾಗಿ ಕೂತು ಸಿಗರೇಟು ಸೇದುತ್ತಾ ಟೀ ಕುಡಿಯುತ್ತಿದ್ದ ಫೋಟೋ ವೈರಲ್ ಆಗಿತ್ತು. ಆ ನಂತರ ದರ್ಶನ್ ತೂಗುದೀಪ್ ಅವರ ಜೊತೆಗೆ ಇನ್ನುಳಿದ ಆರೋಪಿ ಪಡೆಯನ್ನು ಬೇರೆ ಬೇರೆ ಜೈಲಿಗೆ ಎತ್ತಂಗಡಿ ಮಾಡಲಾಗಿತ್ತು. ಇದೀಗ ನೋಡಿದರೆ ದರ್ಶನ್ ತೂಗುದೀಪ್‌ಗೆ ಪರಪ್ಪನ ಅಗ್ರಹಾರದಲ್ಲಿ ಸಿಗರೇಟು ಸೇದಿರುವ ವಿಚಾರವೇ ದೊಡ್ಡ ಕಂಟಕ ತರುವ ಸಾಧ್ಯತೆ ದಟ್ಟವಾಗಿದ್ದು, ಜಾಮೀನು ಸಿಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+