Darshan Thoogudeepa: ದರ್ಶನ್ ತೂಗುದೀಪ & ಗ್ಯಾಂಗ್‌ಗೆ ‘ಶಿವಾಜಿ’ ಹೋಟೆಲ್ ಬಿರಿಯಾನಿ ಸಪ್ಲೈ?
ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡ & ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದೆ ಎಂಬ ಆರೋಪದ ನಡುವೆ, ಇದೀಗ ಪರಪ್ಪನ ಅಗ್ರಹಾರದಲ್ಲಿ ಗ್ಯಾಂಗ್ ಮುದ್ದೆ ಮುರಿಯುತ್ತಿದೆ ಅಂತಾನೇ ಜಗತ್ತು ನಂಬಿತ್ತು. ಆದರೆ ಜೈಲಿನ ಒಳಗೆ ಕೂಡ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಸೇರಿ ಇಡೀ ಗ್ಯಾಂಗ್ ಎಣ್ಣೆ ಸೇರಿದಂತೆ 'ಶಿವಾಜಿ' ಹೋಟೆಲ್ ಬಿರಿಯಾನಿ ಕೂಡ ಸಪ್ಲೈ ಮಾಡುತ್ತಿದ್ದಾರಂತೆ ಪರಪ್ಪನ ಅಗ್ರಹಾರದಲ್ಲಿ ಇರುವ ಕೆಲವು ಭ್ರಷ್ಟ ಹುಳಗಳು! ಹಾಗಾದ್ರೆ ಈ ಆರೋಪಕ್ಕೆ ಸಾಕ್ಷಿ ಏನು ಅಂದ್ರಾ?
ದರ್ಶನ್ & ಗ್ಯಾಂಗ್ ಸಿಕ್ಕಾಪಟ್ಟೆ ಪ್ರಭಾವ ಹೊಂದಿದ್ದು, ಏನು ಬೇಕಾದರೂ ಮಾಡಬಹುದು ಅನ್ನೋ ಹುಳ ತಲೆಗೆ ಬಿಟ್ಟುಕೊಂಡಿದೆ. ಇದೇ ಕಾರಣಕ್ಕೆ ಪರಪ್ಪನ ಅಗ್ರಹಾರದಲ್ಲಿ ಜೈಲಿನ ಅಧಿಕಾರಿಗಳ ಬಾಯಿಗೆ ದುಡ್ಡು ತುರುಕಿ, ಹೆಂಗೆ ಬೇಕೋ ಹಂಗೆಲ್ಲಾ ಆಟ ಆಡುತ್ತಿದೆ ಅಂತಾ ಈಗ ಕನ್ನಡಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದರಲ್ಲೂ ದರ್ಶನ್ ತೂಗುದೀಪ್ ಮತ್ತು ಗ್ಯಾಂಗ್‌ಗೆ ಇದೀಗ ಬೆಂಗಳೂರಿನ ಫೇಮಸ್ ಹೋಟೆಲ್ 'ಶಿವಾಜಿ' ಹೋಟೆಲ್ ಬಿರಿಯಾನಿಯ ಸಪ್ಲೈ ಮಾಡ್ತಿದೆಯಂತೆ ಪರಪ್ಪನ ಅಗ್ರಹಾರದ ಭ್ರಷ್ಟರ ಗ್ಯಾಂಗ್. ಈ ಕುರಿತು ಸೋಷಿಯಲ್ ಮೀಡಿಯಾ ತುಂಬಾ ಭಾರಿ ಆಕ್ರೋಶ ಭುಗಿಲೆದ್ದಿದೆ.

ಗಾರ್ಬೇಜ್ ಬ್ಯಾಗ್ ಮೂಲಕ ಸಪ್ಲೈ?
ಅಷ್ಟಕ್ಕೂ ಈಗ ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ & ಗ್ಯಾಂಗ್‌ಗೆ ಬಿರಿಯಾನಿಯನ್ನ ಸಪ್ಲೈ ಮಾಡಲು, ಗಾರ್ಬೇಜ್ ಬ್ಯಾಗ್ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಾಕ್ಷಿಯಾಗಿ ಪರಪ್ಪನ ಅಗ್ರಹಾರ ಜೈಲಿನ ಸಿಸಿ ಕ್ಯಾಮೆರಾಗಳು ಇದ್ದು, ಅವುಗಳನ್ನು ಈಗ ಪರಿಶೀಲನೆ ಮಾಡಬೇಕು ಎಂದು ಕೋಟಿ ಕೋಟಿ ಕನ್ನಡಿಗರು ಆಗ್ರಹಿಸುತ್ತಿದ್ದಾರೆ. ಹಾಗೇ ಭ್ರಷ್ಟ ಪರಪ್ಪನ ಅಗ್ರಹಾರದ ಹುಳುಗಳನ್ನ ಕ್ಲೀನ್ ಮಾಡಲು ಸರ್ಕಾರಕ್ಕೆ ಜನರು ಆಗ್ರಹಿಸಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಲು ಸಾಲು ಟ್ವೀಟ್ & ಪೋಸ್ಟ್ ಮಾಡುತ್ತಿದ್ದಾರೆ.
ಪರಪ್ಪನ ಅಗ್ರಹಾರದ ಮೇಲೆ ರೇಡ್?
ಕೊಲೆ, ದರೋಡೆ, ಕಳ್ಳತನ ಹೀಗೆ ಒಂದಲ್ಲ ಒಂದು ರೀತಿಯ ಸಮಾಜ ವಿರೋಧಿ ಕೃತ್ಯವನ್ನ ಎಸಗಿದವರಿಗೆ ಅಂತಾನೆ ಪರಪ್ಪನ ಅಗ್ರಹಾರ ಜೈಲು ಇದೆ. ಜೈಲಿಗೆ ಒಬ್ಬ ಅಪರಾಧಿ ಅಥವಾ ಆರೋಪಿಯನ್ನು ಹಾಕುವುದು ಯಾಕೆ ಅಂದ್ರೆ ಆತನಿಗೆ ಬುದ್ಧಿ ಬರಲಿ ಅಂತಾ. ಆದರೆ ನಮ್ಮ ಕರ್ನಾಟಕದ ಜೈಲಲ್ಲಿ ಈಗ ಆರೋಪಿಗಳಿಗೆ & ಅಪರಾಧಿಗಳಿಗೂ ಮಜಾ ಮಾಡಲು ಅವಕಾಶ ಸಿಗುತ್ತಿದೆ. ಹಾಗಾದ್ರೆ ಕರ್ನಾಟಕದ ಕಾನೂನು & ಸುವ್ಯವಸ್ಥೆಗೆ ಏನಾಗಿದೆ ಅಂತಾ ಕರ್ನಾಟಕ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗಿದ್ದಾಗಲೇ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಸಸ್ಪೆಂಡ್ ಆಗ್ತಾರಾ? ಎಂಬ ಪ್ರಶ್ನೆ ನಡುವೆ ಇದೀಗ ಹೊಸ ಬಿರುಗಾಳಿಯೇ ಎದ್ದಿದೆ.
ಜೈಲಿನಲ್ಲಿ ಹೆಂಡ & ಸಿಗರೇಟ್ ಸಪ್ಲೈ?
ಒಟ್ನಲ್ಲಿ ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿಗಳಿಗೂ ರಾಜ ಮರ್ಯಾದಿ ಸಿಗುತ್ತಿದೆಯಾ? ದುಡ್ಡು ಇದ್ದರೆ ಕೊಲೆ ಆರೋಪಿಗು ಜೈಲು ಸ್ವರ್ಗ ಆಗುತ್ತಾ? ಅಂತಾ ಜನರು ರೊಚ್ಚಿಗೆದ್ದಿದ್ದು ಈ ಘಟನೆ ಬಗ್ಗೆ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ಈ ಫೋಟೋ ಬಿರುಗಾಳಿ ಎಬ್ಬಿಸಿದ್ದು, ಅಲ್ಲದೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ. ಇದರ ಜೊತೆಗೆ ಪವಿತ್ರ ಗೌಡ & ದರ್ಶನ್ ತೂಗುದೀಪ್ ಇದೀಗ ಒಂದೇ ರೂಂನಲ್ಲಿ ಇರುವ ಆರೋಪ ಕೂಡ ಕೇಳಿಬಂದಿದೆ.
ಕನ್ನಡ ನಾಡಿನಲ್ಲಿ ಏನಿದು?
ಈಗಾಗಲೇ ದರ್ಶನ್ ತೂಗುದೀಪ್ ತಮ್ಮ ಗ್ಯಾಂಗ್ ಜೊತೆಗೆ & ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆ ಕೂತು ಸಿಗರೇಟು ಸೇದಿರುವ & ವಿಡಿಯೋ ಕಾಲ್‌ನ ಮೂಲಕ ಮಾತನಾಡಿರುವ ಫೋಟೋ & ವಿಡಿಯೋ ವೈರಲ್ ಆಗಿದೆ. ಇದೇ ಸಮಯದಲ್ಲಿ, ಪವಿತ್ರಾ ಗೌಡ & ದರ್ಶನ್ ಅವರಿಗೆ ಸಂಬಂಧಿಸಿದ ಫೋಟೋ ಕೂಡ ಲೀಕ್ ಆಗಲಿದೆ ಎಂಬ ಮಾತು ಹಲ್‌ಚಲ್ ಎಬ್ಬಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಮಾಹಿತಿಗಳು ಹರಿದಾಡುತ್ತಿರುವುದು ದುರದೃಷ್ಟದ ಸಂಗತಿ ಅಂತಿದ್ದಾರೆ ಕನ್ನಡಿಗರು. ಅಲ್ಲದೆ ಈ ವಿಚಾರವಾಗಿ ಸರ್ಕಾರ & ಪೊಲೀಸರು ಕೂಡ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.












Click it and Unblock the Notifications