Darshan Thoogudeepa: ದರ್ಶನ್ ದಿನಕ್ಕೆ ಎಷ್ಟು ಕುಡಿಯುತ್ತಿದ್ದರು? ಎಷ್ಟು ಸಿಗರೇಟ್ ಸೇದುತ್ತಿದ್ದರು? ಭಾರಿ ಚರ್ಚೆ!
ದರ್ಶನ್ ತೂಗುದೀಪ್ ಕೊಲೆ ಆರೋಪದಲ್ಲಿ ಜೈಲು ಕಂಬಿ ಎಣಿಸುತ್ತಿದ್ದಾರೆ. ಸರಿಯಾಗಿ ಆ ಜೈಲಿನ ಊಟಕ್ಕೆ ಹೊಂದಿಕೊಳ್ಳಲು ಆಗದೆ ವಾಂತಿ & ಅತಿಸಾರದ ಸಮಸ್ಯೆಗೆ ನಲುಗಿದ್ದಾರೆ. ಈ ಸಮಯದಲ್ಲೇ ಮತ್ತೊಂದು ಸ್ಫೋಟಕ ಚರ್ಚೆ ಕೂಡ ಶುರುವಾಗಿದೆ. ನಟ ದರ್ಶನ್ ದಿನಕ್ಕೆ ಎಷ್ಟು ಕುಡಿಯುತ್ತಿದ್ದರು? ಎಷ್ಟು ಸಿಗರೇಟ್ ಸೇದುತ್ತಿದ್ದರು? ಅಂತಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಹಾಗಾದರೆ, ನಿಜಕ್ಕೂ ನಟ ದರ್ಶನ್ ತೂಗುದೀಪ್ ಎಣ್ಣೆ ಹೊಡಿತಾ ಇದ್ರಾ? ಸಿಗರೇಟು ಸೇದ್ತಾ ಇದ್ರಾ ದರ್ಶನ್? ಬನ್ನಿ ತಿಳಿಯೋಣ.
ದರ್ಶನ್ ತೂಗುದೀಪ್‌ಗೆ ಈಗ ತುಂಬಾ ಕಷ್ಟದ ಸಮಯ. ಹೊರಗಡೆ ಹೀರೋ ಆಗಿ ಮೆರೆದು, ಮನಸ್ಸಿಗೆ ಬಂದಂತೆ ಹಣ ಖರ್ಚು ಮಾಡಿ ಫಾರಿನ್ ಪೂರ್ತಿ ಸುತ್ತಾಡಿ ಬರುತ್ತಿದ್ದ ದರ್ಶನ್‌ಗೆ ಈಗ ಜೈಲಿನಲ್ಲಿ ರಾಗಿ ಮುಂದೆ ಉಂಡು, ಕಂಬಿ ಎಣಿಸಿ ಮಲಗಬೇಕಾದ ಸಮಯ. ಹೀಗಾಗಿ ನಟ ದರ್ಶನ್ ಆದಷ್ಟು ಬೇಗ ಹೊರಗಡೆ ಬರಲು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ನಟ ದರ್ಶನ್ ದಿನಕ್ಕೆ ಎಷ್ಟು ಎಣ್ಣೆ ಕುಡಿಯುತ್ತಿದ್ದರು? ಎಷ್ಟು ಸಿಗರೇಟ್ ಸೇದುತ್ತಾ ಇದ್ದರು? ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಒಂದು ಸ್ಪಷ್ಟನೆ ಇಲ್ಲಿದೆ ಮಾಹಿತಿಗಾಗಿ ಮುಂದೆ ಓದಿ.

ದರ್ಶನ್ ಎಣ್ಣೆ ಹಾಕುತ್ತಾ ಇದ್ರಾ?
ನಟ ದರ್ಶನ್ ತೂಗುದೀಪ್ ಅವರು ಕುಡಿಯುತ್ತಾ ಇದ್ದಿದ್ದು ನಿಜ. ಯಾಕಂದ್ರೆ ತಮ್ಮ ಬಗ್ಗೆ ತಾವೇ ಮಾತನಾಡುವಾಗ ದರ್ಶನ್ ತಾವು ಎಣ್ಣೆ ಹೊಡೆಯುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಎಲ್ಲಿಯೂ ದರ್ಶನ್ ಅವರು ಎಷ್ಟು ಎಣ್ಣೆ ಕುಡಿಯುತ್ತಾರೆ? ದಿನವೂ ಎಣ್ಣೆ ಹೊಡೆದು ನಿದ್ದೆ ಮಾಡ್ತಾರಾ? ಅನ್ನೋ ಬಗ್ಗೆ ಮಾಹಿತಿ ಇರಲಿಲ್ಲ. ಅದರಲ್ಲೂ ದರ್ಶನ್‌ಗೆ ಸಿಗರೇಟನ್ನು ಸೇದುವ ಹವ್ಯಾಸ ಕೂಡ ಇತ್ತು. ಹಾಗಾದ್ರೆ ನಟ ದರ್ಶನ್ ದಿನಕ್ಕೆ ಎಷ್ಟು ಕುಡಿಯುತ್ತಿದ್ದರು ಗೊತ್ತೆ? ಮುಂದೆ ಓದಿ.
ಒಂದು ಫುಲ್ ಬಾಟಲ್ ಎಣ್ಣೆ ಖತಂ?
ಅಂದಹಾಗೆ ನಟ ದರ್ಶನ್ ಅವರು ಎಣ್ಣೆ ಕುಡಿಯಲು ಕೂತರೆ ಅವರನ್ನು ಮೀರಿಸುವ ಯಾವ ವ್ಯಕ್ತಿ ಕೂಡ ಅಲ್ಲಿ ಇರಲಾರ ಎಂಬ ಆರೋಪ ಇದೆ. ಯಾಕಂದ್ರೆ ದರ್ಶನ್ ಒಂದು ದಿನಕ್ಕೆ ಬರೋಬ್ಬರಿ ಒಂದು ಫುಲ್ ಬಾಟಲ್ ಎಣ್ಣೆ ಕುಡಿಯುತ್ತಿದ್ದರಂತೆ. ಹಾಗೇ ಪ್ರತಿದಿನ ಹತ್ತಾರು ಸಿಗರೇಟು ಸೇದುತ್ತಿದ್ದರಂತೆ ನಟ ದರ್ಶನ್ ಅವರು. ಆದರೆ ಈ ಬಗ್ಗೆ ಯಾವುದೇ ಅಧಿಕೃತ & ಸೂಕ್ತ ಮಾಹಿತಿ ಇಲ್ಲ. ಆದರೂ ಈ ಬಗ್ಗೆ ದರ್ಶನ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.












Click it and Unblock the Notifications