Darshan Thoogudeepa: ಧನಂಜಯ್ ವಿರುದ್ಧ ದರ್ಶನ್ ಅಭಿಮಾನಿಗಳು ಬೇಸರ

ಡಾಲಿ ಧನಂಜಯ್ ಅವರು ಮದುವೆ ಮಾಡಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೇ ಫೆಬ್ರವರಿ 16ಕ್ಕೆ ನಟ ಧನಂಜಯ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ತಮ್ಮ ಮದುವೆಗೆ ಕನ್ನಡ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡುತ್ತಿದ್ದಾರೆ. ಆದರೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರನ್ನು ಮದುವೆಗೆ ಆಹ್ವಾನ ಮಾಡಿದ್ರಾ ಎನ್ನುವ ಪ್ರಶ್ನೆಗೆ ಡಾಲಿ ಕೊಟ್ಟ ಉತ್ತರ ಡಿ-ಬಾಸ್ ಅಭಿಮಾನಿಗಳಿಗೆ ಬೇಸರ ತಂದಿದೆ.

ಹೌದು... ಕಳೆದ ದಿನ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ತಮ್ಮ ಭಾವಿ ಪತ್ನಿ ಸ್ತ್ರೀತಜ್ಞೆ ಧನ್ಯತಾ ಅವರೊಂದಿಗೆ ಸುದ್ದಿಗೋಷ್ಠಿ ಮಾಡಿದರು. ಈ ವೇಳೆ ದರ್ಶನ್ ಅವರನ್ನು ಮದುವೆಗೆ ಆಹ್ವಾನಿಸಿದ್ರಾ ಎನ್ನುವ ಪ್ರಶ್ನೆ ಡಾಲಿ ಧನಂಜಯ್ ಅವರಿಗೆ ಕೇಳಿಲಾಯ್ತು. ಈ ವೇಳೆ ಧನಂಜಯ್ ಅವರು ಕೊಟ್ಟ ಉತ್ತರ ಡಿ-ಬಾಸ್ ಅಭಿಮಾನಿಗಳಿಗೆ ಬೇಸರ ತಂದಿದೆ. ಹಾಗಾದರೆ ಡಾಲಿ ಹೇಳಿದ್ದೇನು?

darshan thoogudeepa fans upset over daali dhananjay

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾಲಿ ಧನಂಜಯ್ ಅವರು ನಾನು ಮದುವೆಗೆ ಆಹ್ವಾನಿಸಲು ದರ್ಶನ್ ಅವರನ್ನು ಸಂಪರ್ಕಿಸಲು ಪ್ರಯತ್ನ ಪಟ್ಟೆ ಆದರೆ ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಅವರನ್ನು ಭೇಟಿ ಮಾಡಿ ಆಮಂತ್ರಣವನ್ನು ನೀಡುತ್ತೇನೆ. ಯಾರನ್ನೂ ಬಿಟ್ಟಿಲ್ಲ, ಎಲ್ಲರನ್ನೂ ಕರೆದಿದ್ದೇನೆ. ಅವರನ್ನೂ ಕರೆಯುವ ಆಸೆ ಇತ್ತು. ಆದರೆ ಸಂಪರ್ಕಕ್ಕೆ ಸಿಕ್ಕಿಲ್ಲ. ಆದರೆ ಅವರನ್ನೂ ನಾನು ಆಹ್ವಾನಿಸುತ್ತೇನೆ ಎಂದಿದ್ದಾರೆ.

ದರ್ಶನ್ ಅವರ ವೈಯಕ್ತಿಕ ಜೀವನದಲ್ಲಿ ಏನೇ ನಡೆದಿರಲಿ. ಆದರೆ ಅವರು ಒಬ್ಬ ನಟ. ಅವರ ನಟನೆಗೆ ಸಾಕಷ್ಟು ಜನ ಅಭಿಮಾನಿ ಬಳಗವಿದೆ. ಡಾಲಿ ಧನಂಜಯ್ ಅವರು ದರ್ಶನ್ ಸಿನಿಮಾಗಳಲ್ಲಿ ನಟನೆ ಕೂಡ ಮಾಡಿದ್ದಾರೆ. ಇಬ್ಬರ ನಡುವೆ ಅನ್ಯೋನ್ಯತೆ ಕೂಡ ಇದೆ. ಆದರೆ ಈಗ ದರ್ಶನ್ ಅವರನ್ನು ಮದುವೆಗೆ ಆಹ್ವಾನಿಸದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲುವಾಸ ಅನುಭವಿಸಿದ್ದಾರೆ. ಇನ್ನೂ ಕೂಡ ಅವರು ಈ ಸಂಕಷ್ಟದಿಂದ ಹೊರಬಂದಿಲ್ಲ. ಹೀಗಿರುವಾಗ ಧನಂಜಯ್ ಕೂಡ ಈ ಹಿಂದೆ 'ತಪ್ಪು ಮಾಡಿದರೆ ಶಿಕ್ಷೆ ಆಗಲಿ. ಕಾನೂನು ದೃಷ್ಟಿಯಿಂದ ಯಾರೂ ಕೂಡ ದೊಡ್ಡವರಲ್ಲ' ಎಂದು ಹೇಳಿದ್ದರು. ಇದಾದ ಬಳಿಕ ಅವರ ನಡುವೆ ಅಂತರ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಧನಂಜಯ್ ಅವರು ದರ್ಶನ್ ಅವರನ್ನು ಮದುವೆಗೆ ಆಹ್ವಾನ ಮಾಡಿಲ್ಲ ಅಂತಲೂ ಹೇಳಲಾಗುತ್ತಿದೆ.

ಕಾರಣ ಅದೇನೇ ಇರಲಿ. ಒಟ್ಟಿಗೆ ಸಿನಿಮಾಗಳನ್ನು ಮಾಡಿ. ಈಗ ಸಂಕಷ್ಟದಲ್ಲಿ ಇರುವ ವ್ಯಕ್ತಿಯೊಂದಿಗೂ ಸಿನಿಮಾದಲ್ಲಿನ ಭಾಂದವ್ಯನಾದ್ರೂ ನೆನೆದು ಧನಂಜಯ್ ಅವರು ದರ್ಶನ್ ಅವರನ್ನು ಆಹ್ವಾನಿಸಿರಬೇಕಿತ್ತು ಎಂದು ಡಿ-ಬಾಸ್ ಅಭಿಮಾನಿಗಳು ಮಾತನಾಡಲು ಶುರು ಮಾಡಿದ್ದಾರೆ.

ದರ್ಶನ್‌ ಅವರನ್ನು ಮದುವೆ ಆಹ್ವಾನಿಸಿದರೆ ಅವರು ಬರುವುದು ಬಿಡುವುದು ಅವರ ಸ್ವಂತ ಆಲೋಚನೆಗೆ ಬಿಟ್ಟ ವಿಚಾರ. ಹಾಗೇ ಧನಂಜಯ್ ಅವರು ಅವರ ಮದುವೆಗೆ ಯಾರನ್ನ ಕರೆಯಬೇಕು ಯಾರನ್ನು ಬಿಡಬೇಕು ಅನ್ನೋದು ಅವರಿಗೆ ಬಿಟ್ಟ ವಿಚಾರ. ಆದರೆ ಇಲ್ಲಿ ಒಂದು ಮಾತ್ರ ಸ್ಪಷ್ಟ ಸಂಕಷ್ಟದಲ್ಲಿ ವ್ಯಕ್ತಿ ಇರುವಾಗ ಜನ ಆತನನ್ನು ನೋಡುವ ರೀತಿ ತುಂಬಾ ವಿಭಿನ್ನವಾಗಿರುತ್ತದೆ. ಎಷ್ಟೇ ಆತ್ಮೀಯರಾಗಿದ್ದರೂ ಕೂಡ ಒಂದು ಕ್ಷಣ ಅನುಮಾನಿಸುವುದು, ಅವರಿಂದ ಅಂತರ ಕಾಯ್ದುಕೊಳ್ಳುವುದು ನಡೆದೇ ನಡೆಯುತ್ತದೆ. ಸಂಕಷ್ಟದಲ್ಲಿ ಇರುವಾಗ ಯಾರ ಒಳ್ಳೆಯತನವೂ ನೆನಪಿಗೆ ಬರುವುದಿಲ್ಲ ಎನ್ನುವುದು ಸತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+