Darshan Thoogudeepa: ಬಳ್ಳಾರಿ ಜೈಲಿನಿಂದ ದರ್ಶನ್ ತೂಗುದೀಪ್ ರಿಲೀಸ್.. 30 ಲಕ್ಷ ರೂಪಾಯಿ ಪಟಾಕಿ...
ಬಳ್ಳಾರಿ ಜೈಲಿನಿಂದ ದರ್ಶನ್ ತೂಗುದೀಪ್ ರಿಲೀಸ್ ಆಗಲಿದ್ದಾರೆ, ಹೈಕೋರ್ಟ್ ಇದೀಗ ನಟ ದರ್ಶನ್ ತೂಗುದೀಪ್ ಅವರಿಗೆ ಸಿಕ್ಕಾಪಟ್ಟೆ ಖುಷಿಯಾದ ಸುದ್ದಿ ನೀಡಿದೆ. ಬೆನ್ನು ನೋವಿನ ಕಾರಣ ನರಳಾಡಿದ್ದ ದರ್ಶನ್ ತೂಗುದೀಪ್ ಅವರನ್ನು ಬಿಡುಗಡೆ ಮಾಡಲು ಜಾಮೀನು ಕೂಡ ನೀಡಲಾಗಿದೆ. ಹೀಗೆ ಬಳ್ಳಾರಿ ಜೈಲಿನಿಂದ ದರ್ಶನ್ ತೂಗುದೀಪ್ ರಿಲೀಸ್ ಆಗಲಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ಕೋಟಿ ಕೋಟಿ ಅಭಿಮಾನಿಗಳು ಕುಣಿದಾಡಿದ್ದಾರೆ. ಅದರಲ್ಲೂ ಇದೀಗ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು 30 ಲಕ್ಷ ರೂಪಾಯಿ ಪಟಾಕಿ...
ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಗಬೇಕು ಎಂಬ ಹೋರಾಟ ಹಲವು ದಿನದಿಂದ ಕೂಡ ನಡೆಯುತ್ತಿತ್ತು. ಇದಕ್ಕಾಗಿ ದರ್ಶನ್ ಅವರ ಪರ ವಕೀಲರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿ, ವಾದ & ಪ್ರತಿವಾದ ನಡೆದಿತ್ತು. ಹೀಗಿದ್ದಾಗ ದರ್ಶನ್ ತೂಗುದೀಪ್ ಅವರಿಗೆ ಬೇಲ್ ಸಿಕ್ಕ ಖುಷಿಯಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಅಲ್ಲದೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಭ್ರಮಾಚರಣೆಯ ನಡೆಸಲು ಫ್ಯಾನ್ಸ್ ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ 30 ಲಕ್ಷ ರೂಪಾಯಿ ಪಟಾಕಿ ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಈಗ ಹಬ್ಬಿದೆ.

ಡಿ-ಬಾಸ್ ದರ್ಶನ್ ತೂಗುದೀಪ್ ಅವರ...
ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಅಂತಾ ಅಭಿಮಾನಿಗಳಿಂದಲೇ ಬಿರುದು ಪಡೆದಿರುವ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿದ್ದು, ಇದೀಗ ಮುಕ್ತಿ ಸಿಗುತ್ತಿದೆ. ದರ್ಶನ್ ತೂಗುದೀಪ್ ಅಭಿಮಾನಿಗಳು ಕಾಯುತ್ತಿದ್ದ ಮಹತ್ವದ ಸಮಯವು ಬಂದೇ ಬಿಟ್ಟಿದ್ದು, ಸುಮಾರು 100 ದಿನಗಳಿಂದ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಕಾಯುತ್ತಿದ್ದರು. ಇದೀಗ ಬಳ್ಳಾರಿ ಜೈಲಿನಿಂದ ಹೊರಗೆ ಬರುತ್ತಿರುವ ದಾಸ ದರ್ಶನ್ ತೂಗುದೀಪ್ ಪರ ಭಾರಿ ದೊಡ್ಡ ಜಯಘೋಷ ಮೊಳಗುತ್ತಿದೆ.
100 ದಿನಗಳಿಂದ ಸೆಂಟ್ರಲ್ ಜೈಲಿನಲ್ಲಿ...
ದರ್ಶನ್ ತೂಗುದೀಪ್ ಅವರು ಕಳೆದ 100 ದಿನಗಳಿಂದ ಸೆಂಟ್ರಲ್ ಜೈಲಿನಲ್ಲಿ ಪರದಾಡುತ್ತಿದ್ರು. ಮೊದಲಿಗೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ದರ್ಶನ್ ತೂಗುದೀಪ್ ಅವರು ಆ ನಂತರ ಬಳ್ಳಾರಿ ಜೈಲು ಸೇರಿದ್ದರು. ಈಗ ಬಳ್ಳಾರಿ ಜೈಲಿನಿಂದ ದರ್ಶನ್ ತೂಗುದೀಪ್ ರಿಲೀಸ್ ಆಗುತ್ತಿದ್ದು, ಫ್ಯಾನ್ಸ್ ಈ ಸಮಯದಲ್ಲಿ ಭರ್ಜರಿಯಾಗಿ ದರ್ಶನ್ ಅವರಿಗೆ ಸ್ವಾಗತ ಕೋರಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಪಟಾಕಿ ಕೂಡ ಖರೀದಿ ಮಾಡಲಾಗಿದೆ ಎಂಬ ಸುದ್ದಿ ಈಗ ಹಲ್‌ಚಲ್ ಎಬ್ಬಿಸಿದೆ.
ಡಿ-ಬಾಸ್ ಬೇಗ ಗುಣಮುಖರಾಗಲಿ...
ಒಟ್ನಲ್ಲಿ ನಟ ದರ್ಶನ್ ತೂಗುದೀಪ್ ಅವರು ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿ ನರಳುವ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಆದಷ್ಟು ಬೇಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಬರಲಿ ಎಂಬುದೇ ಎಲ್ಲರ ಆಶಯ. ಜೀವನದಲ್ಲಿ ಸಾಕಷ್ಟು ಕಷ್ಟ & ಸಮಸ್ಯೆ ಎದುರಿಸಿ ಗೆದ್ದು ಬೀಗಿರುವ ನಟನ ಈಗಿನ ಪರಿಸ್ಥಿತಿ ನೋಡಲು ಅಭಿಮಾನಿಗಳಿಗೂ ಸಾಕಷ್ಟು ನೋವು ನೀಡುತ್ತಿದೆ. ಇದೀಗ ವೈದ್ಯರು ಕೂಡ ವಿಶೇಷ ಚಿಕಿತ್ಸೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆ ಇದೆ.












Click it and Unblock the Notifications