Darshan Thoogudeepa: ಎಸಿಪಿ ಚಂದನ್ ನೇತೃತ್ವದ ತಂಡದಿಂದ ‘ಡಿ-ಬಾಸ್’ ದರ್ಶನ್ ಅಭಿಮಾನಿಗಳಿಗೆ ಜೈಲು...
ಬಳ್ಳಾರಿ ಜೈಲಿನಿಂದ ಶಿವ ಅಂತಾ ಹೊರಗೆ ಬಂದಿರುವ ದರ್ಶನ್ ತೂಗುದೀಪ್ ಅವರಿಗೆ ಈಗ ಅವರ ಅಭಿಮಾನಿಗಳೇ ಮುಳುವಾಗುತ್ತಿದ್ದಾರೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕಂಡ ಕಂಡವರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ, ಅಲ್ಲದೆ ಬಾಸ್.. ಬಾಸ್.. ಅಂತಾ ಅತಿರೇಕದ ವರ್ತನೆ ತೋರಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ. ಇದೇ ಸಮಯದಲ್ಲಿ ಈ ರೀತಿಯಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೆಸರು ಹೇಳಿ ಕಿರಿಕ್ ಮಾಡುವವರಿಗೆ ಪೊಲೀಸರು ಜೈಲಿನ...
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಅಂದ್ರೆ ಮಂಡ್ಯ ಟು ಇಂಡಿಯಾ ಫುಲ್ ಹವಾ ಇದೆ. ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಹೀಗೆ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದ ಸಮಯದಲ್ಲಿ ಅಭಿಮಾನಿಗಳು ಫುಲ್ ಸಂಭ್ರಮ ಪಟ್ಟಿದ್ದರು. ಆದರೂ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸಾಲು ಸಾಲು ಸವಾಲು ಎದುರಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಆಗುತ್ತಿರುವ ಕೆಲವರಿಗೆ ಎಸಿಪಿ ಚಂದನ್ ಅವರ ತಂಡ ಜೈಲು ದರ್ಶನ ಮಾಡಿಸಲು ಸಿದ್ಧತೆ ನಡೆಸಿದೆ! ಮುಂದೆ ಓದಿ.

ಡಿ-ಬಾಸ್ ಅಭಿಮಾನಿಗಳಿಗೆ ಎಸಿಪಿ ಚಂದನ್...
ದರ್ಶನ್ ತೂಗುದೀಪ್ ಅವರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇಂತಹ ಸಮಯದಲ್ಲಿ ಕೂಡ ಕೆಲವರು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೆಸರು ಕೆಡಿಸಲು, ಕೊಲೆ ಬೆದರಿಕೆ ಸೇರಿ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪವು ಕೇಳಿಬಂದ ಬೆನ್ನಲ್ಲೇ ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆ ನಡೆಸಿದ್ದ ಎಸಿಪಿ ಚಂದನ್ & ಅವರ ತಂಡ....
ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಈಗ ಸಾಲು ಸಾಲು ಸಂಕಷ್ಟಗಳೂ ಎದುರಾಗುತ್ತಿವೆ. ನಿಜವಾಗಿಯೂ ದರ್ಶನ್ ತೂಗುದೀಪ್ ಅವರ ಅಪ್ಪಟ ಅಭಿಮಾನಿಗಳು ಇಂಥ ಕಷ್ಟದ ಸಮಯ ಬಂದಾಗ, ಪರಿಸ್ಥಿತಿ ಅರ್ಥ ಮಾಡಿಕೊಂಡು ಸುಮ್ಮನೆ ಇದ್ದಾರೆ. ಆದರೆ ಇನ್ನೂ ಕೆಲವರು ಈ ಸಮಯದಲ್ಲಿ ಕೊಲೆ ಬೆದರಿಕೆ ಹಾಕುವುದು, ಬೈಯುವುದು, ಪೊಲೀಸರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟ ಪದ ಬಳಕೆ ಮಾಡುವುದು...
ಜೈಲೂಟ ಗ್ಯಾರಂಟಿ ಜಿಪ್ಪು ಹಾಕಲೇ!
ಹೀಗೆ ಎಲ್ಲಾ ರೀತಿ ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ಪರಿಸ್ಥಿತಿ ಕೂಡ ಕೈಮೀರಿ ಹೋಗ್ತಿದ್ದು, ಈ ವಿಚಾರ ತಿಳಿದ ತಕ್ಷಣ ಎಸಿಪಿ ಚಂದನ್ & ತಂಡದಿಂದ ಇದೀಗ ಈ ರೀತಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೆಸರು ಹೇಳಿಕೊಂಡು ಸಮಸ್ಯೆ ಮಾಡುವವರ ಹೆಡೆಮುರಿ ಕಟ್ಟಿ, ಜೈಲಿಗೂ ತಳ್ಳಲು ಸಿದ್ಧತೆ ನಡೆದಿದೆ ಎಂಬ ಸುದ್ದಿ ಹರಿದಾಡ್ತಿದೆ.
ಅಲ್ಲದೆ ಪೊಲೀಸರು ಇದೀಗ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಕಡೆ ಹದ್ದಿನ ಕಣ್ಣು ಇಟ್ಟಿದ್ದು, ಎಲ್ಲವನ್ನ ಗಮನಿಸುತ್ತಿದ್ದಾರೆ! ಅದ್ರಲ್ಲೂ ಎಸಿಪಿ ಚಂದನ್ ಅವರ ತಂಡ ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್ ಬೆನ್ನತ್ತಿ ಗೆದ್ದಿದ್ದಿ, ಈಗಿನ ಪರಿಸ್ಥಿತಿ ಬಗ್ಗೆಯೂ ತನಿಖೆ ನಡೆಸುತ್ತಿದೆ. ಹಾಗೇ ಯಾರೆಲ್ಲಾ ಗಲಾಟೆ ಮಾಡುತ್ತಿದ್ದಾರೆ? ಜನ ಸಾಮಾನ್ಯರಿಗೆ ದರ್ಶನ್ ತೂಗುದೀಪ್ ಅವರ ಅಭಿಮಾನಿ ಅಂತಾ ಸುಳ್ಳು ಹೇಳಿಕೊಂಡು ಯಾರೆಲ್ಲಾ ಸಮಸ್ಯೆ ಮಾಡುತ್ತಿದ್ದಾರೆ? ಎಂಬುದನ್ನ ಪಟ್ಟಿ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಹೀಗೆ ಮಾಡಿದವರಿಗೆ ಸದ್ಯದಲ್ಲೇ ಜೈಲು ಊಟ ಗ್ಯಾರಂಟಿ ಎನ್ನಲಾಗ್ತಿದೆ!
ದರ್ಶನ್ ತೂಗುದೀಪ್ ಅವರು ಮತ್ತೆ ಬಳ್ಳಾರಿಗೆ?
ಬೆಂಗಳೂರು ಪೊಲೀಸರು ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿ ಪ್ರಶ್ನೆ ಮಾಡುತ್ತ ಸುಪ್ರೀಂಕೋರ್ಟ್ ಮೆಟ್ಟಿಲು ಏರಲು ನಿರ್ಧರಿಸಿದ್ದು, ಇದಕ್ಕೆ ಒಂದಷ್ಟು ಸಮಯ ಹಿಡಿಯುತ್ತೆ ಎನ್ನಲಾಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆರೋಗ್ಯ ಪರಿಸ್ಥಿತಿ ಹಿನಾಯವಾಗಿರುವ ಹಿನ್ನೆಲೆ ಮಾನ್ಯ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಈಗ ನೋಡಿದರೆ ಈ ರೀತಿ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆದ ನಂತರ, ಹಲವರಿಗೆ ಬೆದರಿಕೆ ಹಾಕುತ್ತಿರುವ ಆರೋಪ ದರ್ಶನ್ ತೂಗುದೀಪ್ ಅಭಿಮಾನಿಗಳ ವಿರುದ್ಧ ಕೇಳಿ ಬರ್ತಿದೆ. ಬೆಂಗಳೂರು ಪೊಲೀಸರಿಗೆ ಕೂಡ ದರ್ಶನ್ ತೂಗುದೀಪ್ ಅಭಿಮಾನಿಗಳು ಆವಾಜ್ ಹಾಕಿದ್ದು, ಮುಂದೆ ಏನಾಗುತ್ತೆ?












Click it and Unblock the Notifications