Darshan Thoogudeepa: ‘ಜಲಗಾರ’ ಸಾಂಗ್ ಬರೆದು ದರ್ಶನ್ ತೂಗುದೀಪ್ ಪರ ನಿಂತ ಅಭಿಮಾನಿಗಳು!
'ಜಲಗಾರ' ಪದ ಇದೀಗ ಎಲ್ಲೆಲ್ಲೂ ಫೇಮಸ್ ಆಗುತ್ತಿದ್ದು, ಅದರಲ್ಲೂ 'ಜಲಗಾರ' ಪದದ ಅರ್ಥವನ್ನು ಕೋಟಿ ಕೋಟಿ ಜನರು ಹುಡುಕುತ್ತಿದ್ದಾರೆ. ಹೀಗದ್ದಾಗಲೇ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು 'ಜಲಗಾರ' ಪದವನ್ನೇ ಬಳಸಿ ವಿರೋಧಿಗಳಿಗೆ ಟಾಂಗ್ ಕೊಡಲು ಮುಂದಾಗಿದ್ದಾರೆ. ಯಾಕಂದ್ರೆ ದರ್ಶನ್ ತೂಗುದೀಪ್ ಅವರು ತಮ್ಮ ಹೆಂಡತಿಯ ಜೊತೆಗೆ ಮಾತನಾಡುವಾಗ 'ಜಲಗಾರ' ಎಂಬ ಪದ ಬಳಸಿ, ಕೆಟ್ಟ ಕೆಟ್ಟದಾಗಿ ಬೈದಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಹೀಗಿದ್ದಾಗಲೇ ಅಭಿಮಾನಿ ಒಬ್ಬ ತನ್ನ ನೆಚ್ಚಿನ 'ಡಿ-ಬಾಸ್' ದರ್ಶನ್ ಬಳಸಿದ್ದ 'ಜಲಗಾರ' ಪದವನ್ನೇ ಉಪಯೋಗಿಸಿ, ನಟ ದರ್ಶನ್ ಅವರ ಬಗ್ಗೆ ಸಾಂಗ್ ರಿಲೀಸ್ ಮಾಡಿದ್ದಾನೆ. ಅಲ್ಲದೆ 'ಜಲಗಾರ' ಅನ್ನೋ ಪದವನ್ನೇ ಹಲವು ಬಾರಿ ಬಳಸಿ 'ಏನ್ರೀ ಮೀಡಿಯಾ? ಏನ್ರೀ ಮೀಡಿಯಾ' ಅಂತಾ ಲಿರಿಕ್ಸ್ ಬರೆದಿದ್ದಾನೆ. ಯಾಕಂದ್ರೆ ದರ್ಶನ್ ತೂಗುದೀಪ್ ಅವರು ಮೀಡಿಯಾಗಳಿಗೆ ಅಂದ್ರೆ, ಪ್ರಜಾಪ್ರಭುತ್ವದ 4ನೇ ಅಂಗ ಎಂದು ಕರೆಯುವ ಮಾಧ್ಯಮಗಳ ಬಗ್ಗೆಯೂ ಕೆಟ್ಟ ಕೆಟ್ಟ ಪದ ಬಳಸಿ ಬೈದಿದ್ದರು ಎಂಬ ಆರೋಪ ಕೇಳಿಬಂದಿತ್ತು.

ದರ್ಶನ್ ತೂಗುದೀಪ್ ಅವರು ತಮ್ಮ ಹೆಂಡತಿ ಮತ್ತು ಮಾಧ್ಯಮಗಳಿಗೆ ಕೆಟ್ಟದಾಗಿ ಬೈದಿದ್ದಾರೆ ಎಂದು ಆರೋಪ ಮಾಡಲಾಗಿರುವ ಆಡಿಯೋ ಬಳಸಿ ಸಾಂಗ್ ಮಾಡಲಾಗಿದೆ. ನಟ ದರ್ಶನ್ ಕೆಟ್ಟದಾಗಿ ಬೈದಿದ್ದರು ಎಂದು ಆರೋಪ ಮಾಡಲಾಗಿದ್ದ ಆಡಿಯೋದಿಂದಲೇ ಇದೀಗ ಪದಗಳ ಕದ್ದು ಹಾಡು ಬರೆಯಲಾಗಿದೆ. ಹೀಗೆ ಅಭಿಮಾನಿಗಳ ಪಾಲಿನ ಡಿ-ಬಾಸ್ ಹಾಗೂ ಸದ್ಯಕ್ಕೆ ಕೊಲೆ ಆರೋಪಿ ಆಗಿರುವ ದರ್ಶನ್ ತೂಗುದೀಪ್ ಅವರ ಬಗ್ಗೆ ಸಾಂಗ್ ಮಾಡಿ ವೈರಲ್ ಮಾಡ್ತಿದ್ದಾರೆ ಅವರ ಅಭಿಮಾನಿಗಳು.
ದರ್ಶನ್ ತೂಗುದೀಪ್ ಅಭಿಮಾನಿಗಳ ಸಂಭ್ರಮ
'ಜಲಗಾರ' ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸಮಯದಲ್ಲೇ, ಕೆಲವರು ದರ್ಶನ್ ಅವರ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಅಂದ್ರೆ ದರ್ಶನ್ ತೂಗುದೀಪ್ ಅವರು ಈ ರೀತಿ ಕೆಟ್ಟ ಕೆಟ್ಟ ಪದ ಬಳಕೆ ಮಾಡುವುದೇ ಚಂದ ಅಂತಾ ಹೇಳುತ್ತಿದ್ದಾರೆ. ಈ ಬಗ್ಗೆ ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಮತ್ತೊಂದು ಕಡೆ ಮಾಧ್ಯಮಗಳನ್ನ ಕೆಟ್ಟದಾಗಿ ಟ್ರೋಲ್ ಮಾಡುತ್ತಿರುವ ಕೆಲವು ಗುರುತೇ ಇಲ್ಲದ ಅಕೌಂಟ್‌ಗಳನ್ನ ಬ್ಲಾಕ್ ಮಾಡಿ ಎಂಬ ಆಗ್ರಹ ಕೂಡ ಕೇಳಿಬಂದಿದೆ. ಹಂಗಾದ್ರೆ ಜಲಗಾರ ಅಂದರೆ ಏನು? ಮುಂದೆ ಓದಿ.
'ಜಲಗಾರ' ಪದದ ಅರ್ಥ ಏನು?
ನಮ್ಮ ಸಂಸ್ಕೃತಿಯಲ್ಲಿ ಕೆಲ ಬೈಗುಳಗಳು ಅರ್ಥವೇ ಇಲ್ಲದೆ ಬೆರತು ಹೋಗಿವೆ. ಹಾಗೇ, ಇನ್ನೂ ಕೆಲವು ಬೈಗುಳ ಒಂದು ಜನಾಂಗ & ಜಾತಿಗಳನ್ನೇ ಟಾರ್ಗೆಟ್ ಮಾಡಿವೆ. ಹೊಸ ತಲೆಮಾರು ಈ ಬಗ್ಗೆ ಒಮ್ಮೆ ಚಿಂತೆ ಮಾಡಿ ನೋಡಬೇಕಿದೆ. ಯಾಕಂದ್ರೆ ನಾವು ದಿನನಿತ್ಯ ಬಳಸುವ ಹಲವು ಬೈಗುಳಗಳು ಶ್ರಮಿಕರು & ಶ್ರಮ ಜೀವಿಗಳ ಜಾತಿ ಬಗ್ಗೆಯೇ ಹೆಚ್ಚಾಗಿ ಇರುತ್ತದೆ. ಆದರೆ ಅವರು ಇರದೇ ಹೋದರೆ ಸಮಾಜವೇ ಗಬ್ಬು ನಾರಬೇಕಾಗುತ್ತದೆ ಎಂಬುದು ಸೂರ್ಯ & ಚಂದ್ರರಷ್ಟೇ ಸತ್ಯ.
ಹೀಗೆ ಈ ಜಗತ್ತಿನ ಕೊಳೆ ತೊಳೆದು ಸಮಾಜ ಸೇವೆ ಮಾಡುವವರು ಶ್ರಮಿಕರು. ಅದರಲ್ಲೂ 'ಜಲಗಾರ' ಎಂಬ ಪದವು ಸಫಾಯಿ ಕರ್ಮಚಾರಿಗಳನ್ನ ಪ್ರತಿನಿಧಿಸುತ್ತದೆ. ಹಳೇ ಮೈಸೂರು ಭಾಗದಲ್ಲಿ ಈ ಪದವು ಬಳಕೆಯಲ್ಲಿ ಇದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದ್ದು, ದರ್ಶನ್ ತೂಗುದೀಪ್ ಮಾತನಾಡಿದ್ದಾರೆ ಎಂಬ ಆಡಿಯೋ ಕುರಿತು ಗಂಭೀರ ಚರ್ಚೆ ಇದೀಗ ನಡೆಯುತ್ತಿದೆ.












Click it and Unblock the Notifications