Darshan Thoogudeepa: ಡಿ-ಬಾಸ್ ಹೊರಗೆ ಇದ್ದಿದ್ದರೆ ಪುಷ್ಪ-2 ಕರ್ನಾಟಕಕ್ಕೆ ಎಂಟ್ರಿ ಕೊಡ್ತಿರಲಿಲ್ಲ ಅಂತಿದ್ದಾರೆ....

ಕನ್ನಡ ನೆಲದಲ್ಲಿ ಪರಭಾಷೆ ಸಿನಿಮಾಗಳ ಹಾವಳಿ ಹೆಚ್ಚಾಗಿದೆ ಅಂತಾ ಕನ್ನಡಿಗರು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಹೀಗಿದ್ದಾಗಲೇ 'ಪುಷ್ಪ-2' ಸಿನಿಮಾಗೆ ದೊಡ್ಡ ಆಘಾತ ಸಿಕ್ಕಿದೆ. 'ಪುಷ್ಪ-2' ಸಿನಿಮಾ ಮಕಾಡೆ ಮಲಗಿದೆ & ನೋಡೋದಕ್ಕೆ ಧಾರಾವಾಹಿ ಅಂದ್ರೆ ಸೀರಿಯಲ್ ಥರ ಇದೆ ಅಂತಾ ಪ್ರೇಕ್ಷಕರು ಬೆಂಗಳೂರು ಸೇರಿದಂತೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೀಗೆ 'ಪುಷ್ಪ-2' ಸಿನಿಮಾದ ಬಗ್ಗೆ ಸರಿ ಇಲ್ಲ ಅನ್ನೋ ರಿಯಾಕ್ಷನ್ ವಿಡಿಯೋಗಳ ನಡುವೆ, ಡಿ-ಬಾಸ್ ಹೊರಗಡೆ ಇದ್ದಿದ್ದರೆ 'ಪುಷ್ಪ-2' ಕರ್ನಾಟಕಕ್ಕೆ ಎಂಟ್ರಿ ಕೊಡ್ತಿರಲಿಲ್ಲ ಅಂತಿದ್ದಾರೆ....

'ಪುಷ್ಪ-2' ಸಿನಿಮಾ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಒಂದು ಕಡೆ, ಕನ್ನಡ ಸಿನಿಮಾಗಳ ಬಗ್ಗೆ 'ಪುಷ್ಪ-2' ಸಿನಿಮಾದ ನಿರ್ದೇಶಕ ಬಾಯಿಗೆ ಬಂದ ರೀತಿ ಹೇಳಿಕೆ ನೀಡಿದ್ದಾರೆ ಅನ್ನೋ ಆರೋಪ ಇದೆ. ಮತ್ತೊಂದು ಕಡೆ 'ಪುಷ್ಪ-2' ಸಿನಿಮಾ ಕಥೆಯೇ ಸರಿ ಇಲ್ಲ ಹೀಗಿದ್ದರೂ ಸಾವಿರಾರು ಸ್ಕ್ರೀನ್ ಸಿಕ್ಕಿವೆ ಎಂಬ ಆರೋಪ ಕೂಡ ಕನ್ನಡ ಸಿನಿಮಾಗಳ ಅಭಿಮಾನಿಗಳದ್ದು. ಹೀಗೆ ದೊಡ್ಡ ಕಿತ್ತಾಟ ನಡೆಯುವಾಗಲೇ, ಡಿ-ಬಾಸ್ ಹೊರಗಡೆ ಇದ್ದಿದ್ದರೆ 'ಪುಷ್ಪ-2' ಕರ್ನಾಟಕಕ್ಕೆ ಎಂಟ್ರಿ ಕೊಡ್ತಿರಲಿಲ್ಲ ಅಂತಿದ್ದಾರೆ....

Darshan Thoogudeepa Fans Are Saying This About The Pushpa-2 Movie

ಡಿ-ಬಾಸ್ ಹೊರಗಡೆ ಇದ್ದಿದ್ದರೆ 'ಪುಷ್ಪ-2'....

ಕನ್ನಡ ಸಿನಿಮಾ ಇಂಡಸ್ಟ್ರಿಗೆ 'ಬಾಕ್ಸ್ ಆಫಿಸ್ ಸುಲ್ತಾನ' ಅಂತ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ಬಿರುದು ನೀಡಿ ಪ್ರೀತಿಯಿಂದ ಕರೆಯುತ್ತಾರೆ. ಆದರೆ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿಯ ಕೊಲೆ ಕೇಸ್‌ನಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ಅಲ್ಲದೆ ಈಗ ಬೆನ್ನು ನೋವಿಂದ ನರಳುತ್ತಾ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು, ಬೆನ್ನು ನೋವಿಂದ ನರಳುತ್ತಾ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಮಯದಲ್ಲೇ ಡಿ-ಬಾಸ್ ಅಭಿಮಾನಿಗಳು ರೊಚ್ಚಿಗೆದ್ದು ನಿಂತಿದ್ದಾರೆ. ಡಿ-ಬಾಸ್ ಹೊರಗೆ ಇದ್ದಿದ್ದರೆ ಪುಷ್ಪ-2 ಕರ್ನಾಟಕಕ್ಕೆ ಎಂಟ್ರಿ ಕೊಡ್ತಾ ಇರಲಿಲ್ಲ ಅಂತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು. ಹೀಗೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿರುವ 'ಪುಷ್ಪ-2' ಸಿನಿಮಾ, ಭಾರಿ ದೊಡ್ಡದಾಗಿ ಸಂಚಲನ ಸೃಷ್ಟಿ ಮಾಡಿದೆ.

100 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆಯಾ?

ಕರ್ನಾಟಕ & ರಾಜಧಾನಿ ಬೆಂಗಳೂರಲ್ಲಿ ಮಾತ್ರವಲ್ಲ ಖುದ್ದು ಆಂಧ್ರ & ತೆಲಂಗಾಣ ರಾಜ್ಯದಲ್ಲಿ ಕೂಡ 'ಪುಷ್ಪ-2' ಸಿನಿಮಾ ನೋಡಿ ಅಭಿಮಾನಿಗಳು ರೊಚ್ಚಿಗೆದ್ದು ರಿಯಾಕ್ಷನ್ ಕೊಟ್ಟಿದ್ದಾರೆ. ಹಾಗೇ ಇನ್ನೂ ಕೆಲವರು ಈ ಸಿನ್ಮಾ ನೋಡುವ ಬದಲು ಮನೆಗೆ ಹೋಗಿ ನಿದ್ದೆ ಮಾಡಬಹುದಿತ್ತು ಹಾಗೆ... ಹೀಗೆ... ಅಂತೆಲ್ಲ ಮಾತನಾಡುತ್ತಿದ್ದಾರೆ. ಈ ಸಮಯದಲ್ಲೇ, 'ಪುಷ್ಪ-2' ಸಿನಿಮಾ 100 ಕೋಟಿ ರೂಪಾಯಿಗೂ ಹೆಚ್ಚು ಹಣ ಮೊದಲ ದಿನ ಕಲೆಕ್ಷನ್ ಮಾಡಿದೆಯಾ? ಎನ್ನುವ ಪ್ರಶ್ನೆ ಕೂಡ ಕಾಡುತ್ತಿದೆ.

ಅಲ್ಲು ಅರ್ಜುನ್ ನಿವೃತ್ತಿ ಗ್ಯಾರಂಟಿ?

'ಪುಷ್ಪ-2' ಹಂಗಿರುತ್ತೆ... 'ಪುಷ್ಪ-2' ಹಿಂಗಿರುತ್ತೆ... ಅಂತಾ ಬರೀ ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು. ಆದರೆ 'ಪುಷ್ಪ-2' ಸಿನಿಮಾ ಮಾತ್ರ ಹೆಂಗೆಂಗೋ ಇದೆ ಅಂತಾ ಪ್ರೇಕ್ಷಕರು ಆರೋಪ ಮಾಡುತ್ತಿದ್ದಾರೆ. 'ಪುಷ್ಪ-2' ಸಿನಿಮಾ ಮಕಾಡೆ ಮಲಗಿ ಒದ್ದಾಡುತ್ತಿದೆ, ಬರೀ ಬಿಲ್ಡಪ್ ತೋರಿಸಿ ಈ ಸಿನಿಮಾ ಮಾಡಲಾಗಿದೆ ಅಂತಾ ಪ್ರೇಕ್ಷಕರು ಆರೋಪ ಮಾಡುತ್ತಿದ್ದಾರೆ. ಹೀಗೆ ಹೀನಾಯ ಸೋಲು ಕಂಡ ನಂತರ ಅಲ್ಲು ಅರ್ಜುನ್ ಒದ್ದಾಡಿ ಹೋಗಿದ್ದು, ಭವಿಷ್ಯದ ಬಗ್ಗೆ ಕೂಡ ನಟ ಅಲ್ಲು ಅರ್ಜುನ್‌ಗೆ ಚಿಂತೆ ಶುರುವಾಗಿದೆ. ಈ ಸಮಯದಲ್ಲೇ, ಅಲ್ಲು ಅರ್ಜುನ್ ತೆಲುಗು ಸಿನಿಮಾ ರಂಗದಿಂದ ನಿವೃತ್ತಿಗಾಗಿ ಮಹತ್ವದ ಒತ್ತಾಯ ಕೂಡ ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+