Darshan Thoogudeepa: ಭೈರತಿ ರಣಗಲ್ ಸಿನಿಮಾ ವಿಚಾರದಲ್ಲಿ ಡಿ-ಬಾಸ್ ಫ್ಯಾನ್ಸ್ ಕಿರಿಕ್?
ಕನ್ನಡ ಸಿನಿಮಾ ಇಂಡಸ್ಟ್ರಿ ಬೆಳೆಯಬೇಕು, ಜಗತ್ತಿನಾದ್ಯಂತ ಕನ್ನಡಿಗರ ಗತ್ತು ಗೊತ್ತಾಗಬೇಕು ಅನ್ನೋದು ಕೋಟಿ ಕೋಟಿ ಕನ್ನಡಿಗರ ಆಸೆ. ಹೀಗಿದ್ದಾಗ ಕನ್ನಡ ಸಿನಿಮಾಗಳನ್ನ ಬೆಂಬಲಿಸಿ, ಕನ್ನಡ ಸಿನಿಮಾಗಳ ಬೆನ್ನಿಗೆ ಅಭಿಮಾನಿಗಳು ನಿಲ್ಲಬೇಕು. ಆದರೆ ಯಾರೋ ಕೆಲವರಿಂದ ಈಗ ನಡೆಯುತ್ತಿರುವ ಕೃತ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನೇ ಒಡೆದು ಆಳುವಂತೆ ಆಗಿದೆ, ಎಂಬ ಆರೋಪ ಕೇಳಿ ಬಂದಿದೆ. ಅದರಲ್ಲೂ, ಭೈರತಿ ರಣಗಲ್ ಸಿನಿಮಾ ವಿಚಾರದಲ್ಲಿ ಡಿ-ಬಾಸ್ ಫ್ಯಾನ್ಸ್ ಕಿರಿಕ್ ಮಾಡಿದ್ರಾ? ಏನಿದು ಆರೋಪ?
'ಭೈರತಿ ರಣಗಲ್' ಸಿನಿಮಾ ನಿನ್ನೆ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಅಭಿಮಾನಿಗಳು ಈ ಸಿನಿಮಾ ಕಣ್ತುಂಬಿಕೊಂಡು ಸಖತ್ ಖುಷಿ ಪಟ್ಟಿದ್ದಾರೆ. ಅಲ್ಲದೆ ಕನ್ನಡ ಸಿನಿಮಾ ಇಂಡಸ್ಟ್ರಿ ಪಾಲಿಗೆ ಮತ್ತೊಂದು ಸೂಪರ್ ಡೂಪರ್ ಹಿಟ್ ಸಿನಿಮಾ ಸಿಕ್ಕಿದೆ ಅನ್ನೋ ಸಂತಸವನ್ನ ಕೂಡ ಹಂಚಿಕೊಂಡಿದ್ದಾರೆ. ಅದರಲ್ಲೂ ಕರ್ನಾಟಕ ಮಾತ್ರವಲ್ಲ ಇಡೀ ಭಾರತದ ವಿವಿಧ ಕಡೆಯು ಕನ್ನಡಿಗರ ಸಿನಿಮಾ 'ಭೈರತಿ ರಣಗಲ್' ರಿಲೀಸ್ ಆಗಿದ್ದು, ಅಬ್ಬರ ಕೂಡ ಜೋರಾಗುತ್ತಿದೆ. ಇಂತಹ ಸಮಯದಲ್ಲೇ ಫ್ಯಾನ್ಸ್ ವಾರ್ ಜೋರಾಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮತ್ತು ಡಾ. ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು...

ಡಿ-ಬಾಸ್ ದರ್ಶನ್ ಅವರ ಅಭಿಮಾನಿಗಳು...
ಅಂದಹಾಗೆ ಇದೀಗ ಕೇಳಿ ಬಂದಿರುವ ಆರೋಪ ಏನು ಅಂದ್ರೆ, 'ಭೈರತಿ ರಣಗಲ್' ಸಿನಿಮಾ ವಿಚಾರವಾಗಿ ಕೆಲವರು ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅದರಲ್ಲೂ, ಡಿ-ಬಾಸ್ ದರ್ಶನ್ ಅವರ ಫ್ಯಾನ್ಸ್ ಪೇಜ್‌ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಪೋಸ್ಟ್ ಹಾಕಿ, 'ಭೈರತಿ ರಣಗಲ್' ಸಿನಿಮಾ ವಿರುದ್ಧ ಮಾತನಾಡುತ್ತಿರುವ ಆರೋಪ ಕೇಳಿ ಬಂದಿದೆ. ಇಂತಹ ಪೋಸ್ಟ್‌ಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕನ್ನಡಿಗರು ಈ ಪೋಸ್ಟ್‌ಗಳನ್ನ ನೋಡಿ ಆಕ್ರೋಶ ಹೊರ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜಗತ್ತಿನಾದ್ಯಂತ 'ಭೈರತಿ ರಣಗಲ್' ಅಬ್ಬರ
ಹ್ಯಾಟ್ರಿಕ್ ಹೀರೋ ಮತ್ತು ದೊಡ್ಮನೆ ದೊಡ್ಮಗ ನಟ ಶಿವರಾಜ್ ಕುಮಾರ್ ಸಾಲು, ಸಾಲು ಹಿಟ್ ಸಿನಿಮಾಗಳನ್ನ ಕನ್ನಡಿಗರ ಎದುರು ಇಡುತ್ತಿದ್ದಾರೆ. ಇದೇ ರೀತಿ ಮೊನ್ನೆ ಮೊನ್ನೆ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ರು ಶಿವರಾಜ್ ಕುಮಾರ್. ನಟ ಶಿವಣ್ಣ ಈಗಲೂ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೇಡಿಕೆ ಇರುವ ನಟ. ಯಾವ ಪಾತ್ರ ಕೊಟ್ಟರೂ ನೀರು ಕುಡಿದಷ್ಟು ಸುಲಭವಾಗಿ ಮುಗಿಸಿ, ಸೂಪರ್ ಹಿಟ್ ಮಾಡಿಸುತ್ತಾರೆ ನಟ ಶಿವಣ್ಣ ಅಂತಾರೆ ಅವರ ಅಭಿಮಾನಿಗಳು.
ಅಲ್ಲದೆ ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಗೆ ಕೂಡ ಕನ್ನಡದ ನಟ ಶಿವಣ್ಣ ಬೇಕೆ ಬೇಕು ಎನ್ನುವ ವಾತಾವರಣ ನಿರ್ಮಾಣ ಆಗಿದೆ. ಅದರಲ್ಲೂ ಹೊರ ರಾಜ್ಯದ ಫ್ಯಾನ್ಸ್ ಕೂಡ ಡಾ. ಶಿವರಾಜ್‌ಕುಮಾರ್ ಅವರನ್ನ ಶಿವಣ್ಣ ಅಂತಾ ಬಾಯಿತುಂಬ ಕರೆಯುತ್ತಾರೆ. ಹೀಗಿದ್ದಾಗಲೇ 'ಭೈರತಿ ರಣಗಲ್' ಸಿನಿಮಾಗೆ ಜಗತ್ತಿನಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಆದರೆ ಮತ್ತೊಂದು ಕಡೆ ಫ್ಯಾನ್ಸ್ ವಾರ್ ಕೂಡ ನಡೆಯುತ್ತಿರುವುದು ತೀವ್ರ ಆಕ್ರೋಶ ಮೂಡುವಂತೆ ಮಾಡಿದೆ.












Click it and Unblock the Notifications