ಕರ್ನಾಟಕದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿಂದ ನಟ ದರ್ಶನ್ ಬಿಡುಗಡೆಗೆ ವಿಶೇಷ ಪೂಜೆ... Darshan Thoogudeepa
ಕನ್ನಡ ಸಿನಿಮಾ ರಂಗದ ತಾರೆಯಾಗಿ ಮಿಂಚಿದ್ದ ನಟ ದರ್ಶನ್ ತೂಗುದೀಪ್ ಈಗ ಜೈಲಿನಲ್ಲೇ ದೀಪಾವಳಿ ಆಚರಣೆ ಮಾಡಿದ್ದಾರೆ. ಇದು ಅಭಿಮಾನಿಗಳ ಎದೆಯಲ್ಲಿ ಭಾರಿ ದೊಡ್ಡ ನೋವು & ಬೇಸರ ತರಿಸುವ ಜೊತೆಗೆ ದೊಡ್ಡ ಚರ್ಚೆಗೂ ಕಾರಣವಾಗಿದೆ. ಅದರಲ್ಲೂ ದರ್ಶನ್ ತೂಗುದೀಪ್ ಅವರ ಬಹುನಿರೀಕ್ಷಿತ ಸಿನಿಮಾ ಡೆವಿಲ್ ರಿಲೀಸ್‌ಗೆ ರೆಡಿಯಾಗಿರುವ ಸಮಯುದಲ್ಲೇ ಈ ರೀತಿಯ ಘಟನೆಗಳು ನಡೆಯುತ್ತಾ ಇರುವುದು ತಲ್ಲಣ ಎಬ್ಬಿಸಿದೆ. ಇಂತಹ ಸಮಯದಲ್ಲೇ, ಕರ್ನಾಟಕದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿಂದ ನಟ ದರ್ಶನ್ ಬಿಡುಗಡೆಗೆ ವಿಶೇಷ ಪೂಜೆ...
ಹೌದು, ನಟ ದರ್ಶನ್ ತೂಗುದೀಪ್ ಅವರು ಇದೀಗ ಸಾಲು ಸಾಲು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಒಂದು ಕಡೆ ಜಾಮೀನು ಕ್ಯಾನ್ಸಲ್ ಆದ ನಂತರ ಸಾಕಷ್ಟು ಚಿಂತೆಯಲ್ಲಿ ಮುಳುಗಿದ್ದಾರೆ. ಹೀಗೆ ಇದ್ದಾಗ ಜೈಲಿನಲ್ಲಿ ಸೂಕ್ತ ಸೌಲಭ್ಯ ಕೂಡ ಸಿಗದೆ ಸಮಸ್ಯೆ ಮತ್ತಷ್ಟು ಜಾಸ್ತಿ ಆಗುತ್ತಿದೆ. ಹೀಗಾಗಿ ಇದೀಗ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕೂಡ ಇದನ್ನೆಲ್ಲಾ ನೋಡಿ ಬೇಸರ ಹೊರ ಹಾಕುತ್ತಿದ್ದಾರೆ. ಹೀಗಿದ್ದಾಗಲೇ ಹೊಸ ಚರ್ಚೆಯೊಂದು ಇದೀಗ ಟ್ರೆಂಡ್ ಸೃಷ್ಟಿ ಮಾಡಿದೆ!

ಕರ್ನಾಟಕದ ಮೂಲೆ ಮೂಲೆಯಲ್ಲೂ...
ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಬಿರುಗಾಳಿ ಏಳಲು ಅದೊಂದು ಘಟನೆಯೇ ಕಾರಣವಾಗಿತ್ತು. ರೇಣುಕಾಸ್ವಾಮಿ ಅಶ್ಲೀಲವಾಗಿ ಪವಿತ್ರಾ ಗೌಡ ಅವರಿಗೆ ಮೆಸೇಜ್ ಕಳುಹಿಸಿದ್ದ ಅನ್ನೋ ಕಾರಣಕ್ಕಾಗಿ ಭೀಕರವಾಗಿ ಕೊಲೆ ಆಗಿದ್ದ ಅನ್ನೋ ಆರೋಪದ ಮಧ್ಯೆ ಈಗ ಭಾರಿ ದೊಡ್ಡ ಸಂಚಲನ ಸೃಷ್ಟಿ ಆಗಿದೆ ಅದರಲ್ಲೂ ಡಿ-ಬಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ನ್ಯಾಯ ಬೇಕೆ ಬೇಕು ಅಂತಾನೇ ಘೋಷಣೆ ಕೂಗುತ್ತಿದ್ದಾರೆ. ಹಾಗೇ ಇದರ ಜೊತೆಗೆ ತಮ್ಮ ಬಾಸ್‌ಗೆ ಇದೀಗ ಗ್ರಹಗತಿ ಸರಿ ಇಲ್ಲ, ಈ ಕಾರಣಕ್ಕೆ ಕರ್ನಾಟಕದ ಮೂಲೆ ಮೂಲೆಯಲ್ಲೂ ವಿಶೇಷ ಪೂಜೆ ಮಾಡಬೇಕು ಅನ್ನೋ ಮಹತ್ವದ ಚರ್ಚೆ ಕೂಡ ಶುರು ಮಾಡಿದ್ದಾರೆ.
ವಿಶೇಷ ಪೂಜೆಗೆ ಅಭಿಮಾನಿಗಳ ಸಿದ್ಧತೆ?
ಹೌದು ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದೀಗ ಕರ್ನಾಟಕದ ಮೂಲೆ ಮೂಲೆಯಲ್ಲೂ ವಿಶೇಷ ಪೂಜೆ ಸಲ್ಲಿಸಿ, ಆ ಮೂಲಕ ತಮ್ಮ ನೆಚ್ಚಿನ ನಟನಿಗೆ ಒಳ್ಳೆಯದೇ ಆಗಲಿ ಅಂತಾ ಪ್ರಾರ್ಥನೆ ಮಾಡಲು ಮುಂದಾಗಿದ್ದಾರೆ. ಅದರಲ್ಲೂ ಈಗಿನ ಪರಿಸ್ಥಿತಿಯಲ್ಲಿ ದೇವರೇ ನಮ್ಮ ಡಿ-ಬಾಸ್ ಅವರ ಬೆನ್ನಿಗೆ ನಿಲ್ಲಬೇಕಿದೆ, ಯಾಕಂದ್ರೆ ನಮ್ಮ ಡಿ-ಬಾಸ್ ತಪ್ಪೇ ಮಾಡಿಲ್ಲ. ಹೀಗಾಗಿ ನ್ಯಾಯದ ಪರ ದೇವರು ಬೆಂಬಲ ನೀಡಲು ಪ್ರಾರ್ಥನೆ ಮಾಡೋಣ ಅಂತಾ ನಟ ದರ್ಶನ್ ಅವರ ಅಭಿಮಾನಿಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರು ಮಾಡಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ, ಹೀಗಾಗಿ ವಿಶೇಷ ಪೂಜೆ ಯಾವಾಗ ಅನ್ನೋ ವಿಚಾರ ತಿಳಿಯಲು ಕಾದು ನೋಡಬೇಕಿದೆ.












Click it and Unblock the Notifications