Darshan Thoogudeepa: ರೇಣುಕಾಸ್ವಾಮಿಗೆ 150 ಕೋಟಿ ರೂಪಾಯಿ ಪರಿಹಾರ ಹಣ ನೀಡಲು...

ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಹೀಗೆ ಡಿ-ಬಾಸ್.. ಎಂಬ ಬಿರುದು ಪಡೆದಿರುವ ನಟ ದರ್ಶನ್ ತೂಗುದೀಪ್ ಅವರ ಬಾಳಲ್ಲಿ ರೇಣುಕಾಸ್ವಾಮಿ ಎಂಬ ಹೆಸರು ಕಂಟಕವಾಗಿ ಬಂದಿತ್ತು ಎಂಬ ಆರೋಪ ಅಭಿಮಾನಿಗಳದ್ದು. ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿಯ ಬರ್ಬರ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿಗೆ ಕೂಡ ಹೋಗಿ ಬಂದರು. ಇಷ್ಟೆಲ್ಲದರ ನಡುವೆ, ರೇಣುಕಾಸ್ವಾಮಿಗೆ 150 ಕೋಟಿ ರೂಪಾಯಿ ಪರಿಹಾರ ಹಣ ನೀಡಲು...

ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್ ಆಗದೇ ಇದ್ದಿದ್ದರೆ, ಇಷ್ಟೊತ್ತಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ 'ಡೆವಿಲ್' ಸಿನಿಮಾ ಇಡೀ ದೇಶದಲ್ಲೇ ರಿಲೀಸ್ ಆಗಿ ಅಬ್ಬರ ತೋರಿಸುತ್ತಿತ್ತು. ಅಲ್ಲದೆ, ನೂರಾರು ಕೋಟಿ ರೂಪಾಯಿ ಹಣ ಬಾಚುತ್ತಿತ್ತು ಅಂತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಆದ್ರೆ ಪಟ್ಟಣಗೆರೆ ಶೆಡ್ ಒಳಗೆ ಮಾರಣಹೋಮ ನಡೆದು, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಬರ್ಬರ ಕೊಲೆ ನಡೆದಿದೆ ಎಂಬ ಆರೋಪದ ನಡುವೆ ಈಗ ಹೊಸ ಸುದ್ದಿ ಹೊರಗೆ ಬಿದ್ದಿದೆ. ಅಂದಹಾಗೆ, ರೇಣುಕಾಸ್ವಾಮಿಗೆ 150 ಕೋಟಿ ರೂಪಾಯಿ ಪರಿಹಾರ ಹಣ ನೀಡಲು...

Darshan Thoogudeepa Fans Are Planning To Help Renukaswamy Family

ರೇಣುಕಾಸ್ವಾಮಿಗೆ 150 ಕೋಟಿ ರೂಪಾಯಿ...

ಡಿ-ಬಾಸ್ ದರ್ಶನ್ ತೂಗುದೀಪ್ ಅವರು & ಡಿ-ಬಾಸ್ ಜೊತೆಗೆ ಇದ್ದವರು ಹಲ್ಲೆ ಮಾಡಿರುವ ಕಾರಣಕ್ಕೆ ರೇಣುಕಾಸ್ವಾಮಿ ಜೀವ ಹೋಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದೇ ಕಾರಣ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಪವಿತ್ರಾ ಗೌಡ ಆರೋಪಿ ನಂಬರ್ 1 ಅಂದ್ರೆ ಎ-1 ಆಗಿದ್ದಾರೆ, ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಆರೋಪಿ ನಂಬರ್ 2 ಅಂದ್ರೆ ಈ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-2 ಆಗಿದ್ದಾರೆ. ಅಲ್ಲದೆ ಬಳ್ಳಾರಿ ಜೈಲು, ಬೆಂಗಳೂರು ಪರಪ್ಪನ ಅಗ್ರಹಾರ ಜೈಲು ಸೇರಿ ಒಟ್ಟಾರೆ 100ಕ್ಕೂ ಹೆಚ್ಚು ದಿನಗಳ ಕಾಲ ಜೈಲಿನಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ನರಳಿದ್ದಾರೆ....

ರೇಣುಕಾಸ್ವಾಮಿಗೆ 150 ಕೋಟಿ ರೂಪಾಯಿ ಯಾರು ಕೊಡ್ತಾರೆ?

ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆಗಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಇಂತಹ ಸಮಯದಲ್ಲೇ ಹೊರಗಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟ್ಯಂತರ ಅಭಿಮಾನಿಗಳಿಗೆ, ಮತ್ತೊಬ್ಬ ಅಭಿಮಾನಿ ಸಲಹೆ ಒಂದನ್ನ ನೀಡಿದ್ದಾನೆ. ಆ ಸಲಹೆ ಏನು ಅಂದ್ರೆ, ರೇಣುಕಾಸ್ವಾಮಿ ಕುಟುಂಬಕ್ಕೆ ಪ್ರತಿಯೊಬ್ಬರೂ 150 ರೂಪಾಯಿಯ ಸಹಾಯ ಮಾಡುವುದು.

ಡಿ-ಬಾಸ್ ದರ್ಶನ್ ಅವರ ಅಭಿಮಾನಿಗಳು...

ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 1 ಕೋಟಿಗೂ ಹೆಚ್ಚು ಅಭಿಮಾನಿಗಳು ಇದ್ದಾರೆ ಎಂಬ ಮಾತು ಇದೆ. ಅವರೆಲ್ಲಾ ಸಿನಿಮಾ ನೋಡಲು 150 ರೂಪಾಯಿ ಕೊಟ್ಟು ಹೋಗುವ ಬದಲು, ಅದೇ 150 ರೂಪಾಯಿ ಹಣವನ್ನ ಕೊಲೆಯಾಗಿರುವ ರೇಣುಕಾಸ್ವಾಮಿ ಕುಟುಂಬಕ್ಕೆ ನೀಡಬೇಕು ಎಂದು ಕನ್ನಡ ಸಿನಿಮಾ ಅಭಿಮಾನಿ ಒಬ್ಬರು ಇದೀಗ ಒತ್ತಾಯ ಮಾಡಿರುವ ವಿಡಿಯೋ ಫುಲ್ ವೈರಲ್ ಆಗುತ್ತಿದೆ.

ಯಾಕಂದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಈ ರೀತಿ ಒಬ್ಬೊಬ್ಬರು 150 ರೂಪಾಯಿ ಹಣವನ್ನು ಕೊಲೆಯಾಗಿರುವ ರೇಣುಕಾಸ್ವಾಮಿ ಕುಟುಂಬಕ್ಕೆ ನೀಡಿದರೆ, ಕನಿಷ್ಠ 1 ಕೋಟಿ ಅಭಿಮಾನಿಗಳು ಹಣ ನೀಡಿದಂತೆ ಆಗುತ್ತದೆ. ಈ ಮೂಲಕವೇ ಒಟ್ಟಾರೆ 150 ಕೋಟಿ ರೂಪಾಯಿ ಹಣ ರೇಣುಕಾಸ್ವಾಮಿ ಫ್ಯಾಮಿಲಿಗೆ ಸಿಕ್ಕಂತೆ ಆಗುತ್ತೆ ಎನ್ನುವ ಐಡಿಯಾ ನೀಡಿದ್ದಾರೆ ಕನ್ನಡ ಸಿನಿಮಾ ಅಭಿಮಾನಿ ಒಬ್ಬರು. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಡಿ-ಬಾಸ್.. ಡಿ-ಬಾಸ್.. ಅಂತಿದ್ದಾರೆ ಫ್ಯಾನ್ಸ್!

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟನ ಬಿಟ್ಟು ಕೊಡುವುದಿಲ್ಲ. ಯಾಕಂದ್ರೆ ಅಭಿಮಾನಿಗಳಿಗೆ ಡಿ-ಬಾಸ್ ಮೇಲೆ ಪ್ರೀತಿ. ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಹೀಗೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಇದೀಗ ಅಭಿಮಾನಿಗಳು ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಅಂತಾ ಜೈಕಾರ ಹಾಕುತ್ತಿದ್ದಾರೆ. ಈ ರೀತಿ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆದ ನಂತರ ಹೊಸ ಶಕ್ತಿ ರೂಪುಗೊಂಡಂತೆ ಆಗಿದೆ.

ಡಿ-ಬಾಸ್ ಮಧ್ಯಂತರ ಜಾಮೀನು ರದ್ದು?

ಪೊಲೀಸರು ಇದೀಗ ಡಿ-ಬಾಸ್ ದರ್ಶನ್ ಅವರ ವಿರುದ್ಧ ಮೇಲ್ಮನವಿಗೆ ನಿರ್ಧರಿಸಿದ್ದಾರೆ. ಸೋಮವಾರ ಸುಪ್ರೀಂ ಕೋರ್ಟ್‌ಗೆ ಈ ಬಗ್ಗೆ ಮೇಲ್ಮನವಿ ಸಲ್ಲಿಸಿ ಮನವಿ ಮಾಡುವ ನಿರೀಕ್ಷೆ ದಟ್ಟವಾಗಿದೆ. ಇದೇ ವಿಚಾರವನ್ನ ತಿಳಿದ ಕೂಡಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹಾಗೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿ ಬಳಗ ತೀವ್ರ ಆಘಾತಕ್ಕೆ ಒಳಗಾಗಿದೆ. ಮತ್ತೊಂದು ಕಡೆ ಮಾನ್ಯ ಸುಪ್ರೀಂ ಕೋರ್ಟ್, ದರ್ಶನ್ ತೂಗುದೀಪ್ ಅವರ ಈ ಮಧ್ಯಂತರ ಜಾಮೀನು ರದ್ದು ಅಂದ್ರೆ ಕ್ಯಾನ್ಸಲ್ ಮಾಡಿದರೆ ಸೋಮವಾರವೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮತ್ತೆ ಬಳ್ಳಾರಿಯ ಜೈಲು ಸೇರುವ ಸಾಧ್ಯತೆ ದಟ್ಟವಾಗಿದೆ. ಇದು ಅಭಿಮಾನಿಗಳಿಗೆ ಇದೀಗ ಭಯ ಮೂಡುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+