Darshan Thoogudeepa: ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಬೆಲೆಯೇ ಇಲ್ವಾ?
ದರ್ಶನ್ ತೂಗುದೀಪ್ ಅವರು ಕನ್ನಡ ಸಿನಿಮಾ ರಂಗದ ಮೇರು ನಟ, ದರ್ಶನ್ ತೂಗುದೀಪ್ ಅವರು ಹತ್ತಾರು ಹಿಟ್ ಸಿನಿಮಾಗಳನ್ನ ನೀಡಿ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಬೆಳೆಸಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿ ಬೆಳೆಯಲು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಶ್ರಮ ಸಾಕಷ್ಟು ಇದೆ, ಹೀಗಿದ್ದರೂ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಬೆಲೆಯೇ ಇಲ್ವಾ? ಹೀಗಂತಾ ಸದ್ಯ ದೊಡ್ಡ ಚರ್ಚೆ ಶುರುವಾಗಿದೆ. ಅದರಲ್ಲೂ ದರ್ಶನ್ ತೂಗುದೀಪ್ ಅಭಿಮಾನಿಗಳು ಕರ್ನಾಟಕ ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಎಬ್ಬಿಸಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮತ್ತೆ ಹಂಗೇ ವಾಪಸ್ ಬರ್ತಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ 1000 ಕೋಟಿ ರೂಪಾಯಿ ಸಿನಿಮಾ ತರ್ತಾರೆ... ಈ ರೀತಿ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಆತ್ಮವಿಶ್ವಾಸ ತುಂಬಿಕೊಂಡು ಕಾಯುತ್ತಿದ್ದಾರೆ. ಆದರೆ ಇಂತಹ ಸಮಯದಲ್ಲೇ ಕರ್ನಾಟಕದ ಪೊಲೀಸರಿಂದ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ & ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಅವಮಾನ ಆಗಿದೆಯಾ? ಹೀನಾಯವಾಗಿ ಅಭಿಮಾನಿಗಳನ್ನ ನಡೆಸಿ ಗೇಟ್‌ನಿಂದ ಹೊರಗೆ ತಳ್ಳಲಾಗಿದೆಯಾ?

ಡಿ-ಬಾಸ್ ದರ್ಶನ್ ತೂಗುದೀಪ್‌ಗೆ ಅವಮಾನ?
ಡಿ-ಬಾಸ್ ಎಂಬ ಬಿರುದು ಪಡೆದಿದ್ದ ನಟ ದರ್ಶನ್ ಅವರು ಬಾಕ್ಸ್ ಆಫಿಸ್ ಸುಲ್ತಾನ ಆಗಿದ್ದರು. ದರ್ಶನ್ ತೂಗುದೀಪ್ ಅವರ ಸಿನಿಮಾಗಳು ರಿಲೀಸ್ ಆಗುತ್ತೆ ಅಂದ್ರೆ ಜಗತ್ತಿನ ಮೂಲೆ ಮೂಲೆಯ ಪ್ರತಿ ಅಭಿಮಾನಿಗಳು ಸಂಭ್ರಮಕ್ಕೆ ಕಾಯುತ್ತಿದ್ದರು. ಈ ಕಾರಣ ಹಿಂದಿ ಭಾಷೆಗೆ ಕೂಡ ದರ್ಶನ್ ತೂಗುದೀಪ್ ಅವರ ಕನ್ನಡ ಸಿನಿಮಾಗಳು ಡಬ್ ಆಗಿ ರಿಲೀಸ್ ಆಗಿದ್ದವು. ಹೀಗಿದ್ದಾಗಲೇ ಭಾರಿ ತಲ್ಲಣ ಎಬ್ಬಿಸಿದ್ದ ರೇಣುಕಾಸ್ವಾಮಿ ಕೊಲೆ ಕೇಸ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಇಡೀ ಸಿನಿಮಾ ಕರಿಯರ್ & ವೈಯಕ್ತಿಕ ಜೀವನಕ್ಕೆ ಕಂಟಕ ತಂದಿತ್ತು. ಇಷ್ಟೆಲ್ಲದರ ನಡುವೆ ಈಗ ಡಿ-ಬಾಸ್ ಫ್ಯಾನ್ಸ್ ಕರ್ನಾಟಕ ಪೊಲೀಸರ ವಿರುದ್ಧ ರೊಚ್ಚಿಗೇಳಲು ಕಾರಣ ಏನು? ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಬೆಲೆಯೇ ಇಲ್ವಾ?
ಐಯ್ಯಯ್ಯೋ ಅನ್ಯಾಯ? ಘೋರ ಅನ್ಯಾಯ?
ಆರ್‌ಸಿಬಿ & ಗುಜರಾತ್ ನಡುವೆ ಮ್ಯಾಚ್ ನಡೆಯುವಾಗ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಾಗರದಂತೆ ಹರಿದು ಬಂದಿದ್ದರು. ಅಲ್ಲದೆ ಮ್ಯಾಚ್ ನೋಡಲು ಭಾರಿ ಕುತೂಹಲದಿಂದ ಅವರೆಲ್ಲರೂ ಕಾದು ಕುಳಿತಿದ್ದರು ಕೂಡ. ಆದರೆ ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಸೆಕ್ಯುರಿಟಿ & ಕರ್ನಾಟಕ ಪೊಲೀಸರು, ಕೊಲೆ ಆರೋಪಿ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಫೋಟೋ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊರಗಡೆ ತಳ್ಳಿದ್ರಾ? ಇದೀಗ ವೈರಲ್ ವಿಡಿಯೋದಲ್ಲಿ ಡಿ-ಬಾಸ್‌ಗೆ ಭಾರಿ ಅವಮಾನ ಆಯ್ತಾ? ಎಂಬ ಚರ್ಚೆ ಶುರುವಾಗಿದೆ.
ಯಾಕೆ ಅಂದ್ರೆ ಅಭಿಮಾನಿಯು ಒಬ್ಬ, ಡಿ-ಬಾಸ್ ದರ್ಶನ್ ತೂಗುದೀಪ್ & ವಿರಾಟ್ ಕೊಹ್ಲಿ ಫೋಟೋ ಹಾಕಿ ಎಡಿಟ್ ಮಾಡಿಕೊಂಡು, ಫ್ರೇಮ್ ಹಾಕಿಸಿಕೊಂಡು ಬಂದಿದ್ದ. ಆದರೆ ಆ ಫೋಟೋನ ಚಿನ್ನಸ್ವಾಮಿ ಕ್ರೀಡಾಂಗಣದ ಒಳಗಡೆ ಬಿಡದ ಪೊಲೀಸರು & ಸೆಕ್ಯುರಿಟಿ ಹೊರಗೆ ತಳ್ಳಿದ್ದಾರಂತೆ. ಈ ವಿಡಿಯೋ ವೈರಲ್ ಆದ ನಂತರ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಹೋರಾಟಕ್ಕೆ ಅಭಿಮಾನಿಗಳು ಚಿಂತನೆ ನಡೆಸುತ್ತಿದ್ದಾರೆ.












Click it and Unblock the Notifications