Darshan Thoogudeepa: ಧ್ರುವ ಸರ್ಜಾ ಸಿನಿಮಾ ಸೋಲಿಸಲು ಪಣತೊಟ್ಟ ದರ್ಶನ್ ತೂಗುದೀಪ್ ಅಭಿಮಾನಿಗಳು?
ದರ್ಶನ್ ತೂಗುದೀಪ್ ಈಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಅರೆಸ್ಟ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ತೂಗುದೀಪ್ ಪರದಾಡುವ ಸ್ಥಿತಿ ಬಂದಿದೆ. ಮತ್ತೊಂದು ಕಡೆ ತಮ್ಮ ನೆಚ್ಚಿನ ಹೀರೋ ದರ್ಶನ್ ತೂಗುದೀಪ್ ಅವರನ್ನ ಬೇಗ ರಿಲೀಸ್ ಮಾಡಿ ಅಂತಾ ಅಭಿಮಾನಿಗಳು ಒತ್ತಾಯ ಕೂಡ ಮಾಡುತ್ತಿದ್ದಾರೆ. ಈ ಸಮಯದಲ್ಲೇ ಧ್ರುವ ಸರ್ಜಾ ಅಭಿನಯದ 'ಮಾರ್ಟೀನ್' ಸಿನಿಮಾ ರಿಲೀಸ್ ಆಗುತ್ತಿದ್ದು ದರ್ಶನ್‌ರ ಫ್ಯಾನ್ಸ್ ರೊಚ್ಚಿಗೆದ್ದು ಆಕ್ರೋಶ ಹೊರ ಹಾಕುತ್ತಿದ್ದಾರೆ, ಯಾಕೆ ಗೊತ್ತಾ?
ಶತಮಾನಗಳಷ್ಟು ಹಳೆಯದಾದ ಕನ್ನಡ ಸಿನಿಮಾ ಇಂಡಸ್ಟ್ರಿ ಈಗ ಹರಿದು ಹಂಚಿ ಹೋಳಾಗಿ ಹೋಗುತ್ತಿದೆ. ಸಿನಿಮಾ ಹೀರೋಗಳ ನಡುವೆ ಫೈಟಿಂಗ್ ಕೂಡ ಬಲು ಜೋರಾಗುತ್ತಲೇ ಇದೆ. ದರ್ಶನ್ ತೂಗುದೀಪ್ & ಧ್ರುವ ಸರ್ಜಾ ನಡುವೆ ಹಲವು ವರ್ಷಗಳಿಂದ ಕಿರಿಕ್ ಇದೆ. ಹಾಗೇ ಇದೇ ವಿಚಾರವಾಗಿ ದೊಡ್ಡ ಚರ್ಚೆ ಕೂಡ ನಡೆದಿತ್ತು. ಈಗಾಗಲೇ ನಟ ದರ್ಶನ್ ತೂಗುದೀಪ್ ವಿಚಾರಕ್ಕೆ ಧ್ರುವ ಸರ್ಜಾ ಬಹಿರಂಗ ಹೇಳಿಕೆ ನೀಡಿ ಆಕ್ರೋಶ ಹೊರಹಾಕಿದ್ದು ಕೂಡ ಉಂಟು. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ.

ಧ್ರುವ ಸರ್ಜಾ ಸಿನಿಮಾಗೆ ಆಘಾತ?
ಇಷ್ಟೆಲ್ಲಾ ತಿಕ್ಕಾಟದ ನಡುವೆ ಧ್ರುವ ಸರ್ಜಾ ಕೂಡ ದರ್ಶನ್ ತೂಗುದೀಪ್ ಅವರು ಜೈಲಿಗೆ ಹೋಗಿರುವ ಬಗ್ಗೆ ಮಾತನಾಡಿದ್ದರು. ಈಗ ಅದೇ ಅವರಿಗೆ ಮುಳುವಾಗುತ್ತಿದೆಯಾ? ಎನ್ನುವ ಪ್ರಶ್ನೆ ಮೂಡಿದೆ. ಯಾಕಂದ್ರೆ ಧ್ರುವ ಸರ್ಜಾ ಅಭಿನಯದ 'ಮಾರ್ಟೀನ್' ಸಿನಿಮಾ ಸೋಲಿಸಲು ಇದೀಗ ದರ್ಶನ್ ಅವರ ಅಭಿಮಾನಿಗಳು ಪಣತೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದರಲ್ಲೂ ಸೋಷಿಯಲ್ ಮೀಡಿಯಾ ತುಂಬಾ ಧ್ರುವ ಸರ್ಜಾ ವಿರುದ್ಧ ದರ್ಶನ್ ಫ್ಯಾನ್ಸ್, ತೀವ್ರ ಆಕ್ರೋಶ ಹೊರಹಾಕಿ 'ಮಾರ್ಟೀನ್' ಸಿನಿಮಾ ವಿರುದ್ಧ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿವೆ.
ದರ್ಶನ್ ಫ್ಯಾನ್ಸ್ vs ಧ್ರುವ ಸರ್ಜಾ!
ದರ್ಶನ್ ತೂಗುದೀಪ್ ಅವರು ಜೈಲಿಂದ ರಿಲೀಸ್ ಆಗಿ ಹೊರಗೆ ಬರುವವರೆಗು ಕನ್ನಡದ ಬೇರೆ ಯಾವುದೇ ಹೀರೋಗಳ ಸಿನಿಮಾ ನೋಡಬಾರದು ಎಂದು ಆಗ್ರಹಿಸುತ್ತಿದ್ದಾರೆ ದರ್ಶನ್ ಫ್ಯಾನ್ಸ್. ಹೀಗಿದ್ದಾಗಲೇ, ಧ್ರುವ ಸರ್ಜಾ ಅವರ 'ಮಾರ್ಟಿನ್' ಸಿನ್ಮಾ ರಿಲೀಸ್‌ಗೆ ರೆಡಿಯಾಗಿದೆ. ಅದ್ರಲ್ಲೂ 'ಮಾರ್ಟಿನ್' ಟ್ರೇಲರ್ ರಿಲೀಸ್ ಆಗಿದ್ದು, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಏನು ಹೇಳ್ತಿದ್ದಾರೆ ಗೊತ್ತಾ? ಮಾರ್ಟಿನ್ ಟ್ರೇಲರ್ ಬಗ್ಗೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಕಮೆಂಟ್ ಏನು?? ಮುಂದೆ ಓದಿ.
ಫೈಟಿಂಗ್ ಬಲು ಜೋರು ಗುರೂ!
'ಮಾರ್ಟಿನ್' ಸಿನಿಮಾ ನೋಡಲು ಕೋಟ್ಯಂತರ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಮಯದಲ್ಲೇ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್, ಧ್ರುವ ಸರ್ಜಾ ಅವರ ಸಿನಿಮಾ 'ಮಾರ್ಟಿನ್' ಟ್ರೇಲರ್ ನೋಡಿ ಆಕ್ರೋಶ ಹೊರ ಹಾಕ್ತಿದ್ದಾರೆ. ಇದರ ಜತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಾರ್ಟಿನ್ ಟ್ರೇಲರ್ ಅತ್ಯಂತ ಕೆಟ್ಟ ಟ್ರೇಲರ್ ಅಂತಾ ಆರೋಪ ಮಾಡುತ್ತಿದ್ದಾರೆ. ಇದು ದರ್ಶನ್ ಫ್ಯಾನ್ಸ್ vs ಧ್ರುವ ಸರ್ಜಾ ಎಂಬ ರೀತಿ ವಾತಾವರಣ ಸೃಷ್ಟಿಸಿದೆ.












Click it and Unblock the Notifications