Darshan: ಕುಂಟುತ್ತ ಕುಂಟುತ್ತಲೇ ಮನೆಯಿಂದ ತೆರಳಿ ಕೋರ್ಟ್‌ಗೆ ಹಾಜರಾದ ನಟ ದರ್ಶನ್, ನಾಳೆ ವಿದೇಶಕ್ಕೆ...
Darshan Thoogudeepa: ನಟ ದರ್ಶನ್ ತೂಗುದೀಪ ಅವರು ಡೆವಿಲ್ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ವಿದೇಶಕ್ಕೆ ಶೂಟಿಂಗ್ ತೆರಳಲು ಅನುಮತಿ ಸಹ ಸಿಕ್ಕಿದೆ. ಇದಕ್ಕು ಮೊದಲು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ಇಂದು ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಈ ಸಂಬಂಧ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ 17 ಆರೋಪಿಗಳು ಕೋರ್ಟ್ ಹಾಜರಾಗಬೇಕಿದೆ.
ಜೈಲಿನಲ್ಲಿದ್ದಾಗಲೇ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್ ಅವರು ಬಿಡುಗಡೆ ಬಳಿಕ ಚಿಕಿತ್ಸೆ ಪಡೆದರು. ನಂತರ ಅವರು ಪೂರ್ತಿ ಗುಣಮುಖರಾದ ಬಗ್ಗೆ ಮಾಹಿತಿ ಇಲ್ಲ. ಆದರೆ ಅವರು ಇಂದು ವಿಚಾರಣೆಗೆ ಕೋರ್ಟ್‌ಗೆ ತೆರಳು ಮನೆಯಿಂದ ಹೊರ ಬರುವಾಗ ಕುಂಟುತ್ತಲೇ ಬಂದರು. ಮನೆ ಬಾಗಿಲಿಗೆ ಬಂದ ಅವರು ತುಳಸಿ ಗಿಡಕ್ಕೆ ನೀರು ಹಾಕಿ, ಮೇಲೆ ದೇವರಿಗೆ ನಮಸ್ಕರಿಸಿದರು. ಎಲ್ಲವು ಒಳಿತಾಗಲಿ ಎಂದು ಮನದಲ್ಲೇ ಪ್ರಾರ್ಥಿಸಿ ಕುಂಟುತ್ತಲೇ ಕಾರಿನತ್ತ ನಡೆದ ದೃಶ್ಯಗಳು ವೈರಲ್ ಆಗುತ್ತಿವೆ.

ದೇವರ ಮೇಲೆ ಭಕ್ತಿ ಇರುವ ನಟ ದರ್ಶನ್ ಅವರು ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಡೆವಿಲ್ ಶೂಟಿಂಗ್‌ಗೆ ವಿದೇಶಕ್ಕೆ ತೆರಳುವ ಮುನ್ನವೇ ಅವರು ಕೋರ್ಟ್ ವಿಚಾರಣೆಗೆ ಹಾಜರಾಗಿದ್ದಾರೆ. ಅವರೊಂದಿಗೆ ಎಲ್ಲ ಅರೋಪಿಗಳು ಖುದ್ದು ಹಾಜರಾಗಲಿದ್ದಾರೆ.
ನಾಳೆ ವಿದೇಶಕ್ಕೆ ಹಾರಲಿರುವ ನಟ ದರ್ಶನ್
ಪ್ರಕರಣದಲ್ಲಿ ಹೈಕೋರ್ಟ್ ದರ್ಶನ್‌ಗೆ ಜಾಮೀನು ನೀಡುವಾಗ ಹಲವು ಷರತ್ತು ವಿಧಿಸಿತ್ತು. ಅನುಮತಿ ಇಲ್ಲದೇ ದೇಶ ತೊರೆಯುವಂತಿಲ್ಲ ಎಂದು ಹೇಳಿತ್ತು. ಅದರಂತೆ ನಟ ದರ್ಶನ್ ಅವರು, ಜುಲೈ 11 ರಿಂದ 30 ರವರೆಗೆ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿದ್ದರು. ಅವರ ಮನವಿ ಮೇರೆಗೆ 57 ಸಿಸಿಎಚ್ ಕೋರ್ಟ್ ಜುಲೈ 11ರಿಂದ 25ರವರೆಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿತ್ತು.
ಇಂದಿನ ರೇಣುಕಾಸ್ವಾಮಿ ವಿಚಾರಣೆ ಮುಗಿಸಿಕೊಂಡು ನಾಳೆ ಶುಕ್ರವಾರ (ಜುಲೈ) ಯುರೋಪ್ ಹಾಗೂ ದುಬೈಗೆ ನಟ ದರ್ಶನ್ ತೆರಳಲಿದ್ದಾರೆ. ಅಲ್ಲಿ ಡೆವಿಲ್ ಚಿತ್ರ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದ ಹಿನ್ನೆಲೆ
ನಟ ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ದರ್ಶನ್ ಮತ್ತವರ ಸಹಚರರು ಅಪಹರಿಸಿ ತಂದು ಹಲ್ಲೆ ಮಾಡಿದ್ದರು. ಆರ್‌ಆರ್‌ನಗರ ಶೆಡ್ ನಲ್ಲಿ ಮಾರಣಾಂತಿಕ ಹಲ್ಲೆಯಿಂದ ಮೃತಪಟ್ಟ ಆತನನ್ನು ರಾಜಕಾಲುವೆಗೆ ಬಿಸಾಕಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ವಿವರಿಸಲಾಗಿದೆ. ದರ್ಶನ್, ಪವಿತ್ರಾ ಸೇರಿ 17 ಮಂದಿ ಬಂಧಿಸಿದ್ದರು. ಎಲ್ಲರು ಜಾಮೀನಿನ ಮೇಲೆ ಹೊರಗಿದ್ದಾರೆ. ಸದ್ಯ ದರ್ಶನ್ ಶೂಟಿಂಗ್‌ಗೆ ವಿದೇಶಕ್ಕೆ ತೆರಳಲಿದ್ದು, ಅದಕ್ಕು ಮುನ್ನ ವಿಚಾರಣೆ ಗೆ ಹಾಜರಾಗಿದ್ದಾರೆ.












Click it and Unblock the Notifications