Darshan Thoogudeepa: ಪವಿತ್ರಾ ಗೌಡ ಮತ್ತೆ ಗರ್ಭಿಣಿ? ದರ್ಶನ್ ತೂಗುದೀಪ್ ಗೆಳತಿಗೆ ಏನಾಯ್ತು?
ಪವಿತ್ರಾ ಗೌಡ ಈಗ ಗರ್ಭಿಣಿ ಆಗಿದ್ದಾರಾ? 2ನೇ ಬಾರಿಗೆ ಪವಿತ್ರಾ ಗೌಡ ಗರ್ಭಿಣಿ ಆಗಲು ಯಾರು ಕಾರಣ? ಪವಿತ್ರಾ ಗೌಡ ಗರ್ಭಿಣಿ ಆಗಿರುವ ವಿಚಾರ ಪರಪ್ಪನ ಅಗ್ರಹಾರ ಜೈಲಿನಲ್ಲಿ ದೊಡ್ಡದಾಗಿ ಸುದ್ದಿ ಮಾಡುತ್ತಿರುವುದು ಏಕೆ? ಹೀಗೆ ಸೋಷಿಯಲ್ ಮೀಡಿಯಾ ತುಂಬಾ ಬರೀ ಪವಿತ್ರಾ ಗೌಡರ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೆ, ದರ್ಶನ್ ತೂಗುದೀಪ್ ಅವರ ಆಪ್ತ ಗೆಳತಿ ಪವಿತ್ರಾ ಗೌಡ ಗರ್ಭಿಣಿ ಆದ ಸುದ್ದಿ ಹೇಗೆ ಹೊರಬಂತು? ಎಂಬ ವಿಚಾರ ಎಲ್ಲೆಲ್ಲೂ ದೊಡ್ಡ ಸದ್ದು ಮಾಡ್ತಿದೆ. ಹಾಗಾದ್ರೆ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸುದ್ದಿಯ ಬಂಡವಾಳ ಏನು? ಮುಂದೆ ಓದಿ.
ಪವಿತ್ರಾ ಗೌಡ & ದರ್ಶನ್ ತೂಗುದೀಪ್ 10 ವರ್ಷದಿಂದ ಆತ್ಮೀಯ ಗೆಳಯ & ಗೆಳತಿ ಆಗಿದ್ದಾರೆ. ದರ್ಶನ್ ತೂಗುದೀಪ್ ಮತ್ತು ತಮ್ಮ ಸಂಬಂಧದ ಕುರಿತು, ಸ್ವತಃ ಪವಿತ್ರಾ ಗೌಡ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಕೆಲವು ದಿನಗಳ ಹಿಂದೆ ದರ್ಶನ್ ತೂಗುದೀಪ್ ಅವರು ತಾಳಿ ಕಟ್ಟಿದ ಹೆಂಡತಿ ವಿಜಯಲಕ್ಷ್ಮೀ ಹಾಗೂ ದರ್ಶನ್ ತೂಗುದೀಪ್ ಅವರ ಆತ್ಮೀಯ ಗೆಳತಿ ಪವಿತ್ರಾ ಗೌಡ ನಡುವೆ ಜಗಳ ಆಗಿತ್ತು. ಆಗಲೇ ನೋಡಿ ಸ್ಫೋಟಕ ಫೋಟೋಗಳು ಜಗತ್ತಿಗೆ ಗೊತ್ತಾಗಿ, ಸಂಚಲನ ಸೃಷ್ಟಿ ಆಗಿದ್ದು.

ದರ್ಶನ್ ತೂಗುದೀಪ್ ವಿರೋಧಿಗಳಿಂದ...
ವಿಜಯಲಕ್ಷ್ಮೀ ದರ್ಶನ್ & ಪವಿತ್ರಾ ಗೌಡ ನಡುವೆ ಜಗಳ ನಡೆದ ಸಮಯದಲ್ಲಿ ಖುದ್ದು ಪವಿತ್ರಾ ಗೌಡ ಪೋಸ್ಟ್ ಒಂದನ್ನ ಹಾಕಿ, ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಇರುವ ಸಂಬಂಧದ ಬಗ್ಗೆ ಫೋಟೋ ಹಂಚಿಕೊಂಡಿದ್ದರು. ಇಬ್ಬರೂ ಕಳೆದ 10 ವರ್ಷದಿಂದ ಆತ್ಮೀಯ ಗೆಳಯ & ಗೆಳತಿ ಎಂಬುದನ್ನ ಹೇಳಿದ್ದರು. ಹೀಗಿದ್ದಾಗ, ಇದೀಗ ಪವಿತ್ರಾ ಗೌಡ ಅವರು ಗರ್ಭಿಣಿ ಆಗಿದ್ದಾರೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಹಾಗಾದ್ರೆ ಈ ಸುದ್ದಿಯ ಅಸಲಿಯತ್ತು ಏನು? ದರ್ಶನ್ ಅವರ ವಿರುದ್ಧ ಮತ್ತು ಪವಿತ್ರಾ ಗೌಡ ವಿರುದ್ಧ ಪಿತೂರಿ ಮಾಡುತ್ತಿರುವುದು ಯಾರು?
ಪೊಲೀಸರಿಗೆ ದರ್ಶನ್ ಫ್ಯಾನ್ಸ್ ದೂರು?
ಪವಿತ್ರಾ ಗೌಡ ಗರ್ಭಿಣಿ ಆಗಿದ್ದಾರಾ? ಅಥವಾ ಪವಿತ್ರಾ ಗೌಡ ಗರ್ಭಿಣಿ ಆಗಿಲ್ವಾ? ಎಂಬ ಸುದ್ದಿ ಇನ್ನೂ ಪೊಲೀಸ್ ಮೂಲಗಳಿಂದ ಸ್ಪಷ್ಟವಾಗಿಲ್ಲ. ಆದರೆ ದರ್ಶನ್ ತೂಗುದೀಪ್ ಅವರ ಕೆಲವು ವಿರೋಧಿಗಳು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಾ ದರ್ಶನ್ ತೂಗುದೀಪ್ ಅವರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ ಎಂಬ ಆರೋಪ ದರ್ಶನ್ ಅವರ ಅಭಿಮಾನಿಗಳದ್ದು. ಸೋಷಿಯಲ್ ಮೀಡಿಯಾ ತುಂಬಾ ಪವಿತ್ರಾ ಗೌಡ ಗರ್ಭಿಣಿ ಎಂಬ ಸುಳ್ಳು ಸುದ್ದಿ ವೈರಲ್ ಆಗುತ್ತಿದ್ದು, ಈ ಬಗ್ಗೆ ದರ್ಶನ್ ಅವರ ಫ್ಯಾನ್ಸ್ ಭಾರಿ ಆಕ್ರೋಶ ಹೊರಹಾಕುತ್ತಿದ್ದಾರೆ. ಹಾಗೇ ಈ ಸುಳ್ಳುಸುದ್ದಿ ಹಬ್ಬಿಸುತ್ತಿರುವ ದರ್ಶನ್ ಅವರ ವಿರೋಧಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ದರ್ಶನ್ ಹೆಂಡತಿ & ಮಗನಿಗೆ ಮಾತು ಕೊಟ್ಟರಾ?
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಸ್ಟಾರ್ ಆಗಿ ಮೆರೆಯುತ್ತಿದ್ದ ದರ್ಶನ್ ತೂಗುದೀಪ್ ಇದೀಗ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವ ಪರಿಸ್ಥಿತಿ ಬಂದಿದೆ. ಇದಕ್ಕೆಲ್ಲ ಕಾರಣ ಪವಿತ್ರಾ ಗೌಡ ಎಂಬ ಗಂಭೀರ ಆರೋಪ ಇದೆ. ಹೀಗಿದ್ದಾಗ ಹೆಂಡತಿ & ಮಗನಿಗೆ ಈ ಬಗ್ಗೆ ಮಾತು ಕೊಟ್ಟಿದ್ದಾರಂತೆ ನಟ ದರ್ಶನ್. ಜೈಲಿಂದ ರಿಲೀಸ್ ಆಗಿ ಬಂದ ನಂತರ ಪವಿತ್ರಾ ಗೌಡ ಸಹವಾಸಕ್ಕೆ ಹೋಗಲ್ಲ ಎಂಬ ತೀರ್ಮಾನಕ್ಕೆ ಬಂದು ಪ್ರಮಾಣ ಕೂಡ ಮಾಡಿದ್ದಾರಂತೆ ದರ್ಶನ್ ತೂಗುದೀಪ್. ಹಾಗೆಯೇ ದರ್ಶನ್ ಅವರು ಅಮ್ಮ & ತಮ್ಮನ ಎದುರಲ್ಲೂ ಪವಿತ್ರಾ ಗೌಡ ಸಹವಾಸ ಬಿಡುವ ಬಗ್ಗೆ ಮಾತು ಕೊಟ್ಟಿದ್ದಾರೆ ಎಂಬ ಸುದ್ದಿ ಸಂಚಲನವನ್ನೇ ಸೃಷ್ಟಿ ಮಾಡಿದೆ.
ದರ್ಶನ್ ತಂಗಿ ಮದುವೆಗೆ ಬರ್ತಾರಾ?
ತರುಣ್ ಸುಧೀರ್ ಮತ್ತು ಸೋನಾಲ್ ಮದುವೆ ಫಿಕ್ಸ್ ಆಗಿದೆ. ಸೋನಾಲ್ ಅವರಿಗೆ ನಟ ದರ್ಶನ್ ತೂಗುದೀಪ್ ಅಣ್ಣನ ಸಮಾನ. ಅಲ್ಲದೆ ಖುದ್ದು ಸೋನಾಲ್ ಕೂಡ ದರ್ಶನ್ ಅವರನ್ನ ಅಣ್ಣಾ ಅಂತಾ ಕರೆಯುತ್ತಿದ್ದರು. ಹೀಗಾಗಿಯೇ ಈಗ ಜೈಲಿನಲ್ಲಿ ಇರುವ ನಟಿ ಸೋನಾಲ್ ಅವರ ಅಣ್ಣ ದರ್ಶನ್ ತೂಗುದೀಪ್ ಮದುವೆಗೆ ಬರ್ತಾರ? ಎಂಬ ಪ್ರಶ್ನೆ ದರ್ಶನ್ ಅಭಿಮಾನಿಗಳನ್ನ ಕಾಡ್ತಿದೆ. ಆಗಸ್ಟ್ 10 & 11ಕ್ಕೆ ಇಬ್ಬರೂ ಮದುವೆ ಆಗುತ್ತಿದ್ದಾರೆ. ಹೀಗಾಗಿ ಇಬ್ಬರ ಮದುವೆ ಸುದ್ದಿ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡುವ ಮುನ್ಸೂಚನೆ ನೀಡಿದೆ.
ದರ್ಶನ್ & ಜೈಲು ಸಿಬ್ಬಂದಿ ಕಿತ್ತಾಟ?
ಪರಪ್ಪನ ಅಗ್ರಹಾರದ ವಿಐಪಿ ಸೆಲ್‌ನಲ್ಲಿ ನಟ ದರ್ಶನ್ ತೂಗುದೀಪ್ ಅವರು ಇದ್ದಾರೆ. ಈ ರೀತಿ ವಿಐಪಿ ಸೆಲ್ ಅಂದ್ರೆ ಪ್ರಮುಖ ವ್ಯಕ್ತಿಗಳ ಜೈಲಿನ ಕೋಣೆಗಳ ಬಳಿ ಯಾವುದೇ ಖೈದಿ & ವ್ಯಕ್ತಿಗಳನ್ನ ಸುಳಿಯಲು ಕೂಡ ಬಿಡುವುದಿಲ್ಲ. ಆದರೆ ನಟ ದರ್ಶನ್ ಅವರು ಮಾತ್ರ ಇಲ್ಲಿ ಕೊಲೆ ಆರೋಪಿ ಆಗಿ ಪರಪ್ಪನ ಅಗ್ರಹಾರದ ವಿಐಪಿ ಸೆಲ್‌ನಲ್ಲಿ ಇದ್ದರೂ, ಜೈಲಿನ ಕೋಣೆ ಬಿಟ್ಟು ಹೊರಬಂದು ಓಡಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ, ದರ್ಶನ್ ಅವರಿಗೆ ಈ ಬಗ್ಗೆ ಬುದ್ಧಿ ಹೇಳಲು ಪರಪ್ಪನ ಅಗ್ರಹಾರದ ಜೈಲು ಸಿಬ್ಬಂದಿ ಮುಂದೆ ಬಂದರೆ ದರ್ಶನ್ ಏನ್ ಹೇಳುತ್ತಿದ್ದಾರಂತೆ ಗೊತ್ತಾ?
ದರ್ಶನ್ ಫ್ಯಾನ್ಸ್ vs ಧ್ರುವ ಸರ್ಜಾ!
ದರ್ಶನ್ ತೂಗುದೀಪ್ ಅವರು ಜೈಲಿಂದ ರಿಲೀಸ್ ಆಗಿ ಹೊರಗೆ ಬರುವವರೆಗು ಕನ್ನಡದ ಬೇರೆ ಯಾವುದೇ ಹೀರೋಗಳ ಸಿನಿಮಾ ನೋಡಬಾರದು ಎಂದು ಆಗ್ರಹಿಸುತ್ತಿದ್ದಾರೆ ದರ್ಶನ್ ಫ್ಯಾನ್ಸ್. ಹೀಗಿದ್ದಾಗಲೇ, ಧ್ರುವ ಸರ್ಜಾ ಅವರ 'ಮಾರ್ಟಿನ್' ಸಿನ್ಮಾ ರಿಲೀಸ್‌ಗೆ ರೆಡಿಯಾಗಿದೆ. ಅದ್ರಲ್ಲೂ 'ಮಾರ್ಟಿನ್' ಟ್ರೇಲರ್ ರಿಲೀಸ್ ಆಗಿದ್ದು, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಏನು ಹೇಳ್ತಿದ್ದಾರೆ ಗೊತ್ತಾ? ಮಾರ್ಟಿನ್ ಟ್ರೇಲರ್ ಬಗ್ಗೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ, ಕಮೆಂಟ್ ಏನು?? ಮುಂದೆ ಓದಿ.
ಫೈಟಿಂಗ್ ಬಲು ಜೋರು ಗುರೂ!
'ಆ್ಯಕ್ಷನ್ ಪ್ರಿನ್ಸ್' ಎಂಬ ಬಿರುದು ಪಡೆದ ಧ್ರುವ ಸರ್ಜಾರ ಬಹು ನಿರೀಕ್ಷಿತ ಸಿನಿಮಾ ಮಾರ್ಟಿನ್. ಈ ಕಾರಣಕ್ಕೆ 'ಮಾರ್ಟಿನ್' ಸಿನಿಮಾ ನೋಡಲು ಕೋಟ್ಯಂತರ ಫ್ಯಾನ್ಸ್ ಹಾಗೂ ಕನ್ನಡಿಗರು ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಧ್ರುವ ಸರ್ಜಾ ಅವರ ಸಿನಿಮಾ 'ಮಾರ್ಟಿನ್' ಟ್ರೇಲರ್ ನೋಡಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರ ಜತೆಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ 'ಮಾರ್ಟಿನ್' ಟ್ರೇಲರ್ ಅತ್ಯಂತ ಕೆಟ್ಟ ಟ್ರೇಲರ್ ಅಂತಾ ಆರೋಪ ಮಾಡುತ್ತಿದ್ದಾರೆ. ಇದು ದರ್ಶನ್ ಫ್ಯಾನ್ಸ್ vs ಧ್ರುವ ಸರ್ಜಾ ಎಂಬ ರೀತಿ ವಾತಾವರಣ ಸೃಷ್ಟಿಸಿದೆ. ಅಲ್ದೆ, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಜಗಳ ಶುರುವಾಗುವ ಮುನ್ಸೂಚನೆ ನೀಡುತ್ತಿದೆ.












Click it and Unblock the Notifications