Darshan Thoogudeepa: ದರ್ಶನ್ ತೂಗುದೀಪ್ & ಅ‘ಪವಿತ್ರ’ ಸಂಬಂಧಕ್ಕೆ ಎಳ್ಳುನೀರು!

ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇದೀಗ ಜೈಲು ಸೇರಿ ಪರದಾಡುವ ಪರಿಸ್ಥಿತಿ ಬಂದಿದೆ. ಪವಿತ್ರಾ ಗೌಡಗೆ ಕೆಟ್ಟದಾಗಿ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಕಾರಣ ರೇಣುಕಾಸ್ವಾಮಿ ಕೊಲೆ ಮಾಡಿದ್ದಾರೆ ದರ್ಶನ್ ತೂಗುದೀಪ್ & ಸ್ನೇಹಿತರು ಎಂಬ ಆರೋಪ ಇದೆ. ಹೀಗಿದ್ದಾಗ ಇಷ್ಟೆಲ್ಲಾ ಘಟನೆಗೆ ಕಾರಣವಾದ ಪವಿತ್ರಾ ಗೌಡ ಜೊತೆ 'ಪವಿತ್ರ' ಸಂಬಂಧ ಕಡಿದುಕೊಳ್ಳಲು ದರ್ಶನ್ ಮುಂದಾಗಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಹಾಗಾದ್ರೆ ದರ್ಶನ್ & ಪವಿತ್ರಾ ಗೌಡ ಜಗಳ ಆಡಿದ್ರಾ? ಬನ್ನಿ ಮುಂದೆ ಓದೋಣ.

ದರ್ಶನ್ ತೂಗುದೀಪ್ & ವಿಜಯಲಕ್ಷ್ಮೀ ದರ್ಶನ್ ಲವ್ ಮಾಡಿ ಮದುವೆ ಆಗಿದ್ದರು. ಆದರೆ ಇವರ ಬಾಳಲ್ಲಿ ಗಲಾಟೆ ಆಗಿ ಇಬ್ಬರು ದೂರ ದೂರ ಇದ್ದ ಸಮಯದಲ್ಲೇ ಪವಿತ್ರಾ ಗೌಡಗೆ ದರ್ಶನ್ ತೂಗುದೀಪ್ ಹತ್ತಿರ ಆಗಿದ್ದರು. ಅಲ್ಲದೆ, ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ತುಂಬಾ ಆತ್ಮೀಯ ಸಂಬಂಧ ಇದೆ ಎಂಬ ಆರೋಪ ಇದೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಇದೀಗ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಲು ಪವಿತ್ರಾ ಗೌಡ ಕಾರಣ ಎಂಬ ಗಂಭೀರ ಆರೋಪ ಕೂಡ ಇದೆ. ಈ ಕಾರಣಕ್ಕೆ ಅ'ಪವಿತ್ರ' ಸಂಬಂಧಕ್ಕೆ ಎಳ್ಳುನೀರು ಬಿಡಲು ನಟ ದರ್ಶನ್ ಮುಂದಾಗಿದ್ದಾರಂತೆ!

Darshan Thoogudeepa And Pavithra Gowda Big News To The Fans

ದರ್ಶನ್ ಸ್ನೇಹಿತರ ಜೊತೆ ಚರ್ಚೆ!

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ತೂಗುದೀಪ್ & ಕೊಲೆ ಆರೋಪಿಗಳು ಒಟ್ಟಾಗಿದ್ದು ತುಂಬಾ ನೋವು ತಿನ್ನುತ್ತಿದ್ದಾರೆ. ಅಲ್ಲದೆ ಕೋಪದ ಕೈಗೆ ಬುದ್ಧಿ ಕೊಟ್ಟು ತಪ್ಪು ಮಾಡಿದ್ವಾ? ಎಂಬ ಬಗ್ಗೆ ಕೂಡ ಚಿಂತನೆ ನಡೆಸುತ್ತಿದ್ದಾರಂತೆ. ಇದೇ ವೇಳೆ ಹಲವರ ಎದುರು ನಟ ದರ್ಶನ್ ಅವರು ಪವಿತ್ರಾ ಗೌಡ ಸಹವಾಸ ಬೇಡ ಅಂತಾ ಹೇಳಿದ್ದಾರೆ, ಎಂಬ ಸ್ಫೋಟಕ ಸುದ್ದಿಯು ಓಡಾಡುತ್ತಿದೆ. ಹಾಗಾದ್ರೆ ನಟ ದರ್ಶನ್ ತೂಗುದೀಪ್ ಹೀಗೆ ದಿಢೀರ್ ಪವಿತ್ರಾ ಗೌಡ ಸಹವಾಸ ಬಿಡಲು ಮುಂದಾಗಿರುವುದು ಏಕೆ?

ದರ್ಶನ್ ಹೆಂಡತಿ & ಮಗನಿಗೆ ಮಾತು ಕೊಟ್ಟರಾ?

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಸ್ಟಾರ್ ಆಗಿ ಮೆರೆಯುತ್ತಿದ್ದ ದರ್ಶನ್ ತೂಗುದೀಪ್ ಇದೀಗ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವ ಪರಿಸ್ಥಿತಿ ಬಂದಿದೆ. ಇದಕ್ಕೆಲ್ಲ ಕಾರಣ ಪವಿತ್ರಾ ಗೌಡ ಎಂಬ ಗಂಭೀರ ಆರೋಪ ಇದೆ. ಹೀಗಿದ್ದಾಗ ಹೆಂಡತಿ & ಮಗನಿಗೆ ಈ ಬಗ್ಗೆ ಮಾತು ಕೊಟ್ಟಿದ್ದಾರಂತೆ ನಟ ದರ್ಶನ್. ಜೈಲಿಂದ ರಿಲೀಸ್ ಆಗಿ ಬಂದ ನಂತರ ಪವಿತ್ರಾ ಗೌಡ ಸಹವಾಸಕ್ಕೆ ಹೋಗಲ್ಲ ಎಂಬ ತೀರ್ಮಾನಕ್ಕೆ ಬಂದು ಪ್ರಮಾಣ ಕೂಡ ಮಾಡಿದ್ದಾರಂತೆ ದರ್ಶನ್ ತೂಗುದೀಪ್. ಹಾಗೆಯೇ ದರ್ಶನ್ ಅವರು ಅಮ್ಮ & ತಮ್ಮನ ಎದುರಲ್ಲೂ ಪವಿತ್ರಾ ಗೌಡ ಸಹವಾಸ ಬಿಡುವ ಬಗ್ಗೆ ಮಾತು ಕೊಟ್ಟಿದ್ದಾರೆ ಎಂಬ ಸುದ್ದಿ ಸಂಚಲನವನ್ನೇ ಸೃಷ್ಟಿ ಮಾಡಿದೆ.

ದರ್ಶನ್ ಫ್ಯಾನ್ಸ್ vs ಧ್ರುವ ಸರ್ಜಾ!

ದರ್ಶನ್ ತೂಗುದೀಪ್ ಅವರು ಜೈಲಿಂದ ರಿಲೀಸ್ ಆಗಿ ಹೊರಗೆ ಬರುವವರೆಗು ಕನ್ನಡದ ಬೇರೆ ಯಾವುದೇ ಹೀರೋಗಳ ಸಿನಿಮಾ ನೋಡಬಾರದು ಎಂದು ಆಗ್ರಹಿಸುತ್ತಿದ್ದಾರೆ ದರ್ಶನ್ ಫ್ಯಾನ್ಸ್. ಹೀಗಿದ್ದಾಗಲೇ, ಧ್ರುವ ಸರ್ಜಾ ಅವರ 'ಮಾರ್ಟಿನ್' ಸಿನ್ಮಾ ರಿಲೀಸ್‌ಗೆ ರೆಡಿಯಾಗಿದೆ. ಅದ್ರಲ್ಲೂ 'ಮಾರ್ಟಿನ್' ಟ್ರೇಲರ್ ರಿಲೀಸ್ ಆಗಿದ್ದು, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಏನು ಹೇಳ್ತಿದ್ದಾರೆ ಗೊತ್ತಾ? ಮಾರ್ಟಿನ್ ಟ್ರೇಲರ್ ಬಗ್ಗೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ, ಕಮೆಂಟ್ ಏನು?? ಮುಂದೆ ಓದಿ.

ಫೈಟಿಂಗ್ ಬಲು ಜೋರು ಗುರೂ!

'ಆ್ಯಕ್ಷನ್ ಪ್ರಿನ್ಸ್' ಎಂಬ ಬಿರುದು ಪಡೆದ ಧ್ರುವ ಸರ್ಜಾರ ಬಹು ನಿರೀಕ್ಷಿತ ಸಿನಿಮಾ ಮಾರ್ಟಿನ್. ಈ ಕಾರಣಕ್ಕೆ 'ಮಾರ್ಟಿನ್' ಸಿನಿಮಾ ನೋಡಲು ಕೋಟ್ಯಂತರ ಫ್ಯಾನ್ಸ್ ಹಾಗೂ ಕನ್ನಡಿಗರು ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಧ್ರುವ ಸರ್ಜಾ ಅವರ ಸಿನಿಮಾ 'ಮಾರ್ಟಿನ್' ಟ್ರೇಲರ್ ನೋಡಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರ ಜತೆಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ 'ಮಾರ್ಟಿನ್' ಟ್ರೇಲರ್ ಅತ್ಯಂತ ಕೆಟ್ಟ ಟ್ರೇಲರ್ ಅಂತಾ ಆರೋಪ ಮಾಡುತ್ತಿದ್ದಾರೆ. ಇದು ದರ್ಶನ್ ಫ್ಯಾನ್ಸ್ vs ಧ್ರುವ ಸರ್ಜಾ ಎಂಬ ರೀತಿ ವಾತಾವರಣ ಸೃಷ್ಟಿಸಿದೆ. ಅಲ್ದೆ, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಜಗಳ ಶುರುವಾಗುವ ಮುನ್ಸೂಚನೆ ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+