Darshan Thoogudeepa: ಡಾ. ರಾಜ್‌ಕುಮಾರ್ ಫ್ಯಾಮಿಲಿಯನ್ನು ಬಳಸಿಕೊಂಡರಾ ದರ್ಶನ್ ತೂಗುದೀಪ್? ಲಾಯರ್ ಜಗದೀಶ್....
ಪುನೀತ್ ರಾಜ್‌ಕುಮಾರ್ ಬಗ್ಗೆ, ಡಾ. ರಾಜ್‌ಕುಮಾರ್ ಕುಟುಂಬದ ಬಗ್ಗೆ ಪದೇ ಪದೇ ದರ್ಶನ್ ತೂಗುದೀಪ್ ಮಾತನಾಡುತ್ತಾರೆ. ದರ್ಶನ್ ತೂಗುದೀಪ್ ಹಿಂಗೆ ಮಾತನಾಡ್ತಿದ್ರೆ ಪರಿಸ್ಥಿತಿ ಸರಿ ಇರಲ್ಲ ಅಂತಾ ಡಾ. ರಾಜ್‌ಕುಮಾರ್ ಅಭಿಮಾನಿಗಳು ಹಲವು ಬಾರಿ, ದರ್ಶನ್ ತೂಗುದೀಪ್‌ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಸಾವಿನ ಬಗ್ಗೆ ಮಾತನಾಡಿದ್ದ ದರ್ಶನ್ ತೂಗುದೀಪ್ ವಿರುದ್ಧ ತೀವ್ರವಾಗಿ ಆಕ್ರೋಶ ಮೊಳಗಿತ್ತು. ಇದೇ ಸಮಯದಲ್ಲೇ, ಡಾ. ರಾಜ್‌ಕುಮಾರ್ ಫ್ಯಾಮಿಲಿಯನ್ನು ಬಳಸಿಕೊಂಡರಾ ದರ್ಶನ್ ತೂಗುದೀಪ್? ಲಾಯರ್ ಜಗದೀಶ್....
ಡಾ. ರಾಜ್‌ಕುಮಾರ್ ಕುಟುಂಬ ಅಂದ್ರೆ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲೇ ಒಂದು ದೊಡ್ಡ ಗೌರವ ಇದೆ. ಭಾರತೀಯ ಸಿನಿಮಾ ರಂಗದ ದೊಡ್ಡ ದೊಡ್ಡ ಸ್ಟಾರ್ಸ್ ಬೆಂಗಳೂರಿಗೆ ಬಂದ್ರೆ ಅವರು ಡಾ. ರಾಜ್‌ಕುಮಾರ್ ಅವರ ಮನೆಗೆ ಬಂದು ಭೇಟಿ ನೀಡದೆ ವಾಪಸ್ ಹೋಗಲ್ಲ. ಸಿನಿಮಾ ರಂಗದಲ್ಲಿ ಸಾವಿರಾರು ಜನರನ್ನು ಬೆಳೆಸಿ, ಲಕ್ಷಾಂತರ ಜನರಿಗೆ ಜೀವನ ನೀಡಿ, ಅನ್ನ & ಶಿಕ್ಷಣ ನೀಡಿದ ಹೆಮ್ಮೆ ಡಾ. ರಾಜ್‌ಕುಮಾರ್ ಕುಟುಂಬದ್ದು. ಆದ್ರೆ ದರ್ಶನ್ ತೂಗುದೀಪ್...

ದರ್ಶನ್ ತೂಗುದೀಪ್ ಅವರ ತಂದೆ, ಲೆಜೆಂಡ್ ತೂಗುದೀಪ ಶ್ರೀನಿವಾಸ್ ಅವರಿಗೆ ಕೂಡ ಈ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸಾಲು ಸಾಲು ಅವಕಾಶ ಸಿಗಲು ದೊಡ್ಮನೆ ಅಂದ್ರೆ ಡಾ. ರಾಜ್ ಕುಮಾರ್ ಅವರ ಕುಟುಂಬವೇ ಕಾರಣ. ಅಂದಹಾಗೆ ಈ ಮಾತನ್ನು ಸ್ವತಃ ಹಿರಿಯ ನಟ & ದಿವಂಗತ ತೂಗುದೀಪ ಶ್ರೀನಿವಾಸ್ ಅವರ ಧರ್ಮಪತ್ನಿ ಮೀನಾ ತೂಗುದೀಪ್ ಅವರೇ ಹಲವು ಬಾರಿ ಪಸ್ತಾಪ ಮಾಡಿದ್ದಾರೆ. ಆದರೆ ನಟ ದರ್ಶನ್ ತೂಗುದೀಪ್ ಮಾತ್ರ ಡಾ. ರಾಜ್‌ಕುಮಾರ್ ಕುಟುಂಬವನ್ನು.... ಎಂಬ ಆರೋಪ...
ಡಾ. ರಾಜ್‌ಕುಮಾರ್ ಫ್ಯಾಮಿಲಿ ಬಗ್ಗೆ ದರ್ಶನ್...
ಹೌದು, ದರ್ಶನ್ ತೂಗುದೀಪ್ ಹಿಂದೆ ಡಾ. ರಾಜ್‌ಕುಮಾರ್ ಫ್ಯಾಮಿಲಿ ಬಗ್ಗೆ ಹೇಗೆಲ್ಲಾ ಮಾತು ಆಡಿದ್ದರು? ಎಂಬ ಬಗ್ಗೆ ಕೂಡ ಲಾಯರ್ ಜಗದೀಶ್ ಈಗ ಪ್ರಸ್ತಾಪ ಮಾಡಿದ್ದಾರೆ. 'ದರ್ಶನ್ ಒಬ್ಬ ಲುಚ್ಚ ಮೈಂಡ್ ಇರೋನು ಅಂತಾ ನನಗೆ ಚನ್ನಾಗಿ ಗೊತ್ತಿದೆ. ಇವನು ಏನು ಕಮ್ಮಿ ಆಟ ಆಡಿದ್ದಾನಾ ದರ್ಶನ್? ಡಾ. ರಾಜ್‌ಕುಮಾರ್ ಅವರ ಫ್ಯಾಮಿಲಿಯನ್ನ ಎಷ್ಟೆಷ್ಟು ಬೇಕೋ ಅಷ್ಟೆಲ್ಲಾ ಹೀಯಾಳಿಸಿದ್ದಾನೆ ಇವನು...'
'ನಾವೆಲ್ಲಾ ಆಂಧ್ರ ನಾಯ್ಡು, ನಾವೆಲ್ಲಾ ರೌಡಿಸಂ..'
'ಅಂದ್ರೆ ಇವನು ಎಂಟ್ರಿ ತಗೊಳೋದಕ್ಕೆ ಕನ್ನಡ ಇಂಡಿಸ್ಟ್ರಿಗೆ ಎಂಟ್ರಿ ತಗೊಳೋದಕ್ಕೆ ಅಣ್ಣಾವ್ರ ಫ್ಯಾಮಿಲಿಯನ್ನ ಬಾಯಿಗೆ ಬಂದಂತೆ ಮಾತನಾಡಿದ್ದಾನೆ ಇವನು. ಆವತ್ತು ಇವನ ಬಾಯಿ ಮೇಲೆ ಹೆಜ್ಜೆ ಇಡಬೇಕಿತ್ತು ತಾನೆ? ಏನೂ ಬೇಡ ಆ ಪುನೀತು ಇವನ ಬಗ್ಗೆ ದರ್ಶನ್ ಬಗ್ಗೆ ಏನೂ ಮಾತನಾಡಲ್ಲ. ಇವನು ಒಂಥರ ಹೆಂಗೆ ಅಂದ್ರೆ, ಹೇ ನಾವೆಲ್ಲಾ ಆಂಧ್ರ ನಾಯ್ಡು, ನಾವೆಲ್ಲಾ ರೌಡಿಸಂ ಹಂಗೆ. ಮುನಿ ಅವ್ನೆ ಮುನಿ ಅವ್ರ ಅಣ್ಣ ರೌಡಿ ಕೊರಂಗು ಅವ್ನೆ... ಇಲ್ಲಿ ಒಂದು ಗ್ಯಾಂಗ್ ಐತೆ..' ಹೀಗೆ ಲಾಯರ್ ಜಗದೀಶ್ ಅವರು ದರ್ಶನ್ ತೂಗುದೀಪ್ ವಿರುದ್ಧ ಫುಲ್ ಗರಂ ಆಗಿ ವಿಡಿಯೋ ಒಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.












Click it and Unblock the Notifications