Actor Darshan: ಇಂದು ಕೋರ್ಟ್ ವಿಚಾರಣೆಗೆ ಗೈರಾದ ಡಿ-ಬಾಸ್
ಬೆಂಗಳೂರು ಏಪ್ರಿಲ್ 8: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ಇವತ್ತು ಕೋರ್ಟ್‌ಗೆ ಹಾಜರಾಗಬೇಕಿತ್ತು. ಸಿಸಿಎಸ್ ಕೋರ್ಟ್‌ನಲ್ಲಿ ದರ್ಶನ್ ಸೇರಿ ಒಟ್ಟು 17 ಜನ ಆರೋಪಿಗಳು ವಿಚಾರಣೆಗೆ ಇಂದು ಹಾಜರಾಗಬೇಕಿತ್ತು. ಆದರೆ ದರ್ಶನ್ ಕೋರ್ಟ್‌ಗೆ ಹಾಜರಾಗುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೌದು ಕೋರ್ಟ್ ಸೂಚನೆ ಮೇರೆಗೆ ಇಂದು ದರ್ಶನ್ ಹಾಗೂ 17 ಜನ ಆರೋಪಿಗಳು ವಿಜಾರಣೆಗೆ ಹಾಜರಾಗಬೇಕಾಗಿತ್ತು. ಆದರೆ ಬೆನ್ನು ನೋವಿನ ಕಾರಣ ನೀಡಿ ದರ್ಶನ್ ಇಂದು ಕೋರ್ಟ್‌ಗೆ ಗೈರಾಗಿದ್ದಾರೆ. ಇದರಿಂದ ದರ್ಶನ್ ಅವರಿಗೆ ಏನಾಗಿದೆ ಎನ್ನುವ ಕುತೂಹಲ ಮೂಡಿದೆ. ಇವತ್ತು ದರ್ಶನ್ ಅವರನ್ನು ಹೊರತುಪಡಿಸಿ ನಟಿ ಪವಿತ್ರಾ ಗೌಡ ಕೋರ್ಟ್‌ಗೆ ಹಾಜರಾಗಿದ್ದಾರೆ. ಜೊತೆಗೆ ಉಳಿದ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಆದರೆ ಕೋರ್ಟ್ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಿದೆ.

ಇತ್ತೀಚೆಗೆ ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ದರ್ಶನ್ ತುಂಬಾ ಬ್ಯೂಸಿ ಆಗಿದ್ದಾರೆ. ಶೂಟಿಂಗ್ ಪ್ರಯುಕ್ತ ದೇಶದಾದ್ಯಂತ ಸುತ್ತುವ ಅನುಮತಿಯನ್ನು ಪಡೆದಿರುವ ದಾಸ ಕೆಲ ದಿನಗಳ ಹಿಂದೆಯಷ್ಟೇ ರಾಜಸ್ಥಾನದ ಜೈಪುರಕ್ಕೆ ಹೋಗಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದರು. ಜೊತೆಗೆ ಬೆಂಗಳೂರು, ಮೈಸೂರಿನಲ್ಲೂ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ದರ್ಶನ್ ಭಾಗಿಯಾಗುತ್ತಿದ್ದಾರೆ.
ಶೂಟಿಂಗ್ ಸಮಯದಲ್ಲಿ ದರ್ಶನ್ ಅರ್ಧಕ್ಕೆ ಶೂಟಿಂಗ್ ಸಿಲ್ಲಿಸಿ ಹಿಂದಿರುಗಿದ ಸುದ್ದಿಗಳಿಲ್ಲ. ಆದರೆ ಕೋರ್ಟ್‌ಗೆ ಹಾಜರಾಗಲು ದರ್ಶನ್ ಬೆನ್ನು ನೋವಿನ ಕಾರಣ ನೀಡಿದ್ದಾರೆ. ದರ್ಶನ್‌ಗೆ ಬೆನ್ನು ನೋವು ಇದ್ದಿದ್ದರೆ ಸಿನಿಮಾ ಶೂಟಿಂಗ್‌ಗೆ ಹೇಗೆ ಹಾಜರಾದರೂ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ. ಶೂಟಿಂಗ್‌ಗಾಗಿ ಬೆಂಗಳೂರು, ಮೈಸೂರು, ರಾಜಸ್ಥಾನ ಸುತ್ತುತ್ತಿರುವ ದರ್ಶನ್‌ಗೆ ಕೋರ್ಟ್‌ಗೆ ಹಾಜರಾಗಲು ಬೆನ್ನು ನೋವು ಕಾಣಿಸಿಕೊಂಡಿತಾ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಕಾಡತೊಡಗಿದೆ.
ದರ್ಶನ್‌ಗೆ ಜಡ್ಜ್ ಕ್ಲಾಸ್
ಇನ್ನೂ ದರ್ಶನ್ ಗೈರಿಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ವಿಚಾರಣೆಗೆ ಹಾಜರಾಗದೇ ಇದ್ದಿದ್ದರಿಂದ ದರ್ಶನ್‌ಗೆ ಜಡ್ಜ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರತೀ ವಿಚಾರಣೆಗ ಹಾಜರಾಗಲೇ ಬೇಕು ಎಂದು ಜಡ್ಜ್ ಎಚ್ಚರಿಕೆ ಕೊಟ್ಟಿದ್ದಾರೆ.












Click it and Unblock the Notifications