Darshan Gang: ದರ್ಶನ್‌ ಗ್ಯಾಂಗ್‌ನ 4ನೇ ಆರೋಪಿ ತಾಯಿ ನಿಧನ

ಚಿತ್ರದುರ್ಗ ಜುಲೈ 20: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಅವರ ಗ್ಯಾಂಗ್ ಕೂಡ ಜೈಲುವಾಸ ಅನುಭವಿಸುತ್ತಿದೆ. ದರ್ಶನ್‌ ಗ್ಯಾಂಗ್‌ನ ನಾಲ್ಕನೇ ಆರೋಪಿಯ ತಾಯಿ ಅನಾರೋಗ್ಯದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ದರ್ಶನ್ ಗ್ಯಾಂಗ್‌ನ ಆರೋಪಿ ರಾಘವೇಂದ್ರ ಅಲಿಯಾಸ್ ರಘು ತಾಯಿ ಮಂಜುಳಮ್ಮ (75) ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ರಾಘವೇಂದ್ರ ಅವರ ತಾಯಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಮುಂಜಾನೆ ಐದು ಗಂಟೆ ಸುಮಾರಿಗೆ ಚಿತ್ರದುರ್ಗದ ಕೋಳಿಬುರುಜನಹಟ್ಟಿ ಮನೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

Darshan News 4th accused mother of Darshan gang passed away

ಬಂಧನಕ್ಕೂ ಮುಂಚೆ ರಘು ಪ್ರೇಮ ವಿವಾಹವಾಗಿ ಮನೆಯಿಂದ ಹೊರಗಿದ್ದರು. ಅವರ ಸಹೋದರ ಮುರುಳಿ ಮದುವೆಯಾಗದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದರು. ರಘು ಆಗಾಗಿ ಆಗಮಿಸಿ ತಾಯಿಯ ಆರೋಗ್ಯ ವಿಚಾರಿಸುತ್ತಿದ್ದರು. ಆದರೀಗ ಜೈಲು ಸೇರಿದಾಗಿನಿಂದ ರಘು ತಾಯಿಯನ್ನು ನೋಡಲಾಗಿರಲಿಲ್ಲ.

ತಾಯಿ ಮಂಜುಳಮ್ಮ ಮಗ ರಘು ಅವರ ಕೊನೆಯ ಮುಖ ನೋಡದೆ ಕೊನೆಯುಸಿರೆಳೆದಿದ್ದಾರೆ. ರಾಘವೇಂದ್ರ ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷನಾಗಿದ್ದಾರೆ. ಅವರು ರೇಣುಕಾಸ್ವಾಮಿಯನ್ನು ಅಪಹರಣ ಮಾಡಿದ ಆರೋಪದ ಮೇಲೆ ಅವರನ್ನು ಪೊಲೀಸರು ಬಂಧಿಸಿದ್ದರು.

ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17 ಜನರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಈ ಪೈಕಿ ನಾಲ್ಕನೇ ಆರೋಪಿ ರಾಘವೇಂದ್ರ ಕೂಡ ಒಬ್ಬರಾಗಿದ್ದಾರೆ. ಆಗಸ್ಟ್‌ ಒಂದರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.

ಇನ್ನು ಮೃತಪಟ್ಟಿರುವ ತಾಯಿಯ ಅಂತ್ಯಸಂಸ್ಕಾರ ಇಂದು ನಡೆಯಲಿದೆ. ಆರೋಪಿ ರಘು ಅವರನ್ನು ತಾಯಿಯ ಅಂತ್ಯಸಂಸ್ಕಾರಕ್ಕೆ ಕೊರೆದು ಕೊಂಡು ಬರ್ತಾರಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+