ರೌಡಿಗಳ ಜೊತೆ ಖಾರ ಬನ್ ತಿಂದ ಕೇಸ್: ಪ್ರಥಮ್‌ಗೆ "ಡಿ-ಕಂಪನಿ" ಕೌಂಟರ್
ಬಿಗ್‌ಬಾಸ್ ವಿನ್ನರ್ ಹಾಗೂ ನಟ ಪ್ರಥಮ್ ಅವರಿಗೆ ರೌಡಿಗಳ ಗುಂಪೊಂದು ಜೀವ ಬೆದರಿಕೆ ಹಾಕಿರುವ ಘಟನೆ ಇತ್ತೀಚೆಗೆ ವರದಿಯಾಗಿತ್ತು. ನಟ ದರ್ಶನ್ ಅವರ ಅಭಿಮಾನಿಗಳು ಈ ಕೃತ್ಯ ಎಸಗಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಬಳಿಕ ಪ್ರಥಮ್ ಕೂಡ ನೇರವಾಗಿ ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟಿದ್ದರು. ಇದೀಗ ದರ್ಶನ್ ಅವರ ಅಭಿಮಾನಿ ಸಂಘವಾದ "ಡಿ-ಕಂಪನಿ" ಫ್ಯಾನ್ಸ್ ಅಸೋಸಿಯೇಷನ್ ಪ್ರಥಮ್‌ಗೆ ತಿರುಗೇಟು ನೀಡಿದೆ. ಪ್ರಥಮ್ ಮೇಲೆ ಹಲ್ಲೆ ಪ್ರಕರಣದ ಸತ್ಯ ಹೊರಬಂದಿದ್ದು, ರೌಡಿಗಳ ಜೊತೆ ಹೋಗಿ ಅವರ ಕಾರ್ಯಕ್ರಮದಲ್ಲಿ ಅವರ ಹತ್ತಿರನೇ ತಿಂದು, ಅವರಿಗೆ ರೇಗಿಸಿ ಬ್ರೆಡ್ ಚಿಪ್ಸ್ ಕೇಳಿ, ಖಾರ ಬನ್ ತಿಂದ ಪ್ರಕರಣವಿದು ಎಂದು ಲೇವಡಿ ಮಾಡಿದೆ.
́́'ನಮ್ಮ ಪ್ರಶ್ನೆ ದರ್ಶನ್ ಅವರು ಜೈಲಲ್ಲಿ ಇದ್ದಾಗ ಅಭಿಮಾನಿಗಳಿಗೆ ಪ್ರಚೋದನೆ ಹೇಳಿಕೆ ನೀಡಿ, ಕಾಮೆಂಟ್ ಮಾಡಿದವರ ವಿರುದ್ಧ ಸಾಲು ಸಾಲು ದೂರು ದಾಖಲಿಸಿದ ಕುತಂತ್ರಿಗೆ? ಹಲ್ಲೆ ನಡೆದರೂ ದೂರು ನೀಡಿದಷ್ಟು ಒಳ್ಳೆ ಮನಸ್ಸು ಇದೆಯಾ? ಎಂದು ಪ್ರಥಮ್‌ಗೆ ಕೇಳಿದೆ. ಕಾರಣ ಇಷ್ಟೇ ಅಂದು ಪೊಲೀಸ್ ದೂರು ನೀಡಲು ವೈದ್ಯರ ವರದಿ ಬೇಕು. ಸರ್ಕಾರಿ ಆಸ್ಪತ್ರೆಗೆ ಹೋದರೆ ವೈದ್ಯರ ಪರೀಕ್ಷೆಯಲ್ಲಿ ಕುಡಿದಿರುವುದು ಬೆಳಕಿಗೆ ಬರುತ್ತದೆ. ಕುಡುಕರ ಗಲಾಟೆ ಎಂದು ವರದಿ ನೀಡುತ್ತಾರೆ ಎರಡು ಮೂರು ದಿನ ಕಳೆದರೆ ಸತ್ಯ ಯಾರಿಗೂ ತಿಳಿಯುವುದಿಲ್ಲ. ಇದು ನಿಮ್ಮ ಗೇಮ್ ಹಾಗೂ ನಿಮಗೆ ಪ್ರೋತ್ಸಾಹ ಧನ ಸಹಾಯ ಮಾಡುವವರ ಹುನ್ನಾರ. ಹೇಗಿದ್ರು ನೀವು ನಿರ್ದೇಶಕರು ಅಲ್ಲವೇ ಸ್ವಾಮಿ ಕಥೆ ಚಿತ್ರಕಥೆ ಸಂಭಾಷಣೆ ಚೆನ್ನಾಗಿ ರಚನೆ ಮಾಡಿದ್ದೀರಿ' ಎಂದು ತಿರುಗೇಟು ನೀಡಿದೆ.

'ರೌಡಿಗಳ ಕಾರ್ಯಕ್ರಮದಲ್ಲಿ ನಿಮಗೇನು ಕೆಲಸ?'
'ರೌಡಿಗಳ ಕಾರ್ಯಕ್ರಮದಲ್ಲಿ ನಿಮಗೆ ಏನು ಕೆಲಸ? ನೀವು ಸಭ್ಯರು ತಾನೆ ರೌಡಿಗಳು ಅಂತ ತಿಳಿದ ಕೂಡಲೇ ಕಾರು ಹತ್ತಿ ಹೋಗಬೇಕಿತ್ತು ಅವರ ಜೊತೆ ಸಮಯ ಕಳೆದು ಮತ್ತಿನಲ್ಲಿ ಮಾಡಿಕೊಂಡ ಎಡ್ಡವಟಿಗೆ ಬಾಸ್ ಹೆಸರು ತಳುಕು ಯಾಕೆ? ದರ್ಶನ್ ಅವರ ಅಧಿಕೃತ ಸಂಘಟನೆಗಳು ನೂರಾರಿವೆ. ರಿಜಿಸ್ಟರ್ ಪಟ್ಟಿ ನಮ್ಮತ್ರ ಇದೆ. ನಮ್ಮ ಸಂಘದ ಸದಸ್ಯರು, ಪದಾಧಿಕಾರಿಗಳು ಯಾರಾದ್ರೂ ಬೆದರಿಕೆ ಹಾಕಿದರೆ ಹೇಳಿ ಸ್ವಾಮಿ, ಪ್ರೈವೇಟ್ ತೋಟದಲ್ಲಿ ಅಮಲಿನ ನಡೆದ ಜಗಳಕ್ಕೆ ನಮ್ಮ ನಟ ಆಗಲಿ ನಮ್ಮ ಅಭಿಮಾನಿಗಳು ಆಗಲಿ ಹೊಣೆ ಯಾಕೆ ಸ್ವಾಮಿ? ಗೂಂಡಾಗಳನ್ನು ಸಾಕಬೇಡಿ ಮನೆಯಲ್ಲಿ ನಾಯಿ ಸಾಕಿ ಎಂದ ನಟನಿಗೆ ಸಿನಿಮಾ ಪ್ರಚಾರಕ್ಕೆ ದುಡಿಲ್ಲ ಅಂದರೆ ಹೇಳಿ, ದರ್ಶನ್ ಅಣ್ಣ ಪ್ಲೀಸ್ ನಿಮ್ಮ ಮನೆ ನಾಯಿಗೆ ಹಾಕುವ ಊಟದಲ್ಲಿ ಚೂರು ಹಾಕಿ' ಎಂದು ಪ್ರಥಮ್‌ಗೆ ಕೌಂಟರ್ ನೀಡಿದೆ.
'ಬೇವರ್ಸಿಗಳ ಡಿ ಕಂಪನಿ'
ಡಿ ಕಂಪನಿ ಪೋಸ್ಟ್ ಹಂಚಿಕೊಂಡಿರುವ ಪ್ರಥಮ್,'ನೋಡ್ರಪ್ಪ ರಾಷ್ಟ್ರೀಯ ತನಿಖಾ ಸಂಸ್ಥೆ NIA, ಇಂಟರ್‌ಪೋಲ್‌ಗಿಂತಲೂ ದೊಡ್ಡ ತನಿಖಾ ಸಂಸ್ಥೆ ಈ ಬೇವರ್ಸಿಗಳ ಡಿ ಕಂಪನಿ. ಥೂ ನಿನ್ ಥರ್ಡ್ ಕ್ಲಾಸ್ ಜನ್ಮಕ್ಕಿಷ್ಟು! ಚಿಪ್ಸು, ಪಪ್ಸು ತಿನ್ನೋಕೆ ರೌಡಿ ಹತ್ತಿರ ಹೋಗಿದ್ನಂತೆ ನಾನು. ವಿಚಾರಣೆ ಮಾಡೋರಂತೆ, ಎಜುಕೇಷನ್ ಇಂಪಾರ್ಟೆಂಟ್, ನಾಳೆ ಎಸ್‌ಪಿ ನಿಮಗೆ ಅಧಿಕೃತ ಕಾರಣ ಏನಾಯ್ತು ಅಂತ ಹೇಳ್ತಾರೆ! ಕಾಯಿರಿ' ಎಂದು ಪ್ರಥಮ್ ಮತ್ತೆ ಟಾಂಗ್ ಕೊಟ್ಟಿದ್ದಾರೆ.
ಮತ್ತೆ ಟಾಕ್‌ವಾರ್ ಶುರು ಮಾಡಿರುವ ಡಿ ಕಂಪನಿ, 'ಮೊದಲು ಅಭಿಮಾನಿಗಳನ್ನು ಗೌರವಿಸುವುದನ್ನು ಕಲಿಯಿರಿ. ಯಾರು ನಿಮಗೆ ಪ್ರತಿದಿನ ಬೆಂಬಲ ನೀಡುತ್ತಾರೆ ಮತ್ತು ಆಹಾರವನ್ನು ನೀಡುತ್ತಾರೆ. ಅಭಿಮಾನಿಗಳ ಮೇಲೆ ಕೆಟ್ಟ ಪದಗಳನ್ನು ಎಸೆಯುವ ಮೊದಲು ಕೆಲವು ಕನಿಷ್ಠ ಸಭ್ಯತೆಯನ್ನು ಹೊಂದಿರಿ. ನಿಮ್ಮ ಅನಗತ್ಯ ಹಸ್ತಕ್ಷೇಪ ಮತ್ತು ಗಮನ ಸೆಳೆಯುವ ನಿಮ್ಮ ಪ್ರಯತ್ನಗಳನ್ನು ನಾವೆಲ್ಲರೂ ನೋಡಿದ್ದೇವೆ. ನಮ್ ಬಾಸ್ ಅಭಿಮಾನಿಗಳನ್ನು ಸೆಲೆಬ್ರಿಟಿ ಅಂತಾರೆ. ನಿನ್ ತರ "ಬೆ..." ಅಂತ ಹೇಳಲ್ಲ' ಎಂದು ಹೇಳಿದೆ. ಇಬ್ಬರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ವಾರ್ ಶುರುವಾಗಿದೆ.












Click it and Unblock the Notifications