Darshan Thoogudeepa: ಮಿತಿ ಮೀರಿದ ಪುಂಡಾಟ; ಡಿ ಬಾಸ್ ಅಭಿಮಾನಿಗಳಿಗೂ ಆಗುತ್ತಾ ಜೈಲು 'ದರ್ಶನ'?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಎರಡು ತಿಂಗಳಿನಿಂದ ಜೈಲಿನಲ್ಲಿರುವ ನಟನಿಗೆ ಹೊರಗಡೆಯಿಂದ ಸಾಕಷ್ಟು ಬೆಂಬಲ ಸಿಕ್ಕಿದೆ. ಅಭಿಮಾನಿಗಳು ಕೂಡ ನಟನನ್ನು ಬಿಟ್ಟುಕೊಡದೆ ಬೇಗ ಬಿಡುಗಡೆಯಾಗಬೇಕು ಎಂದು ಸಿಕ್ಕ ಸಿಕ್ಕ ದೇವರಿಗೆ ಹರಕೆ ಹೊರುತ್ತಿದ್ದಾರೆ. ಆದರೆ ಕೆಲವು ಅಭಿಮಾನಿಗಳು ಮಾತ್ರ ಪುಂಡಾಟಕ್ಕೆ ಇಳಿದಿದ್ದು ಜೈಲು ಪಾಲಾಗುವ ಭೀತಿಯಲ್ಲಿದ್ದಾರೆ.

ಹೌದು, ದರ್ಶನ್‌ ಜೈಲು ಪಾಲಾದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ದರ್ಶನ್ ಅಭಿಮಾನಿಗಳು ಮತ್ತು ಇತರ ನಟರ ಅಭಿಮಾನಿಗಳ ನಡುವೆ ಸಿಕ್ಕಾಪಟ್ಟೆ ಜಗಳವಾಗುತ್ತಿದೆ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು vs ದರ್ಶನ್ ಅಭಿಮಾನಿಗಳು, ಯಶ್ ಅಭಿಮಾನಿಗಳು vs ದರ್ಶನ್‌ ಅಭಿಮಾನಿಗಳು, ಸುದೀಪ್ ಅಭಿಮಾನಿಗಳು vs ದರ್ಶನ್ ಅಭಿಮಾನಿಗಳ ನಡುವೆ ಕಿತ್ತಾಟ ಜೋರಾಗಿದೆ.

Darshan Fans Accused of Threatening Dr Rajkumar s Family Fan

ಕೆಲವು ಅಭಿಮಾನಿಗಳು ಆನ್‌ಲೈನ್‌ನಲ್ಲಿ ಮಾತ್ರ ಕಿತ್ತಾಡಿಕೊಂಡರೆ ಇನ್ನೂ ಕೆಲವು ಅಭಿಮಾನಿಗಳು ವೈಯಕ್ತಿಕವಾಗಿ ಮೆಸೇಜ್, ಕರೆ ಮೂಲಕ ಬೆದರಿಕೆ ಹಾಕುವ ಕೆಲಸ ಮಾಡಿದ್ದಾರೆ. ಡಾ. ರಾಜ್ ಕುಟುಂಬದ ಅಭಿಮಾನಿ ಯೋಗಿ ಎನ್ನುವವರಿಗೆ ಕೆಲವು ದರ್ಶನ್ ಬೆಂಬಲಿಗರು ಕೊಲೆ ಬೆದರಿಕೆ ಹಾಕಿದ್ದು ಈಗ ದೂರು ದಾಖಲಾಗಿದೆ.

ಕೆಲವು ದರ್ಶನ್ ಅಭಿಮಾನಿಗಳ ದುರ್ವರ್ತನೆಯಿಂದ ಬೇಸತ್ತ ಡಾ. ರಾಜ್ ಕುಮಾರ್ ಅಭಿಮಾನಿ ಯೋಗಿ ಎನ್ನುವವರು ಈಗ ಪಶ್ಚಿಮ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಅವರ ದೂರಿನ ಪ್ರಕಾರ, ದರ್ಶನ್ ಅವರ ಅಭಿಮಾನಿಗಳು ಬಳಸುತ್ತಿದ್ದಾರೆ ಎನ್ನಲಾಗಿರುವ ಅನೇಕ ಫೇಸ್‌ಬುಕ್ ಖಾತೆಗಳಿಂದ ಬೆದರಿಕೆ ಸಂದೇಶಗಳು ಬಂದಿವೆ. ರಂಗಾರೆಡ್ಡಿ, ನಾಗ್ ರಾಜ್ ದಚ್ಚು, ವಿಶ್ವಾಸ್, ವೀರೇಶ್, ಡಿ ಬಾಸ್ ಅಭಿಮಾನ್, ಡಿ ಬಾಸ್ ಅಡ್ಡಾ ಮತ್ತು ಕಿಂಗ್ ಬಸವ ಸೇರಿದಂತೆ ಹಲವು ಫೇಸ್‌ಬುಕ್ ಖಾತೆಗಳ ಮೇಲೆ ದೂರು ದಾಖಲಿಸಲಾಗಿದೆ.

ಕಿಡಿಗೇಡಿಗಳ ಹೆಡೆಮುರಿ ಕಟ್ತಾರಾ ಪೊಲೀಸರು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರ ದಕ್ಷತೆ ಏನು ಎನ್ನುವುದು ಈಗಾಗಲೇ ಸಾಬೀತಾಗಿದೆ. ಎಂತಹ ಒತ್ತಡದ ನಡುವೆಯೂ ದರ್ಶನ್ ಮತ್ತು ಗ್ಯಾಂಗ್‌ಗೆ ಪರಪ್ಪನ ಅಗ್ರಹಾರದ ದಾರಿ ತೋರಿಸಿದ್ದಾರೆ. ಈಗ ಯೋಗಿ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿದರೆ ಕೆಲವು ದರ್ಶನ್ ಅಭಿಮಾನಿಗಳಿಗೂ ಜೈಲಿನ ದರ್ಶನವಾಗಲಿದೆ.

ಅಭಿಮಾನ ಒಳ್ಳೆಯದೇ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಇರುತ್ತದೆ. ಪರ ವಿರೋಧಗಳು ಕೂಡ ಇರುತ್ತವೆ. ಹಾಗಂತ ಯಾವುದೇ ನಟನ ಅಭಿಮಾನಿಯಾದರೂ ಇನ್ನೊಬ್ಬರಿಗೆ ಕೊಲೆ ಬೆದರಿಕೆ ಹಾಕುವುದು ತಪ್ಪು. ಜಗಳಗಳು ಆನ್‌ಲೈನ್‌ಗೆ ಸೀಮಿತವಾದರೆ ಮಾತ್ರ ಒಳ್ಳೆಯದು, ಯಾರಾದರೂ ನಿಂದಿಸಿದರೆ, ಕಾನೂನು ಪ್ರಕಾರ ಕ್ರಮಕ್ಕೆ ಆಗ್ರಹಿಸಿ, ಕೊಲೆ ಬೆದರಿಕೆ ಹಾಕುವುದು ಗಂಭೀರ ಅಪರಾಧ ಎನ್ನುವುದನ್ನು ಎಲ್ಲಾ ನಟರ ಅಭಿಮಾನಿಗಳು ತಿಳಿದುಕೊಳ್ಳುವುದು ಒಳ್ಳೆಯದು. ದರ್ಶನ್ ಕೂಡ ಜೈಲಿಗೆ ಹೋದವರ ಬಳಿ ಸೆಲೆಬ್ರಿಟಿಗಳು ಹೇಗಿದ್ದಾರೆ, ದುಡುಕಬಾರದು ಎಂದೆಲ್ಲಾ ಮನವಿ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+