ಅಬ್ಬಾ.. ಬಿಪಾಶಾಗೆ ಲಿಪ್‌ಲಾಕ್ ಮಾಡಿದ್ದ ಫುಟ್‌ಬಾಲ್ ಕಿಂಗ್ ರೊನಾಲ್ಡೊ
ಫುಟ್‌ಬಾಲ್ ಅಂದ್ರೆನೆ ಒಂದು ಕ್ರೇಜ್ ಈ ಆಟದ ಬಗ್ಗೆ ಹಳ್ಳಿಯಿಂದ ಹಿಡಿದು ದಿಲ್ಲಿ ತನಕ ಭರ್ಜರಿ ಹುಚ್ಚು ಇದೆ. ಈ ಆಟದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಹೆಸರಂತೂ ಅಜರಾಮರ. ಇಂತಿಪ್ಪ ಫುಟ್ಬಾಲ್ ಜಗತ್ತಿನ ಕಿಂಗ್ & ಪೋರ್ಚುಗಲ್ ಮೂಲದ ಸ್ಟಾರ್ ಆಟಗಾರ ರೊನಾಲ್ಡೊಗೆ ಬರ್ತ್ ಡೇ ಸಂಭ್ರಮ. ಆದರೆ ಇದೇ ಸಮಯದಲ್ಲಿ ಬಿಪಾಶಾ ಬಸು ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಅವರ ಕಿಸ್ಸಿಂಗ್ ಫೋಟೋ ಕೂಡ ವೈರಲ್ ಆಗುತ್ತಿದೆ. ಅದರ ಅಸಲಿ ಕಹಾನಿ ಇಲ್ಲಿದೆ.
ಅಂದಹಾಗೆ ಜಗತ್ತಿನ ಮೂಲೆ ಮೂಲೆಯಲ್ಲೂ, ಕೋಟ್ಯಂತರ ಫುಟ್ಬಾಲ್ ಫ್ಯಾನ್ಸ್ ಹೊಂದಿರುವ ಕ್ರಿಸ್ಟಿಯಾನೋ ರೊನಾಲ್ಡೊ ಸಿಕ್ಕಾಪಟ್ಟೆ ಬೋಲ್ಡ್ ಮನುಷ್ಯ. ಇಂತಿಪ್ಪ ರೊನಾಲ್ಡೊ ಅವರು, ಬಾಲಿವುಡ್ ಬ್ಯೂಟಿ ನಟಿ ಬಿಪಾಶಾ ಬಸುಗೆ ಲಿಪ್‌ಲಾಕ್ ಮಾಡಿದ್ರು ಎನ್ನಲಾದ ಹಳೇ ಫೋಟೋ ಮತ್ತೆ ಹಲ್‌ಚಲ್ ಎಬ್ಬಿಸಿದೆ. 2001ರಲ್ಲಿ 'ಅಜ್ನಬೀ' ಸಿನಿಮಾದ ಮೂಲಕ, ಬಣ್ಣದ ಬದುಕಿಗೆ ಕಾಲಿಟ್ಟಿದ್ದ ನಟಿ ಬಿಪಾಶಾ ಬಸು & ಪೋರ್ಚುಗಲ್ ಮೂಲದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ನಡುವೆ ಲವ್ವಿಡವ್ವಿ ಇತ್ತು ಎಂಬ ಮಾತು ಓಡಾಡಿತ್ತು. ಹಾಗಾದ್ರೆ ಬಿಪಾಶಾ ಜೊತೆ ರೊನಾಲ್ಡೊ ಲಿಪ್‌ಲಾಕ್ ಮಾಡಿದ್ದು ನಿಜಾನಾ? ಮುಂದೆ ಓದಿ.

ಬಿಪಾಶಾ & ರೊನಾಲ್ಡೊ ಲವ್ವಿಡವ್ವಿ!
ಅಷ್ಟಕ್ಕೂ ಬಿಪಾಶಾ ಬಸು 2003ರ ಬಳಿಕ ಸಖತ್ ಬ್ಯುಸಿ ಆಗಿದ್ದರು ಆಗ ಬಿಪಾಶಾಳ ಸಿನಿಮಾಗಳು ಅಂದ್ರೆ ಫ್ಯಾನ್ಸ್ ಮುಗಿಬಿದ್ದು ನೋಡುತ್ತಿದ್ದರು. ಹೀಗಿದ್ದಾಗಲೇ ಆ ನಟಿ, ಹಾಗೇ ಈ ಆಟಗಾರನ ಭೇಟಿ ಆಗಿತ್ತು. ಮ್ಯಾಂಚೆಸ್ಟರ್ ಟೀಂ ಫುಟ್‌ಬಾಲ್ ಆಟಗಾರನಾಗಿ, ರೊನಾಲ್ಡೊ ಕೂಡ ಸಖತ್ ಹೆಸರು ಮಾಡಿದ್ದರು. ಹೀಗಿದ್ದಾಗ, ಬಿಪಾಶಾ & ರೊನಾಲ್ಡೊ ಭೇಟಿ ಆಗಿತ್ತು. ಹಾಗೇ ಇಬ್ಬರೂ ಒಂದು ಕಾರ್ಯಕ್ರಮಕ್ಕೆ ಒಟ್ಟಿಗೆ ಹೋಗಿದ್ದರಂತೆ. ಅಲ್ಲೇ ಇಬ್ಬರ ಮಧ್ಯೆ ಕಿಸ್ ಕಹಾನಿ ನಡೆದಿತ್ತು ಎಂಬ ಮಾಹಿತಿ ವೈರಲ್ ಆಗಿತ್ತು.
ಅವರು ನನ್ನ ಕ್ಯೂಟ್ ಅಂದ್ರು!
ಕಾರ್ಯಕ್ರಮವು ಮುಗಿದ ಬಳಿಕ ಬಿಪಾಶಾ ಬಸು & ಕ್ರಿಸ್ಟಿಯಾನೋ ರೊನಾಲ್ಡೊ ಅವರ ಕಿಸ್ಸಿಂಗ್ ಫೋಟೋ ಸಖತ್ ವೈರಲ್ ಆಗಿತ್ತು. ಹಾಗೇ ಈ ಇಬ್ಬರ ಫೋಟೋ ಬಗ್ಗೆ ಗುಸುಗುಸು, ಪಿಸುಪಿಸು ಶುರುವಾಗಿತ್ತು. ಆಗಲೆ ಮನಸ್ಸು ತುಂಬಿ ಮಾತನಾಡಿದ್ದ ಈ ಬಾಲಿವುಡ್ ಬ್ಯೂಟಿ ಬಿಪಾಶಾ ಬಸು ರೊನಾಲ್ಡೊ ಅವರನ್ನ ಸಿಕ್ಕಾಪಟ್ಟೆ ಹೊಗಳಿದ್ದರು. ಅಲ್ಲದೆ ಆತ ನನ್ನ ಕ್ಯೂಟ್ ಅಂತಾ ಹೇಳಿದ್ರು ಮತ್ತು ನನ್ನನ್ನ ಅವರ ಎಲ್ಲಾ ಪಂದ್ಯಕ್ಕೆ ಕರೆಯುತ್ತಾರೆ ಅಂತಾ ಮಾತು ಕೊಟ್ಟರು ಎಂದಿದ್ದರು. ಹೀಗೆ ಆ ಕಾಲಘಟ್ಟಕ್ಕೆ ಇಬ್ಬರೂ ಲಿಪ್‌ಲಾಕ್ ಮಾಡಿದ್ದಾರೆ ಅನ್ನೋ ಫೋಟೋ ಬೆಂಕಿ ಹಚ್ಚಿತ್ತು!
Remember when Ronaldo kissed Bipasha? Yeah. Good times. pic.twitter.com/WGCRUYZ2FA
— Kritika Bhargava (@Daviddekritz) October 1, 2014
ಕಷ್ಟಪಟ್ಟು ಮೇಲೆ ಬಂದ ರೊನಾಲ್ಡೊ
ಇಂದು ದೊಡ್ಡ ಸ್ಟಾರ್ ಫುಟ್‌ಬಾಲರ್ ಆಗಿರುವ ಕ್ರಿಸ್ಟಿಯಾನೋ ರೊನಾಲ್ಡೊ, ಬಾಲ್ಯದಲ್ಲಿ ತುಂಬಾ ಸಮಸ್ಯೆ ಎದುರಿಸಿದ್ದರು. ಫುಟ್ಬಾಲ್ ಮೇಲಿನ ಪ್ರೀತಿಯಿಂದ 12ನೇ ವಯಸ್ಸಿನಲ್ಲಿಯೇ ರೊನಾಲ್ಡೊ ಕುಟುಂಬ ಬಿಟ್ಟು ಹೋಗಬೇಕಾಗಿ ಬಂತು. ಹೀಗೆ ರೊನಾಲ್ಡೊ, ಮನೆಯಿಂದ 600 ಮೈಲಿ ದೂರ ಇದ್ದ ಸ್ಪೋರ್ಟಿಂಗ್ ಯೂತ್ ಕ್ಲಬ್ ಸೇರಿ ಅಭ್ಯಾಸ ಆರಂಭಿಸಿದರು. ತನ್ನ ಭವಿಷ್ಯ ಹೇಗೆ ಇರಬೇಕು ಎಂಬುದು ಅವರಿಗೆ ಮೊದಲೇ ಗೊತ್ತಿತ್ತು. ಹೀಗಾಗಿ ಕಠಿಣ ಅಭ್ಯಾಸದ ಮೂಲಕ ರೊನಾಲ್ಡೊ ತಮ್ಮ ಬದುಕು ಕಟ್ಟಿಕೊಂಡರು.

ಇಂತಿಪ್ಪ ರೊನಾಲ್ಡೊಗೆ ಇಂದು ಬರ್ತ್ ಡೇ ಸಂಭ್ರಮ, ಹೀಗಾಗಿ ಅವರ ಅಭಿಮಾನಿಗಳು & ಹಿತೈಶಿಗಳು ಶುಭ ಹಾರೈಸಿದ್ದಾರೆ. ಹಾಗೇ, ಅವರ ಫುಟ್‌ಬಾಲ್ ಭವಿಷ್ಯ ಮತ್ತಷ್ಟು ಉಜ್ವಲ ಆಗಲಿ ಎಂದು ಶುಭ ಕೋರಿದ್ದಾರೆ. ಇನ್ನೇನು ಕೆಲವೇ ತಿಂಗಳಲ್ಲಿ ಫುಟ್‌ಬಾಲ್ ವಿಶ್ವಕಪ್‌ಗು ತಯಾರಿ ಶುರುವಾಗಲಿದ್ದು, ಈ ಬಾರಿಯಾದ್ರೂ ಪೋರ್ಚುಗಲ್ ಟೀಂ ವಿಶ್ವಕಪ್ ಗೆಲ್ಲುತ್ತಾ? ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications