Bigg Boss Kannada 12: ಬಿಗ್‌ಬಾಸ್ ಆಫರ್ ಬಗ್ಗೆ ಸತ್ಯ ಹೇಳಿದ ಕಾಕ್ರೋಚ್ ಸುಧಿ
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ ಕನ್ನಡ-12 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಸೆಪ್ಟೆಂಬರ್ 28ರಿಂದ ದೊಡ್ಮನೆಯ ಆಟ ಶುರುವಾಗಲಿದೆ. ಈಗಾಗಲೇ ಕೆಲ ಸಂಭಾವ್ಯರ ಹೆಸರುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಪೈಕಿ ಕೆಲವರು ಅದೆಲ್ಲ ಸುಳ್ಳು, ನಂಬಬೇಡಿ ಅಂತ ಕ್ಲಾರಿಟಿನೂ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಡಿಫರೆಂಟ್ ಆಗಿರುವವರನ್ನೇ ಬಿಗ್‌ಬಾಸ್ ಮನೆಗೆ ಕರೆತರಲಾಗುತ್ತೆ. ಅದರಂತೆ ಈ ಬಾರಿ ಟಗರು ಸಿನಿಮಾದಲ್ಲಿ ಕಾಕ್ರೋಚ್ ಎಂದು ಫೇಮಸ್ ಆಗಿದ್ದ ಸುಧಿ ಹೆಸರು ಕೂಡ ಚಾಲ್ತಿಯಲ್ಲಿದೆ. ಆದರೆ ಬಿಗ್‌ಬಾಸ್‌ನಿಂದ ಆಫರ್ ಬಂದಿರೋದು ನಿಜಾನಾ? ಎಂಬ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಖಡಕ್ ವಿಲನ್ ಪಾತ್ರಗಳ ಮೂಲಕ ಸುಧಿ ಹೆಸರು ಮಾಡಿದ್ದಾರೆ. ಮೊದಲಿಗೆ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಸುಧಿ, ನಟ ಶಿವರಾಜ್‌ಕುಮಾರ್, ಡಾಲಿ ಧನಂಜಯ್ ಅಭಿನಯದ ಟಗರು ಸಿನಿಮಾದಲ್ಲಿ ಕಾಕ್ರೋಚ್ ಎಂಬ ಪಾತ್ರದಿಂದ ಫೇಮಸ್ ಆದರು. ಇದಲ್ಲದೆ ಸುಧಿ ಕನ್ನಡದ ಹಲವು ಸ್ಟಾರ್ ನಟರ ಸಿನಿಮಾಗಳಿಗೆ ವಿಶೇಷ ಶೈಲಿಯ ಬೈಕ್‌ಗಳನ್ನು ವಿನ್ಯಾಸ ಮಾಡಿರುವ ಕಲೆಯೂ ಇಟ್ಟುಕೊಂಡಿದ್ದಾರೆ. ಆದರೆ ಕಾಕ್ರೋಚ್ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಸ್ಯಾಂಡಲ್‌ವುಡ್‌ನಲ್ಲಿ ಕಾಕ್ರೋಚ್ ಸುಧಿ ಎಂದೇ ಕರೆಸಿಕೊಳ್ಳುತ್ತಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಭಿನಯದ ಜಾಕಿ, ಐರಾವತ ಸಿನಿಮಾಗಳಲ್ಲಿ ಸುಧಿ ನಟಿಸಿದ್ದರು. ನಿರ್ದೇಶಕ ಸೂರಿ ಅವರು ತಮ್ಮ ಟಗರು ಸಿನಿಮಾದಲ್ಲಿ ಕಾಕ್ರೋಚ್ ಎಂಬ ಪಾತ್ರದ ಮೂಲಕ ಸುಧಿಯನ್ನು ಪರಿಚಯಿಸಿದ್ರು. ಆ ಹೆಸರಿನಿಂದ ನೀನು ಸ್ಟಾರ್ ಆಗ್ತೀಯಾ ಎಂದೂ ಹೇಳಿದ್ರು. ಆ ಮಾತು ನಿಜವಾಯ್ತು. ಇದಾದ ಬಳಿಕ ಪುನೀತ್ ರಾಜ್‌ಕುಮಾರ್ ನಟನೆಯ ಯುವರತ್ನ. ರಾಬರ್ಟ್, ಸಲಗ ಹಾಗೂ ಇತ್ತೀಚೆಗೆ ಹಿಟ್ ಕಂಡ ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾದಲ್ಲೂ ಸುಧಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಸುಧಿ ಅವರು ಈ ಬಿಗ್‌ಬಾಸ್ ಸೀಸನ್‌ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಫಿಕ್ಸ್ ಎಂಬ ಸುದ್ದಿ ಹರಿದಾಡುತ್ತಿದೆ.
ಎರಡು ಮೂರು ಸಲ ಆಫರ್ ಬಂದಿದೆ
́́'ಬಿಗ್‌ಬಾಸ್ ಕನ್ನಡ ಸೀಸನ್-12ರಿಂದ ಆಫರ್ ಬಂದಿದೆಯಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಕಾಕ್ರೋಚ್ ಸುಧಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಬಿಗ್‌ಬಾಸ್‌ನವರು ಎರಡು ಮೂರು ಸಲ ನನ್ನನ್ನ ಕರೆದ್ರು. ಆದರೆ ನನ್ನ ಡೇಟ್ ಖಾಲಿ ಇಲ್ಲ ಇಲ್ಲ ಅಂತ ತುಂಬಾ ಸಲ ಹೇಳಿದೆ. ಇದೇ ಕಾರಣಕ್ಕೆ ನಾನು ಬರಲ್ಲ ಅಂತ ಬೈದು ಸುಮ್ಮನಾಗಿರಬೇಕು. ಸದ್ಯಕ್ಕೆ ಆತರ ಏನೂ ಇಲ್ಲ' ಎಂದು ಸುಧಿ ಹೇಳಿದ್ದಾರೆ.
'ಬಿಗ್‌ಬಾಸ್‌ನಿಂದ ಒಳ್ಳೆಯ ಆಫರ್ ಬಂದರೆ ಖಂಡಿತಾ ಹೋಗ್ತೀನಿ. ಈಗ ಏನಾದ್ರೂ ಮತ್ತೆ ನೋಡಿ, ನನ್ನ ಕರೆದರೆ ಹೋಗೇ ಹೋಗ್ತೀನಿ. ಆದರೆ ಇಲ್ಲಿವರೆಗೆ ನನಗೆ ಅದರ ಬಗ್ಗೆ ಗೊತ್ತಿಲ್ಲ, ಗೊತ್ತಿದ್ರೆ ನಾನೇ ಹೇಳ್ತಿದ್ದೆ. ನಾನು ಹೋಗ್ತೀನಿ ಅಂತ ಗಾಳಿ ಸುದ್ದಿ ಯಾವಾಗಲೂ ಓಡಾಡುತ್ತೆ. ಮುಂದೆ ಕೂಡ ನನ್ನ ಡೇಟ್ ಫ್ರೀಯಾಗಿ ಅವಕಾಶ ಕೊಟ್ರೆ ಹೋಗ್ತೀನಿ' ಎಂದು ಸುಧಿ ಸ್ಪಷ್ಟನೆ ನೀಡಿದ್ದಾರೆ.











Click it and Unblock the Notifications