ಚಿಕ್ಕಣ್ಣ ಸಿನಿಮಾದಲ್ಲಿ ನಟಿಸಲು ಶರಣ್ ಪಡೆದ ಸಂಭಾವನೆ ಎಷ್ಟು ಗೊತ್ತೇ?
ಚಿಕ್ಕಣ್ಣ ಹಾಗೂ ನಟ ಶರಣ್ ಅದೆಷ್ಟು ಕಷ್ಟದಲ್ಲಿ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದಾರೆ ಅನ್ನೋದು 7 ಕೋಟಿ ಕನ್ನಡಿಗರಿಗೆ ಗೊತ್ತು. ಯಾಕಂದ್ರೆ ಇಬ್ಬರೂ ನಟರು ಸಿಕ್ಕಾಪಟ್ಟೆ ಸೈಕಲ್ ತುಳಿದು ಬದುಕು ಕಟ್ಟಿಕೊಂಡಿದ್ದಾರೆ. ಹೀಗಿದ್ದಾಗ ನಟ ಚಿಕ್ಕಣ್ಣ ಈಗ ಹೀರೋ ಬೇರೆ ಆಗಿದ್ದಾರೆ. ಆ ಮೂಲಕ ಚಿಕ್ಕಣ್ಣ ಅವರ 'ಉಪಾಧ್ಯಕ್ಷ' ಸಿನಿಮಾನ ಕನ್ನಡಿಗರು ಕೊಂಡಾಡಿದ್ದಾರೆ. ಹೀಗೆ, ಚಿಕ್ಕಣ್ಣ ಅವರಿಗೆ ಈ ಸಿನಿಮಾದಲ್ಲಿ ಅಧ್ಯಕ್ಷ ಶರಣ್ ಕೂಡ ಸಾಥ್ ನೀಡಿದ್ದಾರೆ. ಆದ್ರೆ ಇಲ್ಲಿ ನಟನೆ ಮಾಡಲು ಶರಣ್ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಶರಣ್ ಈಗ ಕನ್ನಡದ ಟಾಪ್ ಹೀರೋಗಳ ಪೈಕಿ ಒಬ್ಬರು. ಅವರು ಕೂಡ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತು ಇದೆ. ಅದರಲ್ಲೂ ಶರಣ್ ಅವರು ಕನ್ನಡಿಗರ ಎದುರು ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನ ಇಟ್ಟು ಗೆದ್ದಿದ್ದಾರೆ. ಇದೇ ನಟ ಗೆಳೆಯನ ಸಿನಿಮಾಗೆ, ಅಂದ್ರೆ ಚಿಕ್ಕಣ್ಣನ 'ಉಪಾಧ್ಯಕ್ಷ' ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. 'ಉಪಾಧ್ಯಕ್ಷ' ಚಿತ್ರದಲ್ಲಿ ಶರಣ್ ಅವರು ಅತಿಥಿ ಪಾತ್ರದಲ್ಲಿ ಎಂಟ್ರಿ ಕೊಟ್ಟು, ಇಡೀ ಕ್ಲೈಮ್ಯಾಕ್ಸ್‌ಗೆ ಬಹು ದೊಡ್ಡ ಬದಲಾವಣೆ ನೀಡುತ್ತಾರೆ. ಹಾಗಾದರೆ 'ಉಪಾಧ್ಯಕ್ಷ' ಸಿನಿಮಾದಲ್ಲಿ ನಟಿಸೋದಕ್ಕೆ ಶರಣ್ ಪಡೆದ ಸಂಭಾವನೆ ಎಷ್ಟು?

ಚಿಕ್ಕಣ್ಣನ ಸ್ನೇಹಕ್ಕಾಗಿ ಬಂದರು ಶರಣ್!
2014ರಲ್ಲಿ ನಟ ಚಿಕ್ಕಣ್ಣ & ಶರಣ್ ಅವರ ಕಾಂಬಿನೇಷನ್ ಸಿಕ್ಕಾಪಟ್ಟೆ ಸಕ್ಸಸ್ ಕೊಟ್ಟಿತ್ತು ಅಧ್ಯಕ್ಷ ಸಿನಿಮಾ ಮೂಲಕ ಇಬ್ಬರೂ ಭರ್ಜರಿ ಸಕ್ಸಸ್ ಪಡೆದು ಮಿಂಚಿದ್ದರು. ಅಧ್ಯಕ್ಷ ಸಿನಿಮಾ ನೋಡ ನೋಡುತ್ತಲೇ ಸೂಪರ್ ಹಿಟ್ ಆಗಿತ್ತು. ಹಾಗೇ ಬಾಕ್ಸ್ ಆಫಿಸ್‌ನಲ್ಲೂ ಭರ್ಜರಿ ಸಕ್ಸಸ್ ಪಡೆದಿತ್ತು 'ಅಧ್ಯಕ್ಷ' ಸಿನಿಮಾ. ಇದೀಗ 10 ವರ್ಷಗಳ ನಂತರ 'ಅಧ್ಯಕ್ಷ' ಸಿನಿಮಾದ ಮುಂದುವರಿದ ಭಾಗ 'ಉಪಾಧ್ಯಕ್ಷ' ರಿಲೀಸ್ ಆಗಿ ಅಬ್ಬರಿಸುತ್ತಿದೆ. ಹೀಗಾಗಿ ಇದೇ ಸಿನಿಮಾದಲ್ಲಿ ನಟ ಶರಣ್ ಕೂಡ ಅತಿಥಿ ಪಾತ್ರ ಮಾಡಿ ಮಿಂಚಿದ್ದಾರೆ. ಆದರೆ ಉಪಾಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣ ಜೊತೆ ನಟಿಸಲು ಶರಣ್ ಪಡೆದಿದ್ದು ಎಷ್ಟು ಕೋಟಿ ಗೊತ್ತೆ?
5 ಕೋಟಿಗೂ ಹೆಚ್ಚು ಕಲೆಕ್ಷನ್?
ಗಣರಾಜ್ಯೋತ್ಸವ ರಜೆಯಲ್ಲಿ ಸಂಭ್ರಮದ ಬಿಡುಗಡೆ ಪಡೆದ 'ಉಪಾಧ್ಯಕ್ಷ' ಈಗ ದಾಖಲೆ ಮೇಲೆ ದಾಖಲೆ ಬರೆದಿದೆ. ಅದರಲ್ಲೂ ಸಿನಿಮಾ ರಿಲೀಸ್ ಆದ ನಂತರವೇ ಸಾಲು ಸಾಲು ರಜೆ ಬಂದಿವೆ. ಹೀಗಾಗಿ ಉಪಾಧ್ಯಕ್ಷ ಸಿನಿಮಾ ಮೊದಲ ದಿನವೇ ಕೋಟಿಗೂ ಹೆಚ್ಚು ಗಳಿಸಿದ್ದು, ಈಗಾಗಲೇ ಲೆಕ್ಕ ಹೇಳುವಂತೆ ಕೋಟಿ ಕೋಟಿ ಗಳಿಸಿದೆಯಂತೆ. ಸೋಷಿಯಲ್ ಮೀಡಿಯಾದಲ್ಲಿ ಓಡಾಡುವ, ಪೋಸ್ಟರ್‌ಗಳು ಹೇಳುವಂತೆ ಸುಮಾರು 5 ಕೋಟಿಗೂ ಹೆಚ್ಚು ಗಳಿಸಿದೆ ಉಪಾಧ್ಯಕ್ಷ ಸಿನಿಮಾ ಎನ್ನಲಾಗಿದೆ. ಆದರೆ ಇನ್ನೂ ಅಧಿಕೃತವಾಗಿ ಸಿನಿಮಾ ತಂಡ ಕಲೆಕ್ಷನ್‌ನ ಬಗ್ಗೆ ಹೇಳಿಕೊಂಡಿಲ್ಲ.

ಇಷ್ಟೆಲ್ಲದರ ನಡುವೆ ನಟ ಶರಣ್ ಅವರು ಉಪಾಧ್ಯಕ್ಷ ಸಿನಿಮಾದಲ್ಲಿ ನಟಿಸೋಕೆ ಒಂದೇ ಒಂದು ರೂಪಾಯಿ ಕೂಡ ಪಡೆದಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಕೂಡ ಶರಣ್‌ರ ಈ ತ್ಯಾಗದ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಉಪಾಧ್ಯಕ್ಷ ಸಿನಿಮಾದಲ್ಲಿ ತಮ್ಮ ಸ್ನೇಹಕ್ಕೆ ತಲೆಬಾಗಿ ಶರಣ್ ಅವರು ನಟಿಸಿದ್ದು, ಅಭಿಮಾನಿಗಳಿಗೂ ಇಷ್ಟವಾಗಿತ್ತು. ಶಿಳ್ಳೆ & ಚಪ್ಪಾಳೆ ಪಡೆದು ಮಿಂಚಿದ್ದಾರೆ ಚಿಕ್ಕಣ್ಣ & ಶರಣ್.
ಸ್ನೇಹಿತನಿಗೆ ಶರಣ್ ಕೊಟ್ಟರು ಗಿಫ್ಟ್!
ಅಷ್ಟಕ್ಕೂ ಶರಣ್ ಅವ್ರು ಉಪಾಧ್ಯಕ್ಷ ಸಿನಿಮಾದಲ್ಲಿ ಗೆಸ್ಟ್ ರೋಲ್‌ನ ಮಾಡುವ ಮೂಲಕ ತಮ್ಮ ಸ್ನೇಹಿತ ಚಿಕ್ಕಣ್ಣಗೆ ಉಡುಗೊರೆ ಕೊಟ್ಟಿದ್ದಾರೆ ಅಂತಿದ್ದಾರೆ ಫ್ಯಾನ್ಸ್. ಹೀಗಾಗಿ ಶರಣ್ ಅವರ ಈ ಕೊಡುಗೆ ಬಗ್ಗೆಯೂ ಭಾರಿ ಪ್ರಶಂಸೆ ಈಗ ವ್ಯಕ್ತವಾಗುತ್ತಿದೆ. ಹಾಗೇ ಜನರು ಕೂಡ ಶರಣ್ & ಚಿಕ್ಕಣ್ಣ ಕಾಂಬಿನೇಷನ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಹೀರೋ ಆಗಿ ಮೊದಲ ಪ್ರಯತ್ನದಲ್ಲೇ ಭರ್ಜರಿ ಗೆಲುವು ದಾಖಲಿಸಿದ್ದಾರೆ ನಟ ಚಿಕ್ಕಣ್ಣ.












Click it and Unblock the Notifications