ಚಿಕ್ಕಣ್ಣನ ಕಲರ್ ಬ್ಲ್ಯಾಕ್ ಅಲ್ಲವಂತೆ, ಮತ್ತೆ ಚಿಕ್ಕಣ್ಣನ ಕಲರ್ ಯಾವುದು?
ಚಿಕ್ಕಣ್ಣ ಅಂದ್ರೆ ನಗು. ಅವರ ಕಾಮಿಡಿಗೆ ನಗದೇ ಇರೋ ಜನರೇ ಇಲ್ಲ. ಅವರು ಮಾತನಾಡಿದ್ರೂ ನಗು ಮಾತನಾಡದೇ ಮೌನವಾಗಿದ್ದರೂ ನಗು. ಅವರ ಹಾಸ್ಯ ಪ್ರಜ್ಞೆಗೆ ಅಭಿಮಾನಿಗಳು ಹುಚ್ಚರಾಗಿದ್ದಾರೆ. ಕೊಂಚ ಮೈಂಡ್ ಫ್ರೀ ಮಾಡ್ಕೋಬೇಕಂದರೆ ಚಿಕ್ಕಣ್ಣ ಮಾತು ಕೇಳಬೇಕು ಅನ್ನೋ ತರ ಆಗಿಬಿಟ್ಟಿದೆ.
ಇತ್ತೀಚಿಗೆ ಅವರು ನಾಯಕ ನಟನಾಗಿ ನಟಿಸುವ ಮೂಲಕ ಉಪಾಧ್ಯಕ್ಷ ಸಿನಿಮಾದಲ್ಲಿ ಸಖತ್ ಕಾಮಿಡಿ ಮಾಡಿ ಜನಪ್ರಿಯತೆ ಗಳಿಸಿದ್ದಾರೆ. ಉಪಾಧ್ಯಕ್ಷ ಸಿನಿಮಾ ಇಂದಿಗೂ ಕೂಡ ಸಿನಿಪ್ರಿಯರ ಗಮನ ಸೆಳೆದಿದ್ದು ಸಿನಿಮಾ ಮಂದಿರಗಳಲ್ಲಿ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ.

ಈ ನಡುವೆ ಹಾಸ್ಯಕಲಾವಿದ ಚಿಕ್ಕಣ್ಣ ಅಲಿಯಾಸ್ ಚಿಕ್ಕುಗೆ ಅನುಶ್ರೀ ಉಪಾಧ್ಯಕ್ಷ ಸಿನಿಮಾ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಸಂದರ್ಶನದಲ್ಲಿ ಉಪಾಧ್ಯಕ್ಷ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ನಟ ಚಿಕ್ಕಣ್ಣ ಹಾಗೂ ನಟಿ ಮಲೈಕಾ ಇದ್ದು ಇಡೀ ತಂಡ ಮಾತ್ರವಲ್ಲದೆ ನೋಡುಗರ ಹೊಟ್ಟೆ ಹುಣ್ಣಾಗಿಸುವಷ್ಟು ಚಿಕ್ಕಣ್ಣ ನಗಿಸಿದ್ದಾರೆ. ಈ ವೇಳೆ ಚಿಕ್ಕಣ್ಣ ನನ್ನ ಕಲರ್ ಬ್ಲ್ಯಾಕ್ ಅಲ್ಲ ಎಂದು ಸಂದರ್ಶಕಿ ಅನುಶ್ರೀ ಜೊತೆ ಗಲಾಟೆ ಮಾಡಿದ್ದಾರೆ. ಮಾತ್ರವಲ್ಲದೆ ಚಿಕ್ಕಣ್ಣ ತಮ್ಮ ಕಲರ್ ಯಾವುದು ಅದನ್ನೂ ತಾವೇ ಸ್ವತ: ಹೇಳಿದ್ದಾರೆ. ಹಾಗಾದರೆ ಚಿಕ್ಕಣ್ಣ ಅವರೇ ಹೇಳುವಂತೆ ಅವರ ಮೈಬಣ್ಣ ಯಾವುದು ಅಂತ ನೀವೇ ಕೇಳಿ ಬಿಡಿ.
* ಚಿಕ್ಕಣ್ಣ ಚಡ್ಡಿ ಹಾಕಲ್ವಂತೆ- ಯಾಕೆ ಅಂತ ಗುಟ್ಟು ಬಿಟ್ಟುಕೊಟ್ಟ ಚಿಕ್ಕಣ್ಣ
ಚಿಕ್ಕಣ್ಣ ಚಡ್ಡಿ ಕಾಮಿಡಿ ಮರೆಯೋ ಹಾಗೇ ಇಲ್ಲ. ಅಂದಹಾಗೆ ಚಿಕ್ಕಣ್ಣ ಚಡ್ಡಿ ಹಾಕೋದಿಲ್ವಂತೆ. ಯಾಕೆ ಅಂತಲೂ ಚಿಕ್ಕಣ್ಣ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ತಮ್ಮ ಹಿರಿಯರು ಚಡ್ಡಿ ಹಾಕಿ ಅದೇನೋ ಕಚ್ಚಿ ಅದೇನೋ ಆಗಿತ್ತಂತೆ. ಹೀಗಾಗಿ ಅಂದೇ ಅವರು ಚಡ್ಡಿ ಹಾಕದೇ ಇರಲು ಶಪತ ಮಾಡಿದರಂತೆ. ಅದನ್ನು ಪಾಲಿಸಿಕೊಂಡು ಬರುತ್ತಿದ್ದಾರಂತೆ. ಈ ಚಡ್ಡಿ ಕಾಮಿಡಿ ಕೇಳಿ ಚಿತ್ರ ತಂಡ ಹೊಟ್ಟೆ ಹುಣ್ಣಾಗಿಸುವಷ್ಟು ನಗಾಡಿದ್ದಾರೆ. ಚಿಕ್ಕಣ್ಣ ಮಾತು ಇಲ್ಲಿಗೆ ನಿಲ್ಲಲಿಲ್ಲ. ಅನುಶ್ರೀ ಜೊತೆಗೆ ಚಿಕ್ಕಣ್ಣ ಮಾತು ಇಷ್ಟಕ್ಕೆ ಮುಗಿಯುವುದಿಲ್ಲ. ತಮ್ಮ ಕಲರ್ ಬಗ್ಗೆ ಕೂಡ ಅವರು ಅನುಶ್ರೀ ಜೊತೆಗೆ ಗಲಾಟೆ ಮಾಡ್ತಾರೆ.

* ಚಿಕ್ಕಣ್ಣ ಬಗ್ಗೆ ಯಾರಿಗೂ ಗೊತ್ತಿಲ್ಲದ ಮೂರು ವಿಷಯಗಳು
ಚಿಕ್ಕಣ್ಣ ಬಗ್ಗೆ ಯಾರಿಗೂ ಗೊತ್ತಿಲ್ಲದ ಮೂರು ವಿಷಯಗಳ ಬಗ್ಗೆ ಉಪಾಧ್ಯಕ್ಷ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ಈ ವೇಳೆ ಹೇಳಿಕೊಂಡಿದ್ದಾರೆ. ಆ ವಿಷಯಗಳು ಏನು ಗೊತ್ತಾ?
1. ಚಿಕ್ಕಣ್ಣ ಅವರನ್ನು ದಡ್ಡ ಅನ್ಕೊಂಡಿದ್ದಾರೆ ಎಲ್ಲರೂ ಆದರೆ ಅವರು ತುಂಬಾ ಬುದ್ಧಿವಂತರು.
2.ಚಿಕ್ಕಣ್ಣ ಅವರಿಗೆ ಪ್ರಾಣಿಗಳ ಮೇಲೆ ಪ್ರೀತಿ.
3. ಚಿಕ್ಕಣ್ಣ ಸಕಲ ಕಲಾ ವಲ್ಲಭ.. ಕುಳಿತುಕೊಂಡರೆ ಯಾವ ಸಾಂಗ್ ಯಾವ ಕಡೆ ಬೇಕಾದರೂ ತಿರಿಗಿಸಿ ಬಿಡ್ತಾರೆ. ಬಿದ್ದಿರೆ ಸಾಂಗ್ ಎದ್ದೇಳಿಸ್ತಾರೆ ಎದ್ದಿರೋ ಸಾಂಗ್‌ನ ಮತ್ತಷ್ಟು ಮೇಲಕ್ಕೆ ಕೊಂಡೊಯ್ತಾರೆ.
* ನನ್ನ ಕಲರ್ ಬ್ಲ್ಯಾಕ್ ಅಲ್ಲ ಎಂದ ಚಿಕ್ಕಣ್ಣ
ಚಿಕ್ಕಣ್ಣ ಅವರ ಕಲರ್ ಬ್ಲಾಕ್ ಅಂತ ಎಲ್ಲರೂ ಹೇಳ್ತಾರೆ. ಅನುಶ್ರೀ ಕೂಡ ಈ ವೇಳೆ ಅದನ್ನೇ ಹೇಳ್ತಾರೆ. ಆದರೆ ಚಿಕ್ಕಣ್ಣ ಇದನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಕಲರ್ ಕಪ್ಪು ಅಲ್ಲ ಅಂತ ಚಿಕ್ಕಣ್ಣ ವಾದ ಮಾಡ್ತಾರೆ. ಹಾಗಾದರೆ ಅವರ ಮೈ ಬಣ್ಣ ಯಾವುದು ಅಂತ ಕೇಳಿದರೆ ನೀವು ಕೂಡ ಬಿದ್ದು ಬಿದ್ದು ನಗೋದ್ರಲ್ಲಿ ಅನುಮಾನವೇ ಇಲ್ಲ.
ಹೌದು... ಚಿಕ್ಕಣ್ಣ ಅವರ ಮೈಬಣ್ಣ ಅವರ ಹೆಸರಿನಲ್ಲಿ ಇದೆಯಂತೆ. ಚಿಕ್ಕಣ್ಣ ಅವರನ್ನ ಎಲ್ಲರೂ ಪ್ರೀತಿಯಿಂದ ಚಿಕ್ಕು... ಚಿಕ್ಕು ಅಂತ ಕರೆಯುತ್ತಾರಂತೆ. ಹೀಗಾಗಿ ಇಂಗ್ಲಿಷ್‌ನಲ್ಲಿ ಚಿಕ್ಕು ಅಂದರೆ ಸಪೋಟಾ. ಸಪೋಟಾ ಕಲರ್ ಯಾವುದು ಬ್ರೌನ್ ಹೀಗಾಗಿ ಚಿಕ್ಕಣ್ಣ ಕಲರ್ ಕೂಡ ಬ್ರೌನ್ ಅಂತೆ. ಹೀಗೆ ಹೇಳ್ತಾ ಚಿಕ್ಕಣ್ಣ ಸಖತ್ ಕಾಮಿಡಿ ಮಾಡಿದ್ದಾರೆ. ಇದನ್ನ ಕೇಳುತ್ತಿದ್ದಂತೆ ಅನುಶ್ರೀ, ಮಲೈಕಾ ಹಾಗೂ ನಿರ್ಮಾಪಕ ಉಮಾಪತಿ ಕೂಡ ಗೊಳ್ಳೆಂದು ನಕ್ಕಿದ್ದಾರೆ.
ಅದೇನೇ ಆಗಲಿ ಚಿಕ್ಕಣ್ಣ ಕಾಮಿಡಿ ಅಂದ್ರೆ ಅದೊಂದು ಥರ ಡಿಫ್ರೆಂಟ್ ಅಲ್ವಾ? ಹೀಗೆ ವಿಭಿನ್ನವಾಗಿ ಹಾಸ್ಯ ಮಾಡುವುದಕ್ಕಾಗಿನೇ ಅಲ್ವಾ ಚಿಕ್ಕಣ್ಣ ಎಲ್ಲರ ಮನೆಮಾತಾಗಿರುವುದು? ನೀವೇನಂತೀರಾ?












Click it and Unblock the Notifications