Chandan Shetty: ನಿರ್ದೇಶಕ ಚೇತನ್ ಕುಮಾರ್ ಜೊತೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಚಂದನ್ ಶೆಟ್ಟಿ
ನಿವೇದಿತಾ ಗೌಡ ಜೊತೆಗೆ ವಿಚ್ಚೇದನ ಪಡೆದ ಬಳಿಕ ಗಾಯಕ ಚಂದನ್ ಶೆಟ್ಟಿ ಫುಲ್ ಬ್ಯೂಸಿ ಆಗಿದ್ದಾರೆ. ಇದೀಗ ಚಂದನ್ ಶೆಟ್ಟಿ ಆಧ್ಯಾತ್ಮದತ್ತ ಒಲವು ತೋರುತ್ತಿದ್ದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಹೌದು.... 'ಜೇಮ್ಸ್' ನಿರ್ದೇಶಕ ಚೇತನ್ ಕುಮಾರ್ ಹಾಗೂ ಚಂದನ್ ಶೆಟ್ಟಿ ಇಬ್ಬರೂ ಒಟ್ಟಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋ ವೈರಲ್ ಆಗಿದೆ. ಇದರಿಂದ ಮುಂಬರುವ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ಮಾಡ್ತಾರಾ ಎನ್ನುವ ಅನುಮಾನ ಮೂಡಿದೆ.

ಆದರೆ ಈ ಬಗ್ಗೆ ಚಂದನ್ ಶೆಟ್ಟಿಯಾಗಲಿ ಅಥವಾ ಚೇತನ್ ಕುಮಾರ್ ಆಗಲಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಈ ಸುದ್ದಿ ನಿಜಾನಾ ಎಂದು ಕಾದು ನೋಡಬೇಕಿದೆ. ಚಂದನ್ ಶೆಟ್ಟಿ ಹೊಸ ಸಿನಿಮಾಗಳಲ್ಲಿ ನಟನೆ ಮಾಡಲು ಒಪ್ಪಿಕೊಳ್ಳುತ್ತಿದ್ದು ಚೇತನ್ ಕುಮಾರ್ ಅವರೊಂದಿಗೆ ಸಿನಿಮಾ ಮಾಡಲು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.
ಕೆಲ ದಿನಗಳ ಹಿಂದೆಯಷ್ಟೇ ಚಂದನ್ ಶೆಟ್ಟಿ ಅಭಿನಯದ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾ ವಿಷಯ ಚೆನ್ನಾಗಿದ್ದರೂ ಅದ್ಯಾಕೋ ಅಭಿಮಾನಿಗಳ ಮನ ಮುಟ್ಟಿಲ್ಲ. ಹೀಗಾಗಿ ಸಿನಿಮಾ ಅಷ್ಟೊಂದು ಹಿಟ್ ಆಗಿಲ್ಲ. ಇದೇ ಕಾರಣಕ್ಕೆ ಬೇಸರಗೊಂಡ ಡೈರೆಕ್ಟರ್ ಅರಣ್ ಅಮುಕ್ತ ಇನ್ಮುಂದೆ ಕನ್ನಡ ಸಿನಿಮಾನೇ ಮಾಡಲ್ಲ ಅಂತಲೂ ಹೇಳಿಕೊಂಡಿದ್ದಾರೆ.

ಈ ಸಿನಿಮಾ ಮೂಲಕ ಚಂದನ್ ದೊಡ್ಡ ಹೀರೋ ಆಗಿ ಹೊರ ಹೊಮ್ಮುತ್ತಾರೆ ಎನ್ನುವ ಮಾತಿತ್ತು. ಆದರೆ ಚಂದನ್ ಸಿನಿಮಾ ರಿಲೀಸ್ ಆದ ಬಳಿಕ ಆ ಮಾತು ಸುಳ್ಳಾಗಿದೆ. ಇದೇ ಬೇಸರದಲ್ಲಿ ಚಂದನ್ ಈಗ ಟೆಂಪಲ್ ರನ್ ಶುರು ಮಾಡಿದ್ದು ಭಾರೀ ಕುತೂಹಲ ಮೂಡಿಸಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಮ್ಮೊಂದಿಗೆ ನಿರ್ದೇಶಕ ಚೇತನ್ ಕುಮಾರ್ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಚಂದನ್ ಶೆಟ್ಟಿ ಎಲ್ಲರೊಂದಿಗೆ ಚೆನ್ನಾಗಿ ಇದ್ದಾರೆ. ಗಾಯನ, ಸಂಗೀತ, ನಟನೆ ಹೀಗೆ ಮೂರು ವಿಭಾಗದಲ್ಲಿಯೇ ಇರೋ ಚಂದನ್ ಶೆಟ್ಟಿ ಎಲ್ಲರಿಗೂ ಬೇಕಾಗಿದ್ದಾರೆ. ಈ ಆತ್ಮೀಯತೆಯಿಂದ ಚೇತನ್ ಹಾಗೂ ಚಂದನ್ ಕುಕ್ಕೆಗೆ ಹೋಗಿರಬೇಕು ಎನ್ನಲಾಗುತ್ತಿದೆ.
ಆದರೆ ನಾವಿಬ್ಬರು ಟೆಂಪಲ್ ವಿಸಿಟ್ ಮಾಡಿದ್ವಿ ಬೇರೆನು ಇಲ್ಲ. ನಾವಿಬ್ಬರು ಸಿನಿಮಾ ಮಾಡ್ತಾಯಿಲ್ಲ ಎಂದು ಚೇತನ್ ಹೇಳಿಕೊಂಡಿದ್ದಾರೆ.












Click it and Unblock the Notifications