ಸೈಫ್ ಮನೆಗೆ ನುಗ್ಗಿದ ಕಳ್ಳರು: ಪಾರ್ಟಿ ಮಾಡುತ್ತಿದ್ದ ಕರೀನಾ ಕಪೂರ್ ಕಾಣಿಸ್ತಾನೇ ಇಲ್ಲ... Saif Ali Khan
ಕಳ್ಳರು ಮನೆಗೆ ನುಗ್ಗುವುದು, ಕಳ್ಳತನ ಮಾಡಿ ಮನೆ ದೋಚಿಕೊಂಡು ಪರಾರಿ ಆಗುವುದೆಲ್ಲ ಮಾಮೂಲು. ಅದರಲ್ಲೂ ಕೂಲಿ ಮಾಡಿ ಬದುಕುವ ಜನರು ನಗರ ಪ್ರದೇಶಗಳಲ್ಲಿ ನಿತ್ಯವೂ ಕಳ್ಳರ ಭಯದಲ್ಲೇ ರಾತ್ರಿ ಕಳೆಯುವ ಪರಿಸ್ಥಿತಿ ಇದೆ. ಮಧ್ಯಮ ವರ್ಗದ ಜನರ ಪಾಡು ಕೂಡ ಹೀಗೆ ಕಳ್ಳರ ಭಯದಲ್ಲೇ ನಡೆದು ಹೋಗುತ್ತಿದೆ. ಆದರೆ ಇಂದು ಸೈಫ್ ಅಲಿ ಖಾನ್ ರೀತಿಯ ದೊಡ್ಡ ಶ್ರೀಮಂತ ನಟನ ಮನೆಗೂ ಕಳ್ಳರು ನುಗ್ಗಿ ಚಾಕು ಹಾಕಿದ್ದಾರೆ. ಹಾಗಾದ್ರೆ ಈ ವೇಳೆ ಸೈಫ್ ಹೆಂಡತಿ ಕರೀನಾ ಕಪೂರ್ ಎಲ್ಲಿ ಇದ್ದರು?
ಹೌದು, ಬಾಲಿವುಡ್ ನಟ & ನಟಿಯರ ಮನೆಯಲ್ಲಿ ದುಡ್ಡು ತುಂಬಿ ತುಳುಕುತ್ತದೆ. ಹಾಗೇ ಚಿನ್ನ & ವಜ್ರದ ಆಭರಣಗಳಿಗೆ ಕೊರತೆ ಏನೂ ಇರೋದಿಲ್ಲ. ಇದೇ ಕಾರಣಕ್ಕೆ ಸದಾ ಕಳ್ಳರ ಕಣ್ಣು ಬಾಲಿವುಡ್ ನಟ & ನಟಿಯರ ಮನೆಗಳ ಮೇಲೆ ಇರುತ್ತದೆ. ಹೀಗಾಗಿ ಬಾಲಿವುಡ್ ನಟ & ನಟಿಯರು ತಮ್ಮ ತಮ್ಮ ಮನೆಗಳಿಗೆ ಭಾರಿ ಬಿಗಿ ಭದ್ರತೆ ನೀಡಿರುತ್ತಾರೆ. ಇಷ್ಟೆಲ್ಲಾ ಇದ್ದರೂ ಇದೀಗ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ ಕಳ್ಳರು ಚಾಕು ಹಾಕಿದ್ದಾರಂತೆ. ಹಾಗಾದರೆ ಈ ಸಮಯದಲ್ಲಿ ಸೈಫ್ ಅಲಿ ಖಾನ್ ಹೆಂಡತಿ ಕರೀನಾ ಕಪೂರ್ ಖಾನ್ ಎಲ್ಲಿ ಇದ್ದರು?

ಕರೀನಾ ಕಪೂರ್ ಖಾನ್ ಎಲ್ಲಿದ್ದರು?
ಇಂದು ಅಂದ್ರೆ ಜನವರಿ 16ರ ಬೆಳಗ್ಗೆ ಸೈಫ್ ಅಲಿ ಖಾನ್ & ಕರೀನಾ ಕಪೂರ್ ಖಾನ್ ಅವರ ಮನೆಗೆ ನುಗ್ಗಿದ್ದ ಕಳ್ಳರ ಪಡೆ ದೊಂಬಿ ಎಬ್ಬಿಸಿ ಚಾಕು & ಚೂರಿ ಹಾಕಿ ಹಿಂಸಾಚಾರ ನಡೆಸಿದೆ. ಇದೀಗ ಸೈಫ್ ಅಲಿ ಖಾನ್ ಅವರಿಗೆ ಸರ್ಜರಿ ಮಾಡಿಸಲಾಗಿದ್ದು, ಸೈಫ್ ದೇಹದಲ್ಲಿ ಇರುವ ಚಾಕು ಪೀಸ್ ಹೊರ ತೆಗೆಯಲಾಗಿದೆ. ಕರೀನಾ ಕಪೂರ್ ಗಂಡನ ಪರಿಸ್ಥಿತಿ ಚಿಂತಾಜನಕ ಅಂತಾ ಹೇಳಲಾಗಿದ್ದು ವೈದ್ಯರು ಕೂಡ ಚಿಕಿತ್ಸೆ ನೀಡ್ತಿದ್ದಾರೆ. ಹೀಗಿದ್ದಾಗಲೇ ಸೋಷಿಯಲ್ ಮೀಡಿಯಾ ಮಂದಿ ಕರೀನಾ ಕಪೂರ್ ಬಗ್ಗೆ ಏನು ಹೇಳ್ತಿದ್ದಾರೆ ಗೊತ್ತೆ?
ಕರೀನಾ ಕಪೂರ್ ಭರ್ಜರಿ ಪಾರ್ಟಿ?
ಹೌದು, ಕರೀನಾ ಕಪೂರ್ ಖಾನ್ ಅವರ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ಶುರುವಾಗಿದೆ. ಯಾಕಂದ್ರೆ ಸೋಷಿಯಲ್ ಮೀಡಿಯಾದಲ್ಲಿ ಕರೀನಾ ಕಪೂರ್ ಖಾನ್ ಅವರು ಹಂಚಿಕೊಂಡಿರುವ ಫೋಟೋಗಳು, ಕರೀನಾ ಕಪೂರ್ ಹುಡುಗಿಯರ ಗ್ಯಾಂಗ್ ಜೊತೆ ಸೇರಿ ಪಾರ್ಟಿ ಮಾಡಿದ್ದರು ಎಂಬುದನ್ನ ಸೂಚಿಸುತ್ತಿವೆ ಅಂತಾ ಸೋಷಿಯಲ್ ಮೀಡಿಯ ಮಂದಿ ಇದೀಗ ಮಾತನಾಡುತ್ತಿದ್ದಾರೆ.
ಮತ್ತೊಂದು ಕಡೆ ಗಂಡನಿಗೆ ಕಳ್ಳರು ಚಾಕು ಚುಚ್ಚಿದ ಸಮಯದಲ್ಲಿ ಇದೆಲ್ಲಾ ಬೇಕಿತ್ತಾ? ಅಂತಾ ಕೂಡ ಕರೀನಾ ಕಪೂರ್ ವಿರುದ್ಧ ಈಗ ಸೋಷಿಯಲ್ ಮೀಡಿಯಾ ಮಂದಿ ಪ್ರಶ್ನೆ ಮಾಡುತ್ತಾ ಟ್ರೋಲ್ ಮಾಡುತ್ತಿದ್ದಾರೆ. ಒಟ್ನಲ್ಲಿ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಕರೀನಾ ಕಪೂರ್ ಖಾನ್ ಅವರಿಂದ ಆಗಲಿ ಅಥವಾ ಸೈಫ್ ಅಲಿ ಖಾನ್ ಅವರಿಂದ ಆಗಲಿ ಹೊರಬಿದ್ದಿಲ್ಲ. ಈ ಹಿನ್ನೆಲೆ ಅಸಲಿ ಮ್ಯಾಟರ್ ಗೊತ್ತಾಗಲು ಮತ್ತಷ್ಟು ಸಮಯ ಕಾದು ನೋಡಬೇಕಿದೆ. ಮತ್ತೊಂದು ಕಡೆ ಈ ಫೋಟೋಗಳು ಹಳೆಯ ಪಾರ್ಟಿ ಫೋಟೋಸ್ ಎಂಬ ಚರ್ಚೆ ಕೂಡ ನಡೆಯುತ್ತಿದೆ!












Click it and Unblock the Notifications