Kangana Ranaut: ಡಿಸಿಎಂ ಡಿಕೆ ಶಿವಕುಮಾರ್ ಮಾತಿಗೆ ನಟಿ ಕಂಗನಾ ಕೆಂಡಾಮಂಡಲ
ಮಂಗಳೂರು ಮಾರ್ಚ್ 5: ಡಿಸಿಎಂ ಡಿಕೆ ಶಿವಕುಮಾರ್ ಆಡಿದ ನಟ್ಟು ಬೋಲ್ಟು ಮಾತು ಈಗ ಗಂಧದ ಗುಡಿಯ ಹಿರಿ ತಲೆಗಳನ್ನು ಕೆರಳಿಸಿದೆ. ಡಿಕೆ ಶಿವಕುಮಾರ್ ವಿರುದ್ಧ ವಾಗ್ವಾದ ಶುರು ಮಾಡಿದ ಚಂದನವನದ ಕಲಾವಿದರು ಮಾತಿನ ಮೇಲೆ ಹಿಡಿತ ಇರಬೇಕು ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಇದರೊಂದಿಗೆ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಕೂಡ ಡಿಕೆ ಶಿವಕುಮಾರ್ ಮಾತಿಗೆ ಟಕ್ಕರ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಆರಂಭವಾದ ಫಿಲ್ಮ ಫೆಸ್ಟಿವಲ್‌ಗೆ ಆಗಮಿಸಿದ ಸ್ಯಾಂಡಲ್‌ವುಡ್ ಕಲಾವಿದರು, ನಿರ್ಮಾಪಕರು, ನಿರ್ದೇಶಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ನಟ್ಟು ಬೋಲ್ಟು ಟೈಟ್ ಮಾಡುವುದಾಗಿ ಹೇಳಿದ ಮಾತಿನ ಸುತ್ತ ದೊಡ್ಡ ವಿವಾದದ ಹುತ್ತ ಬೆಳೆದು ನಿಂತಿದೆ. ಡಿಕೆ ಶಿವಕುಮಾರ್ ಮಾತು ಇಡೀ ಚಂದನವನವನ್ನು ಕೆರಳಿಸಿದೆ. ಅಲ್ಲದೆ ಡಿಕೆ ಮಾತಿಗೆ ನಟಿ ಕಂಗನಾ ಕೂಡ ಕೆಂಡಾಮಂಡಲರಾಗಿದ್ದಾರೆ.

ಡಿಕೆ ಶಿವಕುಮಾರ್ ಮಾತಿಗೆ ಕಂಗನಾ ಟಕ್ಕರ್
ಹೌದು... ಕಳೆದ ದಿನ ಮಂಗಳೂರಿನ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ನಟಿ ಕಂಗನಾ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಕಂಗನಾ, 'ಡಿಕೆ ಮಾತಿಗೆ ಕಿಡಿ ಕಾರಿದ್ದಾರೆ. ಕಲಾವಿದರ ನಟ್ಟು ಬೋಲ್ಟು ಟೈಟ್ ವಿಚಾರಕ್ಕೆ ಬಂದರೆ ಕಲಾವಿದರ ರಕ್ಷಣೆಗೆ ವಿಷ್ಣು ಭಗವಾನ್ ಹುಟ್ಟಿ ಬರುತ್ತಾರೆ' ಎಂದು ತಿರುಗೇಟು ಕೊಟ್ಟಿದ್ದಾರೆ.
''ಕಲಾವಿದರು ಯಾರಾಗಿದ್ದಾರೆ, ನಮ್ಮ ಶಾಸ್ತ್ರಗಳಲ್ಲೇ ನೋಡಿ. ಇಂದ್ರ ಬರಬಹುದು, ಅರ್ಜುನ ಬರಬಹುದು ಇವರೆಲ್ಲರೂ ಕಲೆಯ ವಿದ್ಯಾನಿಧಿಯಾಗಿದ್ದರು. ಕಲಾವಿದರು ಜೊತೆ ಯಾವಾಗಲು ಭಗವಾನ್ ಶಿವ ಇರುತ್ತಾನೆ. ಕಲಾಕಾರರ ಜೊತೆಗೆ ದೇವಿ ಸರಸ್ವತಿ ಇರುತ್ತಾಳೆ. ಯಾರದ್ದಾದ್ರೂ ಸ್ಕ್ರೂ, ನಟ್ಟು ಟೈಟ್ ಮಾಡಲು ಯತ್ನಿಸಿದ್ರೆ, ತೊಂದರೆಗೊಳಗಾದವರ ರಕ್ಷಣೆಗೆ ವಿಷ್ಣು ಜನ್ಮತಾಳುತ್ತಾನೆ. ನಮ್ಮನ್ನು ಕಾಪಾಡುತ್ತಾನೆ' ಎಂದು ಪ್ರತಿಕ್ರಿಯಿಸಿದ್ದಾರೆ.
515 ಜನರಿಗೆ ಆಹ್ವಾನ
ಇದರ ಬೆನ್ನಲ್ಲೇ ಫಿಲ್ಮ ಫೆಸ್ಟಿವಲ್‌ಗೆ ಯಾರಿಗೆಲ್ಲಾ ಆಹ್ವಾನ ನೀಡಲಾಗಿತ್ತು ಅನ್ನೋದನ್ನು ಆಯೋಜಕರು ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ನಟ ಸುದೀಪ್, ಯಶ್, ದರ್ಶನ್, ಗಣೇಶ್, ಡಾಲಿ ಧನಂಜಯ್, ಸುಮಲತಾ, ದುನಿಯಾ ವಿಜಯ್, ಉಪೇಂದ್ರ ಸೇರಿದಂತೆ 515 ಜನರಿಗೆ ಆಮಂತ್ರಣ ಹೋಗಿದೆ. ಆದರೂ ಕೆಲವರಿಗೆ ಮಿಸ್ ಆಗಿರಬಹುದು. ಅದು ಕೆಲವರಿಗೆ ಮಾತ್ರ ಮಿಸ್ ಆಗಿದೆ, ಆದರೆ ಪ್ರಮುಖ ನಟರಿಗೆ ಆಹ್ವಾನ ಮಿಸ್ ಆಗಿಲ್ಲ ಎಂದು ಸಾಧುಕೋಕಿಲ ಸ್ಪಷ್ಟನೆ ನೀಡಿದ್ದಾರೆ.
ಆದರೆ ಕೆಲವರು ನಮಗೆ ಆಹ್ವಾನ ಬಂದಿಲ್ಲ. ಆಹ್ವಾನ ನೀಡದೇ ಬರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆ ಡಿಕೆ ಶಿವಕುಮಾರ್ ಮಾತಿಗೆ ತೀವ್ರ ಆಕ್ರೋಶವನ್ನು ಹೊರ ಹಾಕಿದ್ದಾರೆ. ಟಿಎಸ್ ನಾಗಾಭರಣ, ಸಾರಾ ಗೋವಿಂದು ಇತರ ಕಲಾವಿದರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಕೀಯದಲ್ಲಿ ಹೆಚ್ಚಿದ ಕಿಚ್ಚು
ಅಷ್ಟೇ ಅಲ್ಲದೇ ಡಿಕೆ ಶಿವಕುಮಾರ್ ಮಾತಿಗೆ ವಿಪಕ್ಷ ನಾಯಕರೂ ತಿರುಗೆ ಬಿದ್ದಿದ್ದಾರೆ. ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ಆರ್ ಅಶೋಕ್ ಇತರ ವಿಪಕ್ಷ ನಾಯಕರು ಕಿಡಿ ಕಾರಿದ್ದಾರೆ. 'ನಟ್ಟು ಬೋಲ್ಟ್ ಟೈಟ್ ಮಾಡೋ ವೃತ್ತಿಯನ್ನು ಡಿಕೆ ಶಿವಕುಮಾರ್ ಯಾವಾಗ ಶುರು ಮಾಡಿದರು. ಡಿಸಿಎಂ ಸ್ಥಾನ ನೀಡಿದ್ದು ನೆಟ್ಟು ಬೋಲ್ಸ್ ಟೈಟ್ ಮಾಡೋಕಲ್ಲ. ಅದನ್ನು ಮಾಡಲು ಬೇರೆಯವರು ಇದ್ದಾರೆ. ಅವರು ಅವರ ಕೆಲಸ ನೋಡಲಿ ಸಾಕು' ಎಂದು ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದರು.
ಅಲ್ಲದೇ ಕಲಾವಿದರಿಗೆ ಬೆದರಿಕೆ ಹಾಕಿದ ಡಿಕೆ ಶಿವಕುಮಾರ್ ಅವರ ವಿರುದ್ಧ ಈಗ ಚಿತ್ರರಂಗವನ್ನೇ ತೊಡೆ ತಟ್ಟಿ ನಿಂತಿದೆ. ಈ ವಿವಾದ ಯಾವ ರೂಪ ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.












Click it and Unblock the Notifications