Salman Khan: ಸಲ್ಮಾನ್ ಖಾನ್‌ಗೆ ಲಾಸ್ಟ್ ವಾರ್ನಿಂಗ್ ಕೊಟ್ಟ ಬಿಷ್ಣೋಯ್ ಗ್ಯಾಂಗ್: ಈ ಬಾರಿ ಸಲ್ಲು ಖೇಲ್ ಖತಮ್!
ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ಮತ್ತೆ ಬೆದರಿಕೆ ಸಂದೇಶವೊಂದು ಬಂದಿದೆ. ಮುಂಬೈ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಮುಂಬೈ ಕಂಟ್ರೋಲ್ ರೂಂಗೆ ಈ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಈ ಸಂದೇಶದಲ್ಲಿ ಸಲ್ಮಾನ್ ಖಾನ್‌ಗೆ ಲಾಸ್ಟ್ ವಾರ್ನಿಂಗ್ ಕೊಡಲಾಗಿದೆ. ಇದು ಆತಂಕವನ್ನು ಸೃಷ್ಟಿಸಿದೆ.
ಮುಂಬೈ ಕಂಟ್ರೋಲ್ ರೂಂಗೆ ಬಂದ ಸಂದೇಶದಲ್ಲಿ ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯದ ದೇವಸ್ಥಾನಕ್ಕೆ ಹೋಗಿ ಕೃಷ್ಣಮೃಗ ಬೇಟೆಯಾಡಿದ್ದಕ್ಕೆ ಕ್ಷಮೆ ಯಾಚಿಸದಿದ್ದರೆ ಅಥವಾ 5 ಕೋಟಿ ಕೊಡದಿದ್ದರೆ ಪ್ರಾಣ ಕಳೆದುಕೊಳ್ಳುವುದು ಖಚಿತ ಎಂದು ಬೆದರಿಕೆ ಹಾಕಲಾಗಿದೆ.

ವರದಿಯ ಪ್ರಕಾರ ಸೋಮವಾರ (ಅಕ್ಟೋಬರ್ 4) ರಾತ್ರಿ ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ಈ ಬೆದರಿಕೆ ಸಂದೇಶ ಬಂದಿದೆ. ಮಧ್ಯರಾತ್ರಿಯಲ್ಲಿ ಅಧಿಕಾರಿಯೊಬ್ಬರು ಆ ಸಂದೇಶವನ್ನು ಗಮನಿಸಿದ್ದಾರೆ. ಸಲ್ಮಾನ್ ಖಾನ್ ಬದುಕಬೇಕಾದರೆ ನಮ್ಮ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಇಲ್ಲವೇ 5 ಕೋಟಿ ರೂಪಾಯಿ ನೀಡಬೇಕು ಎಂದು ಸಂದೇಶದಲ್ಲಿ ಬರೆಯಲಾಗಿದೆ. ಜೊತೆಗೆ ಸಲ್ಮಾನ್ ಖಾನ್ ಕೊಲ್ಲಲು ನಮ್ಮ ಗ್ಯಾಂಗ್ ಇನ್ನೂ ಸಕ್ರಿಯವಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 25 ರಂದು ಸಲ್ಮಾನ್‌ಗೆ ಎರಡು ಬಾರಿ ಬೆದರಿಕೆಗಳು ಬಂದಿದ್ದವು: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಮಗ ಜೀಶಾನ್ ಅವರ ಕಚೇರಿಗೆ ಸಂದೇಶವನ್ನು ಕಳುಹಿಸಲಾಗಿತ್ತು. ಅದರಲ್ಲಿ 2 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಸಲ್ಮಾನ್ ಮತ್ತು ಜೀಶಾನ್ ಈ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಹೇಳಲಾಗಿತ್ತು. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ನೋಯ್ಡಾ ಮೂಲದ 20 ವರ್ಷದ ಮೊಹಮ್ಮದ್ ತಯ್ಯಬ್ ಎಂಬಾತನನ್ನು ಬಂಧಿಸಿದ್ದರು.
ಅಕ್ಟೋಬರ್ 30: ಸಲ್ಮಾನ್‌ಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ 56 ವರ್ಷದ ಅಜಮ್ ಮೊಹಮ್ಮದ್ ಮುಸ್ತಫಾ ಅವರನ್ನು ಬಂಧಿಸಲಾಯಿತು. ಮುಂಬೈನ ಸಂಚಾರ ನಿಯಂತ್ರಣ ಕೊಠಡಿಗೆ ಅಜಮ್ ಎಂಬಾತ ಸಂದೇಶ ರವಾನೆ ಮಾಡಿದ್ದನು. ಸಲ್ಮಾನ್ 2 ಕೋಟಿ ನೀಡದಿದ್ದರೆ ಕೊಲೆ ಮಾಡುವುದಾಗಿ ಸಂದೇಶದಲ್ಲಿ ಹೇಳಲಾಗಿತ್ತು. ಆದರೆ ಈ ಎಲ್ಲಾ ಕೊಲೆ ಬೆದರಿಕೆಗಳ ನಡುವೆಯೂ ನಟ ಹೆದರದೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಹೌದು.. ಸತತ ಬೆದರಿಕೆ ಸಂದೇಶಗಳ ನಡುವೆಯೂ ಸಲ್ಮಾನ್ ಸಿಕಂದರ್ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್‌ಗೆ ತೆರಳಿದ್ದಾರೆ. ನಟ ಚಿತ್ರದ ಶೂಟಿಂಗ್‌ಗಾಗಿ ಹೈದರಾಬಾದ್‌ನ ಪ್ರಸಿದ್ಧ ತಾಜ್ ಫಲಕ್ನುಮಾ ಅರಮನೆಯಲ್ಲಿ ತಂಗಿದ್ದಾರೆ. ನಟನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಮನೆಯಲ್ಲೂ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.
ಸಿನಿಮಾ ಶೂಟಿಂಗ್‌ಗಾಗಿ ತಾಜ್ ಫಲಕ್ನುಮಾ ಅರಮನೆಯನ್ನು ಅದ್ಭುತ ದೀಪಗಳಿಂದ ಅಲಂಕರಿಸಲಾಗಿದೆ. ಒಂದು ದಿನದ ಹಿಂದೆಯೇ ಚಿತ್ರತಂಡ ಹೋಟೆಲ್ ತಲುಪಿದೆ. ಚಿತ್ರೀಕರಣಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಮದುವೆ ಇದೇ ಸ್ಥಳದಲ್ಲಿ ನಡೆದಿತ್ತು. ಈಗ ಸಿನಿಮಾ ಶೂಟಿಂಗ್ ಕೂಡ ಇದೇ ಸ್ಥಳದಲ್ಲಿ ಮಾಡಲಾಗುತ್ತಿದೆ.












Click it and Unblock the Notifications