Mokshitha Pai: 'ಮೋಕ್ಷಿತಾ ಬಿಗ್‌ಬಾಸ್ ಗೆದ್ದರೆ ಅರ್ಧ ಮೀಸೆ ತೆಗೆಯುತ್ತೇನೆ' ಹೀಗಂದಿದ್ದು ಯಾರು?
ಬಿಗ್‌ಬಾಸ್ ಇನ್ನೇನು ಜನವರಿ ತಿಂಗಳಲ್ಲಿ ಮುಗಿಯಲಿದೆ. ಇದಕ್ಕಾಗಿ ಸ್ಪರ್ಧಿಗಳು ಹೈ ಅಲರ್ಟ್ ಆಗಿದ್ದಾರೆ. ಬಿಗ್‌ಬಾಸ್ ವೀಕ್ಷಕರು ಯಾವ ಸ್ಪರ್ಧಿ ಈ ಬಾರಿ ಕಪ್ ಗೆಲ್ಲಬಹುದು, ಗ್ಯ್ರಾಂಡ್ ಫಿನಾಲೆಗೆ ತಲುಪಬಹುದು ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ. ಜನವರಿ ಮೂರನೇ ವಾರ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯುವ ಸಾಧ್ಯತೆ ಇದೆ. ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕೂಡ ಕಡಿಮೆ ಆಗಿದೆ. ಪ್ರಸ್ತುತ ಒಂಬತ್ತು ಜನ ಮಾತ್ರ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ನಡುವೆ ವೀಕ್ಷಕರು ಈ ಬಾರಿ ಬಿಗ್‌ಬಾಸ್ ನಲ್ಲಿ ಯಾರು ಗೆಲ್ಲಬಹುದು ಎನ್ನುವ ಪ್ರಶ್ನೆಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ಹೌದು... ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿ ಮೋಕ್ಷಿತಾ ಪೈ ಚೆನ್ನಾಗಿ ಆಟ ಆಡಿಕೊಂಡು ಬಂದಿದ್ದಾರೆ. ಹೀಗಾಗಿ ಹರಗಡೆ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಮೋಕ್ಷಿತಾ ಪೈ ಅವರೇ ಈ ಬಾರಿ ಬಿಗ್‌ಬಾಸ್ ವಿನ್ನರ್ ಎನ್ನುವ ವೀಡಿಯೋಗಳು ಹರಿದಾಡುತ್ತಿವೆ. ಇದಕ್ಕೆ ಕೆಲ ವೀಕ್ಷಕರು ವಿರೋಧ ವ್ಯಕ್ತಪಡಿಸಿದ್ದು ಮೋಕ್ಷಿತಾ ಅವರು ಗೆಲ್ಲಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಬಿಗ್‌ಬಾಸ್ ವೀಕ್ಷಕರು ಒಬ್ಬರು ಮೋಕ್ಷಿತಾ ಪೈ ಗೆಲ್ಲಲು ಸಾಧ್ಯವೇ ಇಲ್ಲ. ಒಂದು ವೇಳೆ ಅವರು ಗೆದ್ದರೆ ನಾನು ತಿರುಪತಿಗೆ ಹೋಗಿ ಮುಡಿಕೊಟ್ಟು ಬರುತ್ತೇನೆ ಎಂದು ಸವಾಲು ಹಾಕಿದ್ದಾರೆ. ಅಷ್ಟಕ್ಕೂ ಮೋಕ್ಷಿತಾ ಅವರ ಬಗ್ಗೆ ಬಿಗ್‌ಬಾಸ್ ವೀಕ್ಷಕರು ಹೀಗೆ ಹೇಳಿದ್ದಕ್ಕೆ ಕಾರಣ ಏನು? ಮೋಕ್ಷಿತಾ ಪೈ ಬಿಗ್‌ಬಾಸ್‌ನಲ್ಲಿ ಗೆಲುವು ಸಾಧಿಸಲ್ವಾ? ಇದೆಲ್ಲದರ ಬಗ್ಗೆ ಈಗ ತಿಳಿಯೋಣ.
'ಮೋಕ್ಷಿತಾ ಗೆಲ್ಲಲು ಸಾಧ್ಯವೇ ಇಲ್ಲ'
ಮೋಕ್ಷಿತಾ ಅವರು ಪಾರು ಧಾರಾವಾಹಿಯ ಮೂಲಕ ಒಂದಿಷ್ಟು ಜನ ಮೆಚ್ಚುಗೆಯನ್ನು ಪಡೆದ ಹುಡುಗಿ. ನಂತರ ಇವರು ಬಿಗ್‌ಬಾಸ್‌ಗೆ ಬಂದ ಬಳಿಕವಷ್ಟೇ ಅವರ ಬಗ್ಗೆ ಜನ ಹೆಚ್ಚಿನ ಮಾಹಿತಿ ಹುಡುಕಾಡತೊಡಗಿದರು. ಮುಗ್ಧ ಹುಡುಗಿ ಅಂತ ಜನ ಹೆಚ್ಚಿನ ಸಂಖ್ಯೆಯಲ್ಲಿ ಮತ ಕೂಡ ಚಲಾಯಿಸುತ್ತಿದ್ದಾರೆ. ಆದರೆ ನಾವು ಹೊರಗಡೆ ಅಂದರೆ ಧಾರವಾಹಿಯಲ್ಲಿ ನೋಡಿದ ಮೋಕ್ಷಿತಾ ಅವರೇ ಬೇರೆ. ಬಿಗ್‌ಬಾಸ್ ಮನೆಯಲ್ಲಿ ಇರುವ ಮೋಕ್ಷಿತಾನೇ ಬೇರೆ. ಅವರು ಯಾವಾಗಲೂ ಅವರದ್ದೇ ಆದ ಗುಂಗಲ್ಲಿ ಇರುತ್ತಾರೆ. ದ್ವೇಷ ಇಟ್ಟುಕೊಂಡು ಆಟ ಆಡುತ್ತಾರೆ ಹೀಗಾಗಿ ಅವರು ಗೆಲ್ಲಲು ಸಾಧ್ಯವೇ ಇಲ್ಲ ಎಂದು ವೀಕ್ಷಕರು ಹೇಳಿಕೊಳ್ಳುತ್ತಿದ್ದಾರೆ.

'ಮೋಕ್ಷಿತಾಳನ್ನ ಗೆಲ್ಲಿಸಲೆಂದೇ ಬಿಗ್‌ಬಾಸ್‌ಗೆ ಕರೆತಂದಿದ್ದಾರೆ'
ಮೋಕ್ಷಿತಾ ಅವರನ್ನೇ ಗೆಲ್ಲಿಸುತ್ತಾರೆ ಎನ್ನುವ ವದಂತಿ ಇದೆ. ಆದರೆ ಮೋಕ್ಷಿತಾ ಗೆಲ್ಲೋಕೆ ಚಾನ್ಸೆ ಇಲ್ಲ. ಯಾಕೆಂದರೆ ಅವರು ಮೊದಲು ಗುಂಪುಗಾರಿಕೆ ಮೂಲಕ ಆಟ ಆಡಿದ್ರು. ನಂತರ ಆ ಗುಂಪು ಸ್ನೇಹಿತರಿಂದ ಹೊರಬಂದು ದ್ವೇಷ ಇಟ್ಟುಕೊಂಡು ಆಡಲು ಶುರು ಮಾಡಿದ್ದಾರೆ. ಪ್ರಸ್ತುತ ಕೂಡ ಅವರು ಅವರದ್ದೇ ಆದ ಲೋಕದಲ್ಲಿ ಇರುತ್ತಾರೆ. ದ್ವೇಷ ಕಾರುವುದನ್ನು ಬಿಟ್ಟಿದ್ದರೆ, ಗುಂಪುಗಾರಿಕೆಯನ್ನು ಬಿಟ್ಟಿದ್ದರೆ ಅವರೊಬ್ಬ ಒಳ್ಳೆಯ ಸ್ಪರ್ಧಿ ಆಗಿರುತ್ತಿದ್ದರು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
'ಮೋಕ್ಷಿತಾ ಬಿಗ್‌ಬಾಸ್ ಗೆದ್ದರೆ ಅರ್ಧ ಮೀಸೆ ಬೋಳಿಸುತ್ತೇನೆ'
ಇನ್ನೂ ಬೈ ಚಾನ್ಸ್ ಮೋಕ್ಷಿತಾ ಬಿಗ್‌ಬಾಸ್ ವಿನ್ನರ್ ಆದರೆ ಎನ್ನುವ ಪ್ರಶ್ನೆಗೆ ವೀಕ್ಷಕರೊಬ್ಬರು,'ಒಂದು ವೇಳೆ ಮೋಕ್ಷಿತಾ ಅವರು ಬಿಗ್‌ಬಾಸ್ ವಿನ್ನರ್ ಆದರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ. ತಿರುಪತಿಗೆ ಹೋಗಿ ಮುಡಿಕೊಟ್ಟು ಬರುತ್ತೇನೆ' ಎಂದು ಸವಾಲು ಹಾಕಿದ್ದಾರೆ.
ಒಟ್ಟಿನಲ್ಲಿ ಮೋಕ್ಷಿತಾ ಅವರು ಬಿಗ್‌ಬಾಸ್ ವಿನ್ನರ್ ಆಗುವುದರಲ್ಲಿ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಬಾರಿ ಟಾಪ್ ಐದು ಯಾರು ಆಗುತ್ತಾರೆ. ಬಿಗ್‌ಬಾಸ್ ವಿನ್ನರ್ ಕಪ್ ಯಾರ ಕೈ ಸೇರಲಿದೆ ಎಂದು ಕೆಲವೇ ದಿನಗಳಲಲ್ಲಿ ಗೊತ್ತಾಗಲಿದೆ.












Click it and Unblock the Notifications