Bigg Boss: ಅಯ್ಯಯ್ಯೋ... ಹನುಮಂತನನ್ನು ಎತ್ತಿ ಹಾಕಿದ ಮಹಾರಾಜ ಮಂಜು- ದೊಡ್ಮನೆಯಲ್ಲಿ ಮಹಾ ಯುದ್ಧ!
ಬಿಗ್‌ಬಾಸ್ ಮನೆಯಲ್ಲಿ ಮಹಾರಾಜ ಹಾಗೂ ಮಹಾರಾಣಿ ಆಟ ಶುರುವಾಗಿದೆ. ಮಂಜು ಟಾಸ್ಕ್‌ವೊಂದರಲ್ಲಿ ಮಹಾರಾಜನಾದರೆ ಅವರಿಗೆ ಠಕ್ಕರ್ ಕೊಡಲು ಮೋಕ್ಷಿತಾ ಮಹಾರಾಣಿ ಆಗಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಫೈಟ್ ಜೋರಾಗಿದೆ. ಇನ್ನೂ ಇತ್ತ ಇವರಿಬ್ಬರ ನಡುವೆ ಯಾರಿಗೆ ಪ್ರಾಶಸ್ತ್ಯ ನೀಡಬೇಕು ಅನ್ನೋದು ಮನೆ ಮಂದಿಗೆ ಗೊಂದಲ ಶುರುವಾಗಿದೆ. ಈ ಟಾಸ್ಕ್ ಭರದಲ್ಲಿ ಮಂಜು ಹನುಮಂತನನ್ನು ಎತ್ತಿ ಹಾಕಿದ್ದಾರೆ.
ಹೌದು.. ಬಿಗ್‌ಬಾಸ್ ಮನೆಯಲ್ಲಿ ಮೂಲ ಸ್ಪರ್ಧಿಗಳು ಹಾಗೂ ವೈಲ್ಡ್ ಕಾರ್ಡ್ ಸ್ಪರ್ಧಿಗಳ ನಡುವೆ ಆಟ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ 60 ದಿನಗಳನ್ನು ಪೂರೈಸಿದ ಸ್ಪರ್ಧಿಗಳು ಗೆಲ್ಲುವ ಛಲದಲ್ಲಿ ಇದ್ದರೆ ವೈಲ್ಡ್ ಕಾರ್ಡ್ ಸ್ಪರ್ಧಿಗಳು ನಾವೇನ್ ಕಮ್ಮಿ ಇಲ್ಲ ಅಂತ ತೊಡೆ ತಟ್ಟಿ ನಿಂತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಆಗಾಗ ನೀಡುವ ಟಾಸ್ಕ್‌ಗಳಲ್ಲಿ ತಮ್ಮನ್ನ ತಾವು ಗುರುತಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿರುವುದು ಎದ್ದು ಕಾಣುತ್ತಿದೆ.

ಇತ್ತೀಚೆಗೆ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಆಗಿ ಆಗಮಿಸಿದ ಶೋಭಾ ಶೆಟ್ಟಿ, ರಜತ್ ಎಲ್ಲರಿಗಿಂತ ತಾವು ಸ್ಟ್ರಾಂಗ್ ಅನ್ನೋದನ್ನು ಸಾಬೀತು ಮಾಡಲು ಹೊರಟರೆ, ಹನುಮಂತ ಮಾತ್ರ 'ಗೆಳತಿ' ಹಾಡಿನೊಂದಿಗೆ ಬಿಗ್‌ಬಾಸ್ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಶಕ್ತಿ ಪ್ರದರ್ಶನದಲ್ಲಿ ತಾವು ಸ್ಟ್ರಾಂಗ್ ಅಂತ ತೋರಿಸಲು ಹಲವಾರು ಸ್ಪರ್ಧಿಗಳು ಮುನ್ನುಗ್ಗುತ್ತಲೇ ಇದ್ದಾರೆ. ಈ ನಡುವೆ ದೊಡ್ಮನೆಯಲ್ಲಿ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೀಡಲಾಗಿದೆ. ಆ ಟಾಸ್ಕ್‌ನಲ್ಲಿ ಉಗ್ರಂ ಮಂಜು ಮಹಾರಾಜ ಆಗಿದ್ದಾರೆ. ಇವರ ವಿರುದ್ಧ ಮೋಕ್ಷಿತಾ ಅವರು ಮಹಾರಾಣಿಯಾಗಿದ್ದು ಮಹಾರಾಜನಿಗಿರುವ ಸೌಲಭ್ಯಗಳನ್ನು ಪಡೆಯಲು ಯತ್ನಿಸುತ್ತಿದ್ದಾರೆ. ಮೊದಲು ಕ್ಯಾಪ್ಟನ್ ರೂಮ್‌ಗೆ ಮಹಾರಾಣಿ ಮೋಕ್ಷಿತಾ ಹೋಗಲು ಪ್ರಯತ್ನಿಸುತ್ತಾರೆ. ಆದರೆ ಇದಕ್ಕೆ ಸೈನಿಕರು ಅವರನ್ನು ಬಿಡುವುದಿಲ್ಲ.

ಬಳಿಕ ಅವರು ಮಹಾರಾಜನ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಇದಕ್ಕೆ ಕೋಪಗೊಂಡ ಮಂಜು ಮೋಕ್ಷಿತರನ್ನು ಎದ್ದೇಳುವಂತೆ ಕೇಳುತ್ತಾರೆ. ಆದರೆ ಮೋಕ್ಷಿತಾ ಏಳಲು ನಿರಾಕರಿಸಿದಾಗ ಮಂಜು ಬಲವಂತವಾಗಿ ಮೋಕ್ಷಿತಾರನ್ನು ಖುರ್ಚಿಯಿಂದ ಎಬ್ಬಿಸಲು ಮುಂದಾದಾಗ ಸೈನಿಕರು ಅವರನ್ನು ತಡೆಯುತ್ತಾರೆ. ಈ ಸೈನಿಕರಲ್ಲಿ ಹನುಮಂತ ಕೂಡ ಇರುತ್ತಾರೆ. ಆಗ ಮಂಜು ತಮ್ಮನ್ನು ತಡೆಯಲು ಬಂದ ಹನುಮಂತನನ್ನು ಎತ್ತಿ ಕೆಳಗೆ ಬೀಳಿಸುತ್ತಾರೆ. ಮಹಾರಾಜ ಮಂಜು ಹನುಮಂತನನ್ನು ಸಲೀಸಾಗಿ ಎತ್ತಿ ಸೈಡಿಗೆ ತಂದು ಹಾಕುತ್ತಾರೆ. ಇದರಿಂದ ಮನೆ ಮಂದಿ ಎಲ್ಲಾ ಗಾಬರಿಗೊಳ್ಳುತ್ತಾರೆ.
ಹನುಮಂತಗೆ ಗಾಯ
ಮಂಜು ಹನುಮಂತನನ್ನು ಎತ್ತಿ ಬೀಸಾಡಿದ್ದರಿಂದ ಹನುಮಂತಗೆ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ. ಇಂದಿನ ಸಂಚಿಕೆಯಲ್ಲಿ ಹನುಮಂತಗೆ ಏನಾಯ್ತು ಎನ್ನುವುದರ ವಿಚಾರ ತಿಳಿದು ಬರಲಿದೆ. ಆದರೆ ಬಿಗ್‌ಬಾಸ್ ಮಹಾರಾಜನ ಟಾಸ್ಕ್‌ನಲ್ಲಿ ಉಗ್ರಂ ಮಂಜು ಹಾಗೂ ಮೋಕ್ಷಿತಾ ನಡುವೆ ಫೈಟ್ ಜೋರಾಗಿದ್ದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಟಾಸ್ಕ್‌ನಲ್ಲಿ ಯಾರ ಪಾತ್ರ ಎಷ್ಟಿತ್ತು, ಯಾರು ಎಷ್ಟು ಅಗ್ರೆಸಿವ್ ಆಗಿ ಭಾಗವಹಿಸಿದರು, ಯಾರಿಗೆ ಕಷ್ಟ ಆಯ್ತು, ಯಾರಿಗೆ ಪೆಟ್ಟಾಯ್ತು, ಎಲ್ಲದರ ಬಗ್ಗೆ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಒಟ್ಟಿನಲ್ಲಿ ಉಗ್ರಂ ಮಂಜು ಮಹಾರಾಜನಾಗಿ ತಮ್ಮ ಉಗ್ರ ರೂಪ ತೋರಿಸಿದ್ದು ಮನೆ ಮಂದಿಯಲ್ಲಾ ತಂಡಾ ಹೊಡೆದಿದ್ದಾರೆ. ಹಾಗಾದರೆ ಕೊನೆಯಲ್ಲಿ ಮೋಕ್ಷಿತಾಳಿಂದ ಮಂಜು ತಮ್ಮ ಖುರ್ಚಿಯನ್ನು ಕಸಿದುಕೊಳ್ತಾರಾ? ಅಥವಾ ಸೈನಿಕರಿಂದ ಆ ಖರ್ಚಿ ಕಸಿದುಕೊಳ್ಳಲು ಮಂಜು ಅವರಿಗೆ ಕಷ್ಟವಾಗುತ್ತಾ ಕಾದು ನೋಡಬೇಕಿದೆ.












Click it and Unblock the Notifications