Bigg Boss: ಬಿಗ್‌ಬಾಸ್ ಮನೆ ಖಾರ... ಖಾರ... ತಲೆ ಕೂದಲು ತೆಗೆದ ರಜತ್, ಮೆಣಸಿನಕಾಯಿ ತಿಂದ ಗೌತಮಿ-ಐಶ್ವರ್ಯ!

ಬಿಗ್‌ಬಾಸ್‌ ದಿನದಿಂದ ದಿನಕ್ಕೆ ಹೆಚ್ಚು ಕಠಿಣ ಟಾಸ್ಕ್‌ಗಳನ್ನು ನೀಡಲು ಆರಂಭಿಸಿದ್ದಾರೆ. ವಿಶೇಷವಾಗಿ ಈ ವಾರದ ಟಾಸ್ಕ್‌ನಲ್ಲಿ ಕಳೆದ ದಿನ ನೀಡಿದ ಟಾಸ್ಕ್ ತುಂಬಾ ಚಾಲೆಂಜಿಂಗ್ ಆಗಿರುವುದು ಕಂಡು ಬಂದಿದೆ. ಇದರಲ್ಲಿ ರಜತ್ ತಲೆ ಕೂದಲನ್ನು ತೆಗೆಸಿಕೊಂಡರೆ, ಗೌತಮಿ ಹಗಲಕಾಯಿ ಮೆಣಸಿನಕಾಯಿಯನ್ನು ತಿಂದಿದ್ದಾರೆ. ಆದರೆ ಐಶ್ವರ್ಯ ಹಾಗೂ ಶಿಶಿರ್ ಮಾತ್ರ ನೋ ಅಂತ ಹಿಂದೆ ಸರಿದಿದ್ದಾರೆ.

ಹೌದು... ಬಿಗ್‌ಬಾಸ್‌ ಸೀಸನ್ 11ರ ಕಳೆದ ದಿನದ ಎಪಿಸೋಡ್ ತುಂಬಾ ಚಾಲೆಂಜಿಂಗ್ ಆಗಿತ್ತು. ಈ ಟಾಸ್ಕ್‌ ಹೆಸರು ಎಸ್ ಆರ್‌ ನೋ (Yes or No). ಬಿಗ್‌ಬಾಸ್ ಎರಡು ಟಿವಿ ವಾಹಿನಿಯವರಿಗೆ ಸವಾಲನ್ನು ನೀಡಿದ್ದರು. ಇದರಲ್ಲಿ ಎದುರಾಳಿ ತಂಡದಿಂದ ನೀಡುವ ಯಾವುದೇ ಟಾಸ್ಕ್‌ ಅನ್ನು ನೋ ಅನ್ನದೆ ಮಾಡಿದರೆ ಮತ್ತೊಂದು ತಂಡ ಗೆಲುವು ಸಾಧಿಸುತ್ತದೆ. ಈ ಆಟದಲ್ಲಿ ರಜತ್‌ಗೆ ತಲೆ ಕೂದಲು ತೆಗೆಸುವ ಟಾಸ್ಕ್‌ ನೀಡಲಾಯಿತು. ಇದಕ್ಕೆ ರಜತ್ ನೋ ಅನ್ನಲೇ ಇಲ್ಲ. ಟಾಸ್ಕ್ ನೀಡಿದ ಮಂಜು ಅವರೇ ರಜತ್ ತಲೆ ಕೂದಲನ್ನು ತೆಗೆದಿದ್ದಾರೆ.

Bigg boss tough game rajat removed his hair gauthami jadav-aishwarya shindogi ate chili

ಇನ್ನೂ ರಜತ್‌ ಅವರನ್ನು ಒಳಗೊಂಡಿದ್ದ ಧನರಾಜ್ ತಂಡ ಐಶ್ವರ್ಯ ಅವರಿಗೆ ಮೂರು ಹಾಗಲಕಾಯಿ ಹಾಗೂ ಮೂರು ಮೆಣಸಿನಕಾಯಿ ತಿನ್ನುವ ಟಾಸ್ಕ್‌ ಅನ್ನು ನೀಡುತ್ತಾರೆ. ಆದರೆ ಐಶ್ವರ್ಯ ಅವರು ಪ್ರಯತ್ನ ಪಟ್ಟರು, ಟಾಸ್ಕ್ ಪೂರ್ಣಗೊಳಿಸಲು ಆಗುವುದೇ ಇಲ್ಲ. ನಂತರ ಗೋಲ್ಡ್ ಸುರೇಶ್ ಅವರ ತಂಡದವರು ಶಿಶಿರ್ ಅವರಿಗೆ ಟಾಸ್ಕ್ ಅನ್ನು ನೀಡುತ್ತಾರೆ. ಶಿಶಿರ್ ರಜತ್‌ ಅವರನ್ನು ಬೆನ್ನು ಮೇಲೆ ಸಿಲ್ಲಿಸಿಕೊಳ್ಳಬೇಕು. ಇದು ಕೂಡ ಆಗುವುದಿಲ್ಲ.

ಮೆಣಸಿನಕಾಯಿ ತಿಂದು ನಂತರದ ಡ್ರಾಮಾ...

ಬಳಿಕ ರಜತ್ ಗೌತಮಿಗೆ ಮೆಣಸಿನಕಾಯಿ ತಿನ್ನೋ ಸವಾಲನ್ನು ಒಡ್ಡುತ್ತಾರೆ. ಇದನ್ನು ಒಪ್ಪಿಕೊಂಡ ಗೌತಮಿ ಮೆಣಸಿನಕಾಯಿ ತಿಂದ ಬಳಿಕ ಸಖತ್ತಾಗಿ ಡ್ರಾಮಾ ಮಾಡಿದ್ದಾರೆ. ಮೆಣಸಿನಕಾಯಿ ತಿಂದು ನಂತರ ಬಾಯಿಯನ್ನು ತೋರಿಸಿ ರಜತ್‌ಗೆ ಪರಿಶೀಲನೆ ಮಾಡಲು ಗೌತಮಿ ಕೇಳುತ್ತಾರೆ. ತಿನ್ನೋವರೆಗೂ ಚೆನ್ನಾಗಿದ್ದ ಗೌತಮಿ ಕೊನೆಯಲ್ಲಿ ಆಡಿದ್ದು ಮಾತ್ರ ತುಂಬಾನೇ ವಿಚಿತ್ರ.

'ಮುಚ್ಕೊಂಡು ಕುತ್ಕೊಳೋ...' ಚೈತ್ರಾ ಗರಂ

ಇನ್ನೂ ಇದೇ ವೇಳೆ ಚೈತ್ರಾ ಮತ್ತೆ ನಾಲಿಗೆ ಹರಿಬಿಟ್ಟು ಮಾತನಾಡಿದ್ದಾರೆ. ತ್ರಿವಿಕ್ರಮ್ ವಿರುದ್ಧ ಟಾಸ್ಕ್‌ ವೇಳೆ ಗರಂ ಆದ ಚೈತ್ರಾ ಅವರಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ. ಟಾಸ್ಕ್‌ ವೇಳೆ ವಾದ ಮಾಡಿದ ನನಗೂ, ಏನೋ ವಾದ ಮಾಡದ ಹನುಮಂತಗೂ ಒಂದೇ ರೀತಿಯ ಅಂಕವನ್ನು ತ್ರಿವಿಕ್ರಮ್ ಕೊಟ್ಟಿದ್ದಾರೆ ಎಂದು ಚೈತ್ರಾ ಆಕ್ರೋಶಗೊಂಡು ಕೂಗಾಡಿದ್ದಾರೆ. ಚೈತ್ರಾ ಕೂಗಾಟಕ್ಕೆ ಮನೆ ಮಂದಿಯೆಲ್ಲಾ ಸೈಲೆಂಟ್ ಆಗಿದ್ದಾರೆ. ಹೀಗೆ ಕಠಿಣಸವಾಲುಗಳನ್ನು ಎದುರಿಸುತ್ತಾ ಬಿಗ್‌ಬಾಸ್‌ ಮನೆ ಕಳೆದ ದಿನ ಖಾರ... ಖಾರವಾಗಿ ಹೋಗಿತ್ತು.

ಮುಂದಿನ ದಿನಗಳಲ್ಲಿ ಸ್ಪರ್ಧಿಗಳಿಗೆ ಬಿಗ್‌ಬಾಸ್ ಇನ್ನಷ್ಟು ಕಠಿಣ ಟಾಸ್ಕ್‌ಗಳು ನೀಡುವ ಲಕ್ಷಣಗಳು ದಟ್ಟವಾಗಿದೆ. ಹೀಗಾಗಿ ಇನ್ಮುಂದೆ ವೈಯಕ್ತಿಕ ಆಟ ಮಾತ್ರ ಆಡಿ ಗೆಲ್ಲಲು ಸಾಧ್ಯ ಬಿಟ್ಟರೆ ಫೇವರ್ ಗೇಮ್ ನಡೆಯುವುದೇ ಇಲ್ಲ. ಹಾಗಾದರೆ ಶಿಶಿರ್-ಐಶ್ವರ್ಯ, ಮಂಜು-ಗೌತಮಿ ನಡುವೆ ಫೇವರ್ ಗೇಮ್ ಕೊನೆಗೊಳ್ಳುತ್ತಾ ಅಥವಾ ಅದೇ ಮುಂದುವರೆಯುತ್ತಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+