Bigg Boss: ಬಿಗ್ ಬಾಸ್ ಶಿಶಿರ್‌ಗೆ ಡಿವೋರ್ಸ್ ಆಗಿರುವುದು ನಿಜನಾ?
ಬಿಗ್ ಬಾಸ್ ಕನ್ನಡ ಸೀಜನ್ 11 ಆರಂಭವಾಗಿ ಎರಡು ತಿಂಗಳು ಕಳೆದಿದ್ದು, ಇನ್ನೇನು ಈ ಸೀಜನ್ ಮುಗಿಯುವ ದಿನಗಳು ಸಮೀಪಿಸುತ್ತಿದೆ. ಮೊದಮೊದಲು ಬರೀ ಗಲಾಟೆ, ಜಗಳ, ವಾದದಿಂದ ಶುರುವಾಗಿದ್ದ ಈ ಬಾರಿಯ ಬಿಗ್ ಬಾಸ್, ಬರಬರುತ್ತಾ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಟಿಆರ್‌ಪಿಯಲ್ಲೂ ಬಿಗ್ ಬಾಸ್ ಅಗ್ರಸ್ಥಾನ ಕಾಯ್ದುಕೊಂಡಿದೆ.
ಬಿಗ್ ಬಾಸ್ ಕನ್ನಡ ಸೀಜನ್ 11ರಲ್ಲಿ ಅನೇಕ ಧಾರಾವಾಹಿ ನಟ-ನಟಿಯರೇ ಹೆಚ್ಚಿದ್ದು, ಈ ಪೈಕಿ ಶಿಶಿರ್ ಶಾಸ್ತ್ರಿ ಕೂಡ ಇಬ್ಬರು. ಅನೇಕ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ಶಿಶಿರ್ ಇದೀಗ ಬಿಗ್ ಬಾಸ್ ಕನ್ನಡ ಸೀಜನ್ 11ರ ಸೆಂಟರ್ ಆಫ್ ಆಟ್ರಾಕ್ಷನ್ ಕೂಡ ಹೌದು. ಯಾಕೆಂದರೆ ಬಿಗ್ ಬಾಸ್ ಮನೆಯೊಳಗಷ್ಟೇ ಅಲ್ಲದೇ ಪ್ರೇಕ್ಷಕರು ಕೂಡ ಶಿಶಿರ್ ಅವರಿಗೆ ಅತೀವ ಪ್ರೀತಿ ಕೊಡುತ್ತಿದ್ದು, ಅವರೇ ಈ ಬಾರಿಯ ವಿನ್ನರ್ ಆಗಬೇಕು ಎನ್ನುವರ ಸಂಖ್ಯೆ ಕೂಡ ಹೆಚ್ಚಿದೆ.

ಬಿಗ್ ಬಾಸ್ ಮನೆಯೊಳಗೆ ತಮ್ಮದೇ ಆದ ಸ್ನೇಹ ಸಂಬಂಧಗಳನ್ನು ಬೆಸೆದುಕೊಂಡಿರುವ ಶಿಶಿರ್ ಆಟದಲ್ಲಿಯೂ ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಆಡುತ್ತಿದ್ದಾರೆ. ಬಿಗ್ ಬಾಸ್‌ನ ಶ್ರೀ ಕೃಷ್ಣ, ಹೆಣ್ಣು ಮಕ್ಕಳ ಜೊತೆ ಹೆಚ್ಚಾಗಿ ಇರುತ್ತಾರೆ ಎನ್ನುವ ಕಮೆಂಟ್‌ಗಳಿಗೆ ತಲೆ ಕೆಡಿಸಿಕೊಳ್ಳದ ಶಿಶಿರ್ ತಮ್ಮ ಆಟದ ಸಮಯ ಅಥವಾ ಮಾತಿನ ಸಮಯ ಬಂದಾಗ ಬಹಳ ಆತ್ಮವಿಶ್ವಾಸದಿಂದ ಆಡುತ್ತಿದ್ದಾರೆ. ಇದು ಪ್ರೇಕ್ಷಕರನ್ನು ಕೂಡ ತಲುಪುತ್ತಿದೆ.
ಸದ್ಯ ಬಹುತೇಕರ ಮೆಚ್ಚಿನ ಸ್ಪರ್ಧಿಯಾಗಿರುವ ಶಿಶಿರ್ ವೈಯಕ್ತಿಕ ಜೀವನದ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲ ಅನೇಕರಿಗಿದೆ. ನೋಡಿದ ತಕ್ಷಣ ಕ್ರಶ್ ಆಗುವಂತಹ ವ್ಯಕ್ತಿತ್ವ ಹೊಂದಿರುವ ಶಿಶಿರ್ ಅವರು ಸಿಂಗಲ್ ಆಗಿದ್ದಾರಾ..? ಅವರಿಗೆ ಮದುವೆಯಾಗಿದೆಯಾ? ಗರ್ಲ್ ಫ್ರೆಂಡ್ ಇದ್ದಾರಾ..? ಎನ್ನುವ ಪ್ರಶ್ನೆ ಅನೇಕರಲ್ಲಿರಬಹುದು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಶಿಶಿರ್ ಸದ್ಯ ಸಿಂಗಲ್. ಹೌದು ಈ ಹಿಂದೆ ಕೆಲವು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಶಿಶಿರ್ ವಿಚ್ಛೇಧನ ಪಡೆದಿರುವ ಕಾರಣ ಸದ್ಯ ಒಂಟಿಯಾಗಿದ್ದಾರೆ. ಶಿಶಿರ್ ತಮ್ಮ ಪತ್ನಿಯಿಂದ ಡಿವೋರ್ಸ್ ಪಡೆದಿರುವುದು ಸತ್ಯವಾಗಿದೆ. ಅಂದಹಾಗೆ ಶಿಶಿರ್ ಅವರ ಮಾಜಿ ಪತ್ನಿ ಕೂಡ ನಟಿಯಾಗಿದ್ದು, ಈ ಮೊದಲು ಕನ್ನಡದ ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಇದೀಗ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.
ಇನ್ನು ಶಿಶಿರ್ ಕೂಡ ಕನ್ನಡ ಕಿರುತೆರೆಯ ಬಹುಬೇಡಿಕೆಯ ನಟರಾಗಿದ್ದಾರೆ. ಸೊಸೆ, ಪುಟ್ಟಗೌರಿ ಮದುವೆ, ಕುಲವಧು ಸೇರಿದಂತೆ ಎಲ್ಲಾ ಮೆಗಾ ಹಿಟ್ ಧಾರಾವಾಹಿಗಳಲ್ಲಿ ನಟಿಸಿರುವ ಅವರು, ಇತ್ತೀಚಿಗೆ ಸೇವಂತಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು. ಕೆಲವು ಸಿನಿಮಾಗಳಲ್ಲಿಯೂ ನಟಿಸಿರುವ ಶಿಶಿರ್, ಸದ್ಯ ಬಿಗ್ ಬಾಸ್ ಮನೆಯಲ್ಲಿ ಗೆಲ್ಲುವ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.












Click it and Unblock the Notifications