Risha Gowda: ಬಸ್‌ನಲ್ಲಿ ಹಿಂದೆ ಕೂತಿದ್ದ ವ್ಯಕ್ತಿ ನನ್ನ ಮೇಲೆ ಕೈ ಹಾಕಿದ, ಅಲ್ಲೇ ಕಪಾಳಕ್ಕೆ ಬಾರಿಸಿದೆ: ರಿಷಾ ಗೌಡ

ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ರಿಷಾ ಗೌಡ ಅವರು ತಮಗಾದ ಕಹಿ ಅನುಭವವೊಂದನ್ನು ಹಂಚಿಕೊಳ್ಳುವ ಮೂಲಕ ಸಮಾಜದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ನಮ್ಮಲ್ಲಿ ಬೇರೆ ದೇಶಗಳಂತೆ ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆಯೇ ಇಲ್ಲ ಎಂದು ರಿಷಾ ಬೇಸರ ಹಂಚಿಕೊಂಡಿದ್ದಾರೆ.

ಗಂಡುಮಕ್ಕಳೆಲ್ಲ ಸುಮ್ಮನೆ ನೋಡ್ತಾ ಇದ್ರು

"ಕೆಲವು ವರ್ಷಗಳ ಹಿಂದೆಯಷ್ಟೇ ನಾನು ಏರ್‌ಪೋರ್ಟ್‌ಗೆ ಬಸ್‌ನಲ್ಲಿ ಹೋಗುತ್ತಿದ್ದೆ. ನಾನು ನಾರ್ಮಲ್ ಟಾಪ್ ಮತ್ತು ಜೀನ್ಸ್ ಧರಿಸಿದ್ದೆ. ಅಷ್ಟಕ್ಕೇ ಹಿಂದೆ ಕೂತಿದ್ದ ವ್ಯಕ್ತಿಯೊಬ್ಬ ನನ್ನನ್ನು ಮುಟ್ಟಿದ್ದ. ನನಗೆ ಎಷ್ಟು ಕೋಪ ಬಂತು ಅಂದ್ರೆ, ಅಲ್ಲೇ ಅವನ ಕಪಾಳಕ್ಕೆ ಬಾರಿಸಿದೆ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ರಿಷಾ ಹೇಳಿಕೊಂಡಿದ್ದಾರೆ. ಆದರೆ ಆ ಸಮಯದಲ್ಲಿ ನನ್ನ ಸಪೋರ್ಟ್‌ಗೆ ಬಂದಿದ್ದು ಬಸ್ ಕಂಡಕ್ಟರ್ ಮಾತ್ರ. ಇನ್ನುಳಿದ ಗಂಡುಮಕ್ಕಳೆಲ್ಲ ಸುಮ್ಮನೆ ನೋಡ್ತಾ ಕೂತಿದ್ರು. ಇದೇನಾ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುತ್ತಿರುವುದು?" ಎಂದು ರಿಷಾ ಪ್ರಶ್ನಿಸಿದ್ದಾರೆ.

Risha Gowda

ಬಟ್ಟೆಗೂ ದೌರ್ಜನ್ಯಕ್ಕೂ ಸಂಬಂಧವಿಲ್ಲ

ಹೆಣ್ಣುಮಕ್ಕಳು ಹಾಕುವ ಬಟ್ಟೆಯ ಬಗ್ಗೆ ಮಾತನಾಡುವವರಿಗೆ ತಿರುಗೇಟು ನೀಡಿರುವ ಅವರು, "ಚೂಡಿದಾರ್, ಲಂಗ ದಾವಣಿ, ಸೀರೆ ಹಾಕಿರುವ ಹೆಣ್ಣುಮಕ್ಕಳ ಮೇಲೂ ಅತ್ಯಾ*ಚಾರದಂತಹ ದೌರ್ಜನ್ಯಗಳು ನಡೆಯುತ್ತಿವೆ. ಬರೀ ಶಾರ್ಟ್ಸ್ ಅಥವಾ ಸ್ಲೀವ್‌ಲೆಸ್ ಟಾಪ್ ಹಾಕಿದರೆ ಮಾತ್ರ ಈ ಘಟನೆಗಳು ಆಗುತ್ತಿವೆಯೇ? ನಾನು ಹೆಣ್ಣುಮಕ್ಕಳು ಎಲ್ಲಾ ವಿಷಯದಲ್ಲೂ ಸರಿ ಅಂತ ಹೇಳಲ್ಲ. ಆದರೆ ಗಂಡಾಗಲಿ, ಹೆಣ್ಣಾಗಲಿ ಮೊದಲು ಎಜುಕೇಟೆಡ್ ಆಗಿರಬೇಕು. ಸಮಾಜದಲ್ಲಿ ಹೆಣ್ಣುಮಕ್ಕಳು ತಲೆ ಎತ್ತಿ ನಡೆಯಬೇಕು ಅಂದರೆ ಆಪತ್ತಿನಲ್ಲಿ ಎಲ್ಲ ಗಂಡು ಮಕ್ಕಳು ಸಹಾಯಕ್ಕೆ ನಿಲ್ಲಬೇಕು" ಎಂದಿದ್ದಾರೆ.

Dhanush Gowda: ನೀವು 2ನೇ ಹೆಂಡತಿನಾ? ಎಂದು ಕಾವ್ಯ ಶೈವಗೆ ಪ್ರಶ್ನೆ: ನೆಗೆಟಿವ್‌ ಕಾಮೆಂಟ್‌ ಮಾಡಿದವರಿಗೆ ಚಳಿ ಬಿಡಿಸಿದ ಧನುಷ್‌
Dhanush Gowda: ನೀವು 2ನೇ ಹೆಂಡತಿನಾ? ಎಂದು ಕಾವ್ಯ ಶೈವಗೆ ಪ್ರಶ್ನೆ: ನೆಗೆಟಿವ್‌ ಕಾಮೆಂಟ್‌ ಮಾಡಿದವರಿಗೆ ಚಳಿ ಬಿಡಿಸಿದ ಧನುಷ್‌

ಭಾರತದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ

ವಿದೇಶದ ಸುರಕ್ಷತೆಯನ್ನು ನೆನೆದು ಬೇಸರ ವ್ಯಕ್ತಪಡಿಸಿದ ಅವರು, "ನನ್ನ ಅನುಭವವೇ ಹೇಳುವುದಾದರೆ ದುಬೈನಲ್ಲಿ ರಾತ್ರಿ ಮೂರು ಗಂಟೆಯಾದರೂ ಒಬ್ಬ ಹೆಣ್ಣುಮಗಳು ಧೈರ್ಯವಾಗಿ ಓಡಾಡಬಹುದು. ಆದರೆ ನಮ್ಮ ಬೆಂಗಳೂರು, ಮೈಸೂರಿನಲ್ಲಿ ಆ ವಾತಾವರಣ ಎಲ್ಲಿದೆ? ರಾತ್ರಿ ಒಂಬತ್ತು ಗಂಟೆಯಾದರೆ ಸಾಕು ಮೈಸೂರು ಸ್ತಬ್ಧವಾಗಿರುತ್ತೆ. ನಾನು ಇಷ್ಟೆಲ್ಲ ಸ್ಟ್ರಾಂಗ್ ಆಗಿದ್ದರೂ, ರಾತ್ರಿ 12 ಗಂಟೆಯ ಮೇಲೆ ಹೊರಗೆ ಹೋಗಬೇಕು ಅಂದಾಗ ಭಯ ಆಗುತ್ತೆ. ನಮ್ಮಲ್ಲಿ ಬೇರೆ ದೇಶಗಳಂತೆ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ" ಎಂದು ರಿಷಾ ಹೇಳಿದ್ದಾರೆ.

Risha Gowda

ಬದಲಾಗದ ಮನಸ್ಥಿತಿ

"ಕರ್ನಾಟಕದಲ್ಲಿ ಹೆಣ್ಣುಮಕ್ಕಳು ಅಂದರೆ ಬರೀ ಅಡುಗೆ ಮನೆ ಕೆಲಸ ಮಾಡಿಕೊಂಡಿರಬೇಕು ಎನ್ನುವ ಮನಸ್ಥಿತಿ ಇನ್ನೂ ಇದೆ. ಹುಡುಗರಿಗೆ ಎಷ್ಟು ಅಧಿಕಾರವಿದೆಯೋ ಅಷ್ಟೇ ಹುಡುಗಿಯರಿಗೂ ಇದೆ. ಆದರೆ ಸಮಾಜ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಅಷ್ಟೇ" ಎಂದು ಹೆಣ್ಣುಮಕ್ಕಳ ಸಮಾನತೆಯ ಬಗ್ಗೆ ರಿಷಾ ಗೌಡ ಖಡಕ್ ಆಗಿ ಮಾತನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+