Bigg Boss: ಮಕ್ಕಳ ಕಳ್ಳಿ ಎಂದವರಿಗೆ ಬಿಗ್‌ಬಾಸ್‌ ಮೋಕ್ಷಿತಾ ಪೈ ತಿರುಗೇಟು

ಮೋಕ್ಷಿತಾ ಪೈ ಬಿಗ್‌ಬಾಸ್‌ನ ಎಲ್ಲಾ ಸ್ಪರ್ಧಿಗಳಲ್ಲಿ ಟ್ರೋಫಿಗೆ ಹತ್ತಿರವಾಗಿದ್ದ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದಾರೆ. ಅವರು ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ತಕ್ಷಣ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ ಮಕ್ಕಳ ಕಳ್ಳಿ ಆರೋಪಕ್ಕೆ ತಿರುಗೇಟು ಕೂಡ ಕೊಟ್ಟಿದ್ದಾರೆ. ಹಾಗಾದರೆ ಮೋಕ್ಷಿತಾ ಪೈ ಹೇಳಿದ್ದೇನು?

ಬಿಗ್‌ಬಾಸ್‌ ಮನೆಯಲ್ಲಿ ಇದ್ದ ಎಲ್ಲಾ ಸ್ಪರ್ಧಿಗಳಲ್ಲಿ ಮೋಕ್ಷಿತಾ ಪೈ ತುಂಬಾ ನೆಗಿಟಿವ್ ಆಗಿ ಮಾಧ್ಯಮಗಳಲ್ಲಿ ಸುದ್ದಿ ಆಗಿದ್ದರು. ಇದು ಮೋಕ್ಷಿತಾ ಅವರ ಕುಟುಂಬಕ್ಕೂ ಕೂಡ ತುಂಬಾ ಬೇಸರವನ್ನು ಉಂಟು ಮಾಡಿತ್ತು. ಎಲ್ಲರಿಗೂ ಗೊತ್ತಿರುವಂತೆ ಕಳೆದವಾರ ಎಲಿಮಿನೇಟ್ ಆಗಿದ್ದ ಧನ್‌ರಾಜ್‌ ಅವರು ತಮಗೆ ಬಂದಿದ್ದ ಎಲ್ಲಾ ಹಣವನ್ನೂ ಕೂಡ ಪುತ್ತೂರಿನ ಆಶ್ರಮವೊಂದಕ್ಕೆ ದಾನ ಮಾಡಿದ್ದರು.

Bigg boss mokshitha pai hits back at those who call her a child kidnapper

ಸಹೋದರನ ಹೆಸರಿನಲ್ಲಿ ದಾನ ಮಾಡಿದ ಮೋಕ್ಷಿತಾ

ಇದೀಗ ಮೋಕ್ಷಿತಾ ಪೈ ಕೂಡ ಧನ್‌ರಾಜ್‌ ಅವರಂತೆ ಬಿಗ್‌ಬಾಸ್‌ ಮನೆಯಿಂದ ಬಂದ ಹಣದಲ್ಲಿ ಸ್ವಲ್ಪ ಹಣವನ್ನು ತಮ್ಮನ ಹೆಸರಿನಲ್ಲಿ ಅಂಗವಿಕಲರ ಆಶ್ರಮಕ್ಕೆ ದಾನ ಮಾಡಿದ್ದಾರೆ. ಎರಡು ಲಕ್ಷ ಹಣವನ್ನು ಅಂಗವಿಕಲರ ಆಶ್ರಮಕ್ಕೆ ಮೋಕ್ಷಿತಾ ದಾನ ಮಾಡಿದ್ದಾರೆ. ಇದು ನಿಜವಾಗಿಯೂ ಅವರ ಒಳ್ಳೆತನವನ್ನು ತೋರಿಸುತ್ತದೆ.

ಮಕ್ಕಳ ಕಳ್ಳಿ ಆರೋಪಕ್ಕೆ ಮೋಕ್ಷಿತಾ ತಿರುಗೇಟು

ಇನ್ನೂ ಮೋಕ್ಷಿತಾ ಪೈ ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ಅವರ ಮೇಲೆ ಇದ್ದ ಮಕ್ಕಳ ಕಳ್ಳಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಆ ಕೇಸ್‌ಗೂ ನನಗೂ ಸಂಬಂಧವಿಲ್ಲ. ಆ ಪ್ರಕರಣ ಈಗ ಮುಗಿದು ಹೋದ ಅಧ್ಯಾಯ. ಎಲ್ಲರ ಜೀವನದಲ್ಲಿ ಒಂದು ಕಹಿ ಘಟನೆ ನಡೆದಿರುತ್ತದೆ. ಎಲ್ಲರ ಜೀವನದಲ್ಲೂ ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿರುತ್ತಾರೆ. ನನ್ನ ಜೀವನದಲ್ಲೂ ಅಂತಹ ಘಟನೆ ನಡೆದಿದೆ. ಮತ್ತೊಬ್ಬರ ಹೆಸರು ಹಾಳು ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಿ ಎಂದು ಮೋಕ್ಷಿತಾ ತಿರುಗೇಟು ಕೊಟ್ಟಿದ್ದಾರೆ.

ಬಿಗ್‌ಬಾಸ್‌ ಮನೆಯಿಂದ ಹೊರಬಂದು ಮೋಕ್ಷಿತಾ ಮಾಡಿದ್ದೇನು?

ಇನ್ನೂ ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ಎಲ್ಲರೂ ಪಾರ್ಟಿ ಮಾಡಿದರೆ ಮೋಕ್ಷಿತಾ ಸಿಂಪಲ್ಲಾಗಿ ಒಂದು ಕೇಕ್ ಕಟ್ ಮಾಡಿ, ಕುಟುಂಬಸ್ಥರೊಂದಿಗೆ ಕಾಲ ಕಳೆದಿದ್ದಾರೆ. ಅಲ್ಲದೆ ಆಶ್ರಮಕ್ಕೆ ತೆರಳಿ ತನ್ನ ತಮ್ಮನ ಹೆಸರಿನಲ್ಲಿ ಎರಡು ಲಕ್ಷ್ ರೂಪಾಯಿ ದಾನ ಕೂಡ ಮಾಡಿದ್ದಾರೆ.

ಮೋಕ್ಷಿತಾ ಪೈ ಬಿಗ್‌ಬಾಸ್‌ ಮನೆಯಲ್ಲಿ ವಿನ್ನರ್‌ ರೇಸ್‌ನಲ್ಲಿ ಟ್ರೋಫಿಗೆ ಹತ್ತಿರವಾಗಿ ಹೊರಬಂದಿದ್ದಾರೆ. ಟಾಪ್ 4 ಸ್ಪರ್ಧಿ ಮೋಕ್ಷಿತಾಗೆ ವ್ಯಾಪಕ ಜನಪ್ರಿಯತೆ ಸಿಕ್ಕಿದೆ. ಅವರ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಅವರಿಗೆ ಶುಭ ಕೋರಿದ್ದಾರೆ. ಹಾಗಾದರೆ ಬಿಗ್‌ಬಾಸ್‌ ಸ್ಪರ್ಧಿ ಮೋಕ್ಷಿತಾ ಮುಂದಿನ ನಡೆ ಏನು?

ಮೋಕ್ಷಿತಾ ಮುಂದಿನ ನಡೆ ಏನು?

ಮೋಕ್ಷಿತಾ ಬಿಗ್‌ಬಾಸ್‌ ಬರುವ ಮುನ್ನ ಕಿರುತೆರೆ ನಟಿಯಾಗಿದ್ದರು. ಈಗಲೂ ಅದನ್ನೇ ಮುಂದುವರೆಸಿಕೊಂಡು ಹೋಗುವ ಇಚ್ಚೆಯನ್ನು ಹೊಂದಿದ್ದಾರೆ. ಅಲ್ಲದೆ ಸಿನಿಮಾಗಳಲ್ಲಿ ಪಾತ್ರಗಳು ಸಿಕ್ಕರೆ ಅದರಲ್ಲೂ ನಟಿಸುವ ಆಸೆಯನ್ನು ಹೊಂದಿದ್ದಾರೆ. ಸಹೋದರನ ಆರೋಗ್ಯಕ್ಕಾಗಿ ಅವರಿಗೆ ಹೆಚ್ಚಿನ ಹಣದ ಅವಶ್ಯಕತೆ ಇರುವುದರಿಂದ ಮುಂದೆ ಬರುವ ಯಾವುದೇ ಆಫರ್‌ ನಾನು ತಿರಸ್ಕರಿಸಲ್ಲ ಎಂದು ಮೋಕ್ಷಿತಾ ಹೇಳಿದ್ದಾರೆ.

ಮೋಕ್ಷಿತಾ ಟ್ರೋಲ್ ಬಗ್ಗೆ ತ್ರಿವಿಕ್ರಮ್ ಹೇಳಿದ್ದೇನು?

ಮೋಕ್ಷಿತಾ ಟ್ರೋಲ್ ಬಗ್ಗೆ ಮಾತನಾಡಿದ ತ್ರಿವಿಕ್ರಮ್, 'ಮೋಕ್ಷಿತಾ ಹಾಗೂ ತ್ರಿವಿಕ್ರಮ್ ಜೋಡಿ ಸಕ್ಕತ್ತಾಗಿದೆ. ಭವ್ಯಾ ಹಾಗೂ ತ್ರಿವಿಕ್ರಮ್ ಜೋಡಿ ಸಕ್ಕತ್ತಾಗಿದೆ ಎನ್ನುದು ಅವರವರ ವಿವೇಚನೆ ಬಿಟ್ಟಿದ್ದು. ನಾವು ಅಲ್ಲಿ ಆಟ ಆಡಲಿಕ್ಕೆ ಅಂತ ಹೋಗಿದ್ವಿ. ಇಷ್ಟ ಪಟ್ಟು ಅಲ್ಲಿ ನಾವು ಯಾರನ್ನೇ ಮೇಲೆ ಕೂಡಿಸಲು ಆಗಲ್ಲ. ಅವರವರ ಆಟ ಅವರು ಆಡಿ ಮುಂದೆ ಬಂದಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಕಾಮಿಡಿಯಾಗಿಯೂ ನಾವು ಮಾತನಾಡಿರುತ್ತೇವೆ. ಕೆಲವೊಮ್ಮೆ ಅದು ಜನ ಗಂಭೀರವಾಗಿ ಪರಿಗಣಿಸುತ್ತಾರೆ. ಮನೆಯಲ್ಲಿ ಇರುವ ಜನರೊಂದಿಗೆ ನಾವು ಮಾತನಾಡಬೇಕು, ಅವರೊಂದಿಗೆ ತಮಾಷೆ ಮಾಡಬೇಕು. ಹೀಗಾಗಿ ನಾವು ಯಾವುದನ್ನು ಮಾಡಬೇಕು, ಯಾವುದಕ್ಕೆ ಹೆಚ್ಚು ಗಮನ ಕೊಡಬೇಕು ಅದನ್ನ ಮಾತ್ರ ಮಾಡಿದ್ದು. ಇದು ಬಿಟ್ಟರೆ ಬೇರೇನು ಇಲ್ಲ' ಎಂದು ತ್ರಿವಿಕ್ರಮ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+