Bigg Boss: ಹನುಮಂತನಿಗೆ ಹೊಡಿತಿಯಾ ಬಕೆಟ್ ರಾಣಿ ಭವ್ಯಾ ಗೌಡ- ಹೀಗಂದಿದ್ದು ಯಾರು?
ಬಿಗ್‌ಬಾಸ್ ಕನ್ನಡ ಸೀಸನ್ 11 ಫಿನಾಲೆ ತಲುಪುವ ಸ್ಪರ್ಧಿಗಳು ಯಾರು ಎನ್ನುವುದನ್ನು ಈಗಾಗಲೇ ವೀಕ್ಷಕರು ಊಹಿಸಿಬಿಟ್ಟಿದ್ದಾರೆ. ಕುತಂತ್ರ ಮಾಡಿಕೊಂಡು ಆಟ ಆಡುವ ಸ್ಪರ್ಧಿಗಳು ಈ ವಾರ ಹೊರಬರಲಿದ್ದಾರೆ ಎನ್ನುವ ಲೆಕ್ಕಾಚಾರವಿದೆ. ಭವ್ಯಾ ಗೌಡ ಕಳೆದ ವಾರ ಟಾಸ್ಕ್ ವೇಳೆ ಹನುಮಂತನ ಮೇಲೆ ಕೈ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. ಇನ್ನೂ ಕಿಚ್ಚ ಸುದೀಪ್ ಅವರು ಇದನ್ನು ಕಳೆದ ವಾರಾಂತ್ಯದ ಕತೆಯಲ್ಲಿ ಪ್ರಸ್ತಾಪ ಮಾಡಿ ಭವ್ಯಾ ಅವರಿಗೆ ಜೈಲು ಶಿಕ್ಷೆಯನ್ನು ವಿಧಿಸಿದ್ದರು. ಇದೀಗ ಹನುಮಂತನ ಮೇಲೆ ಕೈ ಮಾಡಿದ್ದಕ್ಕೆ ಹಳೆಯ ಸ್ಪರ್ಧಿಯೊಬ್ಬರು ಭವ್ಯಾ ಗೌಡ ವಿರುದ್ಧ ಹರಿಹಾಯ್ದಿದ್ದಾರೆ. ಹಾಗಾದರೆ ಆ ಸ್ಪರ್ಧಿ ಯಾರು? ಭವ್ಯಾ ಗೌಡ ಬಗ್ಗೆ ಹೇಳಿದ್ದೇನು?
ಆರಂಭದಲ್ಲಿ ಉತ್ತಮವಾಗಿ ಟಾಸ್ಕ್‌ನಲ್ಲಿ ಭಾಗವಹಿಸುತ್ತಾ ತಮ್ಮ ಪಾಡಿಗೆ ತಾವಿದ್ದ ಭವ್ಯಾ ಈಗ ಒಳಸಂಚುಗಳಲ್ಲಿ ಭಾಗಿಯಾಗಲು ಶುರು ಮಾಡಿದ್ದಾರೆ. ಇದು ಬಿಗ್‌ಬಾಸ್ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ವಿಶೇಷವಾಗಿ ಭವ್ಯಾ ಗೌಡ ಸ್ಪರ್ಧಿ ಹನುಮಂತನ ಮೇಲೆ ಟಾಸ್ಕ್‌ವೊಂದರಲ್ಲಿ ಕೈ ಮಾಡಿದ್ದನ್ನ ಮಾತ್ರ ವೀಕ್ಷಕರು ಸಹಿಸಿಕೊಳ್ಳುತ್ತಲೇ ಇಲ್ಲ. ಸುದೀಪ್ ಈ ಬಗ್ಗೆ ಕಳೆದ ವಾರ ಪ್ರಸ್ತಾಪ ಮಾಡಿ ಭವ್ಯಾ ಗೌಡ ಅವರನ್ನು ಜೈಲಿಗೆ ಕಳುಹಿಸಿ ಶಿಕ್ಷೆ ನೀಡಿದರೂ ಕೂಡ ಹನುಮಂತನ ಅಭಿಮಾನಿಗಳ ಕೋಪ ಮಾತ್ರ ಕಡಿಮೆ ಆಗುತ್ತಿಲ್ಲ. ಹಾಗಾದರೆ ಭವ್ಯಾ ಗೌಡ ಅವರಿಗೆ ಕ್ಲಾಸ್ ತೆಗೆದುಕೊಂಡವರು ಯಾರು?

ಹನುಮಂತನ ಮೇಲೆ ಕೈ ಮಾಡಿದ್ದು ಮಾತ್ರವಲ್ಲದೆ, ಮೋಕ್ಷಿತಾ ಜೊತೆಗೆ ಸಂಚು ರೂಪಿಸಿ ಕುತಂತ್ರದ ಆಟ ಆಡಿದ ಭವ್ಯಾ ಈ ವಾರ ಮನೆಯಿಂದ ಹೊರ ಹೋಗುವುದು ಗ್ಯಾರಂಟಿ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಹನುಮಂತನ ಮೇಲೆ ಕೈ ಮಾಡಿದ ಭವ್ಯಾ ಮನೆಯಲ್ಲಿ ಉಳಿದುಕೊಳ್ಳಲು ಬಿಗ್‌ಬಾಸ್ ನೀಡದ ಟಾಸ್ಕ್ ಆಡುವಾಗ ಮೋಕ್ಷಿತಾ ಜೊತೆ ಒಪ್ಪಂದ ಮಾಡಿಕೊಂಡು ಆಟ ಆಡಿದ್ದಾರೆ. ಹೀಗೆ ಕುತಂತ್ರ ರೂಪಿಸಿಕೊಂಡು ಆಟ ಆಡುವ ಭವ್ಯಾ, ಮೋಕ್ಷಿತಾ, ಗೌತಮಿ ಈ ಮೂರು ಜನ ಈ ವಾರ ಎಲಿಮಿನೇಟ್ ಆಗುವುದು ಪಕ್ಕಾ ಎನ್ನಲಾಗುತ್ತಿದೆ. ಇದೇ ವೇಳೆ ಲಾಯರ್ ಜಗದೀಶ್ ಭವ್ಯಾ ಗೌಡ ಮಾಡಿದ ತಪ್ಪಿಗೆ ತರಾಟೆ ತೆಗೆದುಕೊಂಡಿದ್ದಾರೆ. ಹಾಗಾದರೆ ಲಾಯರ್ ಜಗದೀಶ್ ಹೇಳಿದ್ದೇನು?
ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಲ್ಲಿ ಲಾಯರ್ ಜಗದೀಶ್ ಕೂಡ ಒಬ್ಬರು. ಬಿಗ್‌ಬಾಸ್ ಮನೆಯಲ್ಲಿ ಯಾರೇ ತಪ್ಪು ಮಾಡಲಿ ಆ ತಪ್ಪನ್ನು ಲಾಯರ್ ಜಗದೀಶ್ ವಿರೋಧಿಸುತ್ತಾರೆ. ಪ್ರಸ್ತುತ ಭವ್ಯಾ ಗೌಡ ಟಾಸ್ಕ್ ವೇಳೆ ಹನುಮಂತನ ಮೇಲೆ ಕೈ ಮಾಡಿದಕ್ಕೆ ಲಾಯರ್ ಜಗದೀಶ್ ವಿರೋಧ ವ್ಯಕ್ತಪಡಿಸಿದ್ದಾರೆ. ಭವ್ಯಾ ಗೌಡ ಅವರಿಗೆ ತರಾಟೆ ತೆಗೆದುಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

'ಬಕೆಟ್ ರಾಣಿ ಭವ್ಯಾ ಗೌಡ'- ಲಾಯರ್ ಜಗದೀಶ್ ತರಾಟೆ
ಭವ್ಯಾ ಗೌಡ ಹನುಮಂತನ ಮೇಲೆ ಕೈ ಮಾಡಿದ್ದಕ್ಕೆ ಲಾಯರ್ ಜಗದೀಶ್ ಅವರು ಭವ್ಯಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋವನ್ನು ಲಾಯರ್ ಜಗದೀಶ್ ಸೋಶಿಯಲ್ ಮೀಡಿಯದಲ್ಲಿ ಹಂಚಿಕೊಂಡಿದ್ದಾರೆ. 'ಜನವರಿ 24, 25, 26ರಂದು ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎನ್ನುವ ಮಾಹಿತಿ ನನಗೆ ಇದೆ. ಹೀಗಾಗಿ ಬಿಗ್‌ಬಾಸ್ ಮನೆಯಲ್ಲಿ ಫಿನಾಲೆಗೆ ಹೋಗಲು ಕಸರತ್ತುಗಳು ನಡೆದಿವೆ. ಉತ್ತರ ಕರ್ನಾಟಕದ ಗಾಯಕ, ಮುಗ್ಧ ಹುಡುಗ ಹನುಮಂತ ತನ್ನದೇ ರೀತಿಯಲ್ಲಿ ಆಟವನ್ನು ಆಡುತ್ತಿದ್ದಾನೆ. ಇದಕ್ಕೆ ನನ್ನ ಪ್ರಶಂಸೆ ಕೂಡ ಇದೆ. ಆದರೆ ಇದರಲ್ಲಿ ಭವ್ಯ ಅನ್ನೋ ಆಟಗಾರ್ತಿ ಮಾಟಗಾರ್ತಿ, ತ್ರಿವಿಕ್ರಮ್‌ಗೆ ಬಕೆಟ್ ಹಿಡಿದು ಆಡುವ ಭವ್ಯಾ ಹನುಮಂತನ ಮೇಲೆ ಅಟ್ಯಾಕ್ ಮಾಡಿ ಸುಳ್ಳನ್ನು ಹೇಳುತ್ತಾಳೆ' ಎಂದು ಲಾಯರ್ ಜಗದೀಶ್ ಭವ್ಯಾ ವಿರುದ್ಧ ಕಿಡಿ ಕಾರಿದ್ದಾರೆ.

'ಮಾಡೋದೆಲ್ಲಾ ಕಂತ್ರಿ ಕೆಲಸ. ಯಾವ ಗೌಡನ ಹೆಸರು ಹಾಳು ಮಾಡಲು ಹೊರಟಿದ್ದಾಳೋ ಗೊತ್ತಿಲ್ಲ. ಗೌಡ ಅನ್ನೋ ಹೆಸರು ಇಟ್ಟುಕೊಂಡು ಕಂತ್ರಿ ಕೆಲಸ ಮಾಡುತ್ತಿದ್ದಾಳೆ. ತ್ರಿವಿಕ್ರಮ್‌ಗೆ ಬಕೆಟ್ ಹಿಡಿದುಕೊಂಡು ಆಟ ಆಡುವ ಭವ್ಯಾ ಗೌಡ ಗೆಲ್ಲಲು ಸಾಧ್ಯವೇ ಇಲ್ಲ. ಇಂತಾಕೆ ಹನುಮಂತು ಮೇಲೆ ಕೈ ಮಾಡಿದ್ದಾಳೆ. ಈಕೆ ಗೆಲ್ಲಲ್ಲ ಅನ್ನೋದು ಈಕೆಗೆ ಗೊತ್ತು. ಹೀಗಾಗಿ ತ್ರಿವಿಕ್ರಮ್‌ನನ್ನ ಗೆಲ್ಲಿಸಲು ಈ ಕುತಂತ್ರ ಮಾಡಿದ್ದಾಳೆ. ಈ ಕುತಂತ್ರದ ಆಟಗಳು ತುಂಬಾ ದಿನ ನಡೆಯೋದಿಲ್ಲ' ಎಂದು ಜಗದೀಶ್ ಭವ್ಯಾಗೆ ಎಚ್ಚರಿಕೆ ಕೊಟ್ಟಿದ್ದಾರೆ.












Click it and Unblock the Notifications