Bigg Boss: ನಿಮ್ಮ ಮುಖಕ್ಕೆ ರಾಜಾ-ರಾಣಿ ಪಟ್ಟ ಬೇರೆ ಕೇಡು... ಹಿಗ್ಗಾಮೊಗ್ಗ ಉಗಿದ ಕಿಚ್ಚ ಸುದೀಪ್!
ಬಿಗ್‌ಬಾಸ್ ಈ ವಾರ ಸ್ಪರ್ಧಿಗಳಿಗೆ ಮಹಾರಾಜ ಟಾಸ್ಕ್ ಅನ್ನು ನೀಡಿದ್ದರು. ಈ ಟಾಸ್ಕ್‌ನಲ್ಲಿ ಉಗ್ರಂ ಮಂಜು ಕಟುಕ ಮಹಾರಾಜನಾದರೆ ಮೋಕ್ಷಿತಾ ಆತನ ಸಹೋದರಿಯಾಗಿ ತನ್ನ ಎಲ್ಲಾ ಅಧಿಕಾರವನ್ನು ಪಡೆಯಲು ಮಹಾರಾಣಿಯಾಗಿರುತ್ತಾರೆ. ಈ ಟಾಸ್ಕ್ ವಿಚಾರವಾಗಿ ಕಿಚ್ಚ ಸುದೀಪ್ ಇವರಿಬ್ಬರಿಗೂ ಹಿಗ್ಗಾಮೊಗ್ಗ ಉಗಿದಿದ್ದಾರೆ. ಪರ್ಸನಲ್ ಪರ್ಸನಲ್ ಪರ್ಸನಲ್ ಎಂದು ಟಾಸ್ಕ್ ಅನ್ನು ನೀವಿಬ್ಬರು ಹಾಳು ಮಾಡಿದ್ದೀರಿ. ನಿಮ್ಮ ಮುಖಕ್ಕೆ ರಾಜಾ-ರಾಣಿ ಪಟ್ಟ ಬೇರೆ ಕೇಡು ಅಂತ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಹೌದು... ವಾರದ ಕಥೆ ಕಿಚ್ಚ ಸುದೀಪ್ ಜೊತೆ ಶನಿವಾರ ಆರಂಭವಾಗಿದೆ. ಈ ವೇಳೆ ಅವಾಚ್ಯ ಪದ ಬಳಕೆ ಮಾಡಿದ ತ್ರಿವಿಕ್ರಮ್, ಕ್ಯಾಪ್ಟನ್ಸಿ ಆಯ್ಕೆಯಿಂದ ಹಿಡಿದು ಮನೆಯ ಕೆಲ ಪ್ರಮುಖ ವಿಚಾರಗಳಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡ ಸ್ಪರ್ಧಿಗಳಿಗೆ ಸುದೀಪ್ ಚಳಿ ಬಿಡಿಸಿದ್ದಾರೆ. ವಿಶೇಷವಾಗಿ ಉಗ್ರಂ ಮಂಜು, ಮೋಕ್ಷಿತಾ ಹಾಗೂ ಗೌತಮಿ ಮೇಲೆ ಕಿಚ್ಚನ ಕಿಡಿ ಹೆಚ್ಚಾಗಿರುವುದು ಇಂದು ಬಿಡುಗಡೆಯಾದ ವೀಡಿಯೋದಲ್ಲಿ ಕಂಡು ಬಂದಿದೆ.

ಪರ್ಸನಲ್ ಪರ್ಸನಲ್ ಅಂತಲೇ ಈ ವಾರವನ್ನು ಕಳೆದು ಬಿಟ್ರಿ ನೀವು. ಪರ್ಸನಲ್ ಅಂತ ಆಟ ಆಡಲು ನಿಮಗೆ ರಾಜ ರಾಣಿ ಮಾಡಿದ್ರಾ ಬಿಗ್‌ಬಾಸ್ ಎಂದು ಸುದೀಪ್ ಮಂಜು ಮೋಕ್ಷಿತಾಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಮೋಕ್ಷಿತಾ, ಮಂಜು ಅವರು ಮೊದಲು ಪರ್ಸನಲ್ ಗೇಮ್ ಆರಂಭ ಮಾಡಿದರು ಆಗ ನಾನು ಮಾಡಬೇಕಾಗಿ ಬಂತು ಸರ್ ಎಂದು ಹೇಳಿದ್ದಾರೆ.
ಇನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು ಅಂತ ರಾಣಿ ಆಜ್ಞೆ ಮಾಡಿದ್ದರು. ಆದರೆ ಗೌತಮಿ ಅವರು ಯಾಕೆ ಅದನ್ನು ಪಾಲಿಸಲಿಲ್ಲ ಎಂದು ಸುದೀಪ್ ಅವರು ಕೇಳಿದ್ದಾರೆ. ಜೊತೆಗೆ ಪ್ರಜೆಗಳು ಪ್ರಶ್ನೆ ಮಾಡುತ್ತಿದ್ದರೆ ಗೌತಮಿಯವರು ಯಾಕೆ ಉತ್ತರಿಸಿದ್ರು? ಪ್ರಜೆಗಳಿಗೆ ಉತ್ತರಿಸುವ ಕೆಲಸ ಮಹಾರಾಜನದ್ದಲ್ಲವೇ ಎಂದು ಸುದೀಪ್ ಅವರು ಮಂಜು ಅವರನ್ನು ಕೇಳಿದ್ದಾರೆ.
ಸಂಬಂಧ ಸಂಬಂಧ ಅಂದುಕೊಂಡು ಒಬ್ಬರೊಂದಿಗೆ ಇನ್ನೊಬ್ಬರು ಜೊತೆಯಾಗಿ ಇದ್ದು. ನಾನು ನಂಬಿದ್ದೆ ಅವರನ್ನು ಅವರು ಮೋಸ ಮಾಡಿದ್ರು ಅಂದುಕೊಂಡು ಓಡಾಡ್ತಿರಾ. ನಿಮಗೆ ನಂಬು ಅಂತ ಹೇಳಿದವರು ಯಾರು ಎಂದು ಸುದೀಪ್ ಅವರು ಮಂಜು ಮೋಕ್ಷಿತಾ ಅವರನ್ನು ಕೇಳಿದ್ದಾರೆ. ಇವತ್ತಿನ ಮೇಜರ್ ಪಾರ್ಟ್ ಗೌತಮಿ, ಮಂಜು ಹಾಗೂ ಮೋಕ್ಷಿತಾ ಅವರನ್ನು ತಿಂದು ಹಾಕೋ ರೀತಿ ಕಾಣಿಸುತ್ತಿದೆ.
ಒಟ್ಟಿನಲ್ಲಿ ಅಣ್ಣ, ತಂಗಿ, ಸ್ನೇಹ ಅನ್ಕೊಂಡು ಗುಟ್ಟುಗುಟ್ಟಾಗಿದ್ದ ಮಂಜು, ಮೋಕ್ಷಿತಾ ಹಾಗೂ ಗೌತಮಿ ತಂಡ ಈಗ ಒಡೆದು ಹೋಗಿದೆ. ಈ ತಂಡದಿಂದ ಮೋಕ್ಷಿತಾ ಸಂಪೂರ್ಣವಾಗಿ ಹೊರಗಡೆ ಕಾಲಿಟ್ಟಿದ್ದಾರೆ. ಮಂಜು ಹಾಗೂ ಗೌತಮಿ ಅವರಿಗೂ ಸುದೀಪ್ ಅವರು ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಿಶೇಷವಾಗಿ ಉಗ್ರಂ ಮಂಜು ಅವರು ಕೊಟ್ಟ ಟಾಸ್ಕ್ ಅನ್ನು ಅದ್ಭುತವಾಗಿ ಮಾಡಿದರೂ ಗೌತಮಿ ವಿಚಾರದಲ್ಲಿ ಮಹಾರಾಜ ಪಾತ್ರಕ್ಕೆ ನ್ಯಾಯ ಕೊಡಲಿಲ್ಲ. ಹೀಗಾಗಿ ಮಂಜು ಹಾಗೂ ಗೌತಮಿ ಇಂದಿನ ಸಂಚಿಕೆಯಲ್ಲಿ ರೆಡ್ ಝೋನ್ ಅಲ್ಲಿ ಇರುವುದು ಮಾತ್ರ ಸುಳ್ಳಲ್ಲ.
ಒಟ್ಟಿನಲ್ಲಿ ಇಂದಿನ ಸಂಚಿಕೆಯಲ್ಲಿ ಇನ್ನಷ್ಟು ವಿಚಾರಗಳು ಸುದೀಪ್ ಬಯಲಿಗೆಳೆಯಲಿದ್ದಾರೆ. ಇದರಿಂದಾದರೂ ಮುಂದಿನ ದಿನಗಳಲ್ಲಿ ಬಿಗ್‌ಬಾಸ್ ಮನೆಯಲ್ಲಿ ಫೇವರ್ ಗೇಮ್‌ಗೆ ಅಂತ್ಯ ಸಿಗುತ್ತಾ ಕಾದು ನೋಡಬೇಕಿದೆ. ಜೊತೆಗೆ ಕಿಚ್ಚ ಸುದೀಪ್ ಅವರು ಯಾರಿಗೆ ವಾರ್ನಿಂಗ್ ಕೊಡ್ತಾರೆ? ಯಾರನ್ನು ಮನೆಯಿಂದ ಕಳುಹಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications