'ನೀನು ಯಾವಾಗಲೂ ಮೊನಾಲಿಸಾ..ಮಿಸ್‌ ಇಂಡಿಯಾ..ಮಿಸ್‌ ಯೂನಿವರ್ಸ್‌'

ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಕಳೆದ ಬಿಗ್‌ ಬಾಸ್‌ ಸೀಜನ್‌ 10ರ ಸ್ಪರ್ಧಿಯಾಗಿದ್ದ ತುಕಾಲಿ ಸಂತೋಷ್‌ ಅವರ ಪತ್ನಿ ಮಾನಸ ಕೂಡ ಸ್ಪರ್ಧಿಯಾಗಿದ್ದರು. ಮೊದಲ ದಿನದಿಂದಲೂ ಆ್ಯಕ್ವೀವ್‌ ಆಗಿದ್ದ ಮಾನಸ ಕಳೆದ ಕೆಲವು ದಿನಗಳಿಂದ ತುಂಬಾ ಸೈಲೆಂಟ್‌ ಆಗಿದ್ದರು. ಆದರೂ ಶೋನಲ್ಲಿ ಕೆಲವೊಮ್ಮೆ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗುತ್ತಿದ್ದ ಮಾನಸ ಸದ್ಯ ಶೋನಿಂದ ಹೊರಬಿದ್ದಿದ್ದಾರೆ.

ಶೋನಿಂದ ಹೊರ ಬಂದು ಕಿಚ್ಚ ಸುದೀಪ್ ಅವರೊಂದಿಗೆ ಮಾತನಾಡುತ್ತಾ ಮಾನಸ ನಾನು ಎಲ್ಲೋ ಎಡವಿದೆ ಎಂದು ಕಣ್ಣೀರು ಇಟ್ಟಿದ್ದಾರೆ. ಈ ವೇಳೆ ತುಕಾಲಿ ಸಂತೋಷ್‌ ಪತ್ನಿಯ ಬೆಂಬಲಕ್ಕೆ ನಿಂತಿದ್ದು, 'ಮಾನಸ ಹೊರಗೆ ಬಂದಿದ್ದು ಬೇಸರ ಮತ್ತು ಖುಷಿ ಎರಡೂ ಇದೆ. ಯಾಕೆಂದರೆ ಆಕೆಗೆ ಏನೂ ಗೊತ್ತಿಲ್ಲ. ಎಲ್ಲೋ ಒಂದು ಹಳ್ಳಿಯಲ್ಲಿ ಹುಟ್ಟಿ, ಸಿಕ್ಕಾಪಟ್ಟೆ ಕಡುಬಡತನದಿಂದ ಮನೆಯ ಸಮಸ್ಯೆಗಳನ್ನು ಎದುರಿಸಿಕೊಂಡು ಬಂದವಳು'.

Bigg Boss Kannada Tukali Santhosh Praised His Wife Manasa In Bigg boss Kannada Stage

'ಬೆಂಗಳೂರು ಪ್ರಪಂಚನೇ ನೋಡದಿರುವ ಆಕೆ ಭಾರತದ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ಗೆ ಅವಳು ಸ್ಪರ್ಧಿಯಾಗಿ ಹೋಗಿ ಬಂದಿರುವುದೇ ದೊಡ್ಡ ಸಾಧನೆ. ಈಗಾಗಲೇ ನನ್ನ ಹೆಂಡತಿ ಗೆದ್ದಿದ್ದಾಳೆ. ಒಂದು ದಿನ ವಾಪಸ್‌ ಬಂದರೂ ಬಿಗ್‌ ಬಾಸ್‌ ಖ್ಯಾತಿ ಎನ್ನುತ್ತಾರೆ. ಐದು ವಾರ ಇದ್ದರೂ ಬಿಗ್‌ ಬಾಸ್‌ ಖ್ಯಾತಿ ಎನ್ನುತ್ತಾರೆ. ಗೆದ್ದರೂ ಸಹ ಅದನ್ನೇ ಹಾಕುತ್ತಾರೆ. ಅದನ್ನು ಬಿಟ್ಟರೆ ಏನೂ ವ್ಯತ್ಯಾಸ ಇರುವುದಿಲ್ಲ. ಅವಳು ಗೆದ್ದಿದ್ದಾಳೆ ಸಾಕು' ಎಂದು ಹೆಂಡತಿ ಬೆಂಬಲಕ್ಕೆ ನಿಂತಿದ್ದಾರೆ.

Bigg Boss Kannada Tukali Santhosh Praised His Wife Manasa In Bigg boss Kannada Stage

ಇನ್ನು ಮಾನಸ ಕಣ್ಣಲ್ಲಿ ನೀರು ಕಂಡ ಸಂತೋಷ್‌, ' ನೀನು ಅಳಲು ಹೋಗಬೇಡ. ನನಗೆ ನೀನು ಯಾವಾಗಲೂ , ಮೊನಾಲಿಸಾ, ಮಿಸ್‌ ಇಂಡಿಯಾ, ಮಿಸ್‌ ಯೂನಿವರ್ಸ್‌ ಆಗಿರುತ್ತೀಯಾ. ಈ ಪ್ರಪಂಚ ಏನೇ ಎಂದುಕೊಳ್ಳಬಹುದು. ಇವತ್ತು ನನ್ನ ಸಾಧನೆಗೆ, ನನ್ನ ನಾಲ್ಕು ಜನ ಗುರುತಿಸಿ ಮಾತನಾಡುತ್ತಾರೆ ಅಂದರೆ ಅದಕ್ಕೆ ಕಾರಣ ನೀನು. ನಿನ್ನನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲ್ಲ. ನೀನು ಸಾಧಿಸಿದ್ದೀಯಾ ಬಿಡು' ಎಂದು ಹೇಳಿದ್ದಾರೆ.

Bigg Boss Kannada Tukali Santhosh Praised His Wife Manasa In Bigg boss Kannada Stage

'ಇನ್ನು ಮಾತಿನ ಭರದಲ್ಲಿ ನನ್ನ ಹೆಂಡತಿಯಿಂದ ಕೆಲವೊಂದು ಪದಗಳು ತಪ್ಪಾಗಿರಬಹುದು. ಆಕೆ ಇರುವ ಶೈಲಿನೇ ಹಾಗೆ, ಆಕೆಯ ಮಾತುಗಳಿಂದ ಕರ್ನಾಟಕದ ಜನತಗೆ ಹಾಗೂ ಯಾರಿಗಾದರೂ ತಪ್ಪಾಗಿದ್ದರೆ ನನ್ನ ಹೆಂಡತಿ ಪರವಾಗಿ ಕ್ಷಮೆ ಕೇಳುತ್ತೇನೆ. ಇರುವವರಿಗೆ ಹೋದವರಿಗೆ ಯಾರಿಗಾದರೂ ನೋವಾಗಿದ್ದರೆ, ಈ ಒಂದು ಮಹಾನ್‌ ವೇದಿಕೆಯ ಮೂಲಕ ಕ್ಷಮೆ ಕೇಳುತ್ತೇನೆ' ಎಂದು ತುಕಾಲಿ ಸಂತೋಷ್‌ ಕ್ಷಮೆ ಕೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+