Bigg Boss Kannada: ಬಿಗ್‌ಬಾಸ್ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್, ಹೊರಬಂದಿದ್ಯಾರು?
ಬಿಗ್‌ಬಾಸ್ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್ ನಡೆದಿದೆ. ಈ ಬಾರಿ ಯಾರೂ ನಿರೀಕ್ಷಿಸದ ಸ್ಪರ್ಧಿ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ ಪ್ರೋಮೋದಲ್ಲಿ ಎಲಿಮಿನೇಟ್ ಆಗೋದು ಯಾರು? ಎನ್ನುವ ಸುಳಿವು ನೀಡಲಾಗಿದೆ. ಒಟ್ಟು ನಾಲ್ಕು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಇದರಲ್ಲಿ ಅಂತಿಮವಾಗಿ ಒಬ್ಬರು ಬಿಗ್‌ಬಾಸ್ ಜರ್ನಿ ಮುಗಿಸಿದ್ದಾರೆ.
ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ ಎಪಿಸೋಡ್‌ನಲ್ಲಿ ಕಿಚ್ಚ ಶಾಕ್ ಕೊಟ್ಟಿದ್ದಾರೆ. ನಾಲ್ಕು ಸ್ಪರ್ಧಿಗಳು ತಮ್ಮ ಸೂಟ್‌ಕೇಸ್ ತಗೊಂಡು ಗೇಟ್ ಬಳಿ ನಿಲ್ಲಿ ಎಂದು ಹೇಳಿದ್ದಾರೆ. ಬಾಗಿಲು ಓಪನ್ ಆಗುತ್ತೆ, ನೀವೆಲ್ಲ ಹೋಗಿ ನಿಲ್ಲಿ ಎಂದು ರಿಷಾ ಗೌಡ, ಕಾಕ್ರೋಚ್ ಸುಧಿ, ರಘು ಹಾಗೂ ಜಾನ್ವಿಗೆ ಹೇಳಿದ್ದಾರೆ. ಈ ಶಾಕ್‌ನಿಂದ ಮನೆಮಂದಿ ಬೆಚ್ಚಿಬಿದ್ದಿದ್ದಾರೆ.

ಬಿಗ್‌ಬಾಸ್ ಮೇನ್ ಡೋರ್ ಓಪನ್ ಆಗಿ ವಾಪಸ್ ತೆರೆದಾಗ ಯಾರು ಇರಲ್ವೋ ಅವರ ಜರ್ನಿ ಮುಗೀತು ಎಂದು ಸುದೀಪ್ ಹೇಳಿದ್ದಾರೆ. ಅದರಂತೆ ಬಾಗಿಲು ಕ್ಲೋಸ್ ಆಗಿ ಮತ್ತೆ ಓಪನ್ ಆಗುವಾಗ ಒಬ್ಬರು ಸ್ಪರ್ಧಿ ಅಲ್ಲಿ ಇರುವುದಿಲ್ಲ. ಅವರು ಅಲ್ಲಿಂದಲೇ ಮನೆಗೆ ವಾಪಸ್ ಹೋಗ್ತಾರೆ ಎಂದು ಸುದೀಪ್ ಹೇಳಿದ್ದಾರೆ. ಈ ನಾಲ್ವರಲ್ಲಿ ಯಾರು ದಿಢೀರ್ ಎಲಿಮಿನೇಟ್ ಆಗಿದ್ದು? ಎನ್ನುವುದೇ ಈಗಿರುವ ಕುತೂಹಲ. ಇಂದಿನ ಸಂಚಿಕೆಯಲ್ಲಿ ಎಲಿಮಿನೇಟ್ ಆಗಿದ್ದು ಯಾರು? ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.
ನಾಮಿನೇಷನ್ ಮಾಡೋದು ಇಲ್ಲಿ ಅಳಿವು-ಉಳಿವಿನ ಪ್ರಶ್ನೆ. ಯಾವುದೋ ಜಿದ್ದಿಗೆ, ಈಗೋಗೆ ಎಲಿಮಿನೇಟ್ ಮಾಡಬೇಡಿ ಎಂದು ಕಾಕ್ರೋಚ್ ಹೇಳಿದ್ದಾರೆ. ಮನೆಯಲ್ಲಿ ಇನ್ನೂ ತುಂಬ ಖುಷಿಯ ಕ್ಷಣಗಳನ್ನು ಕಳೆಯಬೇಕು ಅಂದುಕೊಂಡಿದ್ದೆ ಎಂದು ರಿಷಾ ಗೌಡ ಭಾವುಕರಾಗಿದ್ದಾರೆ. ಇಲ್ಲಿ ನಮಗೆ ಅಂತ ನಾವು ಹಠ ಹಿಡಿಯಬೇಕಿತ್ತು ಎಂದು ಜಾನ್ವಿ ಕೊನೆಯದಾಗಿ ಮಾತನಾಡಿದ್ದಾರೆ. ಅಂತಿಮವಾಗಿ ಈ ನಾಲ್ಕು ಮಂದಿಯಲ್ಲಿ ಒಬ್ಬರು ಬಿಗ್‌ಬಾಸ್ ಪಯಣ ಮುಗಿಸಿದ್ದಾರೆ.
ಹುಡುಗರೆಲ್ಲ ಸತ್ತ ಹೆಣದ ತರ ಇರ್ತಾರೆ
ಈ ಮನೆಯಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು ಎಂದು ಸುದೀಪ್ ಸ್ಪರ್ಧಿಗಳನ್ನು ಕೇಳಿದ್ದಾರೆ. ಈ ಮನೆಯಲ್ಲಿರುವ ಯಾವ ಹುಡುಗರೂ ಮ್ಯಾನ್ಲೀ ಅನಿಸೋದಿಲ್ಲ ಎಂದು ಜಾನ್ವಿ ಹೇಳಿದ್ದಾರೆ. ಇದಕ್ಕೆ ಸುದೀಪ್ ಕೂಡ ಶಾಕ್ ಆಗಿದ್ದಾರೆ. ಇಂತಹ ಹೇಳಿಕೆ ಯಾವ ಅರ್ಥದಲ್ಲಿ ಕೊಟ್ರಿ ಎಂದು ಸುದೀಪ್ ಕೇಳಿದ್ದಾರೆ. ನನ್ನ ಮಾತಿನ ಅರ್ಥ ಇಲ್ಲಿರುವ ಹುಡುಗರೆಲ್ಲ ಸತ್ತ ಹೆಣಗಳ ತರ ಇರ್ತಾರೆ ಎಂದು ಜಾನ್ವಿ ಕ್ಲಾರಿಟಿ ಕೊಟ್ಟಿದ್ದಾರೆ. ಗಿಲ್ಲಿಗೆ ಸೊಂಟನೇ ಇಲ್ಲ ಎಂದು ಹೇಳಿದ್ದಾರೆ.












Click it and Unblock the Notifications